ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

New Wage Code: ಉದ್ಯೋಗಿಗಳ ಸಂಬಳದಲ್ಲಿ ಆಗಲಿದೆ ಬದಲಾವಣೆ

|
Google Oneindia Kannada News

ಎಲ್ಲಾ ರಾಜ್ಯಗಳು ಅಧಿಸೂಚನೆ ಹೊರಡಿಸಿದ ನಂತರ ಹೊಸ ವೇತನ ಸಂಹಿತೆ ದೇಶದಲ್ಲಿ ಶೀಘ್ರದಲ್ಲೇ ಜಾರಿಗೆ ಬರಲು ಸಿದ್ಧವಾಗಿದೆ. ಕೋಡ್ ಜಾರಿಗೆ ಬಂದಾಗ, ಅದು ಸಂಬಳದ ರಚನೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ನೂತನ ನಿಯಮದಿಂದ ಪೇ ಸ್ಲಿಪ್ ಸಂಪೂರ್ಣವಾಗಿ ಬದಲಾಗಲಿದೆ. ಕೋಡ್ ಗ್ರಾಚ್ಯಟಿ, ಟಿಡಿಎಸ್ ಮೇಲೆ ಕಡಿತಗೊಳಿಸುವ ತೆರಿಗೆಯ ಮೇಲೆ ಅನೇಕ ಬದಲಾವಣೆಯಾಗಲಿದೆ.

ಪೇ ಸ್ಲಿಪ್‌ಗಳಲ್ಲಿ, ಮೂಲ ವೇತನ, ಭತ್ಯೆಗಳು, ಎಚ್‌ಆರ್‌ಎ, ಕನ್ವೇನೆನ್ಸ್, ಪಿಎಫ್ ಕಡಿತ, ಉದ್ಯೋಗಿಗಳ ಗುಂಪು ವಿಮೆ ಮತ್ತು ಟಿಡಿಎಸ್‌ಗಳು ನಂತಹ ಅಂಶಗಳನ್ನು ಒಳಗೊಂಡಿದೆ. ಹೊಸ ನಿಯಮ ಜಾರಿಯಾಗುತ್ತಿರುವುದರಿಂದ, ಪೇ ಸ್ಲಿಪ್‌ನಲ್ಲಿ ಹಲವು ಬದಲಾವಣೆಯಾಗಲಿದೆ.

ವಿಪ್ರೋ ಕಂಪನಿ ಸಿಇಒ ಸಂಬಳ 79.80 ಕೋಟಿ ರುಪಾಯಿವಿಪ್ರೋ ಕಂಪನಿ ಸಿಇಒ ಸಂಬಳ 79.80 ಕೋಟಿ ರುಪಾಯಿ

ಹೊಸ ನಿಯಮಗಳ ಪ್ರಕಾರ, ಹೆಚ್‌ಆರ್ ಎ (HRA) ಮೇಲಿನ ತೆರಿಗೆ ಕೂಡ ಗಣನೀಯವಾಗಿ ಏರುವ ನಿರೀಕ್ಷೆಯಿದೆ. ಮೂಲ ವೇತನ ಹೆಚ್ಚಳದಿಂದಾಗಿ ಎಚ್‌ಆರ್‌ಎ ಕೂಡ ಏರಿಕೆಯಾಗಲಿದೆ.

ಹೊಸ ನಿಯಮ ಉದ್ಯೋಗಿಗಳ ಮೇಲೆ ಮಾತ್ರವಲ್ಲ ಕೆಲಸ ನೀಡುವ ಕಂಪನಿಗಳ ಮೇಲೂ ಪ್ರಭಾವ ಬೀರಲಿದೆ. ಹಾಗಾದರೆ ಹೊಸ ನಿಯಮದಿಂದ ಇನ್ನು ಏನೆಲ್ಲ ಬದಲಾವಣೆಯಾಗಲಿದೆ, ಉದ್ಯೋಗಿಗಳ ವೇತನದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂದು ಮಾಹಿತಿ ನೀಡಲಾಗಿದೆ.

