ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಏಕೆ ಹೆಚ್ಚುತ್ತಲೇ ಇದೆ? ಮುಂದಿನ ದಿನಗಳಲ್ಲಿ ಚಿನ್ನ ಕೈಗೆಟುಕುವುದಿಲ್ವಾ? ಯಾವಾಗ ಬೆಲೆ ಕಡಿಮೆ ಆಗುತ್ತೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಜಾಗತಿಕವಾಗಿ ಕೋವಿಡ್-19 ಸಾಂಕ್ರಾಮಿಕದಿಂದ ತೀವ್ರಗೊಂಡ ಜಾಗತಿಕ ಆರ್ಥಿಕ ಬೆಳವಣಿಗೆಯ ಬಗೆಗಿನ ಅನಿಶ್ಚಿತತೆಗಳು ಅಮೂಲ್ಯವಾದ ಹಳದಿ ಲೋಹಕ್ಕೆ ಬೇಡಿಕೆಯನ್ನು ಹೆಚ್ಚಿಸಿದೆ. ಹಣದುಬ್ಬರ ಮತ್ತು ಮಾರುಕಟ್ಟೆ ಸಂಬಂಧಿತ ಅನಿಶ್ಚಿತತೆಗಳ ವಿರುದ್ಧ ಚಿನ್ನವು ಕಳೆದ ಆರು ತಿಂಗಳಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ.

ಮಾರ್ಚ್‌ ತಿಂಗಳಿನಲ್ಲಿ ಕನಿಷ್ಠ ಮಟ್ಟದಿಂದ ಶೇಕಡಾ 25 ರಷ್ಟು ಏರಿಕೆಯಾಗಿದ್ದು, ಆಗಸ್ಟ್‌ನಲ್ಲಿ ಚಿನ್ನದ ಬೆಲೆಗಳು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ.

 ಆಗಸ್ಟ್‌ನಲ್ಲಿ ಚಿನ್ನದ ಆಮದು ಏರಿಕೆ: ಕಳೆದ 8 ತಿಂಗಳಿನಲ್ಲೇ ಅತಿ ಹೆಚ್ಚು ಆಗಸ್ಟ್‌ನಲ್ಲಿ ಚಿನ್ನದ ಆಮದು ಏರಿಕೆ: ಕಳೆದ 8 ತಿಂಗಳಿನಲ್ಲೇ ಅತಿ ಹೆಚ್ಚು

ಒಂದು ವರ್ಷದಲ್ಲಿ ಶೇ.40ರಷ್ಟು ಮೌಲ್ಯ ಹೆಚ್ಚಳ

ಒಂದು ವರ್ಷದಲ್ಲಿ ಶೇ.40ರಷ್ಟು ಮೌಲ್ಯ ಹೆಚ್ಚಳ

ಹೌದು, ಕಳೆದ ಒಂದು ವರ್ಷದಲ್ಲಿ, ಇದು ಸುಮಾರು ಶೇ. 40ರಷ್ಟು ಮೌಲ್ಯವನ್ನು ಹೆಚ್ಚಿಸಿದೆ. 2020 ರಲ್ಲಿ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಮಧ್ಯೆ ಇತರ ಪ್ರಮುಖ ಆಸ್ತಿ ವರ್ಗಗಳನ್ನು ಗಮನಾರ್ಹವಾಗಿ ಮೀರಿಸಿದೆ.

ಆಗಸ್ಟ್‌ನಲ್ಲಿ, ಚಿನ್ನದ ಇಟಿಎಫ್‌ಗಳು (ವಿನಿಮಯ-ವಹಿವಾಟು ನಿಧಿಗಳು) ಆರನೇ ತಿಂಗಳವರೆಗೆ ಒಳಹರಿವು ಕಂಡವು. ಜನವರಿ-ಆಗಸ್ಟ್ ಅವಧಿಯಲ್ಲಿ ಚಿನ್ನದ ಇಟಿಎಫ್‌ಗಳಿಗೆ ನಿವ್ವಳ ಒಳಹರಿವು 5,356 ಕೋಟಿ ರೂ.ಗಳನ್ನು ತಲುಪಿದೆ ಎಂದು ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಎಎಂಎಫ್‌ಐ) ಅಂಕಿ-ಅಂಶಗಳು ತೋರಿಸಿದೆ.

ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ, ಐಶೇರ್ಸ್ ಗೋಲ್ಡ್ ಟ್ರಸ್ಟ್ (ಐಎಯು) 25 ವಾರಗಳ ಒಳಹರಿವಿನೊಂದಿಗೆ ಪ್ರಬಲವಾಗಿದೆ.

