ಮಲ್ಯನ ಅರಸಿ ಯಾರೀಕೆ ಪಿಂಕಿ ಲಾಲ್ವಾನಿ?

Posted By:
Subscribe to Oneindia Kannada
   ವಿಜಯ್ ಮಲ್ಯ ಪ್ರೇಯಸಿ ಪಿಂಕಿ ಲಾಲ್ವಾನಿ ಅಸಲಿಗೆ ಯಾರು? | Oneindia Kannada

   ಬೆಂಗಳೂರು, ಮಾರ್ಚ್ 29: ಲಂಡನ್ನಿನಲ್ಲಿ ನೆಲೆಸಿರುವ ಮಹಾನ್ ಸಾಲಗಾರ, ಉದ್ಯಮಿ ವಿಜಯ್ ಮಲ್ಯಗೆ ಕಲ್ಯಾಣ ಯೋಗ ಕೂಡಿ ಬಂದಿರುವ ಸುದ್ದಿ ಎಲ್ಲರಿಗೂ ಗೊತ್ತಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಟ್ರಾಲ್ಸ್, ಮೀಮ್ಸ್ ಹರಿದಾಡುತ್ತಿವೆ. ಈ ನಡುವೆ ಪಿಂಕಿ ಲಾಲ್ವಾನಿ ಯಾರು? ಎಂಬುದರ ಬಗ್ಗೆ ಅನೇಕ ಮಂದಿ ಹುಡುಕಾಟ ನಡೆಸಿದ್ದಾರೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |ಚುನಾವಣೆಯ ಮುಖ್ಯ ದಿನಾಂಕಗಳು

   ತಮ್ಮ 62ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ಮದುವೆಯಾಗುತ್ತಿದ್ದಾರೆ ಎಂಬುದು ಸದ್ಯಕ್ಕೆ ಚರ್ಚೆಯ ವಿಷಯ. ಮಾಧ್ಯಮಗಳ ವರದಿ ಪ್ರಕಾರ ಮಲ್ಯ ಹಾಗೂ ಪಿಂಕಿ ಲಿವ್ ಇನ್ ಸಂಬಂಧದಲ್ಲಿದ್ದು, ಅನೇಕ ಕಾರ್ಯಕ್ರಮಗಳಲ್ಲಿಯೂ ಪಿಂಕಿ ಮಲ್ಯ ಜೊತೆ ಕಾಣಿಸಿಕೊಂಡಿದ್ದಾರೆ.

   ಕಿಂಗ್ಸ್ ಆಫ್ ಗುಡ್ ಟೈಮ್ ಮಲ್ಯಗೆ ಕಲ್ಯಾಣ ಯೋಗ

   ಇಬ್ಬರೂ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬುದು ಸದ್ಯಕ್ಕೆ ಮಾಧ್ಯಮಗಳ ವರದಿ. ಈ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ.

   Who is Pinky Lalwani? Vijay Mallyas longtime girlfriend

   1986-87ರಲ್ಲಿ ಸಮೀರಾ ತ್ಯಾಬ್ಜಿ, 1993ರಲ್ಲಿ ಬಾಲ್ಯದ ಗೆಳತಿ ರೇಖಾ ಮಲ್ಯರನ್ನು ಅಧಿಕೃತವಾಗಿ ಮದುವೆಯಾಗಿದ್ದರು. ಎರಡು ಮದುವೆಯಿಂದ ಸಿದ್ಧಾರ್ಥ, ಲೀನ್ನಾ, ತಾನ್ಯಾ ಎಂಬ ಮಕ್ಕಳನ್ನು ಹೊಂದಿದ್ದಾರೆ.

   2011 ರಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಸಹಾಯಕ ಗಗನಸಖಿಯಾಗಿ ಕೆಲಸಕ್ಕೆ ಸೇರಿಕೊಂಡ ಪಿಂಕಿ ಈಗ ಮಲ್ಯ ಅವರ ಮಡದಿಯಾಗಲಿದ್ದಾರೆ. ಮಲ್ಯ ಅವರ ಕಷ್ಟ-ಸುಖದ ದಿನಗಳಲ್ಲಿ ಜತೆಯಲ್ಲಿದ್ದುಕೊಂಡು ಸಹ ಜೀವನ ನಡೆಸಿರುವ ಪಿಂಕಿ ಅವರು ಲಂಡನ್ನಿನ ಮ್ಯಾಜಿಸ್ಟ್ರೇಟ್ ಕೋರ್ಟಿಗೂ ಬಂದಿದ್ದರು.

   ಮಲ್ಯ ಅವರ ಕಷ್ಟ-ಸುಖದ ದಿನಗಳಲ್ಲಿ ಜತೆಯಲ್ಲಿದ್ದುಕೊಂಡು ಸಹ ಜೀವನ ನಡೆಸಿರುವ ಪಿಂಕಿ ಅವರು ಲಂಡನ್ನಿನ ಮ್ಯಾಜಿಸ್ಟ್ರೇಟ್ ಕೋರ್ಟಿಗೂ ಬಂದಿದ್ದರು.

   ಇತ್ತೀಚೆಗೆ, ಮಲ್ಯ ಹಾಗೂ ಪಿಂಕಿ ತಮ್ಮ ಸಂಬಂಧದ 3ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಮಲ್ಯ ಅವರ ಜತೆಗೆ ಹರ್ಟ್ ಫೋರ್ಡ್ ಶೈರ್ ಮನೆಯಲ್ಲೇ ಪಿಂಕಿ ನೆಲೆಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Fugitive liquor baron Vijay Mallya(62) is all to tie the knot with former Kingfisher Airlines air-hostess, his longtime girlfriend Pinky Lalwani, said reports. This would be Mallya's third marriage.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