ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಓದಿ: ಭಾರತದಲ್ಲಿ 5ಜಿ ಸೇವೆಗಳು ಪ್ರಾರಂಭವಾಗೋದು ಯಾವಾಗ?

|
Google Oneindia Kannada News

ನವದೆಹಲಿ, ಜುಲೈ 26: ಭಾರತದಲ್ಲಿ ನಡೆಯುತ್ತಿರುವ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಂಬಾನಿ ಮತ್ತು ಅದಾನಿ ಕಂಪನಿಗಳ ನಡುವಿನ ಪೈಪೋಟಿಯ ಮಧ್ಯೆ ಯಾರಿಗೆ 5ಜಿ ಹಕ್ಕು ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ದೇಶದಲ್ಲಿ 5ಜಿ ಸೇವೆಗಳು ಯಾವಾಗ ಶುರುವಾಗುತ್ತೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ 5ಜಿ ಸೇವೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್, 2023ರ ಮಾರ್ಚ್ ವೇಳೆಗೆ ಸೇವೆ ಪ್ರಾರಂಭವಾಗುತ್ತದೆ ಎಂದಿದ್ದಾರೆ.

Breaking: ಮೆಟ್ರೋ ನಿಲ್ದಾಣದಲ್ಲಿ 5ಜಿ ನೆಟ್‌ವರ್ಕ್ ಪ್ರಾಯೋಗಿಕ ಪರೀಕ್ಷೆBreaking: ಮೆಟ್ರೋ ನಿಲ್ದಾಣದಲ್ಲಿ 5ಜಿ ನೆಟ್‌ವರ್ಕ್ ಪ್ರಾಯೋಗಿಕ ಪರೀಕ್ಷೆ

ಭಾರತದಲ್ಲಿ 2022ರ ಜುಲೈ ಅಂತ್ಯದ ವೇಳೆಗೆ 5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅಲ್ಲಿಂದ ಮುಂದೆ 2023ರ ಮಾರ್ಚ್ ವೇಳೆಗೆ ದೇಶದಲ್ಲಿ ಪೂರ್ಣ ಪ್ರಮಾಣದ 5ಜಿ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

5ಜಿ ಸೇವೆ ಎನ್ನುವುದು ಭಾರತಕ್ಕೆ ಸಾಧನೆ

5ಜಿ ಸೇವೆ ಎನ್ನುವುದು ಭಾರತಕ್ಕೆ ಸಾಧನೆ

"ಭಾರತವು 4ಜಿ ಬಳಕೆಯ ಮೂಲ ರೇಡಿಯೋ, ಉಪಕರಣ, ಹ್ಯಾಂಡ್ ಸೆಟ್ ವಲಯದಲ್ಲಿ ತನ್ನದೇ ಹಿಡಿತವನ್ನು ಹೊಂದಿದೆ. 4ಜಿ ಸೇವೆಗಳು ಈಗಾಗಲೇ ಜನರನ್ನು ತಲುಪುತ್ತಿದ್ದರೆ, 5ಜಿ ಸೇವೆಗಳು ಜನರನ್ನು ತಲುಪುವುದಕ್ಕಾಗಿ ಸಿದ್ಧಗೊಂಡಿವೆ. ಭಾರತದ ಮಟ್ಟಿಗೆ 5ಜಿ ಸೇವೆ ಎನ್ನುವುದು ತಂತ್ರಜ್ಞಾನ ಮತ್ತು ಭವಿಷ್ಯದ ಅಭಿವೃದ್ಧಿಯ ಸಂಕೇತವಾಗಿದೆ. ಅಲ್ಲದೇ 5ಜಿ ಸೇವೆಯು ದೇಶದ ಮಟ್ಟಿಗೆ ಒಂದು ಸಾಧನೆಯೇ ಆಗಿದೆ," ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

4 ಕಡೆಗಳಲ್ಲಿ 5ಜಿ ಸೇವೆಗಳ ಪ್ರಾಯೋಗಿಕ ಪ್ರಾರಂಭ

4 ಕಡೆಗಳಲ್ಲಿ 5ಜಿ ಸೇವೆಗಳ ಪ್ರಾಯೋಗಿಕ ಪ್ರಾರಂಭ

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಆಯ್ದ ಪ್ರದೇಶಗಳಲ್ಲಿ 5G ನೆಟ್‌ವರ್ಕ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಪ್ರಾರಂಭಿಸಿದೆ. ದೆಹಲಿ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ, ಭೋಪಾಲ್ ಮತ್ತು ಕಾಂಡ್ಲಾ ಬಂದರು ಟೆಲಿಕಾಂ ಸಂಸ್ಥೆ ಆಯ್ಕೆ ಮಾಡಿದ ನಾಲ್ಕು ಪ್ರದೇಶಗಳಾಗಿವೆ.

