ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ ಇಂಜಿನಿಯರ್ ಗೆ ಕೈ ತುಂಬಾ ಗಿಫ್ಟ್ ಕೊಟ್ಟ ಫೇಸ್ ಬುಕ್

|
Google Oneindia Kannada News

ನವದೆಹಲಿ, ಜೂನ್ 13: ಫೇಸ್ ಬುಕ್ ಒಡೆತನದ ಬಹು ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ನಲ್ಲಿ ದೋಷ ಕಂಡು ಹಿಡಿದ ಮಣಿಪುರದ ಯುವ ಇಂಜಿನಿಯರ್ ಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಜೋನೆಲ್ ಸೌಗೈಯಾಮ್ ನೀಡಿದ ಒಂದು ಅಲರ್ಟ್ ಸಂದೇಶ ಈಗ ಅವರನ್ನು ಹೀರೋವಿನಂತೆ ಎಲ್ಲರೂ ನೋಡಿವಂತಾಗಿದೆ.

ವಾಟ್ಸಾಪ್ ನಲ್ಲಿ ಕಂಡು ಬಂದಿದ್ದ ಭದ್ರತಾ ದೋಷವನ್ನು ಜೋನೆಲ್ ವರದಿ ಮಾಡಿದ್ದರು. ಈ ದೋಷ ಹಾಗೆ ಇದ್ದಿದ್ದರೆ ವಾಟ್ಸಾಪ್ ಬಳಕೆದಾರರ ಗೌಪ್ಯತೆಗೆ ಮಾರಕವಾಗಿ ಪರಿಣಮಿಸಬಹುದಾಗಿತ್ತು. ಈಗ ಜೋನೆಲ್ ನೀಡಿದ ಇಮೇಲ್ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡ ವಾಟ್ಸಾಪ್ ಈ ದೋಷವನ್ನು ಸರಿಪಡಿಸಿದೆ. ಈ ದೋಷ ಸರಿಪಡಿಸಲು ಮೂರು ವಾರಗಳ ಕಾಲ ಹಿಡಿದಿದೆ.

ವಾಟ್ಸಾಪ್ ಬಳಕೆದಾರರೇ ಎಚ್ಚರ!: ಕೂಡಲೇ ಆಪ್ ಅಪ್ಡೇಟ್ ಮಾಡಿಕೊಳ್ಳಿವಾಟ್ಸಾಪ್ ಬಳಕೆದಾರರೇ ಎಚ್ಚರ!: ಕೂಡಲೇ ಆಪ್ ಅಪ್ಡೇಟ್ ಮಾಡಿಕೊಳ್ಳಿ

ವಾಟ್ಸಾಪ್ ವಾಯ್ಸ್ ಕಾಲ್ ವೇಳೆಯಲ್ಲಿ ರಿಸೀವಿಂಗ್ ಬದಿ ಇರುವವರಿಗೆ ಯಾವುದೇ ಮುನ್ಸೂಚನೆ ನೀಡದೆ ಹಲವು ಬಾರಿ ವಾಯ್ಸ್ ಕಾಲ್ ನಿಂದ ವಿಡಿಯೋ ಕಾಲ್ ಗೆ ಬದಲಾಗುತ್ತಿತ್ತು. ಇದನ್ನು ಗಮನಿಸಿದ್ದ ಜೋನೆಲ್ ಈ ಬಗ್ಗೆ ಫೇಸ್ಬುಕ್/ ವಾಟ್ಸಾಪ್ ಗೆ ವರದಿ ನೀಡಿದ್ದ. ಈ ವರದಿಯಿಂದಾಗಿ ಅಪಾರ ಪ್ರಮಾಣದ ನಷ್ಟ ಹಾಗೂ ಬಹಳಷ್ಟು ಬಳಕೆದಾರರ ಮಾಹಿತಿ ಗೌಪ್ಯವಾಗಿ ಉಳಿದಿದೆ. ಈ ಸಂಭ್ರಮವನ್ನು ಕೊಂಡಾಡಲು ಫೇಸ್ಬುಕ್, ಜೋನೆಲ್ ರನ್ನು ಗೌರವಿಸಲು ನಿರ್ಧರಿಸಿತು.

Who is Zonel Sougaijam? Why Facebook Rewarded him

ಜೋನೆಲ್ ಗೆ 5000 ಯುಎಸ್ ಡಾಲರ್ ಅಥವಾ 3.5 ಲಕ್ಷ ರು ನಗದು ಬಹುಮಾನ ನೀಡಲಾಗಿದ್ದು, ವೈಟ್ ಹ್ಯಾಕರ್ಸ್ ಹಾಲ್ ಆಫ್ ಫೇಮ್ ನಲ್ಲಿ ಈತನ ಹೆಸರನ್ನು ಸೇರಿಸಲಾಗಿದೆ.ಜೋನೆಲ್ ಗಿಂತ ಮುಂಚೆ 15 ಮಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

English summary
Who is Zonel Sougaijam? He is a 22-year-old Manipuri civil engineer who found a WhatsApp Bug, Facebook rewarded him with $5000 and Hall Of Fame Mention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X