6 ವರ್ಷ ಕಳೆದರೂ ಸಾರಿಗೆ ನೌಕರರ ವೇತನ ಬಿಡಿಗಾಸು ಹೆಚ್ಚಳವಿಲ್ಲ!6 ವರ್ಷ ಕಳೆದರೂ ಸಾರಿಗೆ ನೌಕರರ ವೇತನ ಬಿಡಿಗಾಸು ಹೆಚ್ಚಳವಿಲ್ಲ!

ಮೂಲ ವೇತನವು ಶೇಕಡಾ 50ಕ್ಕಿಂತ ಕಡಿಮೆ ಇರುವಂತಿಲ್ಲ

ಮೂಲ ವೇತನವು ಶೇಕಡಾ 50ಕ್ಕಿಂತ ಕಡಿಮೆ ಇರುವಂತಿಲ್ಲ

ಹೊಸ ನಿಯಮಗಳ ಪ್ರಕಾರ, ಮೂಲ ವೇತನವು ಒಟ್ಟಾರೆ ವೇತನದ ಕನಿಷ್ಠ 50 ಪ್ರತಿಶತದಷ್ಟು ಇರುತ್ತದೆ. ಮೂಲಭೂತ ಬದಲಾವಣೆಗಳ ನಂತರ, ಉದ್ಯೋಗಿಗಳ ಸ್ಯಾಲರಿ ಸ್ಲಿಪ್‌ಗಳಲ್ಲಿ ಹೆಚ್ಚಿನ ಬದಲಾವಣೆ ತರಲಿದೆ.

ವೇತನ ಸಂಹಿತೆ ಮಸೂದೆ 2019 ರಲ್ಲಿ 'ವೇತನ'ದ ಅರ್ಥವನ್ನು ಬದಲಾಯಿಸಲಾಗಿದೆ. ಮೂಲ ವೇತನದ ಶೇಕಡಾವಾರು ಬದಲಾವಣೆಗಳಿಂದಾಗಿ ಭವಿಷ್ಯ ನಿಧಿ ಕೊಡುಗೆ (ಪಿಎಫ್) , ಗ್ರಾಚ್ಯುಟಿ ಮತ್ತು ಇತರ ಅಂಶಗಳಲ್ಲಿ ಬದಲಾವಣೆಗಳು ಅನಿವಾರ್ಯವಾಗಿದೆ. ಹೊಸ ನಿಯಮಗಳಿಂದ ಉದ್ಯೋಗಿಯ ಟೇಕ್-ಹೋಮ್ ಅಥವಾ ಇನ್-ಹ್ಯಾಂಡ್ ಸಂಬಳ ಕುಸಿತವಾಗಲಿದೆ. ಆದರೆ ಭವಿಷ್ಯ ನಿಧಿಗೆ (ಪಿಎಫ್‌)ಗೆ ಉದ್ಯೋಗದಾತರ (ಸಂಸ್ಥೆಗಳ) ಕೊಡುಗೆ ಹೆಚ್ಚಾಗುತ್ತದೆ.

ಭತ್ಯೆ ಮತ್ತು ವೇರಿಯೇಬಲ್ಸ್‌ನಲ್ಲಿ ಬದಲಾವಣೆ

ಭತ್ಯೆ ಮತ್ತು ವೇರಿಯೇಬಲ್ಸ್‌ನಲ್ಲಿ ಬದಲಾವಣೆ

ಹೊಸ ನಿಯಮಗಳ ಪ್ರಕಾರ ಮೂಲ ವೇತನವು ಒಟ್ಟು ಸಂಬಳದ ಶೇಕಡಾ 50 ರಷ್ಟಿರಬೇಕು, ಆದ್ದರಿಂದ ಕಂಪನಿಗಳು ಇತರ ಅಂಶಗಳನ್ನು ಸರಿದೂಗಿಸಲು ನೋಡುತ್ತವೆ. ಪ್ರಸ್ತುತವಾಗಿ, ಮೂಲ ವೇತನವು ಒಟ್ಟು ವೇತನದ ಶೇಕಡಾ 10 ರಿಂದ 40ರಷ್ಟು ನೀಡಲಾಗುತ್ತಿದೆ. ಉಳಿದಂತೆ ಎಚ್‌ಆರ್‌ಎ, ಕನ್ವೇನೆನ್ಸ್, ವಿಶೇಷ ಭತ್ಯೆ, ಫೋನ್ ಬಿಲ್ ಇತ್ಯಾದಿ ಭತ್ಯೆಗಳನ್ನು ಒಳಗೊಂಡಿದೆ. ಈಗ ಮೂಲ ವೇತನ ಹೆಚ್ಚಾಗುತ್ತಿರುವುದರಿಂದ ಭತ್ಯೆಗಳು ಕಡಿಮೆಯಾಗಲಿವೆ.

