ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲಕ್ಷ ಕೋಟಿ ಸಾಲ ಭಾರದಲ್ಲಿ ಕುಸಿದ IL&FS ಸಾಮ್ರಾಜ್ಯದ ಸುತ್ತ

|
Google Oneindia Kannada News

ಒಂದು ಕೊಳೆತ ಮಾವಿನ ಹಣ್ಣಿನಿಂದ ಇಡೀ ಬುಟ್ಟಿಯಲ್ಲಿರುವ ಮಾವಿನ ಹಣ್ಣೆಲ್ಲ ಹಾಳಾಗುತ್ತದೆ. ಈ ಮಾತು ಮಾರುಕಟ್ಟೆ ಅನ್ನೋ ವಿಚಾರಕ್ಕೆ ಬಂದರೆ ಅಕ್ಷರಶಃ ಸತ್ಯ. ಯಾವುದೋ ಒಂದು ಕಂಪನಿಯಲ್ಲಿನ ಅನಾಹುತ ಇಡೀ ಮಾರುಕಟ್ಟೆಯಲ್ಲಿ ತಲ್ಲಣ ಎಬ್ಬಿಸುತ್ತದೆ.

1930ರ ಮಹಾ ಕುಸಿತವನ್ನು ಒಮ್ಮೆ ನೆನಪಿಸಿಕೊಳ್ಳಿ. 1994ರಲ್ಲಿ ಅಮೆರಿಕನ್ ಎಕ್ಸ್ ಪ್ರೆಸ್ ಕಂಪನಿಗೆ ಬಿದ್ದ ಹೊಡೆತದಿಂದ ಬಂಡವಾಳ ಕೊರತೆ ಉದ್ಭವಿಸಿತು. 1998ರಲ್ಲಿ ದೀರ್ಘಾವಧಿ ಬಂಡವಾಳ ನಿರ್ವಹಣೆ ಕುಸಿತ ಮತ್ತು ರಷ್ಯಾದಿಂದ ಸಾಲ ಮರುಪಾವತಿ ಸಾಧ್ಯವಾಗದಿದ್ದದ್ದು. 2008ರಲ್ಲಿ ಲೆಹ್ಮನ್ ಬ್ರದರ್ಸ್ ಬಿಕ್ಕಟ್ಟಿನ ನಂತರ ಉದ್ಭವಿಸಿದ ಪರಿಸ್ಥಿತಿ. ಎಲ್ಲವೂ ಪಾಠವೇ.

5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

ಈ ಎಲ್ಲ ಬಿಕ್ಕಟ್ಟಿನಲ್ಲಿ ಒಂದು ಸಾಮ್ಯತೆ ಇದೆ. ಅದು ಮುಂದಿನ ಅನಾಹುತವನ್ನು ಗ್ರಹಿಸದೆ ಅಧಿಕಾರಿಗಳು ಮಾಡಿದ ತಪ್ಪಿನ ಫಲವಾಗಿದ್ದವು. ಅದೇ ರೀತಿಯಲ್ಲೇ ಭಾರತ ಮತ್ತು ಅದರ ಮಾರುಕಟ್ಟೆ ಅನಾಹುತಕ್ಕೂ ಕಾರಣ ಇದೆ. ತಮ್ಮದೇ ಸ್ವಂತ ಲೆಹ್ಮನ್ ಬ್ರದರ್ಸ್ ಬಿಕ್ಕಟ್ಟನ್ನು ಕೈಯಲ್ಲಿಟ್ಟುಕೊಂಡಿದೆ ಮುಂಬೈ ಮೂಲದ ಇನ್ ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ (ಐಎಲ್ ಅಂಡ್ ಎಫ್ ಎಸ್).

ಐಎಲ್ ಅಂಡ್ ಎಫ್ ಎಸ್ ಮತ್ತು ಲೆಹ್ಮನ್ ಬ್ರದರ್ಸ್ ಅನಾಹುತದ ಮಧ್ಯೆ ಸಾಮ್ಯತೆಗಳಿವೆ. ಎರಡೂ ಒಂದು ಕಾಲದಲ್ಲಿ ಮಿಂಚಿ ಮೆರೆದಂಥ ಕಂಪನಿಗಳು ಮತ್ತು ಆ ನಂತರ ಉದ್ಯಮದಲ್ಲಿನ ತಪ್ಪು ಲೆಕ್ಕಾಚಾರಗಳನ್ನು ಗ್ರಹಿಸಲು ಸಾಧ್ಯವಾಗದೆ ಪ್ರಪಾತದ ಎದುರು ಬಂದು ನಿಲ್ಲಿಸಿದವು.

