• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಕ್ರೋಸಾಫ್ಟ್‌ನಿಂದ ಹೊಸ ವಿಂಡೋಸ್ 11 ಬಿಡುಗಡೆ, ಏನಿದೆ ವಿಶೇಷ?

|
Google Oneindia Kannada News

ಬೆಂಗಳೂರು, 25 ಜೂನ್ 2021: ಮೈಕ್ರೋಸಾಫ್ಟ್ ಇಂದು ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುವ ಮತ್ತು ತಮ್ಮ ಪ್ರೀತಿ ಪಾತ್ರರನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುವಂಥ ವಿನ್ಯಾಸ ಹೊಂದಿದ ವಿಂಡೋಸ್ 11 ಅನ್ನು ಪರಿಚಯಿಸಿದೆ. ಈ ಹೊಚ್ಚ ಹೊಸ ಮೈಕ್ರೋಸಾಫ್ಟ್ ಸ್ಟೋರ್ ಹೊಸ ವಿನ್ಯಾಸದ ವೈಶಿಷ್ಟ್ಯತೆಗಳೊಂದಿಗೆ ಅಪ್ಲಿಕೇಷನ್‌ಗಳು, ಗೇಮ್ಸ್ ಮತ್ತು ಸಿನೆಮಾಗಳಿಗಾಗಿ ಬಳಕೆದಾರರಿಗೆ ಸುಲಭವಾಗಿ ಪ್ರವೇಶವನ್ನು ಕಲ್ಪಿಸುವ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಇದಲ್ಲದೇ, ಎಲ್ಲರಿಗೂ ಗರಿಷ್ಠ ಮಟ್ಟದ ಕೆಲಸ ನಿರ್ವಹಣೆ, ಕಲಿಕೆ ಮತ್ತು ಪ್ಲೇಯಿಂಗ್ ಮತ್ತು ಸೇವೆಯ ಅತ್ಯದ್ಭುತವಾದ ಅನುಭವಗಳನ್ನು ನೀಡಲಿದೆ.

ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್‌ನ ಚೀಫ್ ಪ್ರಾಡಕ್ಟ್ ಆಫೀಸರ್ ಪನೊಸ್ ಪನಾಯ್ ಅವರು, ''ನಮ್ಮ ಪಿಸಿಗಳನ್ನು ನಾವು ಹೇಗೆ ಬಳಸಿದ್ದೇವೆ ಎಂಬುದರ ಬಗ್ಗೆ ಪ್ರಾಯೋಗಿಕ ಮತ್ತು ಕ್ರಿಯಾತ್ಮಕವಾದ ವೈಯಕ್ತಿಕ ಹಾಗೂ ಭಾವನಾತ್ಮಕ ವಿಚಾರದಲ್ಲಿ ನಾವು ಕಳೆದ 18 ತಿಂಗಳುಗಳಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದೇವೆ. ಮುಂದಿನ ಪೀಳಿಗೆಯ ವಿಂಡೋಸ್‌ಗಳನ್ನು ನಿರ್ಮಾಣ ಮಾಡಲು ಇದು ನಮಗೆ ಪ್ರೇರಣೆಯನ್ನು ಒದಗಿಸಿದೆ. ಬಿಲಿಯನ್‌ಗಟ್ಟಲೆ ಜನರು ವಿಶ್ವಾಸಾರ್ಹತೆಯನ್ನು ಹೊಂದುವಂತಹ ಪ್ಲಾಟ್ ಫಾರ್ಮ್ ಅನ್ನು ನಾವು ಸಿದ್ಧಪಡಿಸಿದ್ದೇವೆ. ಈ ಹೊಚ್ಚ ಹೊಸದಾದ ವಿಂಡೋಸ್ 11 ಮೂಲಕ ಪ್ರತಿಯೊಬ್ಬರೂ ಸೃಷ್ಟಿ ಮಾಡುವುದು, ಕಲಿಕೆ, ಪ್ಲೇಯನ್ನು ಅದರಲ್ಲೂ ಪ್ರಮುಖವಾಗಿ ಸುಧಾರಿತ ರೀತಿಯಲ್ಲಿ ಸಂಪರ್ಕ ಸಾಧಿಸುವಂಥ ಪರಿಚಿತವಾದ ಜಾಗವನ್ನು ನಿರ್ಮಾಣ ಮಾಡಲು ಬಯಸಿದ್ದೇವೆ," ಎಂದರು.

