ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?

|
Google Oneindia Kannada News

ಭಾರತ್ ಬಂದ್ ಮಾಡಿದ ಮರುದಿನ ಪೆಟ್ರೋಲ್-ಡೀಸೆಲ್ ಬೆಲೆ ಮತ್ತೊಂದು ಹೊಸ ಎತ್ತರಕ್ಕೆ ಏರಿದೆ. ಇದಕ್ಕೆ ಏನೂ ಮಾಡಲೂ ಆಗ್ತಿಲ್ಲ ಎಂದು ಬಿಜೆಪಿಯವರು ಕೈ ಅಲ್ಲಾಡಿಸುತ್ತಿದ್ದರೆ, ಇವರು ಏನೂ ಮಾಡಲು ಆಗದಿದ್ದವರು ಎಂದು ಕಾಂಗ್ರೆಸ್ ತಲೆ ಅಲ್ಲಾಡಿಸುತ್ತಿದೆ. ಈ ಮಧ್ಯೆ, ಇಂಥ ಸನ್ನಿವೇಶಕ್ಕೆ ಏನು ಕಾರಣ ಎಂದು ತಿಳಿಯದೆ ತಲೆ ಕೆಡಿಸಿಕೊಳ್ಳುತ್ತಿರುವವರು ಜನ ಸಾಮಾನ್ಯರು.

ಸೆಪ್ಟೆಂಬರ್ 11ನೇ ತಾರೀಕು ಒಂದು ಲೀಟರ್ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ರು.80.87 ಮುಟ್ಟಿದೆ. ಇನ್ನು ಮುಂಬೈನಲ್ಲಿ ರು. 88.26 ಇದೆ. ಇದೇ ದಿನಕ್ಕೆ ಸರಿಯಾಗಿ 20 ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 1998ರಲ್ಲಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರು. 23.94 ಇತ್ತು. ಅಂದರೆ ಈ ಇಪ್ಪತ್ತು ವರ್ಷಗಳಲ್ಲಿ 238% ಹೆಚ್ಚಳವಾಗಿದೆ. ಅಲ್ಲಿಗೆ ವರ್ಷಕ್ಕೆ ಸರಾಸರಿ 12% ಹೆಚ್ಚಳವಾದಂತೆ ಆಯಿತು.

ಪೆಟ್ರೋಲ್ ಬೆಲೆ ಹೆಚ್ಚಳದ ನಿಜವಾದ ಕಾರಣ, ಭಾರತ ಬಂದ್ ಯಾಕೆ ಹೇಳ್ರಣ್ಣಪೆಟ್ರೋಲ್ ಬೆಲೆ ಹೆಚ್ಚಳದ ನಿಜವಾದ ಕಾರಣ, ಭಾರತ ಬಂದ್ ಯಾಕೆ ಹೇಳ್ರಣ್ಣ

ಈ ರೀತಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಅಂತ ಬಂದಾಗ ಮೂರು ವಿಷಯ ಪ್ರಾಮುಖ್ಯ ಪಡೆಯುತ್ತದೆ. ಮೊದಲನೆಯದು ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಕಚ್ಚಾ ತೈಲ ಬೆಲೆ ಏರಿಕೆ ಆಗುತ್ತಲೇ ಇದೆ. ಎರಡನೆಯದು ಡಾಲರ್ ವಿರುದ್ಧದ ರುಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿತದ ಹಾದಿ ಹಿಡಿದಿದೆ. ಸೆಪ್ಟೆಂಬರ್ 11ನೇ ತಾರೀಕು ಡಾಲರ್ ವಿರುದ್ಧ ರುಪಾಯಿ ಮೌಲ್ಯ 72.80.

