• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆಜಾನ್ ಮುಂದಿನ ಸಿಇಒ ಆಗಲಿರುವ ಆ್ಯಂಡಿ ಜಸ್ಸಿ ಯಾರು?

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 03: ಅಮೆಜಾನ್‌ ಮುಂದಿನ ಸಿಇಒ ಆಗಿ ಆ್ಯಂಡಿ ಜಸ್ಸಿ ಆಯ್ಕೆಯಾಗಿರುವುದಾಗಿ ಅಮೆಜಾನ್ ಮಂಗಳವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 27 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಜೆಫ್‌ ಬೇಜೋಸ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಅಮೆಜಾನ್ ಸಿಇಒ ಸ್ಥಾನಕ್ಕೇರಲಿರುವ 53 ವರ್ಷದ ಆ್ಯಂಡಿ ಜಸ್ಸಿ ಉನ್ನತ ಕ್ಲೌಡ್ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1997 ರಲ್ಲಿ ಅಮೆಜಾನ್‌ಗೆ ಸೇರಿದ ಜಸ್ಸಿ ಹಾರ್ವರ್ಡ್ ಬಿಸಿನೆಸ್ ಶಾಲೆಯಿಂದ ಎಂಬಿಎ ಪಡೆದಿದ್ದಾರೆ.

ಅಮೆಜಾನ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಜೆಫ್ ಬೇಜೋಸ್: ಆ್ಯಂಡಿ ಜಸ್ಸಿ ಮುಂದಿನ ಸಿಇಒಅಮೆಜಾನ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಜೆಫ್ ಬೇಜೋಸ್: ಆ್ಯಂಡಿ ಜಸ್ಸಿ ಮುಂದಿನ ಸಿಇಒ

ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಸಿಇಒ ಆಗಲಿರುವ ಆ್ಯಂಡಿ ಜಸ್ಸಿ 1997 ರ ಮೇನಲ್ಲಿ ಹಾರ್ವರ್ಡ್ ಬಿಸಿನೆಸ್ ಶಾಲೆಯಲ್ಲಿ ಅಂತಿಮ ಪರೀಕ್ಷೆ ಬರೆದ ಮುಂದಿನ ಸೋಮವಾರದಂದೇ ಅಮೆಜಾನ್ ಸೇರಿಕೊಂಡರು.

''ನಾನು 1997 ರಲ್ಲಿ ಮೇ ಮೊದಲ ಶುಕ್ರವಾರ ಎಚ್‌ಬಿಎಸ್‌ನಲ್ಲಿ ನನ್ನ ಅಂತಿಮ ಪರೀಕ್ಷೆಯನ್ನು ತೆಗೆದುಕೊಂಡೆ ಮತ್ತು ಮುಂದಿನ ಸೋಮವಾರ ನಾನು ಅಮೆಜಾನ್ ಅನ್ನು ಸೇರಿಕೊಂಡೆ" ಎಂದು ಸೆಪ್ಟೆಂಬರ್‌ನಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಜಸ್ಸಿ ಹೇಳಿದರು.

2006 ರಲ್ಲಿ, ಅಮೆಜಾನ್‌ನ ಕ್ಲೌಡ್ ಸೇವಾ ವೇದಿಕೆಯಾದ AWS ಅನ್ನು ಸ್ಥಾಪಿಸಿದ ಇವರು, ಇದನ್ನು ವಿಶ್ವದಾದ್ಯಂತ ಲಕ್ಷಾಂತರ ವ್ಯವಹಾರಗಳು ಬಳಸಲು ನೆರವಾದರು. ಈ ಸೇವೆಯು ಮೈಕ್ರೋಸಾಫ್ಟ್ ಮತ್ತು ಆಲ್ಫಾಬೆಟ್ ಇಂಕ್‌ನ ಗೂಗಲ್‌ನೊಂದಿಗೆ ಸ್ಪರ್ಧಿಸುತ್ತದೆ.

ಅಮೆಜಾನ್ ಮಂಗಳವಾರ ತನ್ನ ಸತತ ಮೂರನೇ ದಾಖಲೆಯ ಲಾಭ ಮತ್ತು ತ್ರೈಮಾಸಿಕ ಮಾರಾಟವನ್ನು 100 ಶತಕೋಟಿಗಿಂತ ಹೆಚ್ಚಿನ ಮೊತ್ತವನ್ನು ಮೊದಲ ಬಾರಿಗೆ ವರದಿ ಮಾಡಿದೆ. ಇದೇ ವೇಳೆಯಲ್ಲಿ ಸಿಇಒ ಸ್ಥಾನಕ್ಕೆ ಬೇಜೋಸ್‌ ಬದಲು ಆ್ಯಂಡಿ ಜಸ್ಸಿಯನ್ನು ಬದಲಾಯಿಸಲಾಗಿದೆ ಎಂದು ಘೋಷಿಸಿದೆ.

ಕೋವಿಡ್-19 ಸಾಂಕ್ರಾಮಿಕ ಲಾಕ್‌ಡೌನ್ ವೇಳೆಯಲ್ಲಿಯೂ ಅಮೆಜಾನ್ ಕಾರ್ಯ ನಿರ್ವಹಣೆಯು ಜೋರಾಗಿಯೇ ಇತ್ತು. ಭಾರೀ ಮಾರಾಟದ ಜೊತೆಗೆ ನೂರಾರು ಶತಕೋಟಿ ಮೌಲ್ಯದ ಲಾಭಗಳಿಸಿತು.

English summary
Amazon Web Services (AWS) chief Andy Jassy will replace billionaire founder Jeff Bezos as Amazon.com's next chief executive officer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X