ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಕುಸಿಯಲು ಕಾರಣಗಳೇನು?

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಪಾತಾಳ ತಲುಪಿದೆ. ಚೀನಾದ ಕರೆನ್ಸಿ ಯುವಾನ್ ಕೂಡ ನೆಲ ಕಚ್ಚಿ, ಕಚ್ಚಾ ತೈಲ ಬೆಲೆ ಮೇಲೇರಿದೆ. ಭಾರತ ಸೇರಿದಂತೆ ಹಲವು ದೇಶಗಳು ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹಾಕಿದ್ದಾರೆ. ಆ ಕಾರಣಕ್ಕೆ ಡಾಲರ್ ವಿರುದ್ಧ ರುಪಾಯಿ ಸಾರ್ವಕಾಲಿಕ ಕುಸಿತ ದಾಖಲಿಸಿದೆ.

ಡಾಲರ್ ವಿರುದ್ಧ ರುಪಾಯಿ ಮೌಲ್ಯದ ಕುಸಿತ ತಡೆಯುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯ ಪ್ರವೇಶಿಸಿದ್ದು, 700-800 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಸರಕಾರಿ ಸ್ವಾಮ್ಯದ ಬ್ಯಾಂಕ್ ನಿಂದ ಮಾರಾಟ ಮಾಡಲಾಗಿದೆ ಎಂಬ ಅಂದಾಜಿದೆ. ವ್ಯಾಪಾರದ ಒತ್ತಡ ಹಾಗೂ ಚೀನಾ ಕರೆನ್ಸಿಯಲ್ಲಿನ ಕುಸಿತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಸೇರಿ ಇತರ ಕರೆನ್ಸಿ ಮಾರುಕಟ್ಟೆ ಮೇಲೆ ಒತ್ತಡ ತಂದಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ದಾಖಲೆ ಕುಸಿತ ಕಂಡ ರುಪಾಯಿಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ದಾಖಲೆ ಕುಸಿತ ಕಂಡ ರುಪಾಯಿ

ಸಾರ್ವಕಾಲಿಕ ಕುಸಿತ ಕಂಡಿರುವ ರುಪಾಯಿ ಮೇಲಿನ ಒತ್ತಡ ಮುಂದುವರಿಯಲಿದೆ ಎಂದು ಕೂಡ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ ಚೀನಾದ ಕರೆನ್ಸಿ ಮೌಲ್ಯ ಆರು ತಿಂಗಳ ಕನಿಷ್ಠ ಮಟ್ಟದಲ್ಲಿದೆ. ಇತರ ಮುಂದುವರಿಯುತ್ತಿರುವ ದೇಶಗಳ ಕರೆನ್ಸಿ ಮಾರುಕಟ್ಟೆ ಸ್ಥಿತಿಯೂ ಕೂಡ ಅಂಥ ಆಶಾದಾಯಕವಾಗೇನೂ ಇಲ್ಲ.

ರುಪಾಯಿ ದುರ್ಬಲ ಆಗುವುದು ಸಹಜ

ರುಪಾಯಿ ದುರ್ಬಲ ಆಗುವುದು ಸಹಜ

ಮುಂದುವರಿಯುತ್ತಿರುವ ದೇಶಗಳ ಕರೆನ್ಸಿಗಳ ಪೈಕಿಯೇ ಭಾರತದ ರುಪಾಯಿ ಸ್ಥಿತಿ ತೀರಾ ಕೆಟ್ಟದಾಗಿದೆ. ಜಾಗತಿಕ ಮಟ್ಟದಲ್ಲಿ ಡಾಲರ್ ಬಲಗೊಳ್ಳುತ್ತಾ ಹೋದರೆ ಭಾರತ ಸಬಲಗೊಳ್ಳುವುದೇ ಸಾಧ್ಯವೇ ಇಲ್ಲ ಅಭಿಪ್ರಾಯ ವ್ಯಕ್ತವಾಗಿದೆ. ಭಾರತ ವಿತ್ತೀಯ ಕೊರತೆ (ಟ್ರೇಡ್ ಡಿಫಿಸಿಟ್) ದೇಶ. ಇಲ್ಲಿ ರುಪಾಯಿ ದುರ್ಬಲ ಆಗುವುದು ಸಹಜ. ಅದರಲ್ಲೂ ಮುಂದುವರಿಯುತ್ತಿರುವ ದೇಶಗಳಿಗೆ ಬಂಡವಾಳ ಹರಿದುಬರುವುದು ನಿಧಾನ ಆದಾಗ ಮತ್ತು ತೈಲ ಬೆಲೆ ಸ್ಥಿರವಾದಾಗ ಇಂಥ ಸ್ಥಿತಿ ಸೃಷ್ಟಿಯಾಗುತ್ತದೆ.

ಇರಾನ್ ನಿಂದ ತೈಲ ಆಮದಿಗೆ ನಿರ್ಬಂಧ

ಇರಾನ್ ನಿಂದ ತೈಲ ಆಮದಿಗೆ ನಿರ್ಬಂಧ

ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ವಿರುದ್ಧ ನಿರ್ಬಂಧ ಹೇರುವ ಬೆದರಿಕೆ ಹಾಕಿದೆ ಅಮೆರಿಕ. ಭಾರತಕ್ಕೆ ತೈಲ ಸರಬರಾಜು ಮಾಡುತ್ತಿರುವ ಮೂರನೇ ಅತಿ ದೊಡ್ಡ ದೇಶ ಇರಾನ್. ಇದರಿಂದ ಜಾಗತಿಕ ಮಟ್ಟದಲ್ಲೇ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗುವ ಆತಂಕ ಸೃಷ್ಟಿಯಾಗಿ, ಬ್ಯಾರಲ್ ಕಚ್ಚಾ ತೈಲ 76 ಅಮೆರಿಕನ್ ಡಾಲರ್ ಗೂ ಹೆಚ್ಚಿದೆ.

