ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಕೊಳ್ಳುವವರು ಕೇಂದ್ರ ಬಜೆಟ್ ನಿಂದ ಏನೆಲ್ಲಾ ನಿರೀಕ್ಷಿಸಬಹುದು?

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 19: "ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.." ಎನ್ನುವ ಮಾತಿದೆ. ಮನೆ ಕಟ್ಟುವುದು, ಕೊಳ್ಳುವುದು ಎಂದರೆ ಹಾಗೆಯೇ.. ಮಧ್ಯಮ ವರ್ಗದವರಿಗೆ ಅದೊಂದು ಜೀವಮಾನದ ಕನಸು. ಹಲವು ಆರ್ಥಿಕ ಅಡೆತಡೆಗಳನ್ನು ಮೀರಿ ಮನೆ ಕಟ್ಟಬೇಕಾಗುತ್ತದೆ.

ಕೇಂದ್ರ ಬಜೆಟ್ ಮೇಲಿನ ಉದ್ಯೋಗಸ್ಥರ 5 ನಿರೀಕ್ಷೆಗಳುಕೇಂದ್ರ ಬಜೆಟ್ ಮೇಲಿನ ಉದ್ಯೋಗಸ್ಥರ 5 ನಿರೀಕ್ಷೆಗಳು

ಹೀಗಾಗಿ ಮಧ್ಯಮ ವರ್ಗದ ಜನರು ಸರಕಾರಗಳತ್ತ ನಿರೀಕ್ಷೆಯಿಂದ ನೋಡುತ್ತಿರುತ್ತಾರೆ. ತಮ್ಮ ಮನೆಯ ಕನಸಿಗೆ ಸರಕಾರಗಳು ನೀರೆರೆಯಬಹುದಾ ಎಂಬುದು ಈ ಜನರ ಸಹಜ ಬಯಕೆ. ಇನ್ನೇನು ಬಜೆಟ್ ಮಂಡನೆಗೆ ಎರಡು ವಾರಗಳಷ್ಟೇ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಮನೆ ಕೊಳ್ಳುವವರು 2018-19ರ ಬಜೆಟ್ ನಿಂದ ಏನನ್ನು ನಿರೀಕ್ಷಿಸಬಹುದು? ಇಲ್ಲಿವೆ ಕೆಲವು ಅಂಶಗಳು.

ಗೃಹ ಸಾಲಕ್ಕೆ ಪ್ರತ್ಯೇಕ ತೆರಿಗೆ ವಿನಾಯಿತಿ

ಗೃಹ ಸಾಲಕ್ಕೆ ಪ್ರತ್ಯೇಕ ತೆರಿಗೆ ವಿನಾಯಿತಿ

ಪ್ರಸ್ತುತ ನೀವು ಗೃಹ ಸಾಲದ ಅಸಲಿನ ಮರುಪಾವತಿ ಮೇಲೆ ತೆರಿಗೆ ವಿನಾಯಿತಿಯನ್ನು ಸೆಕ್ಷನ್ 80ಸಿ ಅಡಿಯಲ್ಲಿ ಪಡೆದುಕೊಳ್ಳಬಹುದು. ಆದರೆ ಇದಕ್ಕೆ ರೂ. 1,50,000 ಮಿತಿ ಇದ್ದು ಇದರಲ್ಲಿ ಎಲ್ಐಸಿ, ಪಿಪಿಎಫ್ ಹೂಡಿಕೆಗಳೂ ಸೇರಿಕೊಳ್ಳುತ್ತವೆ. ಹೀಗಾಗಿ ಗೃಹ ಸಾಲದ ಸಾಲದ ಪಾವತಿಯನ್ನು ಉಳಿದ ಹೂಡಿಕೆಗಳಿಂದ ಹೊರಗಿಡಲು ಸರಕಾರಕ್ಕೆ ಇದು ಸಕಾಲವಾಗಿದೆ.