ಐಎಲ್ ಅಂಡ್ ಎಫ್ ಎಸ್ ಎಂದರೇನು?

ಐಎಲ್ ಅಂಡ್ ಎಫ್ ಎಸ್ ಎಂದರೇನು?

ಮೂವತ್ತು ವರ್ಷದ ಹಳೆ ಕಂಪನಿ ಐಎಲ್ ಅಂಡ್ ಎಫ್ ಎಸ್. 2018ಕ್ಕೆ ಅದು 256 ಸಮೂಹ ಕಂಪನಿಗಳನ್ನು ಹೊಂದಿದೆ. ಅದರಲ್ಲಿ ಸಹವರ್ತಿ, ಭಾಗೀದಾರ ಮತ್ತು ಹೊಂದಾಣಿಕೆ ಮಾಡಿಕೊಂಡಂಥ ಸಂಸ್ಥೆಗಳಿವೆ. ಸಂಚಾರ, ಇಂಧನ, ನಗರ ಆಸ್ತಿ ನಿರ್ವಹಣೆ, ನೀರು ಮತ್ತು ತ್ಯಾಜ್ಯ ನೀರು, ಆರ್ಥಿಕ ಸೇವೆಗಳು, ಪರಿಸರ, ಶಿಕ್ಷಣ- ತಂತ್ರಜ್ಞಾನ ಮತ್ತು ಕೌಶಲ ಅಭಿವೃದ್ಧಿ ಹೀಗೆ ನಾನಾ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಭಾರತದ ದೊಡ್ಡ ಯೋಜನೆಗಳಲ್ಲೂ ಈ ಕಂಪನಿ ತೊಡಗಿಕೊಂಡಿದೆ. ಇದು ಅಭಿವೃದ್ಧಿ ಪಡಿಸಿದ ಹಾಗೂ ಹಣಕಾಸು ಒದಗಿಸಿದ ಯೋಜನೆಗಳ ಮೌಲ್ಯ ರು. 1.8 ಟ್ರಿಲಿಯನ್. ಚೆನ್ನೈ-ನಾಶ್ರಿ ಸುರಂಗ ಮಾರ್ಗ ಕೂಡ ಇದೇ ಕಂಪನಿಯದು. ಇದಷ್ಟೇ ಅಲ್ಲ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಆಗುತ್ತಿರುವ ಹದಿಮೂರು ಸಾವಿರ ಕಿಲೋಮೀಟರ್ ರಸ್ತೆ ನಿರ್ಮಾಣದಲ್ಲಿ ಈ ಕಂಪನಿ ಪಾತ್ರವಿದೆ.

ಪ್ರಮುಖ ಷೇರುದಾರರು ಯಾರು?

ಪ್ರಮುಖ ಷೇರುದಾರರು ಯಾರು?

ಇದನ್ನು ಹೊರತುಪಡಿಸಿ ಐಎಲ್ ಅಂಡ್ ಎಫ್ ಎಸ್ ಜತೆಗೆ ಇತರ ಮುಖ್ಯ ಷೇರುದಾರರು ಇದ್ದಾರೆ. ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ ಐಸಿ) 25.3% ಕಂಪನಿ ಷೇರು ಹೊಂದಿದ್ದರೆ, ಜಪಾನ್ ನ ಒರಿಕ್ಸ್ ಕಾರ್ಪೊರೇಷನ್ 23%, ಐಎಲ್ ಅಂಡ್ ಎಫ್ ಎಸ್ ಎಂಪ್ಲಾಯಿಸ್ ವೆಲ್ ಫೇರ್ ಟ್ರಸ್ಟ್ 12%, ಅಬುಧಾಬಿ ಇನ್ ವೆಸ್ಟ್ ಮೆಂಟ್ ಅಥಾರಿಟಿ 12.56%, ಎಚ್ ಡಿಎಫ್ ಸಿ ಹೋಲ್ಡಿಂಗ್ 9.02%, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 7% ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 6.42% ಷೇರನ್ನು ಹೊಂದಿವೆ. ಐಎಲ್ ಅಂಡ್ ಎಫ್ ಎಸ್ ನ ಮೂರು ಅಂಗ ಸಂಸ್ಥೆಗಳಾಗಿ ಐಎಲ್ ಅಂಡ್ ಎಫ್ ಎಸ್ ಇನ್ವೆಸ್ಟ್ ಮೆಂಟ್ ಮ್ಯಾನೇಜರ್ಸ್, ಐಎಲ್ ಅಂಡ್ ಎಫ್ ಎಸ್ ಎಂಜಿನಿಯರಿಂಗ್ ಅಂಡ್ ಕನ್ ಸ್ಟ್ರಕ್ಷನ್ ಕಂಪನಿ ಮತ್ತು ಐಎಲ್ ಅಂಡ್ ಎಫ್ ಎಸ್ ಟ್ರಾನ್ಸ್ ಪೋರ್ಟೆಷನ್ ನೆಟ್ ವರ್ಕ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ.

