• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ ನಂತರ ತಣ್ಣಗಾಗುತ್ತಾ ಜಿಯೊ ಬಿರುಗಾಳಿ?

|

ವೆಲ್ ಕಮ್ ಆಫರ್, ನ್ಯೂ ಇಯರ್ ಆಫರ್ ಅಂತೆಲ್ಲಾ ಕೋಟ್ಯಾನುಕೋಟಿ ಗ್ರಾಹಕರನ್ನು ಮರುಳು ಮಾಡಿ ಇತರೆ ನೆಟ್ ವರ್ಕ್ ಗಳಿಂದ ತನ್ನತ್ತ ಸೆಳೆದುಕೊಂಡಿದ್ದ ರಿಲಯನ್ಸ್ ಕಂಪನಿಯ ಜಿಯೋ ಮೊಬೈಲ್ ನೆಟ್ ವರ್ಕ್ ನಿಂದ ಅನೇಕ ಗ್ರಾಹಕರು ಮತ್ತೆ ತಮ್ಮ ಹಿಂದಿನ ನೆಟ್ ವರ್ಕ್ ಗಳತ್ತ ಮುಖ ಮಾಡಲಿದ್ದಾರೆಂದು ಟೆಲಿಕಾಂ ಕ್ಷೇತ್ರದ ಪರಿಣಿತರು ಲೆಕ್ಕಹಾಕಿದ್ದಾರೆ.

ಜಿಯೊ ಕಂಪನಿಯ ಎಲ್ಲಾ ಆಫರ್ ಗಳೂ ಇದೇ ವರ್ಷ ಮಾರ್ಚ್ 31ಕ್ಕೆ ಕೊನೆಯಾಗಲಿರುವುದರಿಂದ ಹಾಗೂ ಜಿಯೊ ನೆಟ್ ವರ್ಕ್ ಅನೇಕ ತಾಂತ್ರಿಕ ಹಿನ್ನಡೆಗಳನ್ನೂ ಅನುಭವಿಸುತ್ತಿರುವುದರಿಂದ ಆಫರ್ ಗಳು ಕೊನೆಗೊಳ್ಳುತ್ತಲೇ ಅನೇಕ ಗ್ರಾಹಕರು ಜಿಯೋ ನೆಟ್ ವರ್ಕ್ ನಿಂದ ಹೊರನಡೆಯಲಿದ್ದಾರೆಂದು ಹೇಳಲಾಗಿದೆ.

ಅದು ನಿಜವೇ ಆದಲ್ಲಿ, ದೊಡ್ಡ ಬಿರುಗಾಳಿಯೊಂದು ಅದು ಬೀಸಿಬಂದ ವೇಗದಲ್ಲೇ ಕುಗ್ಗಿ ತಣ್ಣಗಾಗಲಿದೆ ಎಂದು ಹೇಳಲಾಗುತ್ತಿದ್ದು, ಇದರ ಲಾಭ ಜಿಯೋದ ಸ್ಪರ್ಧೆಯ ಮುಂದೆ ತತ್ತರಿಸಿದ್ದ ಏರ್ ಟೆಲ್, ವೊಡಾ ಫೋನ್ ನಂಥ ಕಂಪನಿಗಳಿಗೆ ಕೊಂಚ ನಿಟ್ಟುಸಿರು ಬಿಡುವಂತಾಗಲಿದೆ ಎಂದೂ ಹೇಳಲಾಗಿದೆ.

ಜಿಯೊ ಕಂಪನಿಯು ತನ್ನ ಗ್ರಾಹಕರನ್ನು ಯಾವ ಕಾರಣಗಳಿಗಾಗಿ ಕಳೆದುಕೊಳ್ಳುತ್ತದೆ ಎಂಬುದನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.

