ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯ್ಸ್ ಕಾಲ್ ಗೆ ದರ ನಿಗದಿ #BoycottJio ಟ್ವಿಟ್ಟರಲ್ಲಿ ಟ್ರೆಂಡಿಂಗ್!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ರಿಲಯನ್ಸ್ ಜಿಯೋ ಗ್ರಾಹಕರು ಬೇರೆ ನೆಟ್ವರ್ಕ್ ನಂಬರ್ ಗಳಿಗೆ ಕರೆ ಮಾಡಿದರೆ ಇನ್ಮುಂದೆ ಪ್ರತಿ ನಿಮಿಷಕ್ಕೆ ಆರು ಪೈಸೆ ದರದಂತೆ ನೀಡಬೇಕಾಗುತ್ತದೆ. ವಾಯ್ಸ್ ಕಾಲ್ ಗಳಿಗೆ ದರ ನಿಗದಿ ಮಾಡುತ್ತಿದ್ದಂತೆ ಗ್ರಾಹಕರು ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರ ಹಾಕಿದ್ದಾರೆ. ಜಿಯೋ ಬ್ಯಾನ್ ಮಾಡಿ ಎಂದು ಟ್ರೆಂಡ್ ಮಾಡುತ್ತಿದ್ದಾರೆ.

ಜಿಯೋ ಬಳಕೆದಾರರು ಸ್ಥಿರ ದೂರವಾಣಿ ಕರೆ, ವಾಟ್ಸಾಪ್, ಫೇಸ್ ಟೈಮ್ ಕಾಲ್ ಕರೆಗಳಿಗೆ ಹೊಸ ದರ ಅನ್ವಯ ಆಗುವುದಿಲ್ಲ. ಇದೇ ರೀತಿ ಇತರೆ ನೆಟ್ ವರ್ಕ್ ಗಳಿಂದ ಒಳಬರುವ ಕರೆಗಳು ಮಾಮೂಲಿನಂತೆ ಉಚಿತವಾಗಿಯೇ ಇರುತ್ತವೆ.

ಟ್ರಾಯ್ ನಿಯಮದ ಪ್ರಕಾರ, ಇಂಟರ್ ಕನೆಕ್ಟ್ ಯೂಸೇಜ್ ಗೆ (ಐಯುಸಿ) ಎರಡು ವರ್ಷದ ಹಿಂದೆ ಹದಿನಾಲ್ಕು ಪೈಸೆಯಿಂದ ಆರು ಪೈಸೆ ಆಯಿತು. ಉಚಿತ ಕರೆ ಸೌಲಭ್ಯ ನೀಡಿದ್ದರಿಂದ ಜಿಯೋ ಕಂಪನಿಗೆ 13,500 ಕೋಟಿ ರು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಏರ್ ಟೆಲ್, ವೊಡಾಫೋನ್- ಐಡಿಯಾದಂಥ ಪ್ರತಿಸ್ಪರ್ಧಿ ನೆಟ್ ವರ್ಕ್ ಗಳ ಕರೆಗಳ ಭಾರinterconnect usage charge (IUC)ವನ್ನು ಜಿಯೋ ಹೊತ್ತುಕೊಂಡಿತ್ತು. ಆದರೆ ಈಗ ಗ್ರಾಹಕರ ಮೇಲೆ ದರದ ಹೊರೆ ಹಾಕಿರುವುದಕ್ಕೆ ಗ್ರಾಹಕರು ತಿರುಗಿ ಬಿದ್ದಿದ್ದಾರೆ. ಆದರೆ ಕೆಲವರು ಜಿಯೋ ಪರವಾಗಿ ಪೋಸ್ಟ್ ಮಾಡಿದ್ದಾರೆ. ಇಷ್ಟು ದಿನ ಉಚಿತವಾಗಿ ನೀಡಿದ್ದಾಗ ಎಲ್ಲವೂ ಚೆನ್ನಾಗಿತ್ತು. ಈಗ ಸರಿಯಿಲ್ಲ ಎಂದರೆ ಹೇಗೆ ಎಂದು ವಾದಿಸಿದ್ದಾರೆ.

ತನ್ನ ಗ್ರಾಹಕರಿಗೆ ಮೋಸ ಮಾಡಿದೆ ಎಂದ ಸೋಹಂ

ನಾನು ಇಲ್ಲಿ ತನಕ ಜಿಯೋ ಬಳಸಿಲ್ಲ. ಎಷ್ಟೇ ಉಚಿತ ಆಫರ್ ಗಳಿದ್ದರೂ ಅದರ ಹಿಂದೆ ಇಂಥದ್ದೊಂದು ಕೊಕ್ಕೆ ಇದ್ದೆ ಇರುತ್ತೆ. ನನ್ನ ಪ್ರಕಾರ ತನ್ನ ಗ್ರಾಹಕರಿಗೆ ಜಿಯೋ ನಂಬಿಕೆ ದ್ರೋಹ ಮಾಡಿದೆ. ಚೌಕಿದಾರ್ ಚೋರ್ ಹೈ ಎನ್ನುವ ಜೊತೆಗೆ ಜಿಯೋ ನಿಷೇಧ ಮಾಡಬೇಕು. ಏರ್ ಟೆಲ್ ಅಥವಾ ಬಿಎಸ್ಎನ್ ಎಲ್ ಬಳಸುವುದು ಉತ್ತಮ ಮಾರ್ಗ.