ಈ ವಿಂಡೋಸ್ 11 ಹೊಸ ಪಿಸಿಗಳಲ್ಲಿ ಲಭ್ಯವಿದೆ ಮತ್ತು ಅರ್ಹವಾದ ವಿಂಡೋಸ್ 10 ಪಿಸಿಗಳಿಗೆ ಉಚಿತವಾಗಿ ಅಪ್ ಗ್ರೇಡ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ವೇಗ, ಹೆಚ್ಚು ಸುರಕ್ಷಿತವಾದ ಒಎಸ್

ವೇಗ, ಹೆಚ್ಚು ಸುರಕ್ಷಿತವಾದ ಒಎಸ್

ವಿಂಡೋಸ್ 11 ತಾಜಾ, ಸ್ವಚ್ಛ ಇಂಟರ್ ಫೇಸ್ ಮತ್ತು ಅರ್ಥಗರ್ಭಿತವಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡಲು ಮತ್ತು ಅವರ ಸೃಜನಶೀಲತೆಗೆ ಪ್ರೇರಣೆಯನ್ನು ನೀಡುತ್ತದೆ. ಸ್ಕ್ರೀನ್‌ನ ಮಧ್ಯಭಾಗದಲ್ಲಿರುವ ಸ್ಟಾರ್ಟ್ ಬಟನ್ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ತಮಗೆ ಬೇಕಾದುದನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುತ್ತದೆ. ವಿಭಿನ್ನ ರೀತಿಯ ಪ್ಲಾಟ್ ಫಾರ್ಮ್ ಗಳು ಅಥವಾ ಸಾಧನಗಳಲ್ಲಿ ಈ ಹಿಂದೆ ನೋಡಲಾದ ಇತ್ತೀಚಿನ ಫೈಲ್‌ಗಳನ್ನು ಬಳಕೆದಾರರಿಗೆ ತೋರಿಸಲು ಸ್ಟಾರ್ಟ್ ಕ್ಲೌಡ್ ಹಾಗೂ ಮೈಕ್ರೋಸಾಫ್ಟ್ 365 ನ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಆದ್ದರಿಂದ ಬಳಕೆದಾರರು ತಾವು ಕೆಲಸವನ್ನು ನಿಲ್ಲಿಸಿದ್ದನ್ನು ತೆಗೆದುಕೊಳ್ಳಬಹುದಾಗಿದೆ. ಅವರು ತಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನಗಳಲ್ಲಿ ಕೆಲಸ ಮಾಡುತ್ತಿರುವ ದಾಖಲೆಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಸ್ನ್ಯಾಪ್ ಮಾಡುವ ಮೂಲಕ ಕೆಲಸವನ್ನು ಸುಲಲಿತ

