ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

WhatsApp ಮೂಲಕ ಶೀಘ್ರ ಧ್ವನಿ ಕರೆಯೂ ಸಾಧ್ಯ

By Kiran B Hegde
|
Google Oneindia Kannada News

ನವದೆಹಲಿ, ಜ. 2: ಸ್ಮಾರ್ಟ್ ಫೋನ್‌ ಎಂಬ ಮಾಯಾ ಜಗತ್ತು ಇಡೀ ಜಗತ್ತನ್ನು ಆವರಿಸುತ್ತಿದೆ. ಈಗಾಗಲೇ ಕೇವಲ ಮೆಸ್ಸೇಜ್ ಹಾಗೂ ಫೋಟೊ ಕಳುಹಿಸುವ ಸೇವೆ ನೀಡುತ್ತಿರುವ ಆಟ್ಸಾಪ್ ಎಲ್ಲರ ಮೊಬೈಲ್ ಆವರಿಸಿದೆ. ಈಗ ಧ್ವನಿ ಕರೆ ಮಾಡುವ ಸೌಲಭ್ಯವನ್ನೂ ನೀಡಲು ಮುಂದಾಗಿದೆ.

ಹೌದು, ಇದುವರೆಗೆ ಸ್ಕೈಪ್‌, ಲೈನ್ ಹಾಗೂ ವೈಬರ್ ನಂತರ ಕೆಲವು ಸಾಫ್ಟ್‌ವೇರ್‌ಗಳು ಮಾತ್ರ ಧ್ವನಿ ಕರೆ ಸೌಲಭ್ಯ ನೀಡುತ್ತಿದ್ದವು. ಆದರೂ ಜನಪ್ರಿಯತೆ ಪಡೆಯುವಲ್ಲಿ ವಿಫಲವಾಗಿದ್ದವು. ಈಗ ಎಲ್ಲರ ಮೊಬೈಲ್ ಆವರಿಸಿರುವ ವಾಟ್ಸಾಪ್ ಧ್ವನಿ ಕರೆ ಸೌಲಭ್ಯ ನೀಡಲು ಮುಂದಾಗಿದೆ. ಆದರೆ, ವಾಟ್ಸಾಪ್‌ನಲ್ಲಿ ಈ ಸೌಲಭ್ಯ ಇನ್ನೂ ಪರೀಕ್ಷಾ ಹಂತದಲ್ಲಿದೆ ಅಷ್ಟೇ. [ವೆಬ್ ಸೈಟ್ ನಿಂದ ವಾಟ್ಸಾಪ್ ಬಳಸುವುದು ಹೇಗೆ?]

ಧ್ವನಿ ಕರೆ ಸೌಲಭ್ಯ ಒದಗಿಸುವುದಾಗಿ ವಾಟ್ಸಾಪ್ ಸಂಸ್ಥೆ ಕಳೆದ ವರ್ಷವೇ ಘೋಷಿಸಿತ್ತು. ಈಗ ಸೌಲಭ್ಯ ಹೊರಬಿಟ್ಟಿರುವ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಡಿಸಿಲ್ಲ. ಈ ಮೊದಲೇ ಈ ಸೌಲಭ್ಯ ಜನರಿಗೆ ಸಿಗಬೇಕಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಸಿಕ್ಕಿರಲಿಲ್ಲ.

ವಾಟ್ಸಾಪ್‌ನಲ್ಲಿ ಧ್ವನಿ ಕರೆ ಸೌಲಭ್ಯ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಕೆಳಗೆ ಕ್ಲಿಕ್ ಮಾಡಿ.