ಇದು ಡಾಲರ್ ವಿರುದ್ಧ ರುಪಾಯಿ ಸಾರ್ವಕಾಲಿಕವಾಗಿ ಕಡಿಮೆಗೆ ಕುಸಿದ ಮೌಲ್ಯ. ಮೂರನೆಯದು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸುತ್ತಿರುವ ವ್ಯಾಟ್ ಪ್ರಮಾಣ. ಅದರರ್ಥ ಬೆಲೆ ಮೇಲೆ ಹೋಗುತ್ತಿದ್ದಂತೆಯೇ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆಯೂ ಬೀಳುತ್ತದೆ.

ಮಾರಾಟ ದರವನ್ನು ನಿರ್ಧರಿಸುವ ಅಂಶಗಳಿವು

ಮಾರಾಟ ದರವನ್ನು ನಿರ್ಧರಿಸುವ ಅಂಶಗಳಿವು

ಅದು ಸರಿ ಪೆಟ್ರೋಲ್ ಅಥವಾ ಡೀಸೆಲ್ ಸಗಟು ಮಾರಾಟ ದರವನ್ನು ನಿರ್ಧರಿಸುವ ಅಂಶಗಳು ಯಾವುವು ಅನ್ನೋದನ್ನು ಮೊದಲಿಗೆ ತಿಳಿದುಕೊಳ್ಳೋಣ. ತೈಲ ಮಾರಾಟ ಕಂಪೆನಿಗಳು ರಿಫೈನರಿಗಳಿಂದ ಖರೀದಿಸುವ ಬೆಲೆ ಏನು ಅನ್ನೋದನ್ನು ಗಣನೆಗೆ ತೆಗೆದುಕೊಳ್ಳಬೇಕು. ರಿಫೈನರಿಗಳಿಂದ ತೈಲ ಮಾರಾಟ ಬೆಲೆ ನಿರ್ಧಾರ ಆಗುವುದು ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಬೆಲೆ ಮತ್ತು ರುಪಾಯಿ ಮೌಲ್ಯದ ಆಧಾರದಲ್ಲಿ. ಅದರ ಜತೆಗೆ ರಿಫೈನ್ ಆಗಿರುವ ಪೆಟ್ರೋಲ್-ಡೀಸೆಲ್ ಅನ್ನು ಬಂಕ್ ಗಳವೆರೆಗೆ ಸಾಗಾಟ ಮಾಡಬೇಕಲ್ಲ, ಅದಕ್ಕೆ ಒಂದಿಷ್ಟು ಸಾಗಾಟ ವೆಚ್ಚ ಸೇರುತ್ತದೆ. ತೈಲ ಮಾರಾಟ ಕಂಪೆನಿಗಳು ತಮ್ಮ ಪಾಲಿಗೆ ಒಂದಿಷ್ಟು ಪ್ರಮಾಣದ ಲಾಭ ಅಂತಿಟ್ಟುಕೊಂಡು ಡೀಲರ್ ಗಳಿಗೆ ಮಾರುತ್ತವೆ.