ಪಿಎಫ್ ಮೊತ್ತ ಹೆಚ್ಚಾಗುತ್ತದೆ

ಪಿಎಫ್ ಮೊತ್ತ ಹೆಚ್ಚಾಗುತ್ತದೆ

ಪಿಎಫ್ ಅನ್ನು ಮೂಲ ವೇತನದ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ. ಈಗ ಮೂಲ ವೇತನ ಹೆಚ್ಚಳದಿಂದ ಪಿಎಫ್ ಕೂಡ ಏರಿಕೆಯಾಗಲಿದೆ. ಇದು ಉದ್ಯೋಗಿಗಳ ಭವಿಷ್ಯ ಭದ್ರಪಡಿಸುವ ದೃಷ್ಟಿಯಿಂದ ಹೊಸ ನಿಯಮ ಜಾರಿ ಮಾಡಲಾಗಿದೆ. ಆದರೆ ಒಟ್ಟು ಮೊತ್ತದಲ್ಲಿ ಹೆಚ್ಚಿನ ಪಿಎಫ್ ಕಡಿತಗೊಳಿಸಲಾಗುತ್ತದೆ. ಇದು ಟೇಕ್-ಹೋಮ್ ಸಂಬಳದ ಮೇಲೆ ಪರಿಣಾಮ ಬೀರಲಿದ್ದು, ಸಂಬಳ ಕಡಿಮೆ ಸಿಗುವ ಸಾಧ್ಯತೆ ಇದೆ.

ಉದ್ಯೋಗಿಗಳ ಮೇಲೆ ತೆರಿಗೆ ಹೊರೆ ಬೀಳಲಿದೆ

ಉದ್ಯೋಗಿಗಳ ಮೇಲೆ ತೆರಿಗೆ ಹೊರೆ ಬೀಳಲಿದೆ

ಮೂಲ ವೇತನ, ಬೋನಸ್ ಮತ್ತು ಹೆಚ್‌ಆರ್ ಎ (HRA) ಯ ಕೆಲವು ಭಾಗಗಳ ಹೊರತಾಗಿ ಭತ್ಯೆಗಳು ಪ್ರಸ್ತುತ ನಿಯಮಗಳ ಅಡಿಯಲ್ಲಿ ತೆರಿಗೆಗೆ ಒಳಪಡುವುದಿಲ್ಲ. ಈಗ ಮೂಲವೇತನ ಏರಿಕೆಯೊಂದಿಗೆ, ತೆರಿಗೆಗಳು ಸಹ ಹೆಚ್ಚಾಗುತ್ತವೆ.

ಹೊಸ ಬದಲಾವಣೆಗಳೊಂದಿಗೆ ತೆರಿಗೆಗೆ ಒಳಪಡದ ಇತರೆ ವಿಭಾಗದ ಮೊತ್ತ ಕಡಿಮೆಯಾಗುತ್ತದೆ. ಹೊಸ ನಿಯಮಕ್ಕೂ ಮೊದಲು ಮೂಲ ವೇತನ ಹೊರತು ಪಡಿಸಿ ಶೇಕಡಾ 50 ರಷ್ಟು ಇತರೆ ಮೂಲಗಳಲ್ಲಿ ಆದಾಯ ತೋರಿಸಲಾಗುತ್ತಿತ್ತು. ಹೊಸ ನಿಯಮದಿಂದ ಅದು 20-25 ಪ್ರತಿಶತದವರೆಗೆ ಕುಸಿಯುತ್ತದೆ.

English summary
The New Wage Code Set to get implemented in Country, it will change your salary structure completely. Know More Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X