ಮಾಸಾಂತ್ಯಕ್ಕೆ ಮುಕ್ತಾಯ

ಮಾಸಾಂತ್ಯಕ್ಕೆ ಮುಕ್ತಾಯ

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕಂಪನಿಯು ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಾಗ ನೀಡಿದ್ದ ಆಫರ್ ಗಳಾದ ಅನಿಯಮಿತ - ಹೈ ಸ್ಪೀಡ್ 4ಜಿ ಡೇಟಾ, ಎಚ್ ಡಿ ವಾಯ್ಸ್ ಕಾಲಿಂಗ್, ಎಚ್ ಡಿ ವೀಡಿಯೊ ಕಾಲಿಂಗ್, ಎಸ್ ಎಂಎಸ್, ಜಿಯೋ ಆ್ಯಪ್ ಗಳ ಉಪಯೋಗಗಳನ್ನು ಮೂರು ತಿಂಗಳವರೆಗೆ ಉಚಿತವಾಗಿ ಉಪಯೋಗಿಸಬಹುದಿತ್ತು. ಆನಂತರ, ಹೊಸ ವರ್ಷದ ಆಫರ್ ಹೆಸರಿನಲ್ಲಿ ಈ ಆಫರ್ ಅನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಯಿತು. ಈ ಆಫರ್ ಮಾರ್ಚ್ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳುವುದರಿಂದ ಗ್ರಾಹಕರ ಮೇಲೆ ಕೆಲವಾರು ಜಿಯೋ ಸೇವೆಗಳ ಮೇಲೆ ತೆರಿಗೆ ಅಥವಾ ಶುಲ್ಕ ಅನ್ವಯಿಸುತ್ತದೆ. ಆದ್ದರಿಂದಲೇ ಹಲವಾರು ಗ್ರಾಹಕರು ಈ ನೆಟ್ ವರ್ಕ್ ನಿಂದ ಹೊರನಡೆಯುವ ಸಾಧ್ಯತೆಗಳು ಬಹಳಷ್ಟಿವೆ.

30 ಜಿಬಿ ಯಾಕೆ ಎನ್ನುವವರೂ ಇದ್ದಾರೆ

30 ಜಿಬಿ ಯಾಕೆ ಎನ್ನುವವರೂ ಇದ್ದಾರೆ

ಮಾರ್ಚ್ ತಿಂಗಳ ಕೊನೆಯಲ್ಲಿ ಜಿಯೊ ನೆಟ್ ವರ್ಕ್ ನ ಪ್ರಾಥಮಿಕ ಸದಸ್ಯತ್ವ ಹೊಂದಿರುವ ಗ್ರಾಹಕರು 99 ರು. ಕೊಟ್ಟು ತಮ್ಮ ಸದಸ್ಯತ್ವವನ್ನು ನವೀಕರಣಗೊಳಿಸಬಹುದೆಂದು ಸೂಚಿಸಲಾಗಿದೆ. ಅಲ್ಲದೆ, ಹೊಸ ಡೇಟಾ ಪ್ಯಾಕ್ ಗಳನ್ನೂ ಪ್ರಕಟಿಸಲಾಗಿದ್ದು, 303 ರು.ಗಳಿಗೆ 30 ದಿನಗಳ ಲೆಕ್ಕದಲ್ಲಿ 30 ಜಿಬಿ ಪಡೆಯಬಹುದಾಗಿದೆ. ಆದರೆ, ಬಹುತೇಕರಿಗೆ ಈ ಎರಡೂ ನಿಯಮಗಳು ಇಷ್ಟವಾಗುವುದಿಲ್ಲ ಎಂದು ಹೇಳಲಾಗಿದೆ. ಮೊದಲಿಗೆ ಜಿಯೋ ಸಿಮ್ ಅನ್ನು ಉಚಿತವೆಂದು ನೀಡಿದ್ದಲ್ಲದೆ, ಪ್ರಾಥಮಿಕ ಸದಸ್ಯತ್ವದ ಹೆಸರಿನಲ್ಲಿ 99 ರು. ವಸೂಲಿ ಮಾಡುತ್ತಿರುವುದು ಸಿಮ್ ಕಾರ್ಡಿಗೆ ದುಡ್ಡು ಪಡೆದಂತೆಯೇ ಎಂಬ ತೀರ್ಮಾನಕ್ಕೆ ಗ್ರಾಹಕ ಬರುತ್ತಾನೆ ಎನ್ನುವುದು ಒಂದು ಕಡೆಯಾದರೆ, ಮತ್ತೊಂದೆಡೆ ತಿಂಗಳಿಗೆ 30 ಜಿಬಿ ಡೇಟಾ ಹೆಚ್ಚಾಯ್ತು ಎನ್ನುವ ಗ್ರಾಹಕರಿಗೆ 30 ಜಿಬಿಗಿಂತ ಕಡಿಮೆ ಡೇಟಾ ಪಡೆಯುವ ಆಯ್ಕೆಯೇ ಇಲ್ಲವಾಗಿರುವುದರಿಂದ ಇದೂ ಬೇಸರ ತರಿಸಲಿದೆ ಎನ್ನಲಾಗಿದೆ.

