ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದ್ದಕಿದ್ದಂತೆ ವಿಮಾನಯಾನ ದರ ಏರಿಕೆ ಯಾಕೆ?

|
Google Oneindia Kannada News

ನವದೆಹಲಿ, ಜೂ. 8: ಬರೋಬ್ಬರಿ ಮೂರು ಕೋವಿಡ್‌ ಸಾಂಕ್ರಮಿಕಗಳನ್ನು ಕಳೆದಿರುವ ಜನರು ಕೋವಿಡ್‌ ಸ್ವಲ್ಪ ತಗ್ಗಿರುವ ಈ ಹೊತ್ತಿನಲ್ಲಿ ಪ್ರಯಾಣದ ಬಗ್ಗೆ ಆಲೋಚನೆ ಮಾಡುತ್ತಿರುವಂತೆ ವಿವಿಧೆಡೆ ಬೆಲೆಗಳು ಕೂಡ ಗಗನಮುಖಿಯಾಗುತ್ತಿವೆ. ಪೆಟ್ರೋಲ್‌, ಡಿಸೇಲ್‌, ಅಡುಗೆ ಎಣ್ಣೆ, ದಿನಬಳಕೆಯ ಪದಾರ್ಥಗಳು ಜನಸಮಾನ್ಯರ ಕೈಗೆಟುಕದ ಮಟ್ಟ ತಲುಪಿ ಜನಜೀವನ ನಲುಗಿ ಹೋಗಿದೆ.

ಈ ಹೊತ್ತಿನಲ್ಲಿ ಕೋವಿಡ್‌ ಕೆಲವು ತಿಂಗಳಲ್ಲಿ ಏರಿ ಇಳಿಯುತ್ತಿದ್ದು, ಜನರು ಪ್ರಯಾಣದ ಹುರುಪಿನಲ್ಲಿ ಇದ್ದಾರೆ. ಹಾಗೆ ಇರುವವರ ಬಾಯಲ್ಲಿ ಕೇಳಿ ಬರುತ್ತಿರುವ ಒಂದೇ ವಿಷಯ ವಿಮಾನ ಪ್ರಯಾಣ ದರ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಯಾಕೆ ವಿಮಾನ ಪ್ರಯಾಣ ದರ ಏರಿಕೆಯಾಗಿದೆ ಎಂದು ತಿಳಿಯೋಣ.

ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ

ದೇಶ, ವಿದೇಶ ಪ್ರವಾಸ ಹೊರಡಬಯಸುವ ಜನರು ಅಂತರ್ಜಾಲದಲ್ಲಿ ಎಲ್ಲಿ ಹುಡುಕಾಡಿದರೂ ವಿಮಾನ ಪ್ರಯಾಣ ಮೊದಲಗಿಂತಲೂ ಭಾರೀ ಏರಿಕೆ ಎಂದೇ ಕಂಡು ಬರುತ್ತಿದೆ. ಮಾನ್ಸೂನ್‌ ಆರಂಭವಾಗುತ್ತಿದಂತೆ ಹಲವು ಪ್ರವಾಸಿ ತಾಣಗಳು ಜನರನ್ನು ಕೈಬಿಸಿ ಕರೆಯುತ್ತವೆ. ಕೆಲವೊಂದು ತಾಣಗಳಂತು ಆ ಸಮಯದಲ್ಲಿ ಮಾತ್ರವೇ ಪ್ರಕೃತಿ ಸೌಂದರ್ಯ ಸವಿ ಉಣಬಡಿಸುತ್ತವೆ. ಈ ಹಿನ್ನೆಲೆಯಲ್ಲಿ ಪದೇ ಪದೇ ಅಲ್ಲಿಗೆ ಹೋಗ ಬಯುಸುವ ಜನರು ಇರುವ ಅತ್ಯಲ್ಪ ಕಾಲಾವಕಾಶದಲ್ಲಿ ಪ್ರಯಾಣಕ್ಕೆ ವಿಮಾನ ಹತ್ತುವುದು ಅನಿವಾರ್ಯ. ಹೀಗಾಗಿ ವಿಮಾನ ಪ್ರಯಾಣ ದರ ನೋಡುತ್ತಿದ್ದಂತೆ ದಂಗಾಗುತ್ತಿದ್ದು, ಆದರೂ ಪ್ರಯಾಣಕ್ಕೆ ಮುಂದಾಗುತ್ತಿದ್ದಾರೆ.