ಸ್ನ್ಯಾಪ್ ಮಾಡುವ ಮೂಲಕ ಕೆಲಸವನ್ನು ಸುಲಲಿತ

ಬಳಕೆದಾರರು ತಮ್ಮ ವಿಂಡೋಸ್ ಗಳನ್ನು ಸಂಘಟಿಸಲು ಮತ್ತು ಅವರ ಸ್ಕ್ರೀನ್‌ನ ರಿಯಲ್ ಎಸ್ಟೇಟ್‌ಅನ್ನು ಅತ್ಯುತ್ತಮವಾಗಿರಿಸಿಕೊಳ್ಳಲು ಸಹಾಯ ಮಾಡುವ ಸ್ನ್ಯಾಪ್ ಲೇಔಟ್‌ಗಳು, ಸ್ನ್ಯಾಪ್ ಗ್ರೂಪ್‌ಗಳು ಮತ್ತು ಡೆಸ್ಕ್ ಟಾಪ್‌ಗಳಂತಹ ಹೊಸ ವಿಂಡೋಸ್ 11 ವೈಶಿಷ್ಟ್ಯತೆಗಳೊಂದಿಗೆ ಮಲ್ಟಿ ಟಾಸ್ಕಿಂಗ್ ಎಂದಿಗೂ ಸುಲಭವಾಗುವುದಿಲ್ಲ. ಆದರೆ, ಈಗ ಈ ಹೊಸ ವಿಂಡೋಸ್ 11 ನಲ್ಲಿ ಬಳಕೆದಾರರು ಅನೇಕ ವಿಂಡೋಸ್ ಗಳ ನಮ್ಯತೆಯೊಂದಿಗೆ ಹೊಸ ಆನಂದವನ್ನು ಹೊಂದಬಹುದು ಹಾಗೂ ಏಕಕಾಲದಲ್ಲಿ ಅನೇಕ ಅಪ್ಲಿಕೇಷನ್‌ಗಳಲ್ಲಿ ತಮ್ಮ ಸ್ಕ್ರೀನ್ ಗಳಲ್ಲಿ ಅಪ್ಲಿಕೇಷನ್ ಗಳನ್ನು ಸ್ನ್ಯಾಪ್ ಮಾಡುವ ಮೂಲಕ ಕೆಲಸವನ್ನು ಸುಲಲಿತವಾಗಿ ಮಾಡಿಕೊಳ್ಳಬಹುದಾಗಿದೆ. ಬಳಕೆದಾರರು ಡೆಸ್ಕ್ ಟಾಪ್ ಗಳೊಂದಿಗೆ ತಮ್ಮ ಜೀವನದ ಪ್ರತಿಯೊಂದು ಅಂಶಗಳಾದ ಕೆಲಸ, ಗೇಮಿಂಗ್ ಅಥವಾ ಶಾಲೆಗಳಂತಹ ಸ್ಥಳಗಳನ್ನು ಕಸ್ಟಮೈಸ್ ಮಾಡಬಹುದಾಗಿದೆ ಹಾಗೂ ಅವುಗಳ ನಡುವೆ ಸುಲಭವಾಗಿ ಬದಲಾವಣೆಯನ್ನು ತಂದುಕೊಳ್ಳಬಹುದಾಗಿದೆ.

ಎಐ ಚಾಲಿತ ಕ್ಯುರೇಟೆಡ್ ನ್ಯೂಸ್ ಫೀಡ್

ಎಐ ಚಾಲಿತ ಕ್ಯುರೇಟೆಡ್ ನ್ಯೂಸ್ ಫೀಡ್

ಬಳಕೆದಾರರು ವಿಡ್ಜೆಟ್‌ಗಳೊಂದಿಗೆ ಅವರು ಕಾಳಜಿವಹಿಸುವ ಮಾಹಿತಿಗೆ ಪೂರಕವಾಗಿ ವೇಗವಾಗಿ ಪ್ರವೇಶವನ್ನು ಪಡೆಯಲಿದ್ದಾರೆ. ಇದು ಎಐ ಚಾಲಿತ ಕ್ಯುರೇಟೆಡ್ ನ್ಯೂಸ್ ಫೀಡ್ ಮತ್ತು ಮೈಕ್ರೋಸಾಫ್ಟ್ ಎಡ್ಜ್‌ನಿಂದ ಉತ್ತಮ ದರ್ಜೆಯ ಬ್ರೌಸರ್ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಕ್ರಿಯೇಟರ್ಸ್ ಮತ್ತು ಪಬ್ಲಿಷರ್‌ಗಳಿಗೆ ವೈಯಕ್ತಿಕಗೊಳಿಸಿದ ವಿಷಯವನ್ನು ತಲುಪಿಸಲು ಈ ವಿಜೆಟ್‌ಗಳು ವಿಂಡೋಸ್ ಹೊಸ ರಿಯಲ್ ಎಸ್ಟೇಟ್ ಅನ್ನು ತೆರೆದುಕೊಳ್ಳುವಂತೆ ಮಾಡಲಿವೆ.

