ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಹಳೆಯ 500 ಮತ್ತು 1000 ರೂ. ನೋಟುಗಳು ಏನಾದವು?; ಮುಂದೆ ಓದಿ

|
Google Oneindia Kannada News

ನವದೆಹಲಿ, ನವೆಂಬರ್ 9: 5 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಏಕಾಏಕಿ ನೋಟು ಅಮಾನ್ಯೀಕರಣವನ್ನು ಘೋಷಿಸಿದಾಗ ದೇಶದ ಜನರಲ್ಲಿ ಭಾರೀ ಸಂಚಲನ ಮೂಡಿಸಿತ್ತು.

2016ರ ನವೆಂಬರ್ 8ರಂದು ಹಳೆಯ 1000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಲಾಗಿತ್ತು. ಡಿಜಿಟಲ್ ಪಾವತಿ ಉತ್ತೇಜಿಸುವುದು ಮತ್ತು ಕಪ್ಪು ಹಣದ ಹರಿವನ್ನು ತಡೆಯುವ ಪ್ರಮುಖ ಉದ್ದೇಶದಿಂದ ನೋಟ್‌ಬ್ಯಾನ್ ಮಾಡಲಾಗಿತ್ತು. ನೋಟು ಅಮಾನ್ಯೀಕರಣಗೊಂಡು ಐದು ವರ್ಷ ಆಗುತ್ತಿರುವಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ಮುಂದುವರಿಸಿವೆ.

ಸರಿಯಾಗಿ ಐದು ವರ್ಷಗಳ ಹಿಂದೆ ನವೆಂಬರ್ 8ರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಇಂದಿನಿಂದ 500 ರೂ. ಮತ್ತು 1000 ರೂ. ನೋಟುಗಳು ಕಾನೂನುಬದ್ಧವಾಗಿ ಮಾನ್ಯವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಪ್ರಧಾನಿಯವರ ಈ ಘೋಷಣೆಯ ನಂತರ ಬ್ಯಾಂಕ್‌ಗಳಲ್ಲಿ ನೋಟು ಬದಲಾವಣೆ ಪ್ರಕ್ರಿಯೆ ಆರಂಭಗೊಂಡಿತ್ತು.

What Did RBI Do With The Old Rs 500 And Rs 1000 Currency Notes

ದೇಶದ ಜನರು ತಮ್ಮ ಹಳೆಯ 500 ಮತ್ತು 1000 ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಹೊಸ ನೋಟುಗಳನ್ನು ಪಡೆದುಕೊಂಡಿದ್ದರು. 5 ವರ್ಷಗಳ ಹಿಂದೆ ಹೀಗೆ ಠೇವಣಿ ಮಾಡಿದ ಆ ಹಳೆಯ ನೋಟುಗಳು ಏನಾಗಿವೆ ಎಂಬುದರ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳಿದ್ದವು. ಈ ಪ್ರಶ್ನೆಗೆ ಉತ್ತರವನ್ನು ಇಲ್ಲಿದೆ.

ಮಾರುಕಟ್ಟೆಯಲ್ಲಿ ಹೊಸ ನೋಟುಗಳ ಚಲಾವಣೆ
ನೋಟು ಅಮಾನ್ಯೀಕರಣದ ನಂತರ 500 ಮತ್ತು 1000 ರೂ.ಗಳ ಹಳೆಯ ಕರೆನ್ಸಿ ನೋಟುಗಳನ್ನು ಆರ್‌ಬಿಐ ಮೇಲ್ವಿಚಾರಣೆಯಲ್ಲಿ ಠೇವಣಿ ಮಾಡಲಾಯಿತು. ಇದಕ್ಕೆ ಪ್ರತಿಯಾಗಿ ಸಮಾನ ಮೌಲ್ಯದ ಹೊಸ ನೋಟುಗಳನ್ನು ಜನರಿಗೆ ನೀಡಲಾಗಿದ್ದು, ಇಂದು 500 ಮತ್ತು 2000 ಹೊಸ ನೋಟುಗಳು ಚಲಾವಣೆಯಲ್ಲಿವೆ.

ಇದರ ಜೊತೆಗೆ 20, 100 ಮತ್ತು 50 ರೂ. ಮುಖಬೆಲೆಯ ಹೊಸ ನೋಟುಗಳು ಸಹ ಬಂದಿವೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ 15 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಳೆಯ ನೋಟುಗಳು ಜಮೆಯಾಗಿದ್ದು, ಆ ನೋಟುಗಳು ಇಂದಿಗೂ ಚಲಾವಣೆಯಲ್ಲಿಲ್ಲ.