Breaking; ದಾವಣಗೆರೆ ವಿಮಾನ ನಿಲ್ದಾಣ, 3 ವಾರದಲ್ಲಿ ವರದಿBreaking; ದಾವಣಗೆರೆ ವಿಮಾನ ನಿಲ್ದಾಣ, 3 ವಾರದಲ್ಲಿ ವರದಿ

 ಕೋವಿಡ್‌ ಸಾಂಕ್ರಮಿಕದಲ್ಲೇ ಏರಿಕೆ

ಕೋವಿಡ್‌ ಸಾಂಕ್ರಮಿಕದಲ್ಲೇ ಏರಿಕೆ

ಈ ಬಗ್ಗೆ ಮಾತನಾಡಿರುವ ಡೆಲ್ಟಾ ಏರ್‌ಲೈನ್ಸ್ ಇಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಡ್ ಬಾಸ್ಟಿಯನ್, ವಿಮಾನ ಪ್ರಯಾಣ ದರ ಹಿಂದೆಂದಿಗಿಂತಲೂ ಶೇಕಡಾ 30 ರಷ್ಟು ಏರಿಕೆ ಕಂಡಿದೆ. ಇಲ್ಲಿ ಯಾವ ವರ್ಗದ ವಿಮಾನ ಪ್ರಯಾಣ ದರ ಏರಿಕೆ ಕಂಡಿದೆ ಎಂದು ಗಮನಿಸಬೇಕು. ನಿಮಗೆ ದರ ಏರಿಕೆ ಎಂಬುದು ಕೋವಿಡ್‌ ಸಾಂಕ್ರಮಿಕದಲ್ಲೇ ಏರಿಕೆ ಕಂಡು ಬಂದಿದೆ. ಇಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ದರಗಳು ಏರಿಕೆ ಕಂಡುಬಂದಿವೆ. ಇದು ಪ್ರಿಮಿಯಂ ಗ್ರಾಹಕರಿಗೆ ಇನ್ನೂ ಹೊರೆಯಾಗಿದೆ ಎಂದು ಹೇಳಿದ್ದಾರೆ.

