ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿಗೆ ಮುನ್ನ ಸ್ಟಾಕ್ ಕ್ಲಿಯರೆನ್ಸ್, ಸಿಕ್ಕಾಪಟ್ಟೆ ಡಿಸ್ಕೌಂಟ್

|
Google Oneindia Kannada News

ಬೆಂಗಳೂರು, ಜೂನ್ 20: ನೀವು ಕಳೆದ ಕೆಲ ದಿನದಿಂದ ಷಾಪಿಂಗ್ ಮಾಡಿಲ್ಲವಾದರೆ ಈ ಅಂಶ ನಿಮ್ಮ ಗಮನಕ್ಕೆ ಬಂದಿರಲಿಕ್ಕಿಲ್ಲ. ಆದರೆ ಏನಾದರೂ ಖರೀದಿ ಮಾಡಿದ್ದರೆ ಒಂದಿಷ್ಟು ರಿಯಾಯಿತಿ ದೊರೆತಿರುತ್ತದೆ. ಆದರೆ ಇದೇನು ದಿಢೀರ್ ಅಂತ ಅಂಗಡಿಯವರು ದಯಾಮಯಿಗಳಾಗಿ ಬಿಟ್ಟಿದ್ದಾರೆ ಎಂದುಕೊಂಡರೆ, ಅದಕ್ಕೆ ಉತ್ತರ ಹೇಳ್ತೀವಿ ಕೇಳಿ.

ಮೊನ್ನೆ ಭಾನುವಾರ ಕತ್ತರಿಗುಪ್ಪೆಯ ಕ್ರೋಮಾ ಮಳಿಗೆಯಲ್ಲಿ ಬೋಸ್ ಇಯರ್ ಫೋನ್ ತೆಗೆದುಕೊಳ್ಳಲು ಹೋದಾಗ ಹನ್ನೊಂದು ಸಾವಿರದ್ದನ್ನು ಒಂಬತ್ತು ಸಾವಿರಕ್ಕೆ ಕೊಟ್ಟಿದ್ದಾರೆ. ಇದೇಕೆ ಹೀಗೆ ಎಂದು ಕೇಳಿದರೆ ಜಿಎಸ್ ಟಿ ಮಹಿಮೆ ಸ್ವಾಮಿ ಅಂತಾರೆ. ಹೌದು ಜುಲೈ ಒಂದರಿಂದ ಜಿಎಸ್ ಟಿ ಜಾರಿ ಆಗುವುದರೊಳಗೆ ಈಗಿರುವ ಸರಕನ್ನೆಲ್ಲ ಮಾರಾಟ ಮಾಡಲೇಬೇಕೆಂಬ ಒತ್ತಡದಲ್ಲಿದ್ದಾರೆ.

ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...

ಹಾಗಂತ ಸರಕಾರ ಕಡ್ಡಾಯ ಮಾಡಿಲ್ಲ. ಆದರೆ ಲೀಗಲ್ ಮೆಟ್ರೋಲಜಿ ಕಾಯ್ದೆ 2009ರ ಅಡಿಯ ನಿಯಮಗಳು ಅಷ್ಟು ಕಠಿಣವಾಗಿವೆ. ಈಗ ಎಂಆರ್ ಪಿ ಅಂದರೆ ಅದರಲ್ಲಿ ಎಲ್ಲ ತೆರಿಗೆಗಳು ಸೇರಿ ಬೆಲೆ ನಿಗದಿಯಾಗಿರುತ್ತದೆ. ಒಂದು ಸಲ ಯಾವುದೇ ವಸ್ತು ಕಾರ್ಖಾನೆಯಿಂದ ಹೊರಗೆ ಬಂದ ಮೇಲೆ ಎಂಆರ್ ಪಿ ಬದಲಿಸುವ ಹಾಗಿಲ್ಲ.

ಸಮಿತಿ ಒಪ್ಪಿಗೆ ಪಡೆಯಬೇಕು

ಸಮಿತಿ ಒಪ್ಪಿಗೆ ಪಡೆಯಬೇಕು

ಗರಿಷ್ಠ ಮಾರಾಟ ಬೆಲೆ ಹಾಗೂ ಲಾಭದ ಪ್ರಮಾಣವನ್ನು ಎಲ್ಲ ವಸ್ತುಗಳಿಗೂ ಸಮರ್ಥನೆ ಕೊಡುವಂತಿರಬೇಕು. ಎಂಆರ್ ಪಿಯಲ್ಲಿ ಯಾವುದಾದರೂ ಬದಲಾವಣೆ ಮಾಡಬೇಕಿದ್ದರೆ ಲೀಗಲ್ ಮೆಟ್ರೋಲಜಿ ಕಾಯ್ದೆ ಅನ್ವಯ ರಚಿಸಿದ ಸಮಿತಿಯಿಂದ ಒಪ್ಪಿಗೆ ಪಡೆಯಬೇಕು.