ಹಳೆಯ ನೋಟುಗಳಿಂದ ದಿನಬಳಕೆಯ ವಸ್ತುಗಳ ತಯಾರಿಕೆ
2017ರಲ್ಲಿ ಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗೆ ಸಿಕ್ಕಿರುವ ಉತ್ತರದ ಪ್ರಕಾರ, ಅಮಾನ್ಯಗೊಂಡ ನೋಟುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇಂತಹ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ. ಇವು ಮತ್ತೆ ಮಾರುಕಟ್ಟೆಯಲ್ಲಿ ಚಲಾವಣೆಗೂ ಬರುವುದಿಲ್ಲ ಎಂದು ಹೇಳಲಾಗಿದೆ.

ಟೆಂಡರ್ ಮೂಲಕ ವಿಲೇವಾರಿ ಮಾಡಿದ ಈ ಹಳೆಯ ನೋಟುಗಳ ಕಾಗದವನ್ನು ಇತರ ಸರಕುಗಳನ್ನು ತಯಾರಿಸಲು ಬಳಸಲಾಗುತ್ತದೆ. ಆರ್‌ಬಿಐ ನಿಯಮಗಳ ಪ್ರಕಾರ, ಅಮಾನ್ಯಗೊಂಡ ನೋಟುಗಳನ್ನು ಕರೆನ್ಸಿ ವೆರಿಫಿಕೇಶನ್ ಪ್ರೊಸೆಸಿಂಗ್ ಸಿಸ್ಟಮ್ (ಸಿವಿಪಿಎಸ್) ಅಡಿಯಲ್ಲಿ ಕೊಳೆಸಲಾಗುತ್ತದೆ. ಚಲಾವಣೆಯಿಲ್ಲದ ನೋಟುಗಳನ್ನು ಮೊದಲು ವಿವಿಧ ವರ್ಗಗಳಾಗಿ ವಿಂಗಡಿಸಿ, ನಂತರ ಅವುಗಳ ಬಳಕೆಯನ್ನು ನಿರ್ಧರಿಸಲಾಗುತ್ತದೆ.

ಮೊದಲು ಕರೆನ್ಸಿಯನ್ನು ರದ್ದುಗೊಳಿಸಬಹುದೇ ಅಥವಾ ಇಲ್ಲವೇ ಎಂದು ನೋಡಲಾಗುತ್ತದೆ. ನಂತರ ಈ ನೋಟುಗಳ ಕ್ಲಿಪ್ಪಿಂಗ್‌ಗಳನ್ನು ಇಟ್ಟಿಗೆಗಳಾಗಿ ಪರಿವರ್ತಿಸಲಾಗುತ್ತದೆ. ನೋಟು ಕ್ಲಿಪ್ಪಿಂಗ್‌ಗಳಿಂದ ತಯಾರಾದ ಈ ಇಟ್ಟಿಗೆಗಳಿಂದ ಕಾರ್ಡ್‌ಬೋರ್ಡ್ ಸೇರಿದಂತೆ ಹಲವು ರೀತಿಯ ಕಾರ್ಡ್‌ಬೋರ್ಡ್ ವಸ್ತುಗಳನ್ನು ತಯಾರಿಸಲಾಗುತ್ತದೆ.

ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ) ವಿದ್ಯಾರ್ಥಿಗಳು ತಮ್ಮ ಕೌಶಲ್ಯದಿಂದ 500 ಮತ್ತು 1000ರ ಹಳೆಯ ನೋಟುಗಳಿಂದ ಅನೇಕ ವಸ್ತುಗಳನ್ನು ತಯಾರಿಸಿದ್ದಾರೆ. ವಾಸ್ತವವಾಗಿ ಆರ್‌ಬಿಐ ಈ ಕೆಲಸಕ್ಕಾಗಿ ಎನ್‌ಐಡಿಯಿಂದ ಸಹಾಯವನ್ನು ಕೋರಿತ್ತು. ನಂತರ ವಿದ್ಯಾರ್ಥಿಗಳು ದಿನಬಳಕೆಯ ವಸ್ತುಗಳನ್ನು ದಿಂಬುಗಳು, ಟೇಬಲ್ ಲ್ಯಾಂಪ್‌ಗಳನ್ನು ನೋಟ್ ಕ್ಲಿಪ್ಪಿಂಗ್‌ಗಳಿಂದ ತಯಾರಿಸಿದ್ದರು.

ಮಾಹಿತಿಯ ಪ್ರಕಾರ ಆರ್‌ಬಿಐ ಹಳೆಯ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ. ಅಂದರೆ ನಿಷೇಧಿಸಿದ ಬಳಿಕ ಆ ನೋಟುಗಳನ್ನು ಮತ್ತೆ ಚಲಾವಣೆಗೆ ತರುವುದಿಲ್ಲ. ಹಳೆ ನೋಟುಗಳ ವಿಶೇಷತೆ ಏನೆಂದರೆ, ಇವು ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಿಲ್ಲ ಮತ್ತು ಬಣ್ಣ ಬಿಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಇತರ ಕಾಗದದ ಸರಕುಗಳನ್ನು ತಯಾರಿಸಲು ಬಳಸಬಹುದಾಗಿದೆ.

English summary
After demonetisation, what did RBI do with the old Rs 500 and Rs 1000 currency notes? Know here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X