 5360 ಡಾಲರ್‌ ನಷ್ಟು ಏರಿಕೆ

5360 ಡಾಲರ್‌ ನಷ್ಟು ಏರಿಕೆ

ಎಕಾನಮಿ ಕ್ಲಾಸ್‌ ವಿಮಾನ ಪ್ರಯಾಣ ದರವು ಜೂನ್‌ ಅಂತ್ಯದಲ್ಲಿ ವಿಪರೀತ ಏರಿಕೆ ಕಂಡು ಬಂದಿದೆ. ಹಾಂಗ್‌ ಕಾಂಗ್‌ ಮತ್ತು ಲಂಡನ್‌ ನಡುವಿನ ಪ್ರಯಾಣಕ್ಕೆ ಕ್ಯಾಥೆ ಏರ್‌ವೇಸ್‌ ಲಿಮಿಟೆಡ್‌ನಲ್ಲಿ ಪರಿಶೀಲನೆ ನಡೆಸಿದರೆ ಸುಮಾರು 5360 ಡಾಲರ್‌ ನಷ್ಟು ಏರಿಕೆ ಕಂಡು ಬಂದಿದೆ. ಇದು ಸಾಂಕ್ರಮಿಕ ಕಾಲದಲ್ಲಿ ಐದು ಪಟ್ಟು ಬಂದಿದೆ. ನ್ಯೂಯಾರ್ಕ್‌ ಮತ್ತು ಲಂಡನ್‌ ನಡುವೆ ಎಕಾನಮಿ ಕ್ಲಾಸ್‌ನ ನೇರ ಪ್ರಯಾಣದ ದರ ಸುಮಾರು 2000 ಸಾವಿರ ಡಾಲರ್‌ ನಷ್ಟು ಏರಿಕೆ ಕಂಡು ಬಂದಿದೆ. ಈ ದಿನಗಳಲ್ಲಿ ಟಿಕೆಟ್ ದರಗಳು ನಿಜವಾಗಿಯೂ ದುಬಾರಿಯಾಗಿದೆ ಎಂದು ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವ ಜಾಕ್ವೆಲಿನ್ ಖೂ ಹೇಳಿದರು. ಈ ತಿಂಗಳ ನಂತರ ಹ್ಯಾಂಬರ್ಗ್‌ಗೆ ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್‌ನೊಂದಿಗೆ ಸಹೋದ್ಯೋಗಿಯ ಹಿಂತಿರುಗುವ ಪ್ರಯಾಣಕ್ಕಾಗಿ ಅವರ ಕಂಪನಿ 5,000 ಡಾಲರ್‌ ಪಾವತಿಸಿತು. ಅದರೆ ಅದರ ಬೆಲೆ ಸುಮಾರು 2,000 ಡಾಲರ್‌ ಅಷ್ಟೇ ಆಗಿತ್ತು ಎಂದು ಅವಳು ಹೇಳಿದಳು.

ಮಾಸ್ಟರ್‌ ಕಾರ್ಡ್ ಎಕನಾಮಿಕ್ಸ್ ಇನ್‌ಸ್ಟಿಟ್ಯೂಟ್ ಅಧ್ಯಯನ ಪ್ರಕಾರ 2019 ಕ್ಕಿಂತ ಏಪ್ರಿಲ್‌ನಲ್ಲಿ ಸಿಂಗಾಪುರದಿಂದ ಹಾರಾಟದ ವೆಚ್ಚ ಸರಾಸರಿ 27% ಹೆಚ್ಚಾಗಿದೆ. ಆದರೆ ಆಸ್ಟ್ರೇಲಿಯಾದಿಂದ ವಿಮಾನಗಳು ಶೇಕಡಾ 20 ರಷ್ಟು ದರ ಹೆಚ್ಚಾಗಿದೆ. ಕೊನೆಯ ಗಳಿಗೆಯಲ್ಲಿ ಖರೀದಿಸುವ ವೆಚ್ಚದ ಬಗ್ಗೆ ಪ್ರಯಾಣಿಕರು ತಿಂಗಳುಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ ಎಂದು ಇನ್‌ಸ್ಟಿಟ್ಯೂಟ್‌ನಲ್ಲಿ ಏಷ್ಯಾ ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಮುಖ್ಯ ಅರ್ಥಶಾಸ್ತ್ರಜ್ಞ ಡೇವಿಡ್ ಮನ್ ಹೇಳಿದರು.

