ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Alert: ವಾಟ್ಸಾಪ್ ತನ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿ ಅಪ್‌ಡೇಟ್ ಮಾಡಿದೆ

|
Google Oneindia Kannada News

ನವದೆಹಲಿ, ಜನವರಿ 07: ವಾಟ್ಸಾಪ್ ತನ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಅಧಿಕೃತವಾಗಿ ನವೀಕರಿಸಿದೆ. ಫೇಸ್‌ಬುಕ್ ನೀಡುವ ಸೇವೆಗಳು ಮತ್ತು ಉತ್ಪನ್ನಗಳನ್ನು ಸಂಯೋಜಿಸುವ ಸಲುವಾಗಿ ವಾಟ್ಸಾಪ್ ಮೆಸೆಂಜರ್ ತನ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಗಳನ್ನು ನವೀಕರಿಸುತ್ತಿದೆ.

ವಾಟ್ಸಾಪ್‌ ಗೌಪ್ಯತೆ ನೀತಿಗಳು ಮತ್ತು ನಿಯಮಗಳಲ್ಲಿನ ಹೊಸ ಬದಲಾವಣೆಗಳು ಫೆಬ್ರವರಿ 8 ರಿಂದ ಜಾರಿಗೆ ಬರಲಿವೆ. ಒಂದು ವೇಳೆ ಈ ನೀತಿಗಳನ್ನು ಬಳಕೆದಾರರು ಒಪ್ಪದಿದ್ದರೆ ಅಥವಾ Agree ಆಯ್ಕೆಯನ್ನು ಕ್ಲಿಕ್ ಮಾಡದಿದ್ದರೆ ವಾಟ್ಸಾಪ್ ಖಾತೆ ಡಿಲೀಟ್ ಆಗುತ್ತದೆ.

ಮಂಗಳವಾರ ಸಂಜೆ ವಾಟ್ಸಾಪ್ ತನ್ನ ಬಳಕೆದಾರರಿಗೆ ಅದರ ಸೇವಾ ನಿಯಮಗಳಲ್ಲಿನ ಬದಲಾವಣೆ ಮತ್ತು ಅದರ ಗೌಪ್ಯತೆ ನೀತಿಯ ಬಗ್ಗೆ ತಿಳಿಸಲು ಅಪ್ಲಿಕೇಶನ್‌ನಲ್ಲಿನ ನೋಟಿಫಿಕೇಶನ್ ಕಳುಹಿಸಲು ಪ್ರಾರಂಭಿಸಿತು.

 Whatsapp Updates Privacy Policy:Data Sharing With Facebook Mandatory

"ವಾಟ್ಸಾಪ್ ತನ್ನ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುತ್ತಿದೆ" ಎಂದು ಕಂಪನಿಯು ಅಧಿಸೂಚನೆಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಕಳುಹಿಸಲಾಗುತ್ತಿದೆ.

ಭಾರತದಲ್ಲಿನ ಬಳಕೆದಾರರು ಇಂದು ಮೊದಲ ಬಾರಿಗೆ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿದಾಗ ಹೊಸ ನೀತಿ ಪಾಪ್ಅಪ್ ಅನ್ನು ಗಮನಿಸುತ್ತಿದ್ದರು. ಬಳಕೆದಾರರ ವಾಟ್ಸಾಪ್ ಸಂದೇಶವು ಕೊನೆಯಲ್ಲಿ, "ಒಪ್ಪುವಿಕೆಯನ್ನು (Agree) ಟ್ಯಾಪ್ ಮಾಡುವ ಮೂಲಕ, ಹೊಸ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನೀವು ಸ್ವೀಕರಿಸುತ್ತೀರಿ, ಅದು ಫೆಬ್ರವರಿ 8, 2021 ರಿಂದ ಜಾರಿಗೆ ಬರುತ್ತದೆ. ಈ ದಿನಾಂಕದ ನಂತರ, ವಾಟ್ಸಾಪ್ ಬಳಕೆಯನ್ನು ಮುಂದುವರಿಸಲು ನೀವು ಈ ನವೀಕರಣಗಳನ್ನು ಸ್ವೀಕರಿಸಬೇಕಾಗುತ್ತದೆ.

ನಿಮ್ಮ ಸಂಪರ್ಕಗಳೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಅಥವಾ ಹತ್ತಿರದ ಸ್ಥಳಗಳನ್ನು ವೀಕ್ಷಿಸಲು ಅಥವಾ ಇತರರು ನಿಮ್ಮೊಂದಿಗೆ ಹಂಚಿಕೊಂಡಿರುವ ಸ್ಥಳಗಳನ್ನು ವೀಕ್ಷಿಸಲು ನೀವು ನಿರ್ಧರಿಸಿದಾಗ, ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ಬಳಸಲು ನೀವು ಆರಿಸಿದಾಗ ನಿಮ್ಮ ಅನುಮತಿಯೊಂದಿಗೆ ನಿಮ್ಮ ಸಾಧನದಿಂದ ನಿಖರವಾದ ಸ್ಥಳ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ" ಎಂದು ಕಂಪನಿ ಸೇರಿಸಲಾಗಿದೆ.

English summary
Whatsapp Messenger is updating its terms of service and privacy policies in order to incorporate services and products offered by facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X