ವಾಯ್ಸ್ ಕಾಲ್ ದರ ನಿಗದಿ ಲೆಕ್ಕಾಚಾರ

ವಾಯ್ಸ್ ಕಾಲ್ ದರ ನಿಗದಿ ಲೆಕ್ಕಾಚಾರ ಹೀಗಿದೆ, ಪ್ರತಿ ನಿಮಿಷಕ್ಕೆ 6 ಪೈಸೆ ಎಂದರೆ ಅಂದಾಜು 1 ರುಪಾಯಿಗೆ 17 ನಿಮಿಷವಾಗುತ್ತದೆ. ಜಿಯೋ ಪ್ರತಿ 10 ರುಪಾಯಿ ಖರ್ಚು ಮಾಡುವುದಕ್ಕೆ 1 ಜಿಬಿ ಡೇಟಾ ನೀಡುತ್ತಿದೆ. ಹೀಗಾಗಿ, ಇದು ಅಂಥ ಮೋಸವೇನಲ್ಲ. ಕನಿಷ್ಠ 10 ರು ಕೂಡಾ ವ್ಯಯಿಸಲು ಸಾಧ್ಯವಿಲ್ಲ ಎಂದರೆ ಹೇಗೆ? ನಾನಂತೂ ಜಿಯೋ ಪರ ಇದ್ದೇನೆ, ರಿಲಯನ್ಸ್ ಜಿಯೋ ಬಳಸುವುದನ್ನು ಮುಂದುವರೆಸುತ್ತೇನೆ.

ಬಿಎಸ್ಎನ್ ಎಲ್ ಬಳಸಿ

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ ಹೆಚ್ಚೆಚ್ಚು ಬಳಸಿ, ಇದು ಭಾರತದ ಹೆಮ್ಮೆ. ಇದರಿಂದ ಸಾವಿರಾರು ಮಂದಿ ಕೆಲಸವೂ ಉಳಿಯುತ್ತದೆ ಎಂದು ಬಿಎಸ್ಎನ್ ಎಲ್ ಪರ ಬ್ಯಾಟಿಂಗ್ ಮಾಡಿದ ಕೆಲವರು ಟ್ವಿಟ್ಟಿಗರು.

ಜಿಯೋ ಪ್ಲಾನ್ ಸಂಚು ಈಗ ಬಯಲು

ಮೊದಲಿಗೆ ಉಚಿತ ಡೇಟಾ ನೀಡುವುದು, ಬಳಕೆದಾರರನ್ನು ಹೆಚ್ಚಿಸುವುದು, ಉಚಿತ ಡೇಟಾ ವಿಸ್ತರಿಸುವುದು, 1 ಫೋನ್, 1 ಕುಟುಂಬ ದಿಂದ 1 ಫೋನ್ 1 ಸದಸ್ಯರ ಹಂತಕ್ಕೆ ತರುವುದು.

ನಂತರ ಪೋರ್ಟಬಿಲಿಟಿಗೆ ಉತ್ತೇಜನ ನೀಡುವುದು ಸಣ್ಣ ಮೊತ್ತ ಇಡುವುದು, ಶುಲ್ಕ ಏರಿಸುವುದು, ಪ್ರತಿ ಸೇವೆಗೆ ದರ ನಿಗದಿ ಕೊನೆಗೆ ಬಳಕೆಗೆ ಉಚಿತವಾಗಿ ಏನೂ ಸಿಗುವುದಿಲ್ಲ.

ಬಿಎಸ್ಎನ್ಎಲ್ ಪತನ ದುಃಖಕರ

ಬಿಎಸ್ಎನ್ಎಲ್ ಪತನ ದುಃಖಕರ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಎಸ್ಎನ್ಎಲ್, ಒಎನ್ ಜಿಸಿ, ಎಚ್ ಎಂಟಿ, ಬಿಪಿಸಿಎಲ್, ಇಂಡಿಯನ್ ಏರ್ ಲೈನ್ಸ್, ನಿಪ್ಕೋ, ಟಿಎಚ್ ಡಿಸಿ, ಎಚ್ಎಎಲ್, ಇಂಡಿಯಾ ಪೋಸ್ಟ್ ಎಲ್ಲವೂ ಸರ್ಕಾರದ ನೀತಿಯಿಂದ ದುಃಸ್ಥಿತಿಯಲ್ಲಿವೆ.

English summary
Hours after Reliance Jio announced that it will charge customers 6 paise per minute for voice calls made to Airtel or Vodafone-Idea number, #BoycottJio started trending on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X