ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಬಿಟ್-ಕ್ರೆಡಿಟ್ ಕಾರ್ಡ್ ಬದಲಾವಣೆ ಸೂಚನೆಯ ಹಿಂದಿನ ಗುಟ್ಟೇನು?

|
Google Oneindia Kannada News

"ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ನ ಬದಲಾಯಿಸಿಕೊಳ್ಳಿ" ಎಂಬ ಸಂದೇಶಗಳು ನಿಮಗೆ ಬರುತ್ತಿರಬಹುದು ಅಲ್ಲವಾ? ದಿಢೀರ್ ಅಂತ ಇದೇನು ಎಂಬ ಗಾಬರಿ ಬೇಡ. ಸದ್ಯಕ್ಕೆ ಇರುವ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಳನ್ನು ಇಎಂವಿ ಚಿಪ್ ಗಳಿರುವ ಕಾರ್ಡ್ ಗಳಿಗೆ ಇದೇ ವರ್ಷದ ಡಿಸೆಂಬರ್ 31ನೇ ತಾರೀಕಿನೊಳಗೆ ಬದಲಿಸಿಕೊಡಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದೆ.

ಇಎಂವಿ ಅಂದರೆ ಯುರೋಪೇ, ಮಾಸ್ಟರ್ ಕಾರ್ಡ್, ವೀಸಾ. ಬ್ಯಾಂಕ್ ಗಳು ಯಾವುದೇ ಶುಲ್ಕ ವಿಧಿಸದೆ ಈಗಿನ ಕಾರ್ಡ್ ಗಳನ್ನು ಬದಲಿಸಿ ನೀಡುತ್ತಿವೆ. ಈ ಸೂಚನೆ ಎಲ್ಲ ದೇಶೀಯ ಹಾಗೂ ಅಂತರರಾಷ್ಟ್ರೀಯ ಕಾರ್ಡ್ ಗಳಿಗೂ ಅನ್ವಯ ಆಗುತ್ತದೆ. ಹಳೆ ಮ್ಯಾಗ್ನೆಟಿಕ್ ಸ್ಟ್ರೈಪ್ ಮಾತ್ರ ಇರುವ ಕಾರ್ಡ್ ಗಳು ಡಿಸೆಂಬರ್ ವರೆಗೆ ಮಾತ್ರ ಕೆಲಸ ಮಾಡುತ್ತವೆ.

ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರಡೆಬಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ

ಡಿಸೆಂಬರ್ 2018ರ ನಂತರ ಕಾರ್ಡ್ ನ ವ್ಯಾಲಿಡಿಟಿ ಮುಗಿಯುತ್ತದೆ ಅಂತಿದ್ದರೂ ಅಷ್ಟರೊಳಗೆ ಬದಲಾವಣೆ ಮಾಡಿಕೊಳ್ಳಲೇಬೇಕು. ಜನವರಿ 31, 2016ರ ನಂತರ ಹೊಸ ಗ್ರಾಹಕರಿಗೆ ಇಎಂವಿ ಚಿಪ್ ಇರುವ ಕಾರ್ಡ್ ವಿತರಣೆ ಮಾಡಲಾಗಿದೆ. ಜೂನ್ 2018ಕ್ಕೆ 39.4 ಮಿಲಿಯನ್ ಕ್ರೆಡಿಟ್ ಕಾರ್ಡ್ ಹಾಗೂ 944 ಮಿಲಿಯನ್ ಡೆಬಿಟ್ ಕಾರ್ಡ್ ದೇಶದಲ್ಲಿವೆ ಎಂದು ರಿಸರ್ವ್ ಬ್ಯಾಂಕ್ ಲೆಕ್ಕವನ್ನು ಮುಂದಿಟ್ಟಿದೆ.

ಚಿಪ್ ಇರುವ ಕಾರ್ಡ್ ಗಳು ಹೇಗೆ ಭಿನ್ನ

ಚಿಪ್ ಇರುವ ಕಾರ್ಡ್ ಗಳು ಹೇಗೆ ಭಿನ್ನ

ಚಿಪ್ ಇರುವ ಕಾರ್ಡ್ ಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಿಂತ ಹೇಗೆ ವಿಭಿನ್ನ ಎಂಬ ಪ್ರಶ್ನೆ ಬರುವುದು ಸಹಜ. ಚಿಪ್ ಕಾರ್ಡ್ ಗಳಲ್ಲಿನ ಡೇಟಾ ಎನ್ ಕ್ರಿಪ್ಷನ್ ಮತ್ತು ಸಂಗ್ರಹ ತಂತ್ರಜ್ಞಾನ ಬಹಳ ಉನ್ನತ ಮಟ್ಟದಲ್ಲಿರುತ್ತದೆ. ಪಾಯಿಂಟ್ ಆಫ್ ಸೇಲ್ ಮಷೀನ್ ನಲ್ಲಿ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಉಜ್ಜಿದರೆ ಆಯಿತು, ವ್ಯವಹಾರ ಪೂರ್ಣಗೊಳ್ಳುತ್ತದೆ. ಆದರೆ ಚಿಪ್ ಮತ್ತು ಪಿನ್ ಕಾರ್ಡ್ ನಲ್ಲಿ ಪಿನ್ ಕೋಡ್ ನ ಕಡ್ಡಾಯವಾಗಿ ಹಾಕಲೇಬೇಕು. ಇದರಿಂದ ಸುರಕ್ಷತೆ ಹೆಚ್ಚಾಗುತ್ತದೆ.

