ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಮಾಹಿತಿಯೂ ಫೇಸ್‌ಬುಕ್‌ಗೆ ಸೋರಿಕೆಯಾಗುತ್ತದೆಯೇ?: ವಾಟ್ಸಾಪ್ ನೀಡಿದ ಸ್ಪಷ್ಟನೆ ಏನು?

|
Google Oneindia Kannada News

ನವದೆಹಲಿ, ಜನವರಿ 12: ಕುಟುಂಬದವರು ಹಾಗೂ ಸ್ನೇಹಿತರ ನಡುವಿನ ತಮ್ಮ ಖಾಸಗಿ ಸಂದೇಶಗಳು ಸರ್ಚ್ ಎಂಜಿನ್‌ಗಳಲ್ಲಿ ಸೋರಿಕೆಯಾಗುತ್ತಿರುವುದರ ಕುರಿತು ವಾಟ್ಸಾಪ್ ಬಳಕೆದಾರರು ಆರೋಪ ಮಾಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಫೇಸ್‌ಬುಕ್ ಮಾಲೀಕತ್ವದ ಸಂಸ್ಥೆ ಮತ್ತೊಂದು ಸ್ಪಷ್ಟೀಕರಣ ನೀಡಿದೆ.

ತನ್ನ ಪರಿಷ್ಕೃತ ನೀತಿಯಲ್ಲಿನ ಬದಲಾವಣೆಯು ಸ್ನೇಹಿತರು ಅಥವಾ ಕುಟುಂಬದೊಂದಿಗಿನ ಸಂದೇಶಗಳ ಖಾಸಗಿತನಕ್ಕೆ ಯಾವುದೇ ತೊಂದರೆಯುಂಟುಮಾಡುವುದಿಲ್ಲ. ಬದಲಾಗಿ ಈ ಹೊಸ ಬದಲಾವಣೆಯು ವಾಟ್ಸಾಪ್‌ನಲ್ಲಿನ ವ್ಯವಹಾರ ಸಂಬಂಧಿ ಸಂದೇಶಗಳಿಗೆ ಅನ್ವಯವಾಗುತ್ತದೆ ಎಂದು ವಾಟ್ಸಾಪ್ ತಿಳಿಸಿದೆ.

ಸಿಗ್ನಲ್ App ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್, ಬಳಕೆ ಹೇಗೆ?ಸಿಗ್ನಲ್ App ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್, ಬಳಕೆ ಹೇಗೆ?

ನಾವು ಕೆಲವು ವದಂತಿಗಳಿಗೆ ವಿವರಣೆ ನೀಡಲು ಬಯಸಿದ್ದು, ನಿಮ್ಮ ಖಾಸಗಿ ಸಂದೇಶಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಜತೆಗೆ ಸಂರಕ್ಷಿಸುವುದನ್ನು ಮುಂದುವರಿಸುತ್ತೇವೆ ಎಂದು ಶೇ 100ರಷ್ಟು ಸ್ಪಷ್ಟಪಡಿಸುತ್ತಿದ್ದೇವೆ ಎಂದು ವಾಟ್ಸಾಪ್ ತಿಳಿಸಿದೆ.

ಫೇಸ್‌ಬುಕ್ ಜತೆಗೆ ಹಂಚಿಕೊಳ್ಳದ ಕೆಲವು ಮಾಹಿತಿಗಳ ಪಟ್ಟಿಯನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ಮುಂದೆ ಓದಿ.

ಖಾಸಗಿ ಸಂದೇಶ ಓದಲು, ಕೇಳಲು ಅಸಾಧ್ಯ

ಖಾಸಗಿ ಸಂದೇಶ ಓದಲು, ಕೇಳಲು ಅಸಾಧ್ಯ

* ನಿಮ್ಮ ಖಾಸಗಿ ಸಂದೇಶಗಳನ್ನು ವಾಟ್ಸಾಪ್‌ಗೆ ನೋಡಲು ಸಾಧ್ಯವಿಲ್ಲ, ನಿಮ್ಮ ಕರೆಗಳನ್ನು ಅದು ಕೇಳಿಸಿಕೊಳ್ಳಲಾಗದು, ಇದು ಫೇಸ್‌ಬುಕ್‌ಗೂ ಅನ್ವಯ.

* ಸಂದೇಶಗಳನ್ನು ಕಳುಹಿಸುವ ಅಥವಾ ಕರೆ ಮಾಡುವ ಪ್ರತಿಯೊಬ್ಬರ ದಾಖಲೆಗಳನ್ನು ವಾಟ್ಸಾಪ್ ಉಳಿಸಿಕೊಳ್ಳುವುದಿಲ್ಲ.

* ನೀವು ಹಂಚಿಕೊಳ್ಳುವ ಸ್ಥಳದ ಮಾಹಿತಿಯನ್ನು ವಾಟ್ಸಾಪ್ ಅಥವಾ ಫೇಸ್‌ಬುಕ್ ನೋಡಲು ಸಾಧ್ಯವಿಲ್ಲ.