ಹೆಚ್ಚಿನ ದೇಶಗಳು ಗಡಿಯಾಚೆಗಿನ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ ತಮ್ಮ ನಿಲ್ಲಿಸಿರುವ ಜೆಟ್‌ ವಿಮಾನಗಳ ಬಗ್ಗೆ ಮತ್ತೆ ಚಾಲನೆ ನೀಡಲು ಜಾಗರೂಕರಾಗಿದ್ದಾರೆ. ಏರ್‌ಬಸ್ ಎಸ್‌ಇ ಯ A380 ಸೂಪರ್‌ ಜಂಬೋಸ್ ಮತ್ತು ಬೋಯಿಂಗ್ ಕೋ. ನ ಹಳೆಯ 747-8 ಎಸ್‌ ನಂತಹ ಬೃಹತ್‌ ವಿಮಾನಗಳಿಗೆ ಇದು ವಿಶೇಷವಾಗಿ ಹೊಡೆತ ಬೀಳತೊಡಗಿದೆ. ಏಕೆಂದರೆ ಏರ್‌ಲೈನ್‌ಗಳು ಎ350 ಮತ್ತು 787 ಡ್ರೀಮಲೈನ್‌ನಂತಹ ಹೆಚ್ಚು ಇಂಧನ ಬೇಡುವ ಮಾಡಲ್‌ ವಿಮಾನಗಳಿಗೆ ಅನ್ವಯಿಸುತ್ತವೆ. ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ಕೋವಿಡ್‌ ಕಾರಣದಿಂದ ಬೃಹತ್‌ ವಿಮಾನ ಪ್ರಯಾಣವನ್ನು ತಡೆಹಿಡಿಯಲಾಗಿದೆ.

 ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ

ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ

ಇದು ಇನ್ನೂ ಆರಂಭಿಕ ದಿನಗಳು ಅಷ್ಟೇ ಕಳೆದ ಎರಡು ವರ್ಷಗಳಿಂದ ಸರ್ಕಾರದ ನೀತಿಗಳ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಸಿಬ್ಬಂದಿಯೊಂದಿಗೆ ಮತ್ತೆ ಕೆಲಸ ಆರಂಭ ಮಾಡಲು ಸಮಯ ತೆಗೆದುಕೊಳ್ಳುತ್ತವೆ. ಏಕೆಂದರೆ ಮೇ ತಿಂಗಳಲ್ಲಿ ಮಾತ್ರ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ಅಸೋಸಿಯೇಶನ್ ಆಫ್ ಏಷ್ಯಾ ಪೆಸಿಫಿಕ್ ಏರ್‌ಲೈನ್ಸ್‌ನ ಮಹಾನಿರ್ದೇಶಕ ಸುಭಾಸ್ ಮೆನನ್ ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಕಳೆದ 18 ತಿಂಗಳುಗಳಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಂಡು ಬರುಲು ಕಾರಣವಾಗಿದೆ. 2019ರಲ್ಲಿ ಜೆಟ್ ಇಂಧನ ದರವು ಸರಾಸರಿ 27% ರಿಂದ 38% ರಷ್ಟು ಹೆಚ್ಚಾಗಿದೆ. ಕೆಲವು ಬಜೆಟ್ ಏರ್‌ಲೈನ್‌ಗಳಿಗೆ ಇದು 50% ವರೆಗೆ ಹೆಚ್ಚಳ ಕಂಡಿರಬಹುದು. ನ್ಯೂಯಾರ್ಕ್‌ನಲ್ಲಿ ಸ್ಪಾಟ್ ಜೆಟ್ ಇಂಧನ ಬೆಲೆಗಳು ಪ್ರಸಕ್ತ ವರ್ಷ 80% ಕ್ಕಿಂತ ಹೆಚ್ಚಿವೆ. ಆದರೂ ಬೆಲೆಗಳು ಪ್ರದೇಶದಿಂದ ಪ್ರದೇಶಕ್ಕೆ ಸಂಸ್ಕರಣಾ ವೆಚ್ಚಗಳು ಮತ್ತು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಬದಲಾಗುತ್ತವೆ. ಅನೇಕ ಅಮೆರಿಕ ವಿಮಾನಗಳು ಇಲ್ಲಿಯವರೆಗೆ ಹೆಚ್ಚಿದ ಇಂಧನ ವೆಚ್ಚವನ್ನು ಸರಿದೂಗಿಸಲು ಸಮರ್ಥವಾಗಿವೆ. ಆದರೆ ಹೆಚ್ಚಿನ ದರಗಳ ರೂಪದಲ್ಲಿ ಪ್ರಯಾಣಿಕರಿಗೆ ಅವುಗಳನ್ನು ಹೇರಲಾಗಿದೆ.

