ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾ ಜೊತೆ ನಿಷೇಧಿತ ಮಾದಕವಸ್ತು: ಮಸ್ಕ್ ಟ್ವೀಟ್ ರಹಸ್ಯ ಏನು?

|
Google Oneindia Kannada News

ನವದೆಹಲಿ, ಏ. 28: ಟ್ವಿಟ್ಟರ್‌ನಲ್ಲಿ ಮುಕ್ತ ವಾಕ್ ಸ್ವಾತಂತ್ರ್ಯ ಇಲ್ಲ ಎಂದು ಟ್ವಿಟ್ಟರ್ ಅನ್ನು ಖರೀದಿಸಿದ್ದ ಎಲಾನ್ ಮಸ್ಕ್ ಇದೀಗ ಕೋಕಾ ಕೋಲಾ ಕಂಪನಿಯನ್ನ ಕೊಳ್ಳುವುದಾಗಿ ತಿಳಿಸಿದ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಆದರೆ, ಎಲಾನ್ ಮಸ್ಕ್ ಸುಮ್ಮನೆ ತಮಾಷೆಗೆ ಈ ಟ್ವೀಟ್ ಮಾಡಿರಬಹುದು ಎಂಬ ಮಾತಂತೂ ಕೇಳಿಬರುತ್ತಿದೆ. ಟ್ವಿಟ್ಟರ್ ಖರೀದಿ ಮಾಡುತ್ತೇನೆಂದು ಅವರು ಹೇಳಿದಾಗಲೂ ಅದು ತಮಾಷೆ ಎಂದು ಹಲವರು ಭಾವಿಸಿದ್ದರು. ಆದರೆ, ನೋಡನೋಡುತ್ತಿದ್ದಂತೆಯೇ ಆಗಿದ್ದೇ ಬೇರೆ. ಹೀಗಾಗಿ, ಎಲಾನ್ ಮಸ್ಕ್ ಅವರ ಹೇಳಿಕೆಗಳು ಯಾವುದು ಗಂಭೀರ, ಯಾವುದು ತಮಾಷೆ ಎಂದು ವರ್ಗೀಕರಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ.

ಟ್ವಿಟ್ಟರ್ ಎಫೆಕ್ಟ್: ಮಸ್ಕ್ ಒಡೆತನದ ಮತ್ತೊಂದು ಕಂಪನಿಗೆ 10 ಲಕ್ಷಕೋಟಿ ನಷ್ಟಟ್ವಿಟ್ಟರ್ ಎಫೆಕ್ಟ್: ಮಸ್ಕ್ ಒಡೆತನದ ಮತ್ತೊಂದು ಕಂಪನಿಗೆ 10 ಲಕ್ಷಕೋಟಿ ನಷ್ಟ

ಅಷ್ಟಕ್ಕೂ ಎಲಾನ್ ಮಸ್ಕ್ ಯಾಕೆ ಕೋಕಾ ಕೋಲಾ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದೇ ಕುತೂಹಲ. ಈ ಬಗ್ಗೆ ಅವರು ಮಾಡಿರುವ ಟ್ವೀಟ್ ಹೀಗಿದೆ: "ಮುಂದೆ ನಾನು ಕೋಕಾ ಕೋಲಾ ಖರೀದಿಸಿ ಕೊಕೇನ್ ವಾಪಸ್ ತರುತ್ತೇನೆ" ಎಂದು ಹೇಳಿದ್ದಾರೆ.

ಈ ಟ್ವೀಟ್ ಬಂದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಹಾಕಿ ಕುತೂಹಲ ಮೂಡಿಸಿದ್ದಾರೆ. ತಮ್ಮ ಹಿಂದಿನ ಟ್ವೀಟ್‌ವೊಂದರ ಸ್ಕ್ರೀನ್‌ಶಾಟ್ ತೆಗೆದು, "ನೋಡಿ, ನನಗೆ ಪವಾಡಗಳನ್ನ ಮಾಡಲು ಬರಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಆ ಸ್ಕ್ರೀನ್‌ಶಾಟ್‌ನಲ್ಲಿರುವ ಟ್ವೀಟ್‌ನಲ್ಲಿ ಹೀಗೆ ಬರೆಯಲಾಗಿದೆ: "ನಾನೀಗ ಮೆಕ್‌ಡೊನಾಲ್ಡ್ಸ್ ಖರೀದಿಸಿ ಎಲ್ಲಾ ಐಸ್ ಕ್ರೀಮ್ ಮೆಷೀನ್‌ಗಳನ್ನ ಸರಿ ಮಾಡಿಸುತ್ತೇನೆ".

