ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಉದ್ಯೋಗಿಗಳಿಗೆ ಸಂಬಳ ಏರಿಕೆ, ಭತ್ಯೆ ಹೆಚ್ಚಳ

|
Google Oneindia Kannada News

ಬೆಂಗಳೂರು, ಜೂನ್ 10: ಬೆಂಗಳೂರು ಮೂಲದ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋ ತನ್ನ ಉದ್ಯೋಗಿಗಳ ಸಂಬಳ, ಭತ್ಯೆ ಹೆಚ್ಚಳ ಮಾಡಿದೆ. ಜೂನ್ 01ರಿಂದ ಅನ್ವಯವಾಗುವಂತೆ ಹೆಚ್ಚಳ ಅನ್ವಯವಾಗಲಿದೆ.

ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಹಾಗೂ ಆನ್ ಸೈಟ್ ಅದರಲ್ಲೂ ಯುಎಸ್ ಹಾಗೂ ಯುರೋಪಿನಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಿಂಗಲ್ ಡಿಜಿಟ್ ಹೆಚ್ಚಳ ಸಿಕ್ಕಿದೆ.

ಐಬಿಎಂನಲ್ಲಿ 2,000 ಉದ್ಯೋಗಿಗಳಿಗೆ 'ಪಿಂಕ್ ಸ್ಲಿಪ್' ಐಬಿಎಂನಲ್ಲಿ 2,000 ಉದ್ಯೋಗಿಗಳಿಗೆ 'ಪಿಂಕ್ ಸ್ಲಿಪ್'

ಡಿಜಿಟಲ್ ತಂತ್ರಜ್ಞಾನ, ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಹೆಚ್ಚಿನ ಭತ್ಯೆ ಸಿಗಲಿದೆ. ಎಂಟ್ರಿ ಲೆವಲ್ ನಿಂದ 5 ವರ್ಷ ತನಕದ ಅನುಭವವುಳ್ಳವರಿಗೆ ಶೇ 6ರಿಂದ 8ರಷ್ಟು ಸಂಬಳ ಹೆಚ್ಚಾಲ ಸಿಗಲಿದೆ.

Wipro announces pay hike to employees

ಒಟ್ಟಾರೆ, ಆನ್ ಸೈಟ್ ಹಾಗೂ ಭಾರತದಲ್ಲಿನ ಉದ್ಯೋಗಿಗಳ ಭವಿಷ್ಯದ ಬಗ್ಗೆ, ಮುಂಬರುವ ತಂತ್ರಜ್ಞಾನದ ಬಗ್ಗೆ ಕಲಿಯುವಿಕೆ ಅನುಭವವುಳ್ಳವರಿಗೆ ಹೆಚ್ಚಿನ ಭತ್ಯೆ ಸಿಗುತ್ತಿದೆ ಎಂದು ವಿಪ್ರೋ ವಕ್ತಾರರು ಹೇಳಿದ್ದಾರೆ.

ವಿಪ್ರೋ ಸಂಸ್ಥೆ ಸಿಬ್ಬಂದಿ ಖಾತೆಗೆ ಕನ್ನ? ಆತಂಕದಲ್ಲಿ ಐಟಿ ಕ್ಷೇತ್ರವಿಪ್ರೋ ಸಂಸ್ಥೆ ಸಿಬ್ಬಂದಿ ಖಾತೆಗೆ ಕನ್ನ? ಆತಂಕದಲ್ಲಿ ಐಟಿ ಕ್ಷೇತ್ರ

ಮಾರ್ಚ್ 31, 2019ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ವಿಪ್ರೋದ ಡಾಲರ್ ವಾರ್ಷಿಕ ಆದಾಯ 2.2 ಬಿಲಿಯನ್ ಡಾಲರ್ ನಂತೆ ಶೇ 9ರಷ್ಟು ಹೆಚ್ಚಳವಾಗಿತ್ತು.

ಜುಲೈ 30ಕ್ಕೆ ನಿವೃತ್ತರಾಗಲಿದ್ದಾರೆ ವಿಪ್ರೋ ಅಜೀಂ ಪ್ರೇಮ್ ಜೀ, ಆದರೆ... ಜುಲೈ 30ಕ್ಕೆ ನಿವೃತ್ತರಾಗಲಿದ್ದಾರೆ ವಿಪ್ರೋ ಅಜೀಂ ಪ್ರೇಮ್ ಜೀ, ಆದರೆ...

4ನೇ ತ್ರೈಮಾಸಿಕದಲ್ಲಿ 359.1 ಮಿಲಿಯನ್ ಡಾಲರ್ ನಿವ್ವಳ ಆದಾಯ ಗಳಿಸಿತ್ತು. ಮಾರ್ಚ್ 31ರ ಎಣಿಕೆಯಂತೆ ವಿಪ್ರೋದಲ್ಲಿ 1.47 ಲಕ್ಷ ಉದ್ಯೋಗಿಗಳಿದ್ದು, 1 ರಿಂದ 5 ವರ್ಷ ಅನುಭವವುಳ್ಳವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

English summary
Bengaluru-headquartered software services exporter has announced a high single-digit pay hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X