ಎರಡನೇ ಹಂತದಲ್ಲಿ ಪಿನ್ ಕೋಡ್ ಅನಿವಾರ್ಯ

ಎರಡನೇ ಹಂತದಲ್ಲಿ ಪಿನ್ ಕೋಡ್ ಅನಿವಾರ್ಯ

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ನಕಲು ಮಾಡುವುದು, ಮಾಹಿತಿಯನ್ನು ಬಸಿದುಕೊಂಡು ಯಾವುದೋ ಮೂಲೆಯಲ್ಲಿದ್ದು ಹಣ ಡ್ರಾ ಮಾಡುವುದು...ಇಂಥವೆಲ್ಲ ಚಿಪ್ ಕಾರ್ಡ್ ನಲ್ಲಿ ಸಾಧ್ಯವಿಲ್ಲ. ಯಾವುದೇ ವ್ಯವಹಾರ ಮಾಡಿದರೂ ಎರಡನೇ ಹಂತದಲ್ಲಿ ಅದಕ್ಕೆ ಪಿನ್ ಕೋಡ್ ಒದಗಿಸುವುದು ಅನಿವಾರ್ಯ. ಆದ್ದರಿಂದ ವಂಚನೆಗೆ ಕಡಿವಾಣ ಬೀಳುತ್ತದೆ.

ಗ್ರಾಹಕರ ಮಾಹಿತಿಗೆ ಕನ್ನ ಹಾಕಲು ಸಾಧ್ಯವಿಲ್ಲ

ಗ್ರಾಹಕರ ಮಾಹಿತಿಗೆ ಕನ್ನ ಹಾಕಲು ಸಾಧ್ಯವಿಲ್ಲ

ಇಎಂವಿ ಕಾರ್ಡ್ನ್ ನಲ್ಲೂ ಮ್ಯಾಗ್ನೆಟಿಕ್ ಸ್ಟ್ರೈಪ್ ಇರುತ್ತದೆ. ಆದರೆ ಗ್ರಾಹಕರ ಸೂಕ್ಷ್ಮ ಮಾಹಿತಿಗಳು ಚಿಪ್ ನಲ್ಲಿ ಸಂಗ್ರಹವಾಗಿರುತ್ತದೆ. ಆದ್ದರಿಂದ ವಂಚಕರಿಗೆ ಗ್ರಾಹಕರ ಮಾಹಿತಿಗೆ ಕನ್ನ ಹಾಕಲು ಸಾಧ್ಯವಿಲ್ಲ. ಚಿಪ್ ನಲ್ಲಿರುವ ಮಾಹಿತಿ ಎನ್ ಕ್ರಿಪ್ಟ್ ಆಗಿರುತ್ತದೆ. ಮಾಹಿತಿಯು ಆ ಮೂಲಕವೇ ಹರಿಯಬೇಕಾಗುತ್ತದೆ. ಮಾಹಿತಿಗೆ ಕನ್ನ ಹಾಕುವಂಥ ವಂಚನೆ ಪ್ರಕರಣಗಳು ಯಾವಾಗ ಹೆಚ್ಚಾದವೋ ಜಾಗತಿಕ ಮಟ್ಟದಲ್ಲೇ ಚಿಪ್ ಇರುವ ಕಾರ್ಡ್ ಗಳ ವಿತರಣೆ ಮಾಡಲಾಗುತ್ತಿದೆ.

ಸಂಪೂರ್ಣ ಅಪಾಯವು ತಪ್ಪಿದಂತಲ್ಲ

ಸಂಪೂರ್ಣ ಅಪಾಯವು ತಪ್ಪಿದಂತಲ್ಲ

ಹಾಗಂತ ಈ ಕಾರ್ಡ್ ತಂದುಬಿಟ್ಟ ತಕ್ಷಣ ವಂಚನೆಯು ಸಂಪೂರ್ಣ ತಡೆದಂತಾಗುತ್ತದೆಯಾ ಎಂಬ ಪ್ರಶ್ನೆ ಮೂಡುವುದು ಸಹಜ. ಇಎಂವಿ ಚಿಪ್ ಮತ್ತು ಪಿನ್ ಕಾರ್ಡ್ ಗಳಿಂದ ದೊಡ್ಡ ಮಟ್ಟದಲ್ಲಿ ಅಪಾಯವನ್ನು ತಡೆಯಬಹುದು. ಆದರೆ ಆನ್ ಲೈನ್ ಪಾವತಿ ಮಾಡುವಾಗ ವಂಚನೆ ಅಪಾಯಗಳು ಇರುತ್ತವೆ. ಆಗ ಎಚ್ಚರವಾಗಿರಬೇಕು. ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಸೂಕ್ಷ್ಮ ಮಾಹಿತಿಯನ್ನು ಯಾರ ಜತೆಗೂ ಹಂಚಿಕೊಳ್ಳಬಾರದು.

English summary
Did you get a reminder from your bank to replace your existing debit or credit card with a new one. Do you know why? The Reserve Bank of India has mandated banks to replace all existing magnetic stripe-only cards with EMV chip cards by 31 December 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X