ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯವಾಗ್ಲೂ ಹೌದು, 2000 ನೋಟು ಪ್ರಿಂಟ್ ಆಗ್ತಿಲ್ಲ... ಆತಂಕ ಹುಟ್ಟಿಸಿದ ಸರ್ಕಾರದ ನಡೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) 2000 ರೂಪಾಯಿ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಆದರೆ ಈ ಸುದ್ದಿಯ ಸತ್ಯಾಸತ್ಯತೆಗಳನ್ನು ತಿಳಿಯಲು 'ಇಂಡಿಯನ್ ಎಕ್ಸ್ ಪ್ರೆಸ್' ಪತ್ರಿಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಸಿಕ್ಕ ಉತ್ತರದ ಮೂಲಕ 'ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್, ಈ ಹಣಕಾಸು ವರ್ಷದಲ್ಲಿ (2019-20) ಇದುವರೆಗೆ ಒಂದೇ ಒಂದು 2000 ರೂಪಾಯಿ ನೋಟುಗಳನ್ನೂ ಮುದ್ರಣ ಮಾಡಿಲ್ಲ ಎಂಬುದು ಖಚಿತವಾಗಿದೆ.

ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ಭಾರತಕ್ಕೆ ಹಸ್ತಾಂತರಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ಭಾರತಕ್ಕೆ ಹಸ್ತಾಂತರ

ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಮುದ್ರಣವನ್ನು ನಿಲ್ಲಿಸಿ, ಕಪ್ಪುಹಣವನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಅಪನಗದೀಕರಣದ ನಂತರ 2000 ರೂ. ಬಂದ್!

ಅಪನಗದೀಕರಣದ ನಂತರ 2000 ರೂ. ಬಂದ್!

ಕಪ್ಪುಹಣ ನಿಯಂತ್ರಿಸುವ ಸಲುವಾಗಿ ಸರ್ಕಾರ 1000 ಮತ್ತು 500 ಮುಖಬೆಲೆಯ ನೋಟುಗಳನ್ನು 2016 ನವೆಂಬರ್ 8 ರಂದು ಬ್ಯಾನ್ ಮಾಡಿತ್ತು. ನಂತರ 2000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು. ಆದರೆ ಈಗ ಅದೇ ಕಪ್ಪುಹಣದ ನಿಯಂತ್ರಣಕ್ಕಾಗಿ ಸರ್ಕಾರ 2000 ಮುಖಬೆಲೆಯ ನೋಟುಗಳ ಮುದ್ರಣವನ್ನೇ ನಿಲ್ಲಿಸಿದೆ.

ಕಾರಣವೇನು?

ಕಾರಣವೇನು?

ಅಷ್ಟಕ್ಕೂ ತಾನೇ ಪರಿಚಯಿಸಿದ್ದ 2000 ಮುಖಬೆಲೆಯ ನೋಟುಗಳ ಮುದ್ರಣವನ್ನೇ ಸರ್ಕಾರ ಇದ್ದಕ್ಕಿದ್ದಂತೆ ನಿಲ್ಲಿಸಿರುವುದಕ್ಕೆ ಕಾರಣವೇನು? 2000 ಮುಖಬೆಲೆಯ ನೋಟುಗಳನ್ನು ಸುಲಭವಾಗಿ ಕಳ್ಳಸಾಗಣೆ ಮಾಡಬಹುದು ಎಂಬುದನ್ನು ಅರಿತ ಸರ್ಕಾರ ಈ ನಿರ್ಧಾರಕ್ಕೆ ಬರುತ್ತಿದೆ. ಅದೂ ಅಲ್ಲದೆ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿ ಇತ್ತೀಚೆಗಷ್ಟೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ಕೋಟಿ ರೂ. ಮೌಲ್ಯದ 2000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು. ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಸುಲಭವಾಗಿ ಕಳ್ಳಸಾಗಣೆ ಮಾಡುವುದಕ್ಕೆ ಸಾಧ್ಯವಾಗಿದ್ದರಿಂದ ಕಪ್ಪುಹಣ ಮತ್ತಷ್ಟು ಹೆಚ್ಚಬಹದು ಎಂಬ ಆತಂಕದಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

13 ಕಡೆ ಐಟಿ ದಾಳಿ, 200 ಕೋಟಿ ರೂ. ಅಕ್ರಮ ವಿದೇಶ ಆಸ್ತಿ ಪತ್ತೆ13 ಕಡೆ ಐಟಿ ದಾಳಿ, 200 ಕೋಟಿ ರೂ. ಅಕ್ರಮ ವಿದೇಶ ಆಸ್ತಿ ಪತ್ತೆ

ಈ ವರ್ಷ ಒಂದು ನೋಟೂ ಪ್ರಿಂಟ್ ಆಗಿಲ್ಲ!