ನವದೆಹಲಿಯಲ್ಲಿ 5ಜಿ ಹರಾಜು ಪ್ರಕ್ರಿಯೆ

ನವದೆಹಲಿಯಲ್ಲಿ 5ಜಿ ಹರಾಜು ಪ್ರಕ್ರಿಯೆ

5ಜಿ ತರಂಗಾಂತರ ಹರಾಜು ಪ್ರಕ್ರಿಯೆಯು ಮಂಗಳವಾರ ಬೆಳಗ್ಗೆ 10 ಗಂಟೆಯಿಂದಲೇ ಪ್ರಾರಂಭವಾಗಿದ್ದು, ಸಂಜೆ 6 ಗಂಟೆವರೆಗೂ ನಡೆಯಲಿದೆ. ಟೆಲಿಕಾಂ ಇಲಾಖೆ (DoT) ಮೂಲಗಳ ಪ್ರಕಾರ, ಹರಾಜಿನ ಉದ್ದವು ರೇಡಿಯೊವೇವ್‌ಗಳ ನಿಜವಾದ ಬೇಡಿಕೆ ಮತ್ತು ವೈಯಕ್ತಿಕ ಬಿಡ್‌ದಾರರು ಬಳಸುವ ತಂತ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಮುಂಬರುವ 5G ಸೇವೆಗಳು ಹೊಸ ಯುಗದ ವ್ಯವಹಾರಗಳನ್ನು ರಚಿಸುವ ಸಾಮರ್ಥ್ಯ ಹೊಂದಿವೆ. ಉದ್ಯಮಗಳಿಗೆ ಹೆಚ್ಚುವರಿ ಆದಾಯವನ್ನು ಗಳಿಸುವುದರ ಜೊತೆಗೆ ಹೊಸ ಬಳಕೆ, ತಂತ್ರಜ್ಞಾನ ಮತ್ತು ಉದ್ಯೋಗವನ್ನು ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಲಿದೆ.

5ಜಿ ಹರಾಜಿಗಾಗಿ ಅಂಬಾನಿ ಮತ್ತು ಅದಾನಿ ಪೈಪೋಟಿ

5ಜಿ ಹರಾಜಿಗಾಗಿ ಅಂಬಾನಿ ಮತ್ತು ಅದಾನಿ ಪೈಪೋಟಿ

ನವದೆಹಲಿಯಲ್ಲಿ ನಡೆಯುತ್ತಿರುವ 5ಜಿ ಹರಾಜು ಪ್ರಕ್ರಿಯೆಯಲ್ಲಿ 1.1 ಟ್ರಿಲಿಯನ್ (14 ಶತಕೋಟಿ ಡಾಲರ್) ಮೂಲಕ ಹಕ್ಕು ಪಡೆದುಕೊಳ್ಳಲು ಮುಖೇಶ್ ಅಂಬಾನಿಯ ರಿಲಾಯನ್ಸ್ ಸಂಸ್ಥೆ ಕಚ್ಚೆಕಟ್ಟಿಕೊಂಡು ನಿಂತಿದೆ. ಜುಲೈ 18ರಂದು ಟೆಲಿಕಾಂ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಅದಕ್ಕಾಗಿಯೇ ರಿಲಯನ್ಸ್ ಜಿಯೋ 14,000 ಕೋಟಿ ರೂಪಾಯಿಗಳ ಇಎಮ್‌ಡಿಯನ್ನು ಸಲ್ಲಿಸಿದೆ. ಆದರೆ ಅಂಬಾನಿ ಜೊತೆಗೆ ಪೈಪೋಟಿಗೆ ಇಳಿದಿರುವ ಅದಾನಿ ಸಂಸ್ಥೆಯು 100 ಕೋಟಿ ರೂಪಾಯಿಗಳಷ್ಟು ಇಎಮ್‌ಡಿಯನ್ನು ಸಲ್ಲಿಸಿದೆ.

ಆನ್‌ಲೈನ್‌ನಲ್ಲಿ ಪ್ರಾರಂಭವಾಗಿರುವ 5G ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಯಲ್ಲಿ ರಿಲಾಯನ್ಸ್ ಜಿಯೋ, ಅದಾನಿ ಗ್ರೂಪ್, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಪ್ರಮುಖ ಬಿಡ್ ದಾರರಾಗಿ ಭಾಗವಹಿಸಿವೆ. ಆದರೆ ಈ ನಾಲ್ಕು ಕಂಪನಿಗಳ ಪೈಕಿ ಅಂಬಾನಿಯ ರಿಲಾಯನ್ಸ್ ಕಂಪನಿಯು ಅತಿಹೆಚ್ಚು ಇಎಮ್‌ಡಿಯನ್ನು ಸಲ್ಲಿಸಿರುವುದು ಗೊತ್ತಾಗಿದೆ.

English summary
India will expected to get full-fledged 5G services by March 2023, said Union Communications Minister Ashwini Vaishnaw.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X