ಎರಡು ಆಯ್ಕೆಗಳಿವೆ

ಎರಡು ಆಯ್ಕೆಗಳಿವೆ

ಎಂಆರ್ ಪಿಯಲ್ಲಿ ಬದಲಾವಣೆ ಮಾಡಬೇಕಿದ್ದರೆ ಅದಕ್ಕೆ ಹಲವಾರು ನಿಯಮಗಳನ್ನು ಪಾಲಿಸಬೇಕು. ತುಂಬ ವಿಸ್ತೃತವಾದ ವಿವರಣೆ, ಆರ್ಥಿಕ ವಿಶ್ಲೇಷಣೆ ಎಲ್ಲವೂ ನೀಡಬೇಕು. ಈ ಹಂತದಲ್ಲಿ ಎರಡು ಆಯ್ಕೆಗಳಿವೆ. ಒಂದೋ ಎಂಆರ್ ಪಿ ಬದಲಾವಣೆಗೆ ಒಪ್ಪಿಗೆ ಪಡೆಯಬೇಕು ಅಥವಾ ವಸ್ತುಗಳನ್ನು ಅದೇ ಬೆಲೆಗೆ ಮಾರಬೇಕು (ತೆರಿಗೆ ಒಳಗೊಂಡಂತೆ).

ಜಿಎಸ್ ಟಿ ಹಾಕಬೇಕು

ಜಿಎಸ್ ಟಿ ಹಾಕಬೇಕು

ಏನೇನೋ ನಿಯಮಗಳು ಇರುವುದರಿಂದ ಬಹಳ ಕಂಪೆನಿಗಳು ಮೊದಲ ಆಯ್ಕೆಗೆ ಒಲವು ತೋರಿಸುವುದು ಸಹಜ. ಒಂದು ವೇಳೆ ಜಿಎಸ್ ಟಿ ಜಾರಿಗೂ ಮುನ್ನ ಅವರು ವಸ್ತುಗಳನ್ನು ಮಾರಾಟ ಮಾಡಲಿಲ್ಲ ಅಂದರೆ ಅದೇ ಎಂಆರ್ ಪಿ ಮೇಲೆ ಜಿಎಸ್ ಟಿ ಹಾಕಬೇಕಾಗುತ್ತದೆ.

ಲೆಕ್ಕಾಚಾರ ಸಹಿತ ವಿವರಣೆ

ಲೆಕ್ಕಾಚಾರ ಸಹಿತ ವಿವರಣೆ

ಇಲ್ಲೊಂದು ಸಣ್ಣ ಲೆಕ್ಕಾಚಾರ ನಿಮಗಾಗಿ ಕೊಡುತ್ತಿದ್ದೇವೆ. ಜಿಎಸ್ ಟಿಗೂ ಮುನ್ನ ಎಂಆರ್ ಪಿ (ಎಲ್ಲ ತೆರಿಗೆ ಸೇರಿ) 100, ವ್ಯಾಟ್ ಶೇ 12.5, ವಾಸ್ತವ ಮಾರಾಟ ಬೆಲೆ 88.99. ಇನ್ನು ಜಿಎಸ್ ಟಿ ಜಾರಿಯಾದ ನಂತರ ಎಂಆರ್ ಪಿ (ಎಲ್ಲ ತೆರಿಗೆ ಸೇರಿ) 100, ಶೇ 28ರಷ್ಟು ಜಿಎಸ್ ಟಿ, ವಾಸ್ತವ ಮಾರಾಟ ಬೆಲೆ 78.125.

ಲಾಭದ ಪ್ರಮಾಣ ಕಡಿಮೆ

ಲಾಭದ ಪ್ರಮಾಣ ಕಡಿಮೆ

ಈ ಉದಾಹರಣೆ ತೆಗೆದುಕೊಂಡು ಹೇಳುವುದಾದರೆ ಎಂಆರ್ ಪಿಯಲ್ಲಿ ಯಾವುದೇ ಬದಲಾವಣೆ ಮಾಡುವ ಹಾಗಿಲ್ಲ. ಆಗ 10.865 ಲಾಭದ ಪ್ರಮಾಣ ಕಡಿಮೆ ಆಗುತ್ತದೆ. ಹೆಚ್ಚುವರಿಯಾಗಿ ಪಾವತಿಸುವ ತೆರಿಗೆ ಅವರ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ. ಆದ್ದರಿಂದಲೇ ಎಲ್ಲ ಕಂಪೆನಿಗಳು ಜಿಎಸ್ ಟಿ ಜಾರಿಯಾಗುವ ಮುಂಚೆಯೇ ಎಲ್ಲ ವಸ್ತುಗಳ ಮಾರಾಟಕ್ಕೆ ನಿಂತಿವೆ. ರಿಯಾಯಿತಿ ನೀಡುವುದರಿಂದ ಅವರ ಲಾಭದ ಮೇಲೆ ಹೆಚ್ಚು ಪರಿಣಾಮ ಆಗುವುದಿಲ್ಲ.

English summary
Why is everyone clearing their stock before GST? Here is an answer. This article explain why they are clearing with some caluculation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X