ಕುಸಿತದ ಹಾದಿಯಲ್ಲಿ ಹೂಡಿಕೆದಾರರ ಸಂಪತ್ತು ಕರಗಿಸಿದ ಸೆನ್ಸೆಕ್ಸ್, ನಿಫ್ಟಿಕುಸಿತದ ಹಾದಿಯಲ್ಲಿ ಹೂಡಿಕೆದಾರರ ಸಂಪತ್ತು ಕರಗಿಸಿದ ಸೆನ್ಸೆಕ್ಸ್, ನಿಫ್ಟಿ

ಸಮಸ್ಯೆ ಆಗಿದ್ದು ಎಲ್ಲಿ?

ಸಮಸ್ಯೆ ಆಗಿದ್ದು ಎಲ್ಲಿ?

ತುಂಬ ಸರಳವಾಗಿ ಹೇಳಬೇಕು ಅಂದರೆ ಐಎಲ್ ಅಂಡ್ ಎಫ್ ಎಸ್ ಗೆ ಕೆಲವು ಹಣ ಮರುಪಾವತಿ ಮಾಡಲು ಆಗಲಿಲ್ಲ. ನಿಗದಿತ ದಿನಾಂಕಕ್ಕೆ ಅದರ ಕಮರ್ಷಿಯಲ್ ಪೇಪರ್ಸ್ ಸೇವೆ ನೀಡಲು ಆಗಲಿಲ್ಲ. ನೇರವಾಗಿ ಹೇಳಬೇಕೆಂದರೆ ಹಣ ಮರುಪಾವತಿಗೆ ನಗದು ಅಂತ ಇರಲೇ ಇಲ್ಲ. ತೀರಾ ಗಂಭೀರವಾದ ನಗದು ಸಮಸ್ಯೆ ಎದುರಾಯಿತು. ಮಾರ್ಚ್ 2018ಕ್ಕೆ ಒಟ್ಟಾರೆ 5,751.9 ಕೋಟಿ ರುಪಾಯಿ ನಗದು ಕೊರತೆ ಎದುರಾಗಿತ್ತು. ಸೆಪ್ಟೆಂಬರ್ 10, 2018ಕ್ಕೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ ಐಡಿಬಿಐ)ಗೆ 1 ಬಿಲಿಯನ್ ಹಣ ಪಾವತಿಸಲು ವಿಫಲವಾಯಿತು. ಆಗಸ್ಟ್ 28, 2018ರಲ್ಲಿ ಒಂದಾದ ಮೇಲೆ ಒಂದು ಹಣ ಪಾವತಿ ಮಾಡಲು ವಿಫಲವಾದ ನಂತರ ಆದ ಘಟನೆ ಇದು. ಐಎಲ್ ಅಂಡ್ ಎಫ್ ಎಸ್ ನ ಮುಖ್ಯ ಸಹವರ್ತಿಯೊಂದು ಕಮರ್ಷಿಯಲ್ ಪೇಪರ್ಸ್ ಜವಾಬ್ದಾರಿ ಈಡೇರಿಸಲು ವಿಫಲವಾಯಿತು.