ಹೈಬ್ರೀಡ್ ಕೆಲಸ ಮತ್ತು ಕಲಿಕೆಗೆ ಪೂರಕವಾದ ಸುರಕ್ಷಿತ ಆಪರೇಟಿಂಗ್ ಸಿಸ್ಟಂ ಆಗಿ ಈ ಹೊಸ ವಿಂಡೋಸ್ 11 ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ವಿನ್ಯಾಸದಿಂದ ಅತ್ಯಂತ ಸುರಕ್ಷಿತವಾಗಿದ್ದು, ಹೊಸ ಅಂತರ್ನಿರ್ಮಿತ ಭದ್ರತಾ ತಂತ್ರಜ್ಞಾನಗಳನ್ನು ಹೊಂದಿದೆ ಹಾಗೂ ಡೇಟಾ ಮತ್ತು ಸಾಧನಗಳಾದ್ಯಂತ ಅಕ್ಸೆಸ್ ಅನ್ನು ರಕ್ಷಿಸುವ ಝೀರೋ ಟ್ರಸ್ಟ್ ರೆಡಿ ಆಪರೇಟಿಂಗ್ ಸಿಸ್ಟಂ ಅನ್ನು ಪೂರೈಸುತ್ತದೆ.

ಗೇಮಿಂಗ್, ಮನರಂಜನೆ ಬಳಕೆದಾರರ ಅನುಭವಗಳು

ಗೇಮಿಂಗ್, ಮನರಂಜನೆ ಬಳಕೆದಾರರ ಅನುಭವಗಳು

ಈ ಹೊಸ ವಿಂಡೋಸ್ 11 ಹೊಚ್ಚ ಹೊಸದಾದ ಮೈಕ್ರೋಸಾಫ್ಟ್ ನೊಂದಿಗೆ ಪರಿಚಯಗೊಂಡಿದೆ. ವೇಗ, ವೈವಿಧ್ಯತೆ ಮತ್ತು ಅನುಕೂಲಕ್ಕೆ ಪೂರಕವಾಗಿ ಮರುನಿರ್ಮಾಣಗೊಂಡಿದೆ. ಇದು ಸುರಕ್ಷತೆ ಮತ್ತು ಕುಟುಂಬ ಸುರಕ್ಷತೆಗಾಗಿ ಪರೀಕ್ಷಿಸಲ್ಪಟ್ಟ ಮೊದಲ ಹಾಗೂ ತೃತೀಯವಾದ ಅಪ್ಲಿಕೇಷನ್‌ಗಳ ವ್ಯಾಪಕವಾದ ಕ್ಯಾಟಲಾಗ್ ಅನ್ನು ಒಳಗೊಂಡಿದೆ. ಬಳಕೆದಾರರ ಮನರಂಜಿಸಲು, ಅವರನ್ನು ಪ್ರೇರೇಪಿಸಲು ಹಾಗೂ ಅವರನ್ನು ಪರಸ್ಪರ ಸಂಪರ್ಕ ಮಾಡುವ ವಿಚಾರದಲ್ಲಿ ನಂಬಲಾಗದಂತಹ ಅನುಭವಗಳನ್ನು ತಂದುಕೊಡುತ್ತದೆ. ಮೊದಲ ಬಾರಿಗೆ ಆಂಡ್ರಾಯ್ಡ್ ಅಪ್ಲಿಕೇಷನ್ ಗಳು ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಲಭ್ಯವಿರುತ್ತವೆ ಹಾಗೂ ಬಳಕೆದಾರರು ಅಮೆಜಾನ್ ನೊಂದಿಗೆ ಮೈಕ್ರೋಸಾಫ್ಟ್ ಸಹಭಾಗಿತ್ವದ ಮೂಲಕ ಸಾಧ್ಯವಾಗುವಂತಹ ತಡೆರಹಿತವಾದ ಪ್ರಕ್ರಿಯೆಯಾದ ಅಮೆಜಾನ್ ಆಪ್ ಸ್ಟೋರ್ ಮೂಲಕ ಸುಲಭವಾಗಿ ಈ ಅಪ್ಲಿಕೇಷನ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ವಿಂಡೋಸ್ 11 ಸಿಸ್ಟಂನ ಹಾರ್ಡ್‌ವೇರ್‌ನ ಸಂಪೂರ್ಣ ಸಾಮರ್ಥ್ಯ