ಅಬಕಾರಿ ಸುಂಕದ ಸಿಂಹ ಪಾಲು ಕೇಂದ್ರ ಸರಕಾರಕ್ಕೆ

ಅಬಕಾರಿ ಸುಂಕದ ಸಿಂಹ ಪಾಲು ಕೇಂದ್ರ ಸರಕಾರಕ್ಕೆ

ಇಷ್ಟಕ್ಕೆ ಬೆಲೆ ನಿರ್ಧಾರ ಆಗಿಬಿಡೋದಿಲ್ಲ. ಕೇಂದ್ರ ಸರಕಾರ ನಿಗದಿ ಪಡಿಸಿರುವ ಅಬಕಾರಿ ಸುಂಕ ಸೇರಿಸಬೇಕಾಗುತ್ತದೆ (ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿಯಿಂದ ಹೊರಗಿಡಲಾಗಿದೆ). ಆ ನಂತರ ಡೀಲರ್ ಗೆ ಬರಬೇಕಾದ ಕಮಿಷನ್ ಸೇರಿಕೊಳ್ಳುತ್ತದೆ. ಕೊನೆಯದಾಗಿ ರಾಜ್ಯ ಸರಕಾರಗಳು ವ್ಯಾಟ್ ಹಾಕುತ್ತವೆ. ಆ ಪ್ರಮಾಣವು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬೇರೆಯದೇ ಇದೆ. ಅಂತಿಮವಾಗಿ ಪೆಟ್ರೋಲ್ ಪಂಪ್ ಗಳಲ್ಲಿ ಗ್ರಾಹಕರು ಪಾವತಿಸುವ ಖರೀದಿ ದರದಲ್ಲಿ ಅರ್ಧದಷ್ಟು ಹಣ ಕಚ್ಚಾ ತೈಲಕ್ಕೆ ಮತ್ತು ಅದನ್ನು ರಿಫೈನ್ ಮಾಡುವುದಕ್ಕೆ ಆಗುತ್ತದೆ. ಬಾಕಿ ಹಣ ತೆರಿಗೆ ಮತ್ತು ಕಮಿಷನ್ ರೂಪದಲ್ಲಿ ಹೋಗುತ್ತದೆ. ಸಿಂಹಪಾಲು ಅಬಕಾರಿ ಸುಂಕವಾಗಿ ಒಂದು ಲೀಟರ್ ಗೆ 19.48 ರುಪಾಯಿ ಕೇಂದ್ರ ಸರಕಾರವನ್ನು ಸೇರುತ್ತದೆ.

ಕುಮಾರಸ್ವಾಮಿ ಅವರು ಪೆಟ್ರೋಲ್ ಬೆಲೆ ಎಷ್ಟು ಇಳಿಸ್ಬಹುದು?ಕುಮಾರಸ್ವಾಮಿ ಅವರು ಪೆಟ್ರೋಲ್ ಬೆಲೆ ಎಷ್ಟು ಇಳಿಸ್ಬಹುದು?

ಒಂದು ಲೀಟರ್ ನ ಹಣ ಹೇಗೆ ಹಂಚಿಕೆಯಾಗುತ್ತದೆ?

ಒಂದು ಲೀಟರ್ ನ ಹಣ ಹೇಗೆ ಹಂಚಿಕೆಯಾಗುತ್ತದೆ?

ಇನ್ನು ರಾಜ್ಯ ಸರಕಾರಗಳ ವ್ಯಾಟ್ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಇದೆ. ಹಲವು ರಾಜ್ಯಗಳು ಕೇಂದ್ರಕ್ಕಿಂತ ಹೆಚ್ಚು ತೆರಿಗೆ ವಿಧಿಸುತ್ತಿವೆ. ಆ ನಂತರ ಡೀಲರ್ ಕಮಿಷನ್. ಒಂದು ಉದಾಹರಣೆ ಕೇಳಿ. ಸೆಪ್ಟೆಂಬರ್ 10ನೇ ತಾರೀಕು ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ ರು. 80.73. ಇದರಲ್ಲಿ ಇಂಡಿಯನ್ ಆಯಿಲ್ ಗೆ ರು. 40.45 ಹೋಗುತ್ತದೆ. ಅಬಕಾರಿ ಸುಂಕದ ರೂಪದಲ್ಲಿ ಮೋದಿ ನೇತೃತ್ವದ ಸರಕಾರಕ್ಕೆ 19.48 ರುಪಾಯಿ, ಅರವಿಂದ್ ಕೇಜ್ರಿವಾಲ್ ರ ದೆಹಲಿ ಸರಕಾರಕ್ಕೆ ವ್ಯಾಟ್ ರೂಪದಲ್ಲಿ ರು. 17.16 ಮತ್ತು ಪೆಟ್ರೋಲ್ ಪಂಪ್ ಡೀಲರ್ ಗೆ ಕಮಿಷನ್ ಆಗಿ ರು. 3.64 ದೊರೆಯುತ್ತದೆ.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಪ್ರಮಾಣ ಯುಪಿಎ ಸರಕಾರದಲ್ಲೇ ಹೆಚ್ಚಿತ್ತಾ?