ಈ ವರ್ಷ ಒಂದು ನೋಟೂ ಪ್ರಿಂಟ್ ಆಗಿಲ್ಲ!

ಮಾರ್ಚ್ 2018 ರವರೆಗೆ ಅಂದರೆ ಕಳೆದ ಹಣಕಾಸಿನ ವರ್ಷದಲ್ಲಿ ಒಟ್ಟು 3363 ಮಿಲಿಯನ್ 2000 ಮುಖಬೆಲೆಯ ನೋಟುಗಳು ಮುದ್ರಣಗೊಂಡು, ಹಂಚಿಕೆಯಾಗಿದ್ದವು. ಆದರೆ 2019-20 ರ ಹಣಕಾಸು ವರ್ಷದಲ್ಲಿ 2000 ಮುಖಬೆಲೆಯ ಒಂದೇ ಒಂದು ನೋಟೂ ಮುದ್ರಣವಾಗಿಲ್ಲ...

ಆರ್ಥಿಕ ತಜ್ಞರ ಕೆಂಗಣ್ಣಿಗೆ ಗುರಿಯಾಗಿದ್ದ 2000 ರೂ. ನೋಟು

ಆರ್ಥಿಕ ತಜ್ಞರ ಕೆಂಗಣ್ಣಿಗೆ ಗುರಿಯಾಗಿದ್ದ 2000 ರೂ. ನೋಟು

ಅಪನಗದೀಕರಣದ ನಂತರ 2000 ಮುಖಬೆಲೆಯ ನೋಟುಗಳನ್ನು ಸರ್ಕಾರ ಪರಿಚಯಿಸಿತ್ತು. ಆದರೆ ಹೆಚ್ಚಿನ ಮುಖಬೆಲೆಯ ನೋಟುಗಳು ಎಂದಿಗೂ ಅಪಾಯಕಾರಿ ಎಂದು ಆರ್ಥಿಕ ತಜ್ಞರು ಅಂದೇ ಅಭಿಪ್ರಾಯಪಟ್ಟಿದ್ದರು. ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಮುನ್ನ ಸರ್ಕಾರ ಆದರ ಸಾಧಕ ಮತ್ತು ಅದಕ್ಕಿಂತ ಹೆಚ್ಚಿನ ಬಾಧಕಗಳ ಬಗ್ಗೆ ಯೋಚಿಸಬೇಕಿತ್ತು. ಆದರೆ ಸರ್ಕಾರ ಈ ಬಗ್ಗೆ ದುಡುಕಿನ ನಿರ್ಧಾರ ತೆಗೆದುಕೊಂಡಿದೆ ಎಂಬ ದೂರು ಕೇಳಿಬಂದಿತ್ತು. ಇದೀಗ ಅದರ ಮುದ್ರಣವನ್ನೇ ನಿಲ್ಲಿಸಿದ್ದು, ಮುಂದೊಮ್ಮೆ ಈ ನೋಟುಗಳನ್ನೂ ಸರ್ಕಾರ ಬ್ಯಾನ್ ಮಾಡಿಬಿಡಬಹುದೇ ಎಂಬ ಆತಂಕ ಹೆಚ್ಚಾಗಿದೆ.

ಕಪ್ಪು ಹಣದ ಅಂದಾಜಿನ ಮಾಹಿತಿ ಆರ್ಥಿಕ ಸಚಿವಾಲಯದ ಬಳಿಯಿಲ್ಲಕಪ್ಪು ಹಣದ ಅಂದಾಜಿನ ಮಾಹಿತಿ ಆರ್ಥಿಕ ಸಚಿವಾಲಯದ ಬಳಿಯಿಲ್ಲ

English summary
Why government stopped to Print Rs 2000 Notes,, Rs 2000 notes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X