ನಿಮಗೆ ಕರೆ ಬರಬೇಕು

ನಿಮಗೆ ಕರೆ ಬರಬೇಕು

ಇಷ್ಟಪಟ್ಟವರಿಗೆಲ್ಲ ಈ ಸೌಲಭ್ಯ ಸಿಗದು. ಈಗಾಗಲೇ ಸೌಲಭ್ಯ ಪಡೆದಿರುವವರು ವಾಟ್ಸಾಪ್ ಮೂಲಕ ನಿಮಗೆ ಕರೆ ಮಾಡಬೇಕು. ಆ ನಂತರವೇ ನಿಮಗೆ ವಾಟ್ಸಾಪ್ ಧ್ವನಿ ಕರೆ ಸೌಲಭ್ಯ ಸಿಗುತ್ತದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗುತ್ತಿದೆ. ಪರೀಕ್ಷಾ ಹಂತದಲ್ಲಿರುವ ಈ ಸೌಲಭ್ಯವನ್ನು ಮುಂದೆ ಉಳಿತ ಸಾಫ್ಟ್‌ವೇರ್‌ಗಳಿಗೂ ವಿಸ್ತರಿಸುವ ಯೋಚನೆಯನ್ನು ವಾಟ್ಸಾಪ್ ಕಂಪನಿ ಹೊಂದಿದೆ.

ಅಪ್ ಡೇಟ್ ಸಿಗೋದು WhatsApp ವೆಬ್‌ಸೈಟ್‌ನಲ್ಲಿ

ಅಪ್ ಡೇಟ್ ಸಿಗೋದು WhatsApp ವೆಬ್‌ಸೈಟ್‌ನಲ್ಲಿ

ಆಂಡ್ರಾಯ್ಡ್ ಬಳಕೆದಾರರು ವಾಟ್ಸಾಪ್‌ನ ಇತ್ತೀಚಿನ 2.11.508 ಆವೃತ್ತಿ ಹೊಂದಿರಬೇಕು. ಆದರೆ, ಈ ಸಾಫ್ಟ್‌ವೇರ್ ಅಪ್‌ಡೇಟ್ ನಿಮಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗುವುದಿಲ್ಲ. WhatsApp ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿನ ಆಂಡ್ರಾಯ್ಡ್ ವಿಭಾಗದಲ್ಲಿ ಲಭ್ಯವಿರುವ ಸಾಫ್ಟ್‌ವೇರ್ ಅನ್ನು '.apk' ಫೈಲ್ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು.

ಈಗಾಗಲೇ ಬಳಸುತ್ತಿದ್ದಾರೆ ಪ್ರಗ್ನೇಶ್ ಪಾಟೀಲ್

ಈಗಾಗಲೇ ಬಳಸುತ್ತಿದ್ದಾರೆ ಪ್ರಗ್ನೇಶ್ ಪಾಟೀಲ್

ರೆಡ್ಡಿಟ್ ಬಳಕೆದಾರ ಪ್ರಗ್ನೇಶ್ ಪಾಟೀಲ್ (pradnesh07) ಎಂಬುವರು ಈಗಾಗಲೇ ವಾಟ್ಸಾಪ್‌ನ ಈ ಸೌಲಭ್ಯದ ಸ್ಕ್ರೀನ್‌ಶಾಟ್‌ಗಳು ಹಾಗೂ ಧ್ವನಿ ಕರೆ ಸೌಲಭ್ಯ ಉಪಯೋಗಿಸುತ್ತಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅವರು ನೆಕ್ಸಸ್ 5 ಆಂಡ್ರಾಯ್ಡ್ 5.0 ಲಾಲಿಪಾಪ್ ಸಾಫ್ಟ್‌ವೇರ್ ಹೊಂದಿದ್ದು, ಇದರಲ್ಲಿ ಬಳಸುತ್ತಿದ್ದಾರೆ. ಆದರೆ, ಎಲ್ಲ ಆಂಡ್ರಾಯ್ಡ್ ಸಾಫ್ಟ್‌ವೇರ್‌ನಲ್ಲಿಯೂ ಈ ಸೌಲಭ್ಯ ಬಳಸಲು ಸಾಧ್ಯ ಎಂದಿದ್ದಾರೆ.

English summary
It seems that mobile messaging service WhatsApp has started rolling out the much awaited voice calling feature. This function appears to be available on invite-only basis at present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X