ವಿಂಡೋಸ್ 11 ಸಿಸ್ಟಂನ ಹಾರ್ಡ್‌ವೇರ್‌ನ ಸಂಪೂರ್ಣ ಸಾಮರ್ಥ್ಯ

ವಿಂಡೋಸ್ 10 ರಂತೆಯೇ ಮೈಕ್ರೋಸಾಫ್ಟ್ ವಿಂಡೋಸ್ 11 ನಲ್ಲಿ ಅಪ್ಲಿಕೇಷನ್ ಅಶ್ಯೂರ್‌ನೊಂದಿಗೆ ಅಪ್ಲಿಕೇಷನ್ ಹೊಂದಾಣಿಕೆಗೆ ಇದು ಬದ್ಧವಾಗಿದೆ. ಇದು 150 ಅಥವಾ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಗ್ರಾಹಕರಿಗೆ ಯಾವುದೇ ರೀತಿಯ ಹೆಚ್ಚುವರಿ ವೆಚ್ಚವಿಲ್ಲದೇ ಯಾವುದೇ ಅಪ್ಲಿಕೇಷನ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನೆರವನ್ನು ನೀಡುತ್ತದೆ.

ವಿಂಡೋಸ್ 11 ಸಿಸ್ಟಂನ ಹಾರ್ಡ್‌ವೇರ್‌ನ ಸಂಪೂರ್ಣ ಸಾಮರ್ಥ್ಯವನ್ನು ಸಹ ಅನ್ ಲಾಕ್ ಮಾಡುತ್ತದೆ. ಇತ್ತೀಚಿನ ಕೆಲವು ಗೇಮಿಂಗ್ ತಂತ್ರಜ್ಞಾನವನ್ನು ಕೆಲಸ ಮಾಡಲು ಮತ್ತು ಬಳಕೆದಾರರಿಗೆ ಅಂತಿಮವಾಗಿ ತಲ್ಲೀನಗೊಳಿಸುವ ಅಥವಾ ತೊಡಗಿಗೊಳ್ಳುವ ಅನುಭವವನ್ನು ಒದಗಿಸುತ್ತದೆ