ಏರ್ ಟೆಲ್ ಅಗ್ರ ವೇಗಿ

ಏರ್ ಟೆಲ್ ಅಗ್ರ ವೇಗಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಜಿಯೊ 4ಜಿ ನೆಟ್ ವರ್ಕ್ ನ ಅಪ್ ಲೋಡ್ ಸ್ಪೀಡ್ ಆ ಕಂಪನಿ ಹೇಳಿಕೊಳ್ಳುವಷ್ಟು ಇಲ್ಲ ಎನ್ನಲಾಗುತ್ತಿದೆ. ಟ್ರಾಯ್ ನ ಜನವರಿ ತಿಂಗಳ ಮಾಹಿತಿಯಂತೆ, ಭಾರ್ತಿ ಏರ್ ಟೆಲ್ ಕಂಪನಿಯ 4ಜಿ ಅಪ್ ಲೋಡ್ ವೇಗ 11.862 ಎಂಬಿಪಿಎಸ್ ಇದ್ದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆನಂತರದ ಸ್ಥಾನ ಐಡಿಯಾ (10.562 ಎಂಬಿಪಿಎಸ್), ವೊಡಾಫೋನ್ (10.30 ಎಂಬಿಪಿಎಸ್) ಇವೆ. ಈ ಪಟ್ಟಿಯಲ್ಲಿ ಜಿಯೋ ಕಂಪನಿಯದ್ದು ನಾಲ್ಕನೇ ಸ್ಥಾನ (8.345 ಎಂಬಿಪಿಎಸ್). ಗ್ರಾಹಕರಿಗೆ ಇದು ಇಷ್ಟವಾಗದ ವಿಚಾರ ಎನ್ನಲಾಗಿದೆ.

ವೊಡಾಫೋನ್ ಉತ್ತಮ ಇಲ್ಲಿ

ವೊಡಾಫೋನ್ ಉತ್ತಮ ಇಲ್ಲಿ

ಟ್ರಾಯ್ ಬಿಡುಗಡೆ ಮಾಡಿರುವ ಜನವರಿ 2017ರ ಅಂಕಿ ಅಂಶಗಳ ಪ್ರಕಾರ, 4ಜಿ ಸ್ಪೀಡ್ ನಲ್ಲಿ ಅಪ್ ಲೋಡ್ ಮಾಡುವ ವಿಚಾರದಲ್ಲಿ ವೊಡಾ ಫೋನ್ (5.696 ಎಂಬಿಪಿಎಸ್) ಮೊದಲ ಸ್ಥಾನದಲ್ಲಿದೆ. ಆನಂತರದ ಸ್ಥಾನಗಳಲ್ಲಿ ಐಡಿಯಾ (5.631 ಎಂಬಿಪಿಎಸ್), ಏರ್ ಟೆಲ್ ( 4.718 ಎಂಬಿಪಿಎಸ್) ಇವೆ. ಈ ಪಟ್ಟಿಯಲ್ಲೂ ಜಿಯೋ ಕಂಪನಿ (2.276 ಎಂಬಿಪಿಎಸ್) ನಾಲ್ಕನೇ ಸ್ಥಾನದಲ್ಲಿದೆ.

30 ಜಿಬಿ ಹೆಚ್ಚೆನ್ನುವವರಿಗೆ ಉಂಟು ಸೌಲಭ್ಯ

30 ಜಿಬಿ ಹೆಚ್ಚೆನ್ನುವವರಿಗೆ ಉಂಟು ಸೌಲಭ್ಯ

ಇನ್ನು, ಮೊದಲೇ ಹೇಳಿದಂತೆ ಅತಿ ಕಡಿಮೆ ಡೇಟಾ ಪ್ಲಾನ್ ಬೇಕೆನ್ನುವ ಗ್ರಾಹಕರಿಗೆ ಜಿಯೊನಲ್ಲಿ ಯಾವುದೇ ಆಯ್ಕೆಯಿಲ್ಲ. ಅದರ ಆರಂಭಿಕ ಆಯ್ಕೆಯೇ 30 ಜಿಬಿ. ಆದರೆ, ಏರ್ ಟೆಲ್, ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳು ತಮ್ಮ ಗ್ರಾಹಕರಿಗೆ 30 ಜಿಬಿಗಿಂತಲೂ ಕಡಿಮೆ ಆಯ್ಕೆಯ ಡೇಟಾ ಪ್ಲಾನ್ ಗಳನ್ನು ನೀಡುತ್ತಿವೆ. ಅಲ್ಲದೆ, ಉತ್ತಮ ನೆಟ್ ವರ್ಕ್ ವೇಗವನ್ನೂ ಹೊಂದಿವೆ. ಇದು ಜಿಯೋ ಕಂಪನಿಗೆ ಮುಂದೆ ಮುಳುವಾಗಬಹುದು ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Jio offers will come to an end on March 31, 2017. This may lead Jio to loose its most of the customers. According to Pundits of telecom industry, Not only end of offers, but also weak network, no option for low data users etc will reduce its will decrease number of customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more