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಪ್ರಮಾಣ ಯುಪಿಎ ಸರಕಾರದಲ್ಲೇ ಹೆಚ್ಚಿತ್ತಾ?

ಪೆಟ್ರೋಲ್-ಡೀಸೆಲ್ ಬೆಲೆ ಯುಪಿಎ ಸರಕಾರದ ಅವಧಿಯಲ್ಲೇ ಸಿಕ್ಕಾಪಟ್ಟೆ ಹೆಚ್ಚಿತ್ತು ಎಂದು ನರೇಂದ್ರ ಮೋದಿ ನೇತೃತ್ವದ ಸರಕಾರ ಹೇಳುತ್ತಿರುವುದರಲ್ಲಿ ಸತ್ಯ ಇದೆಯಾ? ಈ ಸಮರ್ಥನೆಗೆ ಹೌದು ಹಾಗೂ ಇಲ್ಲ ಎಂಬೆರಡೂ ಉತ್ತರ ನೀಡಬೇಕಾಗುತ್ತದೆ. ಬೆಲೆ ಏರಿಕೆಯನ್ನು ಪರ್ಸೆಂಟ್ ಲೆಕ್ಕಾಚಾರದಲ್ಲಿ ನೋಡಿದರೆ ಮೋದಿ ಸರಕಾರದ ಸಮರ್ಥನೆ ಸರಿಯಿದೆ. ಯುಪಿಎ ಸರಕಾರದ ಹತ್ತು ವರ್ಷದ ಆಡಳಿತಾವಧಿಯಲ್ಲಿ ಪೆಟ್ರೋಲ್ ಬೆಲೆ 11.2% ಏರಿಕೆ ಆಗಿದ್ದರೆ, ನಾಲ್ಕು ವರ್ಷದ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದ ಅವಧಿಯಲ್ಲಿ 3.25% ವಾರ್ಷಿಕವಾಗಿ ಹೆಚ್ಚಳವಾಗಿದೆ. ಹಾಗಂತ ಇದೇ ಸಂಪೂರ್ಣ ಚಿತ್ರಣವಲ್ಲ.

ಕಚ್ಚಾ ತೈಲ ಬೆಲೆ ಹಾಗೂ ಮಾರಾಟ ದರ ಮಧ್ಯೆ ವ್ಯತ್ಯಾಸ

ಕಚ್ಚಾ ತೈಲ ಬೆಲೆ ಹಾಗೂ ಮಾರಾಟ ದರ ಮಧ್ಯೆ ವ್ಯತ್ಯಾಸ

ಏಕೆಂದರೆ, ಇಲ್ಲಿ ಕಚ್ಚಾ ತೈಲ ಬೆಲೆ ಮಾಹಿತಿಯಿಲ್ಲ. ಏಕೆಂದರೆ ಚಿಲ್ಲರೆ ಮಾರಾಟ ಬೆಲೆ ನಿರ್ಧರಿಸುವ ಮುಖ್ಯ ಅಂಶವೇ ಇದು. 2004ರಲ್ಲಿ ಮನ್ ಮೋಹನ್ ಸಿಂಗ್ ಪ್ರಧಾನಿಯಾದಾಗ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 36 ಅಮೆರಿಕನ್ ಡಾಲರ್ ಇತ್ತು. ಅವರ ಆಡಳಿತಾವಧಿಯಲ್ಲೇ 2011ರಲ್ಲಿ 111 ಡಾಲರ್ ತಲುಪಿತು. ಆದರೂ ಚಿಲ್ಲರೆ ಮಾರಾಟ ದರ ಗರಿಷ್ಠ ರು. 76.06 ದಾಟಲಿಲ್ಲ. ಅದೂ 2013ರ ಸೆಪ್ಟೆಂಬರ್ ನಲ್ಲಿ. ಆದರೆ ಈಗ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ರು. 80.87 ಇದೆ. ಅದಕ್ಕೆ ಸಿಟ್ಟಾಗಿದ್ದೇವೆ. ಆದರೆ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 68 ಡಾಲರ್ ಮಾತ್ರ. ಕಚ್ಚಾ ತೈಲ ಬೆಲೆ ಹಾಗೂ ಚಿಲ್ಲರೆ ಮಾರಾಟ ಬೆಲೆ ಮಧ್ಯೆ ಇಷ್ಟು ವ್ಯತ್ಯಾಸ ಬರುವುದಕ್ಕೂ ಕಾರಣ ಇದೆ. 2014ರ ನವೆಂಬರ್ ನಿಂದ 2016ರ ಜನವರಿ ಮಧ್ಯೆ 9 ಬಾರಿ ಎನ್ ಡಿಎ ಸರಕಾರ ಅಬಕಾರಿ ಸುಂಕ ಹೆಚ್ಚಿಸಿದೆ.