ಸಿಟಿ ಗ್ರೂಪ್ ಇಂಕ್‌ನ ವಿಶ್ಲೇಷಕರು ಮಾರ್ಚ್‌ನಲ್ಲಿ ಕೆಲವು ಹೂಡಿಕೆದಾರ ವಿಮಾನಯಾನ ಸಂಸ್ಥೆಗಳು ಇಂಧನ ಸರ್ಚಾರ್ಜ್‌ಗಳನ್ನು ನಿಭಾಯಿಸಲು ಇಲ್ಲವೆ ಸರಿದೂಗಿಸಲು ದರ ಹೆಚ್ಚಿಸಲು ಪ್ರಯತ್ನಿಸಬಹುದು ಹೇಳಿದ್ದರು. ಏಷ್ಯಾದ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಜೆಟ್ ಇಂಧನವನ್ನು ಸುಸ್ಥಿರವಾಗಿ ಇಡುವುದಿಲ್ಲ. ಆದ್ದರಿಂದ ಅವು ಬೆಲೆ ಏರಿಕೆಗೆ ಹೆಚ್ಚು ಕಾರಣವಾಗಬಹುದು.

ಇಂಟರ್‌ ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್‌ನ ಡೈರೆಕ್ಟರ್ ಜನರಲ್ ವಿಲ್ಲಿ ವಾಲ್ಷ್ ಕಳೆದ ತಿಂಗಳು ಹೆಚ್ಚಿನ ಪ್ರಯಾಣದ ನಿರ್ಬಂಧಗಳು ಈಗ ಸಡಿಲಗೊಂಡಿರುವುದರಿಂದ ಹೆಚ್ಚಿನ ಟಿಕೆಟ್ ದರಗಳಿಂದ ಪ್ರವಾಸವನ್ನು ತಡೆಯುವಂತೆ ತೋರುತ್ತಿಲ್ಲ. ಕೆಲವು ಗ್ರಾಹಕರು ಸುದೀರ್ಘ ರಜೆಗಾಗಿ ತಯಾರಿ ಮಾಡುತ್ತಿದ್ದಾರೆ. ಈ ವಿರಾಮದಿಂದ ಪ್ರವಾಸಗಳಿಗಾಗಿ ಹೆಚ್ಚು ದುಬಾರಿ ವಿಮಾನ ಪ್ರಯಾಣ ದರಕ್ಕೆ ಹೊಂದಿಕೆಯಾಗಲು ನೋಡುತ್ತಿದ್ದಾರೆ ಎಂದು ಹೇಳಿದೆ.

 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ

ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ

ಕಳೆದೆರಡು ವರ್ಷಗಳಲ್ಲಿ ಲಕ್ಷಾಂತರ ಪೈಲಟ್‌ಗಳು, ವಿಮಾನ ಅಟೆಂಡರ್‌ಗಳು, ಗ್ರೌಂಡ್ ಹ್ಯಾಂಡ್ಲರ್‌ಗಳು ಮತ್ತು ಇತರ ವಿಮಾನಯಾನ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಉದ್ಯಮವು ತನ್ನ ಸಾಂಕ್ರಾಮಿಕ- ಪೂರ್ವ ಹಂತಗಳಲ್ಲಿ ತಡೆರಹಿತ ಕಾರ್ಯಾಚರಣೆಗಳಿಗಾಗಿ ಸಿಬ್ಬಂದಿಯನ್ನು ವೇಗವಾಗಿ ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಂಡು ಬಂದಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ ನಿಯಮಿತವಾಗಿ 6,600ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳಲು ನೋಡುತ್ತಿದೆ. ಕೆಲಸ ಬಿಟ್ಟ ಕೆಲಸಗಾರರು ಇತರ, ಕಡಿಮೆ ಸಂಬಳದ ವೃತ್ತಿಯನ್ನು ಹುಡುಕಿಕೊಂಡಿದ್ದಾರೆ. ಚಾಂಗಿಯಲ್ಲಿನ ನಿರ್ವಾಹಕ ಸಿಬ್ಬಂದಿ ಸಹಾಯಕ ಪೊಲೀಸ್ ಅಧಿಕಾರಿ ತಿಂಗಳಿಗೆ ಗರಿಷ್ಠ 3,700 ಡಾಲರ್‌ನ ಉದ್ಯೋಗಕ್ಕೆ ಸೇರಿಕೊಳ್ಳುತ್ತಿದ್ದಾರೆ.