ಆರು ತಿಂಗಳಲ್ಲಿ $500 ಮಿಲಿಯನ್ ಪಾವತಿಸಬೇಕಿತ್ತು

ಆರು ತಿಂಗಳಲ್ಲಿ $500 ಮಿಲಿಯನ್ ಪಾವತಿಸಬೇಕಿತ್ತು

ಮಾರುಕಟ್ಟೆಗೆ ಮೊದಲ ದಿಗ್ಭ್ರಮೆ ಆಗಿದ್ದು ಮಾರ್ಚ್ ನಲ್ಲಿ. ಹೂಡಿಕೆದಾರರಿಂದ ಬೇಡಿಕೆ ಇದ್ದಾಗಲೂ $350 ಮಿಲಿಯನ್ ಬಾಂಡ್ ವಿತರಣೆಯನ್ನು ಮುಂದಕ್ಕೆ ಹಾಕಿತ್ತು ಐಎಲ್ ಅಂಡ್ ಎಫ್ ಎಸ್. ಆಗಸ್ಟ್ 28, 2018ರಂದು ಬಾಕಿಯಿದ್ದ ಕಮರ್ಷಿಯಲ್ ಪೇಪರ್ಸ್ ಬಾಕಿಯನ್ನು ನೀಡಲು ಸಾಧ್ಯವಾಗಲಿಲ್ಲ. ಆಗಸ್ಟ್ ಮೂವತ್ತೊಂದಕ್ಕೆ ಚುಕ್ತಾ ಮಾಡಲು ನಿರ್ಧರಿಸಿತು. ಇದರೊಂದಿಗೆ ಫೈನಾನ್ಷಿಯಲ್ ಸರ್ವೀಸಸ್ ಮುಂದಿನ ಆರು ತಿಂಗಳಲ್ಲಿ $500 ಮಿಲಿಯನ್ ಪಾವತಿಸಬೇಕಿತ್ತು. ಆದರೆ ಕಂಪನಿ ಬಳಿ ಇದ್ದ ಹಣ ಕೇವಲ $27 ಮಿಲಿಯನ್ ಮಾತ್ರ. ಮುಂದಿನ ವರ್ಷ ಫೆಬ್ರವರಿ ತನಕ ಕಮರ್ಷಿಯಲ್ ಪೇಪರ್ ಮಾರ್ಕೆಟ್ ಐಎಲ್ ಅಂಡ್ ಎಫ್ ಎಸ್ ವ್ಯವಹಾರ ಮಾಡಲು ನಿಷೇಧ ಹೇರಲಾಗಿದೆ. ಇದರ ಜತೆಗೆ ಮೂಲಸೌಕರ್ಯ ಯೋಜನೆಗಳಲ್ಲಿ ನಿಧಾನವಾದವು. ಸರಕಾರದಿಂದ ಬಾಕಿ ಬರಬೇಕಿದ್ದ 90 ಮಿಲಿಯನ್ ಹಣಕ್ಕೆ ಕೊಕ್ಕೆ ಬಿದ್ದು, ಸಮಸ್ಯೆ ಕುತ್ತಿಗೆಗೆ ಬಂತು.

1000ಕ್ಕೂ ಹೆಚ್ಚು ಅಂಶ ಕುಸಿದ ಸೆನ್ಸೆಕ್ಸ್, ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ1000ಕ್ಕೂ ಹೆಚ್ಚು ಅಂಶ ಕುಸಿದ ಸೆನ್ಸೆಕ್ಸ್, ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ

ಕಂಪನಿ ಪಾಲಿನ ಒಟ್ಟು ಸಾಲ 91 ಸಾವಿರ ಕೋಟಿ

ಕಂಪನಿ ಪಾಲಿನ ಒಟ್ಟು ಸಾಲ 91 ಸಾವಿರ ಕೋಟಿ

ಕಂಪನಿಗೆ ದೊಡ್ಡ ಪ್ರಮಾಣದ ಸಾಲ ಇದ್ದು, ತತಕ್ಷಣದಲ್ಲಿ ಮರುಪಾವತಿಸಬೇಕು ಎಂಬುದು ಮಾತ್ರವಲ್ಲ, ಜತೆಗೆ ಕಂಪನಿ ಆಸ್ತಿಯು ದೀರ್ಘಾವಧಿಗೆ ತರಬೇಕಿದ್ದ ಆದಾಯದ ಬಗ್ಗೆಯೂ ಗುಮಾನಿ ಶುರುವಾಯಿತು. ರೇಟಿಂಗ್ ಏಜೆನ್ಸಿ ಪ್ರಕಾರ ಐಎಲ್ ಅಂಡ್ ಎಫ್ ಎಸ್ ಮತ್ತು ಐಎಲ್ ಅಂಡ್ ಎಫ್ ಎಸ್ ಫೈನಾನ್ಷಿಯಲ್ ಸರ್ವೀಸಸ್ ನೀಡಿದ ಒಟ್ಟು 270 ಬಿಲಿಯನ್ ರುಪಾಯಿ ಸಾಲವು ಕಸದ ಸಮ ಎಂದಿದೆ. ಇನ್ನು ಕಂಪನಿಯ ಸಮೂಹದಲ್ಲಿರುವ ಇತರ ಆರು ಕಂಪನಿ ಸಹ 120 ಬಿಲಿಯನ್ ರುಪಾಯಿ ಸಾಲದ ಮೇಲೆ ನಕಾರಾತ್ಮಕ ರೇಟಿಂಗ್ ಹೊಂದಿವೆ. ಐಎಲ್ ಅಂಡ್ ಎಫ್ ಎಸ್ 256 ಸಮೂಹ ಕಂಪನಿಗಳನ್ನು ಹೊಂದಿದ್ದರೂ ಒಟ್ಟಾರೆ ಸಾಲ ಪ್ರಮಾಣ ಭಾರತ ಮತ್ತು ಹೂಡಿಕೆದಾರರ ಪಾಲಿಗೆ ಆತಂಕಕಾರಿಯಾಗಿದೆ. ಮಾರ್ಚ್ 2018ಕ್ಕೆ ಕಂಪನಿ ಪಾಲಿನ ಒಟ್ಟು ಸಾಲ 91,0913.13 ಕೋಟಿ. ಇನ್ನು ಕಂಪನಿಗೆ ಬರಬೇಕಾದ ಸಾಲ 15,935.4 ಕೋಟಿ. ಗುಂಪಿನಲ್ಲಿ ಐಎಲ್ ಅಂಡ್ ಎಫ್ ಎಸ್ ಟ್ರಾನ್ಸ್ ಪೋರ್ಟೆಷನ್ ನೆಟ ವರ್ಕ್ಸ್ ಲಿಮಿಟೆಡ್ ಗೆ 34,544.2 ಕೋಟಿ ಸಾಲ, ಐಎಲ್ ಅಂಡ್ ಎಫ್ ಎಸ್ ಫೈನಾನ್ಷಿಯಲ್ ಸರ್ವೀಸಸ್ ಗೆ 17,589.9 ಕೋಟಿ ಹಾಗೂ ಐಎಲ್ ಅಂಡ್ ಎಫ್ ಎಸ್ ತಮಿಳುನಾಡು ಪವರ್ ಕಂಪನಿ ಲಿಮಿಟೆಡ್ ಗೆ 8,162.1 ಕೋಟಿ ರುಪಾಯಿ ಸಾಲ ಇದೆ.

ಇನ್ನೂ ಹೆಚ್ಚು ನಷ್ಟಕ್ಕೆ ಸಿಲುಕಿಕೊಂಡರು

ಇನ್ನೂ ಹೆಚ್ಚು ನಷ್ಟಕ್ಕೆ ಸಿಲುಕಿಕೊಂಡರು

ಯಾವಾಗ ಐಎಲ್ ಅಂಡ್ ಎಫ್ ಎಸ್ ಕಮರ್ಷಿಯಲ್ ಪೇಪರ್ಸ್ ಅಥವಾ ಅಲ್ಪಾವಧಿ ಸಾಲಗಳನ್ನು ಮರುಪಾವತಿಸಲು ವಿಫಲವಾಯಿತೋ ಹೂಡಿಕೆದಾರರು ದೊಡ್ಡ ಮಟ್ಟದ ಸಾಲದಲ್ಲಿ ಸಿಲುಕಿಕೊಂಡರು. ಮ್ಯೂಚುವಲ್ ಫಂಡ್ ಗಳಲ್ಲಿ ಕಮರ್ಷಿಯಲ್ ಪೇಪರ್ಸ್ ನ ಪಾತ್ರ ಮಹತ್ವದ್ದು. ಹಣದುಬ್ಬರ ಏರಿಕೆ ಹಾಗೂ ಬ್ಯಾಂಕ್ ಗಳ ಠೇವಣಿ ಮೇಲಿನ ಬಡ್ಡಿ ದರ ಇಳಿದ ಮೇಲೆ ಇವುಗಳ ಬೇಡಿಕೆ ಹೆಚ್ಚಾಗಿತ್ತು. ಹಲವು ರೇಟಿಂಗ್ ಸಂಸ್ಥೆಗಳು ಐಎಲ್ ಅಂಡ್ ಎಫ್ ಎಸ್ ನೀಡಿದ ಸಾಲದ ಗುಣಮಟ್ಟ ಕಡಿಮೆ ಮಾಡಿದವು. ಐಎಲ್ ಅಂಡ್ ಎಫ್ ಎಸ್ ಫೈನಾನ್ಷಿಯಲ್ ಸರ್ವೀಸಸ್ ಇನ್ನೂ ಹೆಚ್ಚು ಕಮರ್ಷಿಯಲ್ ಪೇಪರ್ಸ್ ವಿತರಿಸುವುದನ್ನು ನಿಲ್ಲಿಸಿತು. ಇದರಿಂದ ಬ್ಯಾಂಕ್ ಗಳು, ಮ್ಯೂಚುವಲ್ ಅಂಡ್ ಪೆನ್ಷನ್ ಫಂಡ್ ಮ್ಯಾನೇಜರ್ಸ್, ಇನ್ಷೂರರ್ಸ್ ಮತ್ತು ವೈಯಕ್ತಿಕವಾಗಿ ಇನ್ನಷ್ಟು ನಷ್ಟಕ್ಕೆ ಸಿಲುಕಿಕೊಂಡರು.

ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!

ಕಂಪನಿ ಒಳಗಿನ ಘಟಕಗಳಿಗೆ ನೀಡಿದ ಸಾಲವೇ ಮರುಪಾವತಿಸಿಲ್ಲ

ಕಂಪನಿ ಒಳಗಿನ ಘಟಕಗಳಿಗೆ ನೀಡಿದ ಸಾಲವೇ ಮರುಪಾವತಿಸಿಲ್ಲ

ತುಂಬ ಆತಂಕಕ್ಕೆ ಕಾರಣ ಆಗಿರುವುದು ಏನೆಂದರೆ, ಐಎಲ್ ಅಂಡ್ ಎಫ್ ಎಸ್ ತನ್ನದೇ ಇತರ ಘಟಕಗಳಿಗೆ ಸಾಲ ನೀಡಿದೆ. ಇಂಟರ್ ಕಾರ್ಪೊರೇಟ್ ಡೆಪಾಸಿಟ್ಸ್ ಅಂತ ಕರೆಯುವ ಅವುಗಳನ್ನು ಮರುಪಾವತಿ ಮಾಡಿಲ್ಲ. ಈಗ ಆರ್ ಬಿಐ ಮತ್ತು ಸರಕಾರದ ಎದುರು ಮತ್ತೊಂದು ಸವಾಲು ಎದುರಾಗಿದೆ. ಅದು ಅನುತ್ಪಾದಕ ಸಾಲ ಸಮಸ್ಯೆ. ಈಗ ಬ್ಯಾಂಕ್ ಮಾತ್ರವಲ್ಲ, ಬ್ಯಾಂಕಿಂಗೇತರ ಹಾಗೂ ಗೃಹ ಫೈನಾನ್ಸ್ ಕಂಪನಿಗಳ ಸಮಸ್ಯೆಗಳನ್ನೂ ನಿವಾರಿಸಬೇಕಿದೆ. ಐಎಲ್ ಅಂಡ್ ಎಫ್ ಎಸ್ ಕಂಪನಿಯ ಸ್ವರೂಪವೇ ಬಹಳ ಸಂಕೀರ್ಣವಾಗಿದೆ. ಐಎಲ್ ಅಂಡ್ ಎಫ್ ಎಸ್ ಇನ್ ಫ್ರಾಸ್ಟ್ರಕ್ಛರ್ ವ್ಯವಹಾರವೇ ಇಂದಿನ ಎಲ್ಲ ಸಮಸ್ಯೆಯ ಮೂಲವಾಗಿದೆ. ಐಎಲ್ ಅಂಡ್ ಎಫ್ ಎಸ್ ನ ಬಾಕಿ ಇರುವ ಡಿಬೆಂಚರ್ ಮತ್ತು ಕಮರ್ಷಿಯಲ್ ಪೇಪರ್ಸ್ ಕ್ರಮವಾಗಿ ಒಂದು ಮತ್ತು ಎರಡು ಪರ್ಸೆಂಟ್ ಇದೆ.

English summary
IL&FS has stolen the limelight and it can be said that there are similarities between this company and Lehman Brothers. Both were shining in their days and ignoring their miscalculations in their businesses which have led them to doomsday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X