ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಬರ್‌ ಜೊತೆ ವಿಲೀನ: ಓಲಾ ಸಿಇಒ ಹೇಳಿದ್ದೇನು?

|
Google Oneindia Kannada News

ನವದೆಹಲಿ,ಜುಲೈ. 30: ಓಲಾ ಸಿಇಒ ಭವಿಶ್ ಅಗರ್ವಾಲ್ ಅವರು ಉಬರ್ ಜೊತೆಗಿನ ವಿಲೀನ ಮಾತುಕತೆಗಳ ಮಾಧ್ಯಮ ವರದಿಗಳನ್ನು ನಿರಾಕರಿಸಿದ್ದಾರೆ.

ಈ ಬಗ್ಗೆ ಭವಿಶ್‌ ಅಗರ್ವಾಲ್ ಅವರು, "ಓಲಾ ಬಹಳ ಲಾಭದಾಯಕ ಮತ್ತು ಉತ್ತಮವಾಗಿ ಬೆಳೆಯುತ್ತಿದೆ. ಅಮೇರಿಕನ್ ರೈಡ್-ಹೇಲಿಂಗ್ ಸಂಸ್ಥೆ ಉಬರ್‌ನೊಂದಿಗೆ ವಿಲೀನ ಮಾತುಕತೆಗಳ ವರದಿಗಳು ಸಂಪೂರ್ಣ ಸುಳ್ಳು ," ಎಂದು ಟ್ವೀಟ್ ಮಾಡಿದ್ದಾರೆ.

ಓಲಾ ಮತ್ತು ಉಬರ್ ಸಂಭಾವ್ಯ ವಿಲೀನಕ್ಕೆ ಮುಂದಾಗುತ್ತವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿತ್ತು. ಎಕನಾಮಿಕ್ ಟೈಮ್ಸ್ ವರದಿಯನ್ನು ಉಲ್ಲೇಖಿಸಿ ಈ ವಿಷಯದ ಬಗ್ಗೆ ಮೂಲಗಳ ವರದಿಯನ್ನು ಉಲ್ಲೇಖಿಸಿತ್ತು. ಎನ್‌ಡಿಟಿವಿ ಕೂಡ ರಾಯಿಟರ್ಸ್ ವರದಿಯನ್ನು ಪ್ರಕಟಿಸಿತ್ತು.

We Will Never Merge with uber: Bhavish Aggarwal

ಈ ಬಗ್ಗೆ ಉಬರ್ ಕೂಡ ವಿಲೀನ ಮಾತುಕತೆಯ ವರದಿಯನ್ನು ನಿರಾಕರಿಸಿದೆ. ಆ ವರದಿಯು ತಪ್ಪಾಗಿದೆ. ನಾವು ಓಲಾ ಜೊತೆ ವಿಲೀನದ ಮಾತುಕತೆ ನಡೆಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಎರಡು ಕಂಪನಿಗಳು ತೀವ್ರ ಸ್ಪರ್ಧಾತ್ಮಕವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿವೆ. ಎರಡು ಶತಕೋಟಿ ಆದಾಯವನ್ನು ಇದರಿಂದ ಗಳಿಸಿವೆ.

ಉಬರ್ ತನ್ನ ಸ್ಥಳೀಯ ಆಹಾರ ವಿತರಣಾ ವ್ಯವಹಾರವಾದ ಉಬರ್ ಈಟ್ಸ್ ಅನ್ನು ಜನವರಿ 2020ರಲ್ಲಿ ಜೊಮಾಟೊಗೆ ಮಾರಾಟ ಮಾಡಿತ್ತು. ಅಲ್ಲದೆ ಓಲಾ ತನ್ನ ತರಕಾರಿ ವಿತರಣಾ ವ್ಯವಹಾರವನ್ನು ಸ್ಥಗಿತಗೊಳಿಸಿತ್ತು. ಈಗ ಓಲಾ ತನ್ನ ಎಲೆಕ್ಟ್ರಿಕ್ ವಾಹನ ಉದ್ಯಮವಾದ ಓಲಾ ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿದೆ.

We Will Never Merge with uber: Bhavish Aggarwal

ಓಲಾದ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಐಪಿಒ ಈ ವರ್ಷ ಅಥವಾ 2023 ರ ಆರಂಭದಲ್ಲಿ ಸಂಭವಿಸುವ ಸಾಧ್ಯತೆಯಿದೆ. ಈ ತಿಂಗಳ ಆರಂಭದಲ್ಲಿ ಓಲಾ ಉದ್ಯೋಗಗಳನ್ನು ಕಡಿತಗೊಳಿಸಿತ್ತು. ಈ ವರ್ಷದ ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಸಹ ನಿಲ್ಲಿಸಿತ್ತು ಎಂದು ವರದಿಯಾಗಿದೆ. ವರದಿಯ ಪ್ರಕಾರ ಓಲಾ ಸುಮಾರು 500 ಉದ್ಯೋಗಿಗಳನ್ನು ವಿವಿಧ ಇಲಾಖೆಗಳಲ್ಲಿ ಕಾರ್ಯಕ್ಷಮತೆಯ ಆಧಾರದ ಮೇಲೆ ವಜಾಗೊಳಿಸಿದೆ. ಹಣಕಾಸಿನ ಸಮಸ್ಯೆಗಳ ಕಾರಣ ಅವರ ಕಾರ್ಯಾಚರಣೆಗಳನ್ನು ಸೀಮಿತಗೊಳಿಸಿದೆ.

ಓಲಾ ಕಂಪನಿಯು ಇತ್ತೀಚೆಗೆ ತನ್ನ ಉಪಯೋಗಿಸಿ ವಾಹನ ಮಾರಾಟ ವ್ಯವಹಾರ ಓಲಾ ಕಾರ್ಸ್ ಅನ್ನು ಮುಚ್ಚಿದೆ. ಕಾರಣ ಇದು ಸುಮಾರು ಒಂದು ವರ್ಷವಾದರೂ ಹೆಚ್ಚಿನ ಆದಾಯ ಮತ್ತು ವ್ಯವಹಾರವನ್ನು ಗಳಿಸಿರಲಿಲ್ಲ.

Recommended Video

ಆತುರ ಪಟ್ಟು ಶುಬ್ಮನ್ ಗಿಲ್ ವಿಚಾರದಲ್ಲಿ ಮಾಡಿದ ಎಡವಟ್ಟಿನಿಂದ RCB ಗೆ ಭಾರಿ ಅವಮಾನ | *Cricket | OneIndia Kannada

English summary
Ola CEO Bhavish Agarwal has denied media reports of merger talks with Uber.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X