• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್ ತೆರಿಗೆಯಿಂದ ಕುಸಿದ ಮದ್ಯದ ಬೇಡಿಕೆ: ಈ ರಾಜ್ಯದಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಸಿದ್ಧತೆ

|

ಕೊಲ್ಕತ್ತಾ, ಆಗಸ್ಟ್‌ 20: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್ ಸಡಿಲಿಕೆ ಬಳಿಕ ಜನರು ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದರು. ಪ್ರಮುಖ ಆದಾಯಗಳೇ ಕುಸಿತ ಕಂಡಿದ್ದ ಪರಿಣಾಮ ರಾಜ್ಯಗಳು ಮದ್ಯದ ಮೇಲೆ ಹೆಚ್ಚುವರಿ ಕೊರೊನಾ ತೆರಿಗೆಯನ್ನು ವಿಧಿಸಿದವು.

ಆದರೆ ಈ ಕೊರೊನಾ ತೆರಿಗೆಯೇ ಮದ್ಯದ ಬೇಡಿಕೆ ಕಡಿಮೆಯಾಗುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳವು ಲಿಕ್ಕರ್ ಮೇಲಿನ ಕೊರೊನಾ ತೆರಿಗೆ ತಗ್ಗಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್‌ನಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ.

ಶೀಘ್ರ ದೆಹಲಿಯ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಮದ್ಯ ಲಭ್ಯ

ಕಳೆದ ಕೆಲ ತಿಂಗಳಿನಿಂದ ಪಶ್ಚಿಮ ಬಂಗಾಳದಲ್ಲಿ ಮದ್ಯದ ಮಾರಾಟದಲ್ಲಿ ಇಳಿಕೆಗೊಂಡಿದೆ. ಹೀಗಾಗಿ ಹೆಚ್ಚುವರಿ ತೆರಿಗೆಯನ್ನು ತೆಗೆದು ಹಾಕಿದ್ದಲ್ಲಿ ಬಹುತೇಕ ಬ್ರ್ಯಾಂಡ್‌ಗಳ ಬೆಲೆ ಇಳಿಕೆಯಾಗಲಿದೆ ಎಂಬುದು ಮದ್ಯ ತಯಾರಿಕ ವಲಯದ ಅಭಿಪ್ರಾಯವಾಗಿದೆ.

ಪಶ್ಚಿಮ ಬಂಗಾಳವು 1.41 ಮಿಲಿಯನ್ (1.4 ಕೋಟಿ) ಕೇಸಸ್‌ಗಳ ಮಾರಾಟವನ್ನು ಹೊಂದಿದ್ದು, ಇದರಲ್ಲಿ ವಿಸ್ಕಿ, ರಮ್ ಮತ್ತು ವೋಡ್ಕಾ ಸೇರಿದೆ. ಜೊತೆಗೆ ವಾರ್ಷಿಕ 8 ಮಿಲಿಯನ್ ಕೇಸಸ್ ಬಿಯರ್ ಮಾರಾಟವಾಗುತ್ತದೆ.

English summary
West Bengal government has decided to discontinue the additional 30% tax on liquor. Popularly known as COVID tax from September and replace it with a slab based tax depending on product value.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X