ಡಾಲರ್ ವಿರುದ್ಧ ರುಪಾಯಿ ಎಪ್ಪತ್ತಕ್ಕೆ ಮುಟ್ಟಬಹುದು

ಡಾಲರ್ ವಿರುದ್ಧ ರುಪಾಯಿ ಎಪ್ಪತ್ತಕ್ಕೆ ಮುಟ್ಟಬಹುದು

ಭಾರತದ ನಾಲ್ಕನೇ ಮೂರರಷ್ಟು ತೈಲ ಅಗತ್ಯವನ್ನು ವಿದೇಶಗಳಿಂದಲೇ ತರಿಸಿಕೊಳ್ಳಲಾಗುತ್ತಿದೆ. ಎಲ್ಲ ಕಾರಣದಿಂದಲೇ ಈ ವರ್ಷದ ಕೊನೆ ಹೊತ್ತಿಗೆ ಡಾಲರ್ ವಿರುದ್ಧ ರುಪಾಯಿ ಎಪ್ಪತ್ತಕ್ಕೆ ಮುಟ್ಟಬಹುದು ಎಂಬ ಆತಂಕವಂತೂ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ತೈಲ ಬೆಲೆ ಏರಿಕೆ ಆಗುತ್ತಿರುವುದು ವಿತ್ತೀಯ ಕೊರತೆಗೆ (ಟ್ರೇಡ್ ಡಿಫಿಸಿಟ್) ಆತಂಕಕಾರಿ. ಈ ಹಿಂದೆ ಸರಕಾರ ಅಂದಾಜು ಮಾಡಿದ್ದಕ್ಕಿಂತ ಇದು ಹೆಚ್ಚಿದೆ.

ಹಣ ವಾಪಸು ತೆಗೆದುಕೊಳ್ಳುತ್ತಿದ್ದಾರೆ

ಹಣ ವಾಪಸು ತೆಗೆದುಕೊಳ್ಳುತ್ತಿದ್ದಾರೆ

ಇಂಥ ಪರಿಸ್ಥಿತಿ ನಿರ್ಮಾಣವಾದರೆ ವಿದೇಶಿ ಬಂಡವಾಳವು ಭಾರತದಿಂದ ಹೊರಹೋಗುವುದು ಹೆಚ್ಚಾಗಿ, ರುಪಾಯಿ ಮೌಲ್ಯ ಮತ್ತಷ್ಟು ಕುಸಿಯುತ್ತದೆ. ಕಳೆದ ವರ್ಷ ಜನವರಿ ಹಾಗೂ ಜೂನ್ ಮಧ್ಯೆ ವಿದೇಶಿ ಹೂಡಿಕೆದಾರರು 1.48 ನಿವ್ವಳ ಹೂಡಿಕೆ ಮಾಡಿದ್ದರು. ಅದೇ ಈ ವರ್ಷ 46,951 ಕೋಟಿ ರುಪಾಯಿ ಮೌಲ್ಯದ ಸೆಕ್ಯೂರಿಟೀಸ್ ಮಾರಾಟ ಮಾಡಿದ್ದಾರೆ ಎಂಬ ಸಂಗತಿಯನ್ನು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟಿರಿ ಲಿಮಿಟೆಡ್ ಅಂಕಿ- ಅಂಶ ಬಯಲು ಮಾಡಿದೆ.

ಯಾವುದೆಲ್ಲ ದುಬಾರಿ ಆಗುತ್ತವೆ?

ಯಾವುದೆಲ್ಲ ದುಬಾರಿ ಆಗುತ್ತವೆ?

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಕುಸಿತವಾದರೆ ಆಗುವ ಪರಿಣಾಮಗಳೇನು? ಇಲ್ಲಿದೆ ಉತ್ತರ.

* ತೈಲ ಬೆಲೆಯಲ್ಲಿ ಏರಿಕೆ ಆಗುತ್ತದೆ

* ಹಣದುಬ್ಬರದ ದರದಲ್ಲಿ ಏರಿಕೆ ಆಗುತ್ತದೆ

* ವಿದೇಶ ಪ್ರಯಾಣ, ವಿದೇಶ ವ್ಯಾಸಂಗ ದುಬಾರಿಯಾಗುತ್ತದೆ

* ಹಣದುಬ್ಬರದ ಕಾರಣಕ್ಕೆ ಸಾಲದ ಮೇಲಿನ ಬಡ್ಡಿದರ ಏರಿಕೆ ಆಗುತ್ತದೆ

* ಭಾರತೀಯ ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣ ಹಿಂತೆಗೆದುಕೊಳ್ಳುತ್ತಾರೆ

* ಗ್ರಾಹಕ ಬಳಕೆ ವಸ್ತುಗಳು ದುಬಾರಿ ಆಗುತ್ತವೆ

English summary
On the early trade of June 28th INR record all time low against US dollar. Why it happened so, here are the reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X