ಮೋದಿ ನೇತೃತ್ವದ ಸರಕಾರ ಎಲ್ಲ ಮಿತಿಯನ್ನೂ ಮೀರಿದೆ: ಮನ್ ಮೋಹನ್ ಸಿಂಗ್ಮೋದಿ ನೇತೃತ್ವದ ಸರಕಾರ ಎಲ್ಲ ಮಿತಿಯನ್ನೂ ಮೀರಿದೆ: ಮನ್ ಮೋಹನ್ ಸಿಂಗ್

ಅತಿ ಹೆಚ್ಚು ಹಾಗೂ ಕಡಿಮೆ ವ್ಯಾಟ್ ವಿಧಿಸುವ ರಾಜ್ಯಗಳು

ಅತಿ ಹೆಚ್ಚು ಹಾಗೂ ಕಡಿಮೆ ವ್ಯಾಟ್ ವಿಧಿಸುವ ರಾಜ್ಯಗಳು

ಇನ್ನು ಯಾವ ರಾಜ್ಯದಲ್ಲಿ ಅತಿ ಹೆಚ್ಚು ವ್ಯಾಟ್ ವಿಧಿಸಲಾಗುತ್ತಿದೆ ಅಂತ ನೋಡಿದರೆ ಮಹಾರಾಷ್ಟ್ರ (ಶೇ 39.12), ಮಧ್ಯಪ್ರದೇಶ (ಶೇ 35.78) ಹಾಗೂ ಪಂಜಾಬ್ (ಶೇ 35.12) ಮೊದಲ ಮೂರು ಸ್ಥಾನದಲ್ಲಿವೆ. ಕಡಿಮೆ ವ್ಯಾಟ್ ಹಾಕುವ ರಾಜ್ಯಗಳಲ್ಲಿ ಗೋವಾ (ಶೇ 16.66), ಮಿಜೋರಾಂ (ಶೇ 18.88) ಹಾಗೂ ಅರುಣಾಚಲ ಪ್ರದೇಶ (ಶೇ 20) ಇದೆ. ರಾಜಸ್ತಾನ ಮತ್ತು ಆಂಧ್ರಪ್ರದೇಶ ಸರಕಾರಗಳು ವ್ಯಾಟ್ ಇಳಿಸಿ ಘೋಷಣೆ ಮಾಡಿವೆ. ಇನ್ನು ಪಶ್ಚಿಮ ಬಂಗಾಲದಲ್ಲಿ ಕೂಡ ವ್ಯಾಟ್ ಇಳಿಕೆ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆಯನ್ನು ಮಾಡಿದ್ದಾರೆ. ಕೇಂದ್ರ ಸರಕಾರ ಏಕಾಗಿ ಅಬಕಾರಿ ಸುಂಕ ಇಳಿಸುತ್ತಿಲ್ಲ ಅಂದರೆ ಇದರಿಂದ 2017-18ನೇ ಸಾಲಿನಲ್ಲಿ ಕೇಂದ್ರ ಸರಕಾರಕ್ಕೆ 2.29 ಲಕ್ಷ ಕೋಟಿ ಆದಾಯ ಬಂದಿದೆ. 2016-17ರಲ್ಲಿ 2.42 ಲಕ್ಷ ಕೋಟಿ ಆದಾಯ ಗಳಿಸಿದೆ. ಈಗ ಡಾಲರ್ ವಿರುದ್ಧ ರುಪಾಯಿ ಮೌಲ್ಯವೂ ಕುಸಿಯುತ್ತಿರುವಾಗ ಅಬಕಾರಿ ಸುಂಕ ಇಳಿಸಲು ಕೇಂದ್ರ ಸರಕಾರ ಹಿಂಜರಿಯುತ್ತಿದೆ.