 ಮಸ್ಕ್ ನೇತೃತ್ವದ ಟ್ವಿಟ್ಟರ್‌ಗೆ ಜೋಕೆ, ಭಾರತದಿಂದ ಸಿಗಲಿದೆ ಎಚ್ಚರಿಕೆ ಮಸ್ಕ್ ನೇತೃತ್ವದ ಟ್ವಿಟ್ಟರ್‌ಗೆ ಜೋಕೆ, ಭಾರತದಿಂದ ಸಿಗಲಿದೆ ಎಚ್ಚರಿಕೆ

ಈ ಮೇಲಿನ ಟ್ವೀಟ್ ಅನ್ನು ಅರ್ಥೈಸಿಕೊಂಡರೆ ಬಹುಶಃ ಅವರು ಕೋಕಾ ಕೋಲಾ ಖರೀದಿಸುತ್ತೇನೆ ಎಂದು ಹೇಳಿದ್ದು ತಮಾಷೆಗೇ ಇರಬಹುದು ಎಂದನಿಸದೇ ಇರದು.

ಕೋಕಾ ಕೋಲಾಗೂ ಕೋಕೇನ್‌ಗೂ ಏನು ಸಂಬಂಧ?

ಎಲಾನ್ ಮಸ್ಕ್ ಅವರು ಕೋಕ-ಕೋಲಾವನ್ನು ಖರೀದಿಸುತ್ತೇನೆ ಎಂದದ್ದು ತಮಾಷೆಗೋ ಮತ್ತೊಂದಕ್ಕೋ ಇರಬಹುದು. ಆದರೆ, ಮಾದಕ ವಸ್ತು ಎಂದು ವರ್ಗೀಕೃತವಾದ ಕೊಕೇನ್ ಹೆಸರನ್ನು ಅವರು ಪ್ರಸ್ತಾಪಿಸಿದ್ದಾರೆ.ಇದು ಕೋಕ-ಕೋಲಾಗೂ ಕೊಕೇನ್‌ಗೂ ಏನು ಸಂಬಂಧ ಎಂಬ ಪ್ರಶ್ನೆಯನ್ನಂತೂ ಹುಟ್ಟುಹಾಕಿದೆ.

ಕೋಕಾ ಕೋಲಾ ಮತ್ತು ಕೊಕೇನ್:

ಕೋಕಾ ಕೋಲಾ ಮತ್ತು ಕೊಕೇನ್:

ಅಮೆರಿಕದ ಪ್ರಸಿದ್ಧ ಪಾನೀಯ ಸಂಸ್ಥೆ ಕೋಕ-ಕೋಲಾ ಮತ್ತು ಕೊಕೇನ್‌ಗೂ ಮೂಲದಲ್ಲೇ ಸಂಬಂಧ ಬೆಸೆದುಕೊಂಡಿದೆ. 1883ರಲ್ಲಿ ಕೋಕಾ ಕೋಲಾ ಆರಂಭಗೊಂಡಾಗ ಹಲವು ವರ್ಷಗಳ ಕಾಲ ಅದರ ಪಾನೀಯದಲ್ಲಿ ಕೊಕೇನ್ ವಸ್ತುವನ್ನು ಸೇರಿಸಲಾಗುತ್ತಿತ್ತು. ಆಗ ಕೊಕೇನ್ ಅನ್ನು ಔಷಧಿ ಎಂದು ಭಾವಿಸಲಾಗಿತ್ತು. ಅಮೆರಿಕದಲ್ಲಿ ಕೊಕೇನ್ ಒಂದು ಮಾದಕವಸ್ತು ಎಂದು ವರ್ಗೀಕರಣಗೊಂಡು ಅದನ್ನು ನಿಷೇಧಿಸಿದಾಗ ಕೋಕಾ-ಕೋಲಾ ತನ್ನ ಪಾನೀಯದಲ್ಲಿ ಕೊಕೇನ್ ಬೆರೆಸುವುದನ್ನು ನಿಲ್ಲಿಸಬೇಕಾಯಿತು. ಕೊಕೇನ್ ರಹಿತವಾದ ಪಾನೀಯವನ್ನು ಕೋಕ-ಕೋಲಾ ಈಗ ನೀಡುತ್ತಿದೆ.

ಕೋಕಾ-ಕೋಲ ಹೆಸರು ಬರಲು ಇದು ಕಾರಣ:

ಕೋಕಾ-ಕೋಲ ಹೆಸರು ಬರಲು ಇದು ಕಾರಣ:

ಕೋಕಾ-ಕೋಲಾದ ಪಾನೀಯದಲ್ಲಿ ಕೋಕಾ ಗಿಡದ ಎಲೆ ಮತ್ತು ಕೋಲಾ ಬೀಜದ ಹೂರಣ ಪ್ರಮುಖವಾಗಿತ್ತು. ಕೋಲಾ ಬೀಜದಲ್ಲಿ ಕೆಫೀನ್ ಪ್ರಮುಖವಾಗಿದ್ದರೆ ಕೋಕಾ ಎಲೆಯಲ್ಲಿ ಕೋಕೇನ್ ಅಡಕವಾಗಿರುತ್ತದೆ. ಕೋಕಾ ಎಲೆಯಿಂದ ತೆಗೆಯಲಾಗುವ ಕೊಕೇನ್ ಅನ್ನು ಔಷಧ ಎಂದು ಈ ಹಿಂದೆ ಪರಿಗಣಿಸಲಾಗಿತ್ತು. ಆದರೆ, ಅದು ಈಗ ಮಾದಕದ್ರವ್ಯಗಳ ಪಟ್ಟಿಗೆ ಸೇರಿಕೊಂಡಿದೆ.

