ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಬಿನ ತುಟಿ ಕಚ್ಚುವಷ್ಟು ತುಟ್ಟಿಯಾಗಲಿದೆ ನವೆಂಬರ್ ತಿಂಗಳು, ಏಕೆ?

|
Google Oneindia Kannada News

ನವೆಂಬರ್ ತಿಂಗಳು ಗ್ರಾಹಕರಿಗೆ ದುನಿಯಾ ದುಬಾರಿ ಆಗಲಿದೆಯಾ? ನೀತಿ ನಿಯಮದಲ್ಲಿನ ಬದಲಾವಣೆಗಳು, ಕಚ್ಚಾ ತೈಲ ದರಗಳ ಏರಿಕೆ ಮತ್ತು ಕೆಲವು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕ ವಸ್ತುಗಳ ಬೆಲೆಯಲ್ಲಿ ಮುಂದಿನ ತಿಂಗಳು ಏರಿಕೆಯಾಗಲಿದೆ ಎಂಬುದರ ಇಷಾರೆ ನೀಡುತ್ತಿದೆ. ಯಾವುದು ಏರಿಕೆ ಆಗಬಹುದು ಎಂಬುದರ ಮಾಹಿತಿ ಇಲ್ಲಿದೆ.

ಗೃಹಬಳಕೆ ವಸ್ತುಗಳು
ರೆಫ್ರಿಜರೇಟರ್, ಏರ್ ಕಂಡೀಷನರ್ ಹಾಗೂ ವಾಷಿಂಗ್ ಮಷೀನ್ ಗಳ ಬೆಲೆಯಲ್ಲಿ ಶೇ 3ರಿಂದ 5ರಷ್ಟು ಜಾಸ್ತಿಯಾಗಬಹುದು. ಇನ್ ಪುಟ್ ದರ ಶೇ 30ರಿಂದ 50ರಷ್ಟು ಹೆಚ್ಚಾಗಿದೆ. ಅದನ್ನು ಗ್ರಾಹಕರ ಮೇಲೆ ಹಾಕಲು ತಯಾರಕರು ನಿರ್ಧರಿಸಿದ ಪರಿಣಾಮವಿದು. ಸ್ಟೀಲ್ ಬೆಲೆಯಲ್ಲಿ ಶೇ ನಲವತ್ತು ಹಾಗೂ ತಾಮ್ರದ ಬೆಲೆಯಲ್ಲಿ ಶೇ ಐವತ್ತರಷ್ಟು ಏರಿಕೆಯಾಗಿದೆ.

ದಸರಾದಲ್ಲಿ ಡಲ್ ಆಗಿದ್ದ ಚಿನ್ನದ ಬೆಲೆ, ದೀಪಾವಳಿಯಲ್ಲಿ ಏರಿಕೆ!ದಸರಾದಲ್ಲಿ ಡಲ್ ಆಗಿದ್ದ ಚಿನ್ನದ ಬೆಲೆ, ದೀಪಾವಳಿಯಲ್ಲಿ ಏರಿಕೆ!

ಇನ್ನು ರೆಫ್ರಿಜರೇಟರ್ ಉತ್ಪಾದನೆಗಾಗಿಯೇ ಬಳಸುವ ಎಂಡಿಐ ಎಂಬ ಮುಖ್ಯ ರಾಸಾಯನಿಕವು ಜಾಗತಿಕ ಮಟ್ಟದಲ್ಲೇ ಕೊರತೆಯಾಗಿ ಅದರ ಬೆಲೆ ದುಪ್ಪಟ್ಟಾಗಿದೆ. ಈ ಎಲ್ಲದರ ಹೊಡೆತ ಗ್ರಾಹಕರ ಮೇಲೆ ಬೀಳಬಹುದು.

why November could turn out to be costlier for consumers

ವಿಮಾನಯಾನ ದರ
ಇಷ್ಟು ಸಮಯ ಕಚ್ಚಾ ತೈಲ ದರದಲ್ಲಿ ಇಳಿಕೆ ಇದ್ದಿದ್ದರಿಂದ ವಿಮಾನ ಯಾನ ಕಂಪನಿಗಳು ಕಡಿಮೆ ಬೆಲೆಯಲ್ಲಿ ಸೇವೆ ನೀಡಿದವು. ಇದರಿಂದ ದೇಶೀಯ ವಿಮಾನ ದಟ್ಟಣೆಯಲ್ಲಿ ಶೇ ಇಪ್ಪತ್ತರಷ್ಟು ಏರಿಕೆ ಕಂಡಿತ್ತು. ಆದರೆ ಇನ್ನು ಮುಂದೆ ಶೇ 15ರಷ್ಟು ಹೆಚ್ಚು ಹಣ ತೆರಲು ಸಿದ್ಧವಾಗಬೇಕಿದೆ. ವಿಮಾನ ಯಾನ ಕಂಪನಿಗಳು ಶೇ 10ರಿಂದ 15ರಷ್ಟು ಪ್ರಯಾಣ ದರ ಏರಿಕೆ ಮಾಡುವ ಸನ್ನಾಹದಲ್ಲಿವೆ.

ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರಮೂರು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರ

ತೈಲ ಉತ್ಪಾದನೆ ಮಾಡುವ ಕಂಪನಿಗಳು ವಿಮಾನದಲ್ಲಿ ಬಳಸುವ ಇಂಧನದ ಬೆಲೆಯನ್ನು ಶೇ ಆರರಷ್ಟು ಏರಿಸಿವೆ. ಏಕೆಂದರೆ ಡಾಲರ್ ನ ವಿರುದ್ಧ ರುಪಾಯಿ ಮೌಲ್ಯ ಕುಸಿದಿದ್ದರಿಂದ ಬೆಲೆ ಏರಿಸಲಾಗಿದೆ.

ಮನೆಯ ಹೊರಗಿನ ಆಹಾರವೂ ದುಬಾರಿ
ಇನ್ ಪುಟ್ ಕ್ರೆಡಿಟ್ ಗೆ ಅವಕಾಶ ನೀಡದೆ ಈಗಿರುವ ಜಿಎಸ್ ಟಿ ದರ ಶೇ 18ರಿಂದ 12ಕ್ಕೆ ಇಳಿಸಿದರೆ ರೆಸ್ಟೋರೆಂಟ್ ಗಳ ಆಹಾರ ದರದಲ್ಲಿ ಭಾರೀ ಏರಿಕೆಯಾಗಲಿದೆ. ಈಗ ಏಸಿ ರೆಸ್ಟೋರೆಂಟ್ ಗಳು ಶೇ 18ರಷ್ಟು ಜಿಎಸ್ ಟಿ ಪಾವತಿಸುತ್ತಿವೆ. ಇನ್ ಪುಟ್ ಕ್ರೆಡಿಟ್ ಕ್ಲೇಮ್ ಮಾಡಿಕೊಳ್ಳಬಹುದಾಗಿದೆ. ಬಾಡಿಗೆ, ವಿದ್ಯುತ್, ಸಾಗಣೆ ಇತ್ಯಾದಿ ವೆಚ್ಚಗಳ ಮೇಲೆ ಇನ್ ಪುಟ್ ಕ್ರೆಡಿಟ್ ಕ್ಲೇಮ್ ಮಾಡಬಹುದು.

ದೇಶದ ಆರ್ಥಿಕತೆ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣ ಮುಖ್ಯಾಂಶದೇಶದ ಆರ್ಥಿಕತೆ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣ ಮುಖ್ಯಾಂಶ

ಆದರೆ, ಜಿಎಸ್ ಟಿ ಶೇ 12ಕ್ಕೆ ಇಳಿಸಿದರೆ ತೆರಿಗೆ ವಿನಾಯಿತಿಗಳು ಹೋಗುತ್ತವೆ. ಇದರಿಂದ ವೆಚ್ಚಗಳು ಶೇ ಏಳರಿಂದ ಹತ್ತರಷ್ಟು ಹೆಚ್ಚಾಗುತ್ತದೆ.

ತೈಲ ದರ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಾಗುವ ಸಾಧ್ಯತೆ ಇದೆ. ಭಾರತವು ಶೇ ಎಂಬತ್ತೆರಡರಷ್ಟು ಬೇಡಿಕೆಯನ್ನು ತೈಲ ಆಮದು ಮಾಡಿಕೊಳ್ಳುವ ಮೂಲಕವೇ ಪೂರೈಸುತ್ತಿದೆ. ಕಳೆದ ಆಗಸ್ಟ್ ನಿಂದಲೇ ಗ್ರಾಹಕರು ಪೆಟ್ರೋಲ್- ಡೀಸೆಲ್ ಗೆ ಹೆಚ್ಚಿನ ಹಣ ನೀಡುತ್ತಾ ಬಂದಿದ್ದಾರೆ. ಮೊನ್ನೆ ಅಕ್ಟೋಬರ್ ಮೂರನೇ ತಾರೀಕು ಕೇಂದ್ರ ಸರಕಾರ ಎರಡು ರುಪಾಯಿ ಅಬಕಾರಿ ಸುಂಕ ಇಳಿಸಿತು.

ಜಿಎಸ್ ಟಿ ಹೊಡೆತಕ್ಕೆ ಮೈಸೂರ್ ಪಾಕ್ ಸಿಹಿಯಲ್ಲ, ಗೋಡಂಬಿ ರುಚಿಯಲ್ಲಜಿಎಸ್ ಟಿ ಹೊಡೆತಕ್ಕೆ ಮೈಸೂರ್ ಪಾಕ್ ಸಿಹಿಯಲ್ಲ, ಗೋಡಂಬಿ ರುಚಿಯಲ್ಲ

ಅದೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಮೇಲೆ ಸರಕಾರ ಈ ಕ್ರಮಕ್ಕೆ ಮುಂದಾಯಿತು. ಅದಕ್ಕೂ ಮುನ್ನ ಪೆಟ್ರೋಲ್- ಡೀಸೆಲ್ ದರ ವಿಪರೀತ ಹೆಚ್ಚಾಗಿತ್ತು. ಇನ್ನು ನವೆಂಬರ್ ನಲ್ಲಿ ಬೆಲೆ ಏರಿಕೆಗೆ ಸಿದ್ಧಗೊಳ್ಳಬೇಕಾಗುತ್ತದೆ.

English summary
November can prove to be costlier for consumers. Policy changes and rising prices of crude oil and certain raw materials are likely to push up consumer prices next month. Prices of ACs, fridge, washing machine, air fare, food and fuel may go up in November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X