ಅತ್ಯಧಿಕ ಫ್ರೇಂ ದರಗಳಲ್ಲಿ ಅತ್ಯಾನಂದದ ಗ್ರಾಫಿಕ್ಸ್

ಅತ್ಯಧಿಕ ಫ್ರೇಂ ದರಗಳಲ್ಲಿ ಅತ್ಯಾನಂದದ ಗ್ರಾಫಿಕ್ಸ್

ಡೈರೆಕ್ಟ್ X 12 ಅಲ್ಟಿಮೇಟ್, ಇಲ್ಲಿ ಬಳಕೆದಾರರು ಅತ್ಯಧಿಕ ಫ್ರೇಂ ದರಗಳಲ್ಲಿ ಅತ್ಯಾನಂದದ ಗ್ರಾಫಿಕ್ಸ್ ಅನ್ನು ಆನಂದಿಸಬಹುದಾಗಿದೆ.
ನೇರವಾದ ಸ್ಟೋರೇಜ್ ವೇಗವಾದ ಲೋಡ್ ಮತ್ತು ಹೆಚ್ಚಿನ ವಿವರವಾದ ಗೇಮ್ ಜಗತ್ತಿಗೆ ಅವಕಾಶ ಕಲ್ಪಿಸುತ್ತದೆ.
ಆಟೋ ಎಚ್‌ಡಿಆರ್, ವಿಸ್ತಾರವಾದ, ಹೆಚ್ಚು ವೈವಿಧ್ಯಮಯ ಶ್ರೇಣಿಯ ಬಣ್ಣಗಳ ಮೂಲಕ ನೈಜವಾದ ಆಕರ್ಷಣೀಯ ದೃಶ್ಯದ ಅನುಭವವನ್ನು ನೀಡುತ್ತದೆ.
100 ಕ್ಕೂ ಹೆಚ್ಚು ಅತ್ಯುತ್ತಮ ಗುಣಮಟ್ಟದ ಪಿಸಿ ಗೇಮ್ ಗಳನ್ನು ಮತ್ತು ಹೊಸ ಗೇಮ್‌ಗಳಿಗೆ ಪ್ರವೇಶವನ್ನು ಕಲ್ಪಿಸುತ್ತದೆ. ಇವುಗಳನ್ನು ಸಾರ್ವಕಾಲಿಕವಾಗಿ ಸೇರಿಸಲಾಗುತ್ತದೆ ಮತ್ತು ಪಿಸಿ ಅಥವಾ ಅಲ್ಟಿಮೇಟ್ ಗ್ರಾಹಕರಿಗೆ ಎಕ್ಸ್ ಬಾಕ್ಸ್ ಗೇಮ್ ಪಾಸ್‌ಗೆ ಲಭ್ಯವಾಗುವಂತೆ ಮಾಡುತ್ತದೆ.

ಟೀಮ್ಸ್‌ನ ಉತ್ಪಾದಕತೆಯ ವೈಶಿಷ್ಟ್ಯತೆ

ಟೀಮ್ಸ್‌ನ ಉತ್ಪಾದಕತೆಯ ವೈಶಿಷ್ಟ್ಯತೆ

ಮೈಕ್ರೋಸಾಫ್ಟ್ ಟೀಮ್ಸ್ ಅನ್ನು ಟಾಸ್ಕ್ ಬಾರ್‌ನಲ್ಲಿ ಸಂಯೋಜನೆ ಮಾಡಿರುವುದರೊಂದಿಗೆ ಪ್ರೀತಿ ಪಾತ್ರರ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿರಲು ವಿಂಡೋಸ್ 11 ಬಳಕೆದಾರರಿಗೆ ವೇಗವಾದ ಮಾರ್ಗವನ್ನು ನೀಡುತ್ತದೆ. ಇದು ವಿಂಡೋಸ್, ಆಂಡ್ರಾಯ್ಡ್ ಅಥವಾ ಐಒಎಸ್ ಮೂಲಕ ಪ್ರಪಂಚದಾದ್ಯಂತ ಎಲ್ಲಿಯಾದರೂ ಪ್ರೀತಿಪಾತ್ರರ ಜೊತೆಗೆ ಪಠ್ಯ, ಚಾಟ್, ಧ್ವನಿ ಅಥವಾ ವೀಡಿಯೊ ಮೂಲಕ ತ್ವರಿತವಾಗಿ ಸಂಪರ್ಕ ಸಾಧಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಟೀಮ್ಸ್ ಆ್ಯಪ್ ಗಳಿಲ್ಲದ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಬಳಕೆದಾರರು ಅವರೊಂದಿಗೆ ದ್ವಿಮುಖ ಎಸ್ಎಂಎಸ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ಇದರಲ್ಲಿ ಟೀಮ್ಸ್‌ನ ಉತ್ಪಾದಕತೆಯ ವೈಶಿಷ್ಟ್ಯತೆಗಳೊಂದಿಗೆ ಏಕೀಕರಣವನ್ನೂ ಸುಧಾರಿಸಲಾಗಿದೆ. ಇದು ಕಾರ್ಯಪಟ್ಟಿಯಿಂದ ನೇರವಾಗಿ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳಲು ಅಥವಾ ಮ್ಯೂಟ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಡೆವಲಪರ್ ಮತ್ತು ಕ್ರಿಯೇಟರ್‌ಗಳಿಗೆ ಹೆಚ್ಚು ಮುಕ್ತ ಪರಿಸರ