ಗೃಹ ಸಾಲಗಳ ತೆರಿಗೆ ವಿನಾಯಿತಿ ವಿಸ್ತರಣೆ

ಗೃಹ ಸಾಲಗಳ ತೆರಿಗೆ ವಿನಾಯಿತಿ ವಿಸ್ತರಣೆ

ಹಾಲಿ ಜಾರಿಯಲ್ಲಿರುವ ಆದಾಯ ತೆರಿಗೆ ನಿಯಮಗಳ ಪ್ರಕಾರ ವೈಯಕ್ತಿಕವಾಗಿ ಗೃಹ ಸಾಲಗಳ ಮೇಲೆ ರೂ. 2 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು. ಆದರೆ ಗೃಹ ಸಾಲದ ಇಎಂಐ ಮತ್ತು ಅವಧಿಗೆ ಹೋಲಿಸಿದರೆ ಹೆಚ್ಚಿನ ಮೊತ್ತ ಬಡ್ಡಿಗೇ ಹೋಗುತ್ತದೆ. ಹೀಗಾಗಿ ತೆರಿಗೆ ವಿನಾಯಿತಿಯನ್ನು ರೂ. 3 ಲಕ್ಷಕ್ಕೆ ಏರಿಸಿದರೆ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಬಜೆಟ್ ಅಂದರೆ ಸಮುದ್ರ ಮಂಥನ ಕಾಲ, ಸಿಗುವುದು ವಿಷವೋ ಅಮೃತವೋ?ಬಜೆಟ್ ಅಂದರೆ ಸಮುದ್ರ ಮಂಥನ ಕಾಲ, ಸಿಗುವುದು ವಿಷವೋ ಅಮೃತವೋ?

ಸರ್ವರಿಗೂ ಸೂರು

ಸರ್ವರಿಗೂ ಸೂರು

2022ರ ಒಳಗೆ ಸರ್ವರಿಗೂ ಸೂರು ಎಂಬ ಕೇಂದ್ರ ಸರಕಾರದ ಯೋಜನೆ ಮತ್ತಷ್ಟು ವೇಗ ಪಡೆದುಕೊಳ್ಳಬೇಕಾಗಿದೆ. ಹೀಗಾಗಿ ನಿರ್ಮಾಣ ಸಾಮಾಗ್ರಿಗಳ ಮೇಲಿನ ಜಿಎಸ್ಟಿಯಲ್ಲಿ ಹಾಲಿ ಶೇಕಡಾ 18ರ ಸ್ಥರದಿಂದ 12ಕ್ಕೆ ಇಳಿಕೆ ಮಾಡಬೇಕಾಗಿದೆ. ಇದರಿಂದ ಬಳಕೆದಾರರಿಗೆ ಲಾಭವಾಗಲಿದೆ.

ಸೆಕ್ಷನ್ 80ಐಬಿಎಗೆ ತಿದ್ದುಪಡಿ

ಸೆಕ್ಷನ್ 80ಐಬಿಎಗೆ ತಿದ್ದುಪಡಿ

ಐಟಿ ಕಾಯ್ದೆ 2016ರ ಸೆಕ್ಷನ್ 80ಐಬಿಎ ಅಡಿಯಲ್ಲಿ ಕಾರ್ಪೆಟ್ ಪ್ರದೇಶವನ್ನು 150 ಚದರ ಮೀಟರ್ ಗಳಿಗೆ ಏರಿಕೆ ಮಾಡುವ ಸಾಧ್ಯತೆ ಇದೆ.

ಸರಳ ಗೃಹ ಸಾಲ ವಿತರಣೆ

ಸರಳ ಗೃಹ ಸಾಲ ವಿತರಣೆ

ಸರ್ವರಿಗೂ ಸೂರು ನೀಡುವ ಸರಕಾರದ ಮೆಗಾ ಯೋಜನೆಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕೈಜೋಡಿಸಿದ್ದು ಸಾಲ ನೀಡುವ ಹೊಣೆಯೂ ಅವುಗಳ ಮೇಲಿದೆ. ಹೀಗಾಗಿ ಈ ಬಾರಿ ಬ್ಯಾಂಕುಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಹಣ ಮೀಸಲಿಡುವ ಸಾಧ್ಯತೆ ಇದೆ. ಹೀಗಾದಾಗ ಮಾತ್ರ ಬ್ಯಾಂಕುಗಳು ಸುಲಭದಲ್ಲಿ ಜನರಿಗೆ ಗೃಹ ಸಾಲವನ್ನು ವಿತರಿಸಲಿವೆ.

English summary
With Union Budget 2018 less than 2 weeks away, let us see what you can expect if you are planning to buy a house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X