ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಬಳಕೆದಾರರಿಗೆ ಸೂಚನೆ: ಸ್ಟೇಟಸ್ ಅವಧಿ ವಿಸ್ತರಣೆ

|
Google Oneindia Kannada News

ಬೆಂಗಳೂರು, ಮೇ 20: ವಾಟ್ಸಾಪ್ ಬಳಕೆ ಮಾಡುತ್ತಿರುವವ ನೆಚ್ಚಿನ ಸೌಲಭ್ಯ ಸ್ಟೇಟಸ್ ಅಪ್ಡೇಟ್ ಗೆ ಕೊರೊನಾವೈರಸ್ ದೆಸೆಯಿಂದ ಕಡಿವಾಣ ಬ್ಬಿದ್ದಿತ್ತು. ಸ್ಟೇಟಸ್ ಅವಧಿ 15 ಸೆಕೆಂಡ್‌ಗೆ ಇಳಿಕೆಯಾಗಿತ್ತು. ಆದರೆ, ಈಗ ಮತ್ತೊಮ್ಮೆ ಈ ಹಿಂದೆ ಇದ್ದಂತೆ ಈ ಹಿಂದೆ 30 ಸೆಕೆಂಡ್‌ ಕಾಲಾವಧಿ ಸ್ಟೇಟಸ್ ಹಾಕಿಕೊಳ್ಳಬಹುದು ಎಂದು ವಾಟ್ಸಾಪ್ ತಿಳಿಸಿದೆ.

ವಾಟ್ಸಾಪ್ ಬಳಕೆದಾರರು ಅಕ್ಷರ, ಫೋಟೋ, GIF, ವಿಡಿಯೋಗಳನ್ನು ಸ್ಟೇಟಸ್ ಪೋಸ್ಟ್ ಮಾಡಬಹುದಾಗಿದೆ. 2017ರಲ್ಲಿ ಪರಿಚಯಿಸಲಾದ ಸ್ಟೇಟಸ್ ಸೌಲಭ್ಯವು ದಿನದ 24 ಗಂಟೆಗಳು ಮಾತ್ರ ಇರಲಿದೆ. 90 ಸೆಕೆಂಡುಗಳಿಂದ 3 ನಿಮಿಷ, 16MB ತನಕದ ವಿಡಿಯೋ ಹಾಕಬಹುದಾಗಿದೆ.

ಸುಳ್ಸುದ್ದಿ ವಿರುದ್ಧ ಸಮರ, ವಾಟ್ಸಾಪ್ ಸಂದೇಶ ಹಂಚಿಕೆಗೆ ಕಡಿವಾಣಸುಳ್ಸುದ್ದಿ ವಿರುದ್ಧ ಸಮರ, ವಾಟ್ಸಾಪ್ ಸಂದೇಶ ಹಂಚಿಕೆಗೆ ಕಡಿವಾಣ

ವಾಟ್ಸಾಪ್ ವಿಡಿಯೋ ಸ್ಟೇಟಸ್‌ 15 ಸೆಕೆಂಡ್‌ ಕಾಲಮಿತಿಯನ್ನು ಈಗ ತೆಗೆದು ಹಾಕಲಾಗಿದೆ. ಆಂಡ್ರಾಯ್ಡ್ ಆಧಾರಿತ 2.20.166 ಬೀಟಾ ಆವೃತ್ತಿ ಮೇಲ್ಪಟ್ಟ ವಾಟ್ಸಾಪ್ ನಲ್ಲಿ ಸ್ಟೇಟಸ್ ಅಪ್ಡೇಟ್ ಮರು ಸ್ಥಾಪಿಸಲಾಗಿದೆ. ಕೊರೊನಾ ವೈರಸ್‌ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಲು ನಿಯಂತ್ರಿಸಲು ಈ ರೀತಿ ಕಡಿವಾಣ ಹಾಕಲಾಗಿತ್ತು.

WhatsApp Status video limit restored; 30-second videos now allowed instead of 15-second videos

ಕೊರೊನಾವೈರಸ್ ವಿರುದ್ಧ ಜಾಗತಿಕವಾಗಿ ನಿರ್ಣಾಯಕ ಹೋರಾಟದಲ್ಲಿ ವಿವಿಧ ದೇಶಗಳು ತೊಡಗಿವೆ. ಆದರೆ ಹೋರಾಟದ ದಿಕ್ಕು ತಪ್ಪಿಸಲು ಕಿಡಿಗೇಡಿಗಳು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣ, ಚಾಟಿಂಗ್ ಆಪ್ ಮೂಲಕ ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ವಾಟ್ಸಾಪ್ ನಿರ್ಧರಿಸಿತ್ತು.

Fact Check: ವಾಟ್ಸಾಪ್ ಟಿಕ್ ಮಾರ್ಕ್ ಕುರಿತಂತೆ ಹೀಗೊಂದು ಸುಳ್ಸುದ್ದಿFact Check: ವಾಟ್ಸಾಪ್ ಟಿಕ್ ಮಾರ್ಕ್ ಕುರಿತಂತೆ ಹೀಗೊಂದು ಸುಳ್ಸುದ್ದಿ

ಫಾರ್ವರ್ಡ್ ಮಾಡುವ ಸಂದೇಶಗಳನ್ನು ಒಂದು ಬಾರಿಗೆ ಒಂದು ಚಾಟ್‌ಗೆ ಮಾತ್ರ ಸೀಮಿತಗೊಳಿಸುವುದಕ್ಕೆ ವಾಟ್ಸಾಪ್ ಮುಂದಾಗಿದೆ. ಒಂದೇ ಸಂದೇಶವನ್ನು ಐದು ಬಾರಿ ಹೆಚ್ಚು ಫಾರ್ವರ್ಡ್ ಮಾಡಲಾಗಿದ್ದು, ಈ ರೀತಿ ಪದೇ ಪದೇ ಫಾರ್ವರ್ಡ್ ಮಾಡುವ ಸಂದೇಶವನ್ನು ಸ್ವೀಕರಿಸಿದರೆ, ಅಂಥಾ ಸಂದೇಶವನ್ನು ನೀವು ಒಂದು ಬಾರಿ ಮಾತ್ರ ಫಾರ್ವರ್ಡ್ ಮಾಡಲು ಸಾಧ್ಯವಾಗಲಿದೆ. ಅಂದರೆ, ಒಂದೇ ಸಮಯದಲ್ಲಿ ಒಂದೇ ಚಾಟ್‌ಗೆ ಕಳುಹಿಸಲು ಸಾಧ್ಯವಾಗುತ್ತದೆ.

English summary
the social messaging platform WhatsApp has restored its 30 seconds status limit in India after nearly two months. The updated version 2.20.166 for Android has started rolling out already.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X