ಜಾಗತಿಕವಾಗಿ ವಿಮಾನಯಾನ ಸಂಸ್ಥೆಗಳು 2022ರಲ್ಲಿ 200 ಶತಕೋಟಿ ಡಾಲರ್‌ಗಿಂತ ಹೆಚ್ಚು ನಷ್ಟ ಅನುಭವಿಸಿವೆ. ಇದರಿಂದ ಹೊರಬರಲು ಯೋಚನೆ ಮಾಡತೊಡಗಿದೆ. ಹೆಚ್ಚಿನ ಪ್ರಯಾಣಿಕರು ವಿಮಾನಯಾನಕ್ಕೆ ಸಿದ್ಧವಾಗಿದ್ದರೂ ಈಗ ಪ್ರವಾಸ ಹೇಗೆ ಹೆಚ್ಚಾಗುತ್ತದೆ ನೋಡಬೇಕಿದೆ. ಸಿಂಗಾಪುರ ಮೂಲದ ಕನ್ಸೂಮರ್‌ ಇನ್‌ಸೈಟ್‌ ಮತ್ತು ಅನಲಿಟಿಕ್‌ ಫಾಮ್‌ ಸಂಸ್ಥೆಯಾದ ಮಿಲಿಯು ಇನ್‌ಸೈಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸ್ಟೀಫನ್ ಟ್ರೇಸಿ, ಬೆಲೆಗಳ ಏರಿಕೆಯು ಅಲ್ಪಾವಧಿಯ ವಿದ್ಯಮಾನವಾಗಿದೆ. ಬೆಲೆ ಇಳಿಯುವ ವಿಶ್ವಾಸ ನನಗೆ ಇದೆ. ಕಾದು ನೋಡಬೇಕಿದೆ ಎಂದು ಅಂದಾಜಿಸಿದ್ದಾರೆ.

ರೈನೈರ್ ಹೋಲ್ಡಿಂಗ್ಸ್ ಪಿಎಲ್‌ಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ಒ ಲಿಯರಿ ಪ್ರಕಾರ, ದರಗಳು ಸಾಂಕ್ರಾಮಿಕ ಮೊದಲಿಗಿಂತ ಕಡಿಮೆಯಾಗಿದೆ. ಕೋವಿಡ್‌ಗೆ ಮೊದಲು ಇದ್ದ ಮಟ್ಟಕ್ಕೆ ಹೆಚ್ಚಿನ ದರಗಳು ಮರಳುವ ನಿರೀಕ್ಷೆಯಿದ್ದರೂ ಉಕ್ರೇನ್‌ನಲ್ಲಿನ ಯುದ್ಧ ಮತ್ತು ಕೋವಿಡ್‌ ವೈರಸ್ ಇನ್ನೂ ಅಪಾಯಗಳಾಗಿ ಉಳಿದಿವೆ ಎಂದು ಅವರು ಹೇಳಿದ್ದಾರೆ.

Recommended Video

ರೋಹಿತ್ ಇಲ್ದಿದ್ರೂ ನಾವು ಗೆಲ್ತೀವಿ: ರಾಹುಲ್ ದ್ರಾವಿಡ್ ನಿಷ್ಠುರ ನುಡಿ | Oneindia Kannada

English summary
Although travel opportunities have increased after covid, the rise in flights for tourists has hindered their travel opportunities. So why the rise of air travel?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X