ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಸಿಇಒ ಅಬಿದ್ ಸಂಬಳದ ಪ್ಯಾಕೇಜ್ ಶೇ 34.5ರಷ್ಟು ಏರಿಕೆ

By Mahesh
|
Google Oneindia Kannada News

ಬೆಂಗಳೂರುಮ್ ಜೂನ್ 25: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋ ಸಿಇಒ ಅಬಿದ್ ಅಲಿ ನೀಮುಚ್ವಾಲ ಅವರ ಸಂಬಳದ ಪ್ಯಾಕೇಜ್ ಕಳೆದ ಆರ್ಥಿಕ ವರ್ಷದಲ್ಲಿ ಶೇ 34.5ರಷ್ಟು ಏರಿಕೆ ಕಂಡಿದ್ದು, ವಾರ್ಷಿಕ 18 ಕೋಟಿ ರು ಪಡೆದುಕೊಂಡಿದ್ದಾರೆ.

ಇದೇ ವೇಳೆ ವಿಪ್ರೋ ಚೇರ್ಮನ್ ಅಜೀಂ ಪ್ರೇಮ್ಜಿ ಅವರ ಮಗ ವಿಪ್ರೋದ ಸಿಎಸ್ ಒ ರಿಷದ್ ಅವರ ವಾರ್ಷಿಕ ಸಂಬಳ ಶೇ 250ರಷ್ಟು ಏರಿಕೆಯಾಗಿ, 5.9 ಕೋಟಿ ರು ಗಳಿಸಿದ್ದಾರೆ. ಇನ್ಫೋಸಿಸ್ ನ ಸಿಇಒ ಸಲೀಲ್ ಪರೇಖ್ ಅವರ ವಾರ್ಷಿಕ ಸಂಬಳದ ಪ್ಯಾಕೇಜ್ 13 ಕೋಟಿ ರು ಇದ್ದು, ಅವರಿಗಿಂತ ವಿಪ್ರೋ ಸಿಇಒ ಅತ್ಯಧಿಕ ಸಂಬಳ ಪಡೆದುಕೊಳ್ಳುತ್ತಿದ್ದಾರೆ.

2015ರ ಮಾರ್ಚ್ ತಿಂಗಳಿನಲ್ಲಿ ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಹಿರಿಯ ಉದ್ಯೋಗಿ ಅಬಿದ್ ಅಲಿ ಅವರನ್ನು ವಿಪ್ರೋ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅಬಿದ್ ಅಲಿ ನೀಮುಚ್ವಾಲ ಅವರು ಈಗ ವಿಪ್ರೋ ಸಿಒಒ, ಗ್ರೂಪ್ ನಿರ್ದೇಶಕರಾಗಿ ನಂತರ ಸಿಇಒ ಆದರು.

[ಈ ದಿನದ ಷೇರುಗಳ ಏರಿಳಿತ ಸಂಪೂರ್ಣ ಮಾಹಿತಿ ಇಲ್ಲಿದೆ]

Wipro CEO Abidali Neemuchwalas pay package grows 34.5% to Rs 18 crore in FY18

ಈ ಪೈಕಿ 6.29 ಕೋಟಿ ರೂ. ಮೂಲ ವೇತನವಾಗಿದ್ದು 1.70 ಕೋಟಿ ರೂ. ಉತ್ತೇಜನ ವೇತನ ಮತ್ತು ಇತರೆ ಭತ್ಯೆಗಳ ರೂಪದಲ್ಲಿ 10.2 ಕೋಟಿ ರೂ. ಸೇರಿದಂತೆ ಒಟ್ಟಾರೆ 18.23 ಕೋಟಿ ರೂ. ಸಿಗಲಿದೆ.

ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರ ವೇತನದಲ್ಲೂ ಶೇಕಡಾ 10.13 ರಷ್ಟು ಹೆಚ್ಚಳವಾಗಿದ್ದು, 18 ನೇ ಸಾಲಿನಲ್ಲಿ ಒಟ್ಟು 87 ಲಕ್ಷ ರೂ. ಏರಿಕೆಯಾಗಿದೆ

ವಿಪ್ರೋ ಸಂಸ್ಥೆ ಜಾಗತಿಕ ಮೂಲ ಸೌಕರ್ಯ ಸೇವೆ, ವ್ಯವಹಾರಿಕ ಅನ್ವಯ ಸೇವೆ, ಉನ್ನತ ತಂತ್ರಜ್ಞಾನ ಸಂಬಂಧಿತ ವಿಭಾಗಗಳ ಕಾರ್ಯ ನಿರ್ವಹಣೆ ಹೊಣೆ ಅಬಿದ್ ಅಲಿ ಅವರ ಮೇಲಿರುತ್ತದೆ.

ಒಟ್ಟಾರೆ, ಯುರೋಪ್, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ಕೇಂದ್ರಗಳ ಏಳಿಗೆ ಈಗ ಅಬಿದ್ ಕೈಲಿದೆ. ಟಿಸಿಎಸ್ ನಲ್ಲಿ ಸುಮಾರು 23 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅಬಿದ್ ಅವರು ಟಿಸಿಎಸ್ ನ ಬಿಪಿಒ ವಿಭಾಗದ ಪ್ರಗತಿಗೆ ಕಾರಣರಾಗಿದ್ದರು

ಎನ್ ಐಟಿ ರಾಯ್ ಪುರ್ ನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಇಂಜಿನಿಯರ್ ಪದವಿ ಪಡೆದಿರುವ ನಿಮೂಚ್ವಾಲ ಅವರು ಐಐಟಿ ಮುಂಬೈನಿಂದ ಇಂಡಸ್ಟ್ರೀಯಲ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಪಡೆದುಕೊಂಡಿದ್ದಾರೆ.

English summary
Neemuchwala -- who was paid in US dollars -- received an equivalent of Rs 6.29 crore in gross salary, Rs 1.70 crore in variable pay, Rs 10.2 crore in other annual compensation along with other perks, taking his total compensation to Rs 18.23 crore for FY18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X