ವಾಟ್ಸಾಪ್ ಗೌಪ್ಯತೆ ನೀತಿಗಳ ಬದಲಾವಣೆ: ವಾಟ್ಸಾಪ್‌ನಲ್ಲಿ ಮಾಹಿತಿ ಹಂಚಿಕೊಳ್ಳದಂತೆ ಉದ್ಯೋಗಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳ ಕರೆವಾಟ್ಸಾಪ್ ಗೌಪ್ಯತೆ ನೀತಿಗಳ ಬದಲಾವಣೆ: ವಾಟ್ಸಾಪ್‌ನಲ್ಲಿ ಮಾಹಿತಿ ಹಂಚಿಕೊಳ್ಳದಂತೆ ಉದ್ಯೋಗಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳ ಕರೆ

ಫೇಸ್‌ಬುಕ್ ಜತೆ ಸಂಪರ್ಕ ಸಂಖ್ಯೆ ಹಂಚಿಕೆ ಇಲ್ಲ

ಫೇಸ್‌ಬುಕ್ ಜತೆ ಸಂಪರ್ಕ ಸಂಖ್ಯೆ ಹಂಚಿಕೆ ಇಲ್ಲ

* ನಿಮ್ಮ ಸಂಪರ್ಕ ಸಂಖ್ಯೆಗಳನ್ನು ಫೇಸ್‌ಬುಕ್‌ನೊಂದಿಗೆ ವಾಟ್ಸಾಪ್ ಹಂಚಿಕೊಳ್ಳುವುದಿಲ್ಲ.

* ವಾಟ್ಸಾಪ್ ಗುಂಪುಗಳು ಖಾಸಗಿಯಾಗಿಯೇ ಉಳಿದುಕೊಳ್ಳಲಿವೆ.

* ನಿಮ್ಮ ಸಂದೇಶಗಳು ಅಳಿಸಿ ಹೋಗುವ ಹಾಗೆ ಸೆಟ್ ಮಾಡಬಹುದು.

* ನಿಮ್ಮ ದತ್ತಾಂಶಗಳನ್ನು ನೀವು ಡೌನ್‌ಲೋಡ್ ಮಾಡಬಹುದು.

ದತ್ತಾಂಶ ಹಂಚಕೊಳ್ಳುವುದಿಲ್ಲ

'ಗ್ರೂಪ್ ಪ್ರೈವೆಸಿ'ಗಳ ಕುರಿತಾದ ದೊಡ್ಡ ಕಳವಳದ ಕುರಿತು ಪ್ರತಿಕ್ರಿಯಿಸಿರುವ ವಾಟ್ಸಾಪ್, ತನ್ನ ವೆಬ್‌ಸೈಟ್‌ನ ಭದ್ರತೆ ಹಾಗೂ ಖಾಸಗಿ ವಿಭಾಗದಲ್ಲಿ ಸ್ಪಷ್ಟೀಕರಣ ನೀಡಿದ್ದು, 'ಜಾಹೀರಾತಿಗಾಗಿ ನಾವು ಈ ದತ್ತಾಂಶಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳವುದಿಲ್ಲ. ಮತ್ತೆ ಈ ಖಾಸಗಿ ಚಾಟ್‌ಗಳು ವ್ಯಕ್ತಿಯಿಂದ ವ್ಯಕ್ತಿಗೆ ಗೋಪ್ಯತೆಯನ್ನು ಕಾಪಾಡಿಕೊಳ್ಳುತ್ತವೆ. ಹೀಗಾಗಿ ಚಾಟ್‌ನಲ್ಲಿನ ಅಂಶಗಳನ್ನು ನಾವು ವೀಕ್ಷಿಸಲು ಸಾಧ್ಯವಿಲ್ಲ' ಎಂದು ತಿಳಿಸಿದೆ.

ವಾಟ್ಸಾಪ್ ಬದಲಿ 'ಸಿಗ್ನಲ್ ಆ್ಯಪ್‌'ಗೆ ಹೆಚ್ಚಿದ ಡಿಮ್ಯಾಂಡ್: ಅತಿ ಹೆಚ್ಚು ಡೌನ್‌ಲೋಡ್‌ವಾಟ್ಸಾಪ್ ಬದಲಿ 'ಸಿಗ್ನಲ್ ಆ್ಯಪ್‌'ಗೆ ಹೆಚ್ಚಿದ ಡಿಮ್ಯಾಂಡ್: ಅತಿ ಹೆಚ್ಚು ಡೌನ್‌ಲೋಡ್‌

ಚಾಟ್ ಅಳಿಸಬಹುದು

ಚಾಟ್ ಅಳಿಸಬಹುದು

ಹೆಚ್ಚುವರಿ ಖಾಸಗಿತನಕ್ಕಾಗಿ ನೀವು ಕಳುಹಿಸಿದ ಸಂದೇಶಗಳು ಅವು ರವಾನೆಯಾದ ಬಳಿಕ ಅಳಿಸಿ ಹೋಗುವಂತೆ ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದೆ. ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ಅದು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.

English summary
WhatsApp has issued a clarification over a row on privacy policy which shares data with Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X