ಷೇರುಪೇಟೆಯಲ್ಲಿ ಚಂಚಲತೆ, ಹಳದಿ ಲೋಹದ ಕಡೆಗೆ ಆಕರ್ಷಣೆ

ಷೇರುಪೇಟೆಯಲ್ಲಿ ಚಂಚಲತೆ, ಹಳದಿ ಲೋಹದ ಕಡೆಗೆ ಆಕರ್ಷಣೆ

ಷೇರು ಪೇಟೆಯಲ್ಲಿ ತೀವ್ರ ಚಂಚಲತೆಯ ಸಮಯದಲ್ಲಿ, ವಿಶ್ವದಾದ್ಯಂತ ಹೂಡಿಕೆದಾರರು ಹಳದಿ ಲೋಹಕ್ಕೆ ಹೂಡಿಕೆ ಹೆಚ್ಚಿಸಿದ್ದಾರೆ. ಚಿನ್ನದ ಬೆಲೆಗಳನ್ನು ಬೆಂಬಲಿಸುವ ಮತ್ತೊಂದು ಪ್ರಮುಖ ಅಂಶವೆಂದರೆ, ಲೋಹದ ಪೂರೈಕೆಯ ಬೆಳವಣಿಗೆಯು ಕಳೆದ ಕೆಲವು ವರ್ಷಗಳಲ್ಲಿ ಬಹಳ ಕಡಿಮೆ ಬದಲಾಗಿದೆ.

ಕಳೆದ 20 ವರ್ಷಗಳಲ್ಲಿ ವರ್ಷಕ್ಕೆ ಸರಿಸುಮಾರು ಶೇ. 1.6ರಷ್ಟು ಏರಿಕೆ ಮಾತ್ರ ಕಂಡುಬಂದಿದೆ. ಆದರೆ ಇದಕ್ಕೆ ವಿರುದ್ಧವಾಗಿ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಆರ್ಥಿಕ ಹಿಂಜರಿತದಿಂದಾಗಿ ಚಿನ್ನದ ಬೆಲೆ ಕೆಲವೇ ತಿಂಗಳುಗಳಲ್ಲಿ ಭಾರೀ ಏರಿಕೆ ಕಂಡಿತು.

ಭಾರತದ ಚಿನ್ನದ ಆಮದು ಜುಲೈನಲ್ಲಿ ಶೇಕಡಾ 24ರಷ್ಟು ಇಳಿಕೆ: ಬೆಲೆ ದಾಖಲೆಯ ಏರಿಕೆಭಾರತದ ಚಿನ್ನದ ಆಮದು ಜುಲೈನಲ್ಲಿ ಶೇಕಡಾ 24ರಷ್ಟು ಇಳಿಕೆ: ಬೆಲೆ ದಾಖಲೆಯ ಏರಿಕೆ

ಚಿನ್ನದ ಮೇಲಿನ ಹೂಡಿಕೆ ಕಡಿಮೆ ಅಪಾಯವನ್ನು ಹೊಂದಿದೆ

ಚಿನ್ನದ ಮೇಲಿನ ಹೂಡಿಕೆ ಕಡಿಮೆ ಅಪಾಯವನ್ನು ಹೊಂದಿದೆ

ಚಿನ್ನವು ಮೀಸಲು ಆಸ್ತಿಯಾಗಿದೆ. ಏಕೆಂದರೆ ಅದು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ, ಹೆಚ್ಚು ದ್ರವರೂಪದ್ದಾಗಿದೆ, ಯಾವುದೇ ಒಂದು ದೇಶದಿಂದ ಆಡಳಿತ ನಡೆಸುವುದಿಲ್ಲ, ಯಾವುದೇ ಸಾಲದ ಅಪಾಯವನ್ನು ಹೊಂದಿರುವುದಿಲ್ಲ ಮತ್ತು ನಷ್ಟದ ಪ್ರಮಾಣವು ಕೂಡ ವಿರಳವಾಗಿದೆ. ಹೀಗಾಗಿ ಹೂಡಿಕೆದಾರರು ಆರ್ಥಿಕ ಹಿಂಜರಿತ ಸಮಯದಲ್ಲಿ ಚಿನ್ನದತ್ತ ಮುಖ ಮಾಡುತ್ತಾರೆ.

ಮುಂದಿನ 18-24 ತಿಂಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಾಗಿಯೇ ಇರಲಿದೆ?

ಮುಂದಿನ 18-24 ತಿಂಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಾಗಿಯೇ ಇರಲಿದೆ?

ಚಿನ್ನದ ವಿಶ್ಲೇಷಕರು ಲೋಹದ ಮೇಲಿನ ಆಕರ್ಷಣೆ ಹೆಚ್ಚಾಗಿಯೇ ಇರುತ್ತದೆ ಎಂದು ಅಂದಾಜಿಸಿದ್ದಾರೆ. ಮುಂದಿನ 18-24 ತಿಂಗಳಲ್ಲಿ ಭಾರತದಲ್ಲಿ 10 ಗ್ರಾಂಗೆ 65,000 ರೂ.ಗಳಷ್ಟು ದರಗಳು ಹೆಚ್ಚಾಗಲಿವೆ ಎಂದು ಅಂದಾಜಿಸಲಾಗಿದೆ. ಸಾಂಕ್ರಾಮಿಕ ರೋಗವು ಜಾಗತಿಕ ಆರ್ಥಿಕತೆಗೆ ಉಂಟಾಗುವ ಬೆದರಿಕೆ ಮತ್ತು ಸೋಂಕಿನ ಹರಡುವಿಕೆಯನ್ನು ನಿಗ್ರಹಿಸಲು ತೆಗೆದುಕೊಂಡ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಗಮನಿಸಿದರೆ, ಈ ವಿಭಾಗವು ಹೂಡಿಕೆದಾರರ ಆಕರ್ಷಣೆಯನ್ನು ಮುಂದುವರಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಲಸಿಕೆ ಸಿಗುವವರೆಗೂ ಹಳದಿ ಲೋಹಕ್ಕೆ ಬೇಡಿಕೆ ಹೆಚ್ಚು