ಕೋಕಾ-ಕೋಲಾ ಕಂಪನಿಯ ಪಾನೀಯದಲ್ಲಿ ಕೋಕಾ ನಟ್ ಮತ್ತು ಕೋಲಾ ಎಲೆಗಳನ್ನ ಬಳಸಲಾಗುತ್ತದೆ ಎಂದು ಸಾರ್ವಜನಿಕವಾಗಿ ತಿಳಿದಿದ್ದರೂ ಇನ್ನೂ ಅದರ ರೆಸಿಪಿಯ ರಹಸ್ಯವನ್ನು ಕಂಪನಿ ಈಗಲೂ ಉಳಿಸಿಕೊಂಡು ಬಂದಿದೆ.

ಪಾನೀಯ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ

ಪಾನೀಯ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ

ಒಂದು ಅಂದಾಜಿನಲ್ಲಿ ಈಗ ಬೇರೆ ಕಂಪನಿಗಳು ಕೋಲಾ ಪಾನೀಯಗಳನ್ನು ತಯಾರಿಸುತ್ತಿವೆಯಾದರೂ ಕೋಕ-ಕೋಲಾ ಕಂಪನಿಯ ಟ್ರೇಡ್‌ಮಾರ್ಕ್ ಪಾನೀಯದ ವಿಶೇಷ ರುಚಿಗೆ ಸರಿಸಮ ಯಾವುದೂ ಇಲ್ಲ ಎಂಬ ಅಭಿಪ್ರಾಯಗಳಿವೆ. ಕೋಕಾ-ಕೋಲಾ ಪಾನೀಯದ ರೆಸಿಪಿಯ ರಹಸ್ಯ ಕೆಲವೇ ಅಜ್ಞಾತ ಉದ್ಯೋಗಿಗಳಿಗೆ ಮಾತ್ರ ತಿಳಿದಿದೆಯಂತೆ. ಕೋಕಾ ಕೋಲಾ ಕಂಪನಿ ಪಾನೀಯದ ಸಾಂದ್ರ ದ್ರವ್ಯ (Concentrate) ತಯಾರಿಸಿ ವಿಶ್ವಾದ್ಯಂತ ಇರುವ ಕೋಕಾ-ಕೋಲಾ ಬಾಟ್ಲಿಂಗ್ ಕಂಪನಿಗಳಿಗೆ ಮಾರಾಟ ಮಾಡುತ್ತದೆ. ಈ ಕಾನ್ಸನ್‌ಟ್ರೇಟ್ ಅನ್ನು ಇಟ್ಟುಕೊಂಡು ಈ ಬಾಟಲಿ ಕಂಪನಿಗಳು ಅಂತಿಮ ಪಾನೀಯ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ.

ಇದೇನೇ ಆದರೂ ಆರಂಭದಲ್ಲಿ ಕೊಕೇನ್ ಅಡಕವಾಗಿರುತ್ತಿದ್ದ ಕೋಕಾ-ಕೋಲ ಪಾನೀಯದ ರುಚಿ ಮತ್ತು ಗಮ್ಮತ್ತೇ ಬೇರೆ ಎಂದು ಕೇಳಿ ತಿಳಿದವರು ಹೇಳುತ್ತಾರೆ. ಈಗ ಎಲಾನ್ ಮಸ್ಕ್ ಅವರು ಮತ್ತೊಮ್ಮೆ ಕೊಕೇನ್ ವಿಚಾರವನ್ನು ಕೆದಕಿದ್ದಾರೆ. ಮಸ್ಕ್ ಅವರು ಒಂದು ವೇಳೆ ಕೋಕ-ಕೋಲಾವನ್ನು ಖರೀದಿಸಿದರೂ ಕೊಕೇನ್ ಅನ್ನು ಬೆರೆಸಿ ಸುಮ್ಮನೆ ಕಾನೂನು ಕ್ರಮ ಎದುರಿಸಿಕೊಳ್ಳುವಷ್ಟು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅವರೇನಿದ್ದರೂ ಮಂಗಳ ಗ್ರಹದಲ್ಲಿ ವಸಾಹತು ನಿರ್ಮಿಸಿದ ಪಕ್ಷದಲ್ಲಿ ಒರಿಜಿನಲ್ ಕೋಲಾ ಡ್ರಿಂಕ್ಸ್ ತಯಾರಿಸಿ ಮಾರುವ ವ್ಯವಸ್ಥೆ ಮಾಡಬಹುದು ಅಷ್ಟೇ.

(ಒನ್ಇಂಡಿಯಾ ಸುದ್ದಿ)

Recommended Video

ರಶೀದ್ ಸಿಕ್ಸರ್ ನೋಡಿ ತಾಳ್ಮೆ ಕಳೆದುಕೊಂಡ ಮುತ್ತಯ್ಯ ಮುರಳೀಧರನ್ ಮಾಡಿದ್ದೇನು? | Oneindia Kannada

English summary
After snagging Twitter for $44 billion in a bizarre hostile takeover, Elon Musk has announced a new target: Coca-Cola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X