ಆಂಧ್ರಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ 2 ರೂ. ಇಳಿಕೆ! ಆಂಧ್ರಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ 2 ರೂ. ಇಳಿಕೆ!

ಯಾವ ದೇಶದಲ್ಲಿ ಎಷ್ಟು ಬೆಲೆ?

ಯಾವ ದೇಶದಲ್ಲಿ ಎಷ್ಟು ಬೆಲೆ?

ಭಾರತದಲ್ಲೇ ದುಬಾರಿಯಾಗಿದೆ. ಹಾಗಿದ್ದರೆ ಸುತ್ತಮುತ್ತಲ ದೇಶಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ ಅನ್ನೋದನ್ನು ಅಲ್ಲಿನ ಕರೆನ್ಸಿ ಮೌಲ್ಯವನ್ನು ಭಾರತದ ರುಪಾಯಿಗೆ ಬದಲಿಸಿ ಲೆಕ್ಕ ಹಾಕಲಾಗಿದೆ. ಒಮ್ಮೆ ನೋಡಿಕೊಂಡು ಬಿಡಿ. ಮ್ಯಾನ್ಮಾರ್- ರು.41.99, ಪಾಕಿಸ್ತಾನ- ರು. 54.33, ಭೂತಾನ್- ರು. 63.71, ನೇಪಾಳ-ರು. 69.55, ಶ್ರೀಲಂಕಾ- ರು.70.99, ಬಾಂಗ್ಲಾದೇಶ-ರು.76.06, ಮತ್ತು ಚೀನಾ- ರು.79.60. ಇದರ ಜತೆಗೆ ಇನ್ನೊಂದು ವಿಚಾರ, ಭಾರತದ ತೈಲ ಮಾರಾಟ ಕಂಪೆನಿಗಳು ಭರ್ಜರಿ ಲಾಭವನ್ನೇ ಮಾಡುತ್ತಿವೆ. 2017-18ನೇ ಸಾಲಿನಲ್ಲಿ ಇಂಡಿಯನ್ ಆಯಿಲ್ ಕಂಪೆನಿ 21,346 ಕೋಟಿ ರುಪಾಯಿ ಲಾಭವನ್ನು ಘೋಷಣೆ ಮಾಡಿದೆ. ಅದೇ ಕಂಪೆನಿ 2016-17ನೇ ಸಾಲಿನಲ್ಲಿ 19,106 ಕೋಟಿ ಘೋಷಿಸಿತ್ತು. ಪೆಟ್ರೋಲ್-ಡೀಸೆಲ್ ಜಿಎಸ್ ಟಿ ವ್ಯಾಪ್ತಿಯೊಳಗೆ ಬಂದರೆ ಬೆಲೆ ಕಡಿಮೆ ಆಗುತ್ತದೆ. ಆದರೆ ದೊಡ್ಡ ಆದಾಯವನ್ನು ಸರಕಾರಗಳನ್ನು ಬಿಟ್ಟುಕೊಡಲ್ಲ. ಒಂದು ವೇಳೆ ಜಿಎಸ್ ಟಿ ಪೆಟ್ರೋಲ್ ತಂದು, ಶೇ 28ರ ಸ್ಲ್ಯಾಬ್ ಗೆ ತಂದರೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರು.57 ಇರುತ್ತದೆ, ಅಷ್ಟೇ.

English summary
Here is the analysis about factors which determine price of petrol. Why governments cannot agree to reduce VAT or excise duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X