ಕೊರೊನಾ ಲಸಿಕೆ ಸಿಗುವವರೆಗೂ ಹಳದಿ ಲೋಹಕ್ಕೆ ಬೇಡಿಕೆ ಹೆಚ್ಚು

ಕೋವಿಡ್-19 ಪ್ರಕರಣಗಳಲ್ಲಿ ದೈನಂದಿನ ಹೆಚ್ಚಳದ ಸಂಖ್ಯೆಯನ್ನು ನಿಯಂತ್ರಿಸುವವರೆಗೆ ಅಥವಾ ಲಸಿಕೆ ಹೆಚ್ಚಿನ ಜನಸಂಖ್ಯೆಯನ್ನು ತಲುಪುವವರೆಗೆ, ಹಳದಿ ಲೋಹಗಳ ಬೇಡಿಕೆ ಹೆಚ್ಚಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ ಕುಟುಂಬಗಳಲ್ಲಿ ಚಿನ್ನದ ಸಂಗ್ರಹ ಟನ್‌ಗಟ್ಟಲೆ ಇದೆ

ಭಾರತದ ಕುಟುಂಬಗಳಲ್ಲಿ ಚಿನ್ನದ ಸಂಗ್ರಹ ಟನ್‌ಗಟ್ಟಲೆ ಇದೆ

ವಿಶ್ವ ಚಿನ್ನದ ಮಂಡಳಿಯ ಅಂದಾಜಿನ ಪ್ರಕಾರ, ಭಾರತದಲ್ಲಿ ಕುಟುಂಬಗಳು ಸುಮಾರು 24,000-25,000 ಟನ್ ಚಿನ್ನವನ್ನು ಸಂಗ್ರಹಿಸಿರಬಹುದು. ಭಾರತೀಯ ರಿಸರ್ವ್ ಬ್ಯಾಂಕ್ 2019-20ರ ಆರ್ಥಿಕ ವರ್ಷದಲ್ಲಿ 40.45 ಟನ್ ಚಿನ್ನವನ್ನು ಖರೀದಿಸಿ, ಹಳದಿ ಲೋಹದ ಒಟ್ಟು ಹಿಡುವಳಿಗಳನ್ನು 653.01 ಟನ್‌ಗಳಿಗೆ ಹೆಚ್ಚಿಸಿದೆ. ದೇಶದ ವಿವಿಧ ದೇವಾಲಯಗಳು ಗಣನೀಯ ಪ್ರಮಾಣದ ಚಿನ್ನವನ್ನು ಹೊಂದಿವೆ.

ಲಾಕ್‌ಡೌನ್ ಕಾರಣ ಚಿನ್ನದ ಮಾರಾಟ ಬೇಡಿಕೆ ಇಳಿಕೆ

ಲಾಕ್‌ಡೌನ್ ಕಾರಣ ಚಿನ್ನದ ಮಾರಾಟ ಬೇಡಿಕೆ ಇಳಿಕೆ

ಲಾಕ್‌ಡೌನ್ ಕಾರಣ ಹೆಚ್ಚಿನ ವಿವಾಹ ಮುಂದೂಡಲ್ಪಟ್ಟ ಕಾರಣ, ಭಾರತದಲ್ಲಿ ಭೌತಿಕ ಚಿನ್ನದ ಬೇಡಿಕೆಯ ಮೇಲೆ ಪರಿಣಾಮ ಬೀರಿತು. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿನ ಲೋಹದ ಬೇಡಿಕೆ 2020 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 36 ರಷ್ಟು ಇಳಿದು 101.9 ಟನ್‌ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 159 ಟನ್‌ಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ.

ಕಳೆದ ವರ್ಷ ಕೇಂದ್ರ ಸರ್ಕಾರ ಪರಿಚಯಿಸಿದ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 12.5 ಕ್ಕೆ ಏರಿಸಿದ್ದರಿಂದ ಈ ಮಳಿಗೆಗಳಲ್ಲಿನ ಮಾರಾಟಕ್ಕೂ ತೊಂದರೆಯಾಗಿದೆ. ಹೆಚ್ಚುವರಿಯಾಗಿ, ಖರೀದಿದಾರರು ಈ ಖರೀದಿಗಳಿಗೆ 3 ಪರ್ಸೆಂಟ್ ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

English summary
Gold Rate/Price Today: Why are gold prices going up? when will the price go down? Here is the explanation in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X