ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಟಿಯಂ ವ್ಯಾಲೆಟ್ ಗೂ ಪೇಮೆಂಟ್ ಬ್ಯಾಂಕಿಗೂ ಏನು ವ್ಯತ್ಯಾಸ?

|
Google Oneindia Kannada News

ಬೆಂಗಳೂರು, ಮೇ 31 : ನೀವು ಪೆಟಿಎಂ ಹೊಂದಿದ್ದರೇ ನಿಮ್ಮ ದಿನನಿತ್ಯದ ಅಗತ್ಯತೆಗಳನ್ನು ನಗದು ಹಣದಿಂದಲೇ ಪೂರೈಸಿಕೊಳ್ಳುವ ಅನಿವಾರ್ಯತೆ ಇಲ್ಲ. ಪೆಟಿಎಂ ಮೂಲಕ ನೀವು ಬಿಲ್ ಗಳನ್ನು ಪಾವತಿಸಬಹುದಾಗಿದೆ.

ಗ್ರಾಹಕರಿಗೆ ಇನ್ನೂ ಪೇಮೆಂಟ್ ಪಾವತಿಸಲು ಸುಲಭವಾಗಲೆಂದು ಪೇಟಿಯಂ, ಪೇಮೆಂಟ್ ಬ್ಯಾಂಕ್‌ ಪರಿಚಯಿಸಿದೆ. ಇದು ಪೂರ್ಣ ಪ್ರಮಾಣದ ವಾಣಿಜ್ಯ ಬ್ಯಾಂಕ್‌ ಅಲ್ಲ. ಪೇಮೆಂಟ್ ಬ್ಯಾಂಕ್‌ ವ್ಯವಸ್ಥೆಯು, ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿಯಷ್ಟೇ ನಡೆಸುವಂತಹುದು.[ಅಸ್ತಿತ್ವಕ್ಕೆ ಬಂದ ಪೇಟಿಎಂ ಬ್ಯಾಂಕ್: ನೀವು ತಿಳಿಯಬೇಕಾದ 5 ವಿಚಾರ]

WEDNESDAY COMBAT: Paytm Wallet Vs Paytm Payments Bank, All That You Should Know

ಇಲ್ಲಿ ಬೇಡಿಕೆ ಆಧರಿಸಿದ ಠೇವಣಿ ಸಂಗ್ರಹ, ಹಣ ಜಮಾ ಸೇವೆಗಳು, ಇಂಟರ್ನೆಟ್ ಬ್ಯಾಂಕಿಂಗ್ ಮೊದಲಾದ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿರುತ್ತವೆ. ಪೇಟಿಯಂ ಪೇಮೆಂಟ್ ಬ್ಯಾಂಕಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಪೇಟಿಯಂ ಪೇಮೆಂಟ್ ಬ್ಯಾಂಕಿನ ಮಾಹಿತಿಯನ್ನು ಸವಿಸ್ತಾರವಾಗಿ ಈ ಕೆಳಗೆ ನೀಡಲಾಗಿದೆ.

Paytm Wallet vs Paytm Payment Bank:

* ಪೇಮೆಂಟ್ ಬ್ಯಾಂಕ್‌ ವ್ಯವಸ್ಥೆಯು, ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿಯಷ್ಟೇ ನಡೆಸುವಂತಹುದು. ಗ್ರಾಹಕರಿಗೆ ಉಳಿತಾಯ ಮತ್ತು ಚಾಲ್ತಿ ಖಾತೆ ತೆರೆಯಲು ಅವಕಾಶವಿದ್ದು, ಗರಿಷ್ಠ 1 ಲಕ್ಷದ ವರೆಗೆ ಠೇವಣಿ ಇಡಬಹುದು.

* ಮೊಬೈಲ್‌ ಬ್ಯಾಂಕಿಂಗ್‌, ಆನ್‌ಲೈನ್‌ ಬ್ಯಾಂಕಿಂಗ್‌, ಎಟಿಎಂ ಹಾಗೂ ಡೆಬಿಟ್ ಕಾರ್ಡ್‌ ಸೇವೆಯನ್ನು ಈ  ಬ್ಯಾಂಕ್‌ಗಳು ಒದಗಿಸುತ್ತವೆ. ಆದರೆ, ಸಾಲ ನೀಡುವುದು ಅಥವಾ ಕ್ರೆಡಿಟ್‌ ಕಾರ್ಡ್ ಸೌಲಭ್ಯ ದೊರೆಯುವುದಿಲ್ಲ.

ಇದಕ್ಕೆ ಗ್ರಾಹಕರು virtual debit card ಪಡೆದು ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು. ಹಾಗೂ ಯಾವುದೇ ಸಮಯದಲ್ಲಾದರೂ ವಿತ್ ಡ್ರಾ ಮಾಡಿಕೊಳ್ಳಬಹುದು.

* ಇನ್ನೊಂದು ಪೇಮೆಂಟ್ ವಾಲೆಟ್ ಪಡೆಯಲು ಅವಕಾಶ ವಿದೆ. KYC ವಾಲೆಟ್ ನಲ್ಲಿ ನೀವು ಮೊದಲಿಗೆ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ರಿಜಿಸ್ಟರ್ ಮಾಡಿ. ನಂತರ ಪೇಟಿಎಂ ನೆರವು ಪಡೆದುಕೊಂಡು ಬಿಲ್ ಪಾವತಿಸಬಹುದು.

ಅಥವಾ ನಿಮ್ಮ ದಿನನಿತ್ಯಕ್ಕೆ ಬಳಸಿಕೊಳ್ಳಬಹುದು. ಇನ್ನೊಂದು ಮುಖ್ಯವಾದ ಅಂಶವೆಂದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ KYC ವ್ಯಾಲೆಟ್ ನಿಂದ ಹಣ ವರ್ಗಾವಣೆ ಮಾಡಬಹುದು.

* ಪೇಮೆಂಟ್ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿನ ಠೇವಣಿಗೆ ಶೇ. 4ರಷ್ಟು ಬಡ್ಡಿ ನಿಗದಿಪಡಿಸಿದೆ.
* ಪೇಟಿಯಂ ವ್ಯಾಲೆಟ್ ನಿಂದ ಹಣ ವರ್ಗಾವಣೆ ಮಾಡಿದರೆ ಶೇ 2ರಷ್ಟು ಶುಲ್ಕ ವಿಧಿಸಲಾಗುತ್ತದೆ. ಆದರೆ, ಈ ಪೇಮೆಂಟ್ ಬ್ಯಾಂಕಿಂಗ್ ನಲ್ಲಿ ಯಾವುದೇ ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ.

ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪೇಟಿಯಂ ವ್ಯಾಲೆಟ್ ಸಹಾಯದಿಂದ ಪೇಮೆಂಟ್ ಬ್ಯಾಂಕ್‌ ಬಳಸಿ ಉತ್ತಮ ಲಾಭಗಳನ್ನು ಪಡೆದುಕೊಳ್ಳಿ.'Oneindia Coupons'.

English summary
Being India's largest mobile payments and commerce platform, 'Paytm' provides an easy access to electronic payment solutions. So far every 'Paytm' user used 'Paytm Wallet' as a digital tool to either transfer funds or to purchase something in its store, followed by recharge and other payment options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X