ಡೆವಲಪರ್ ಮತ್ತು ಕ್ರಿಯೇಟರ್‌ಗಳಿಗೆ ಹೆಚ್ಚು ಮುಕ್ತ ಪರಿಸರ

ಡೆವಲಪರ್ ಗಳಿಗೆ ಮತ್ತು ಕ್ರಿಯೇಟರ್ ಗಳಿಗೆ ಹೆಚ್ಚು ಮುಕ್ತ ಪರಿಸರ ವ್ಯವಸ್ಥೆ ಸೃಷ್ಟಿ:

ಮೈಕ್ರೋಸಾಫ್ಟ್ ವಿಂಡೋಸ್ 11 ಮೂಲಕ ಕ್ರಿಯೇಟರ್ಸ್ ಮತ್ತು ಡೆವಲಪರ್ಸ್ ಗೆ ಹೆಚ್ಚು ಮುಕ್ತ ಪರಿಸರ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಹೊಸ ಅವಕಾಶಗಳನ್ನು ತೆರೆದಿಡಲಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಆ್ಯಪ್ ಗಳು, ಗೇಮ್ಸ್, ಮೂವೀಸ್, ಶೋಗಳು ಮತ್ತು ವೆಬ್ ಕಂಟೆಂಟ್‌ಗಳನ್ನು ನೀಡಲು ಡೆವಲಪರ್ಸ್ ಗೆ ಅನುಕೂಲವಾಗಲಿದೆ.

ಡೆವಲಪರ್ಸ್ ಮತ್ತು ಸ್ವತಂತ್ರ ಸಾಫ್ಟ್ ವೇರ್ ಮಾರಾಟಗಾರರ ಅಪ್ಲಿಕೇಷನ್ ಗಳು (ಐಎಸ್ ವಿಗಳು) ವಿನ್ 32 ಅಥವಾ ಪ್ರೊಗ್ರೆಸಿವ್ ವೆಬ್ ಅಪ್ಲಿಕೇಷನ್ (ಪಿಡಬ್ಲ್ಯೂಎ)ನಂತಹ ಅಪ್ಲಿಕೇಷನ್ ಫ್ರೇಂವರ್ಕ್ ಅನ್ನು ಲೆಕ್ಕಿಸದೇ ಮೈಕ್ರೋಸಾಫ್ಟ್ ಸ್ಟೋರ್ ಗೆ ತಮ್ಮ ಅಪ್ಲಿಕೇಷನ್ ಗಳನ್ನು ತರಬಹುದಾಗಿದೆ.

ಮೈಕ್ರೋಸಾಫ್ಟ್ ನ ಆದಾಯ ಹಂಚಿಕೆ ನೀತಿಗಳಿಗೆ ಪ್ರಗತಿಪರವಾದ ಬದಲಾವಣೆ ಎಂದರೆ ಡೆವಲಪರ್ಸ್. ಇವರು ತಮ್ಮ ವಾಣಿಜ್ಯ ಆದಾಯದ ಶೇ.100 ರಷ್ಟನ್ನೂ ಉಳಿಸಿಕೊಳ್ಳಬಹುದಾಗಿದೆ. ಅಪ್ಲಿಕೇಷನ್ ಡೆವಲಪರ್ಸ್ 85/15 ರ ಸ್ಪರ್ಧಾತ್ಮಕವಾದ ಆದಾಯದ ಪಾಲನ್ನು ಹೊಂದಿರುವ ಮೈಕ್ರೋಸಾಫ್ಟ್ ವಾಣಿಜ್ಯ ಪರಿಸರ ವ್ಯವಸ್ಥೆಯನ್ನೂ ಬಳಸಬಹುದಾಗಿದೆ.

English summary
Windows 11 Launched: Check Out Release Date, Top Features, How to Download, and other details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X