ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸಾವಿರಾರು ರೈತರಿಗೆ ವಾಲ್ಮಾರ್ಟ್‌ನಿಂದ ಲಕ್ಷಾಂತರ ಡಾಲರ್ ನೆರವು

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಭಾರತದಲ್ಲಿ ರೈತರ ಜೀವನೋಪಾಯವನ್ನು ಸುಧಾರಣೆ ಮಾಡುವ ಬದ್ಧತೆಯನ್ನು ಮುಂದುವರಿಸಿರುವ ವಾಲ್‍ಮಾರ್ಟ್ ಫೌಂಡೇಶನ್, ಸಣ್ಣ ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ಲಭ್ಯವಾಗುವಂತೆ ಮಾಡುವ ಡಿಜಿಟಲ್ ಗ್ರೀನ್ ಮತ್ತು ಟೆಕ್ನೋಸರ್ವ್ ಯೋಜನೆಗೆ 4.8 ದಶಲಕ್ಷ ಡಾಲರ್ (ಸುಮಾರು 34 ಕೋಟಿ ರೂಪಾಯಿಗಳು) ಅನುದಾನವನ್ನು ಘೋಷಣೆ ಮಾಡಿದೆ.

ಈ ಯೋಜನೆಯಲ್ಲಿ ಸಣ್ಣ ರೈತರಿಗೆ ಸುಸ್ಥಿರ ಕೃಷಿ ಪದ್ಧತಿಗಳ ತರಬೇತಿ, ಮಾರುಕಟ್ಟೆಗಳನ್ನು ಹೊಂದುವುದು, ರೈತ ಉತ್ಪಾದಕರ ಸಂಘಗಳಿಗೆ ಕೌಶಲ್ಯ ಮತ್ತು ಸಾಮಥ್ರ್ಯ ವೃದ್ಧಿಯಂತಹ ತರಬೇತಿಗಳನ್ನು ನೀಡಲಾಗುತ್ತದೆ.

2018 ರ ಸೆಪ್ಟಂಬರ್ ನಲ್ಲಿ ವಾಲ್‍ಮಾರ್ಟ್ ಭಾರತದ ಸಣ್ಣ ರೈತರ ಶ್ರೇಯೋಭಿವೃದ್ಧಿಗೆ ಮತ್ತು ಅವರ ಜೀವನೋಪಾಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ 25 ದಶಲಕ್ಷ ಡಾಲರ್ (ಸುಮಾರು 180 ಕೋಟಿ ರೂಪಾಯಿ) ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು.

ದೊಡ್ಡ ಡೀಲ್ : ವಾಲ್ಮಾರ್ಟ್ ಪಾಲಾದ ಬೆಂಗಳೂರಿನ ಫ್ಲಿಪ್ ಕಾರ್ಟ್ದೊಡ್ಡ ಡೀಲ್ : ವಾಲ್ಮಾರ್ಟ್ ಪಾಲಾದ ಬೆಂಗಳೂರಿನ ಫ್ಲಿಪ್ ಕಾರ್ಟ್

ಈ ಬದ್ಧತೆಯ ಭಾಗವಾಗಿ ಇಂದು ಫೌಂಡೇಶನ್ 34 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಣೆ ಮಾಡಿದೆ. ಈ ಬದ್ಧತೆಯ ಹೊರತಾಗಿ ವಾಲ್‍ಮಾರ್ಟ್ ಇಂಡಿಯಾ 2023 ರ ವೇಳೆಗೆ ರೈತರು ಬೆಳೆದ ಶೇ.25 ರಷ್ಟು ಬೆಳೆ/ಉತ್ಪನ್ನಗಳನ್ನು ತನ್ನ ಕ್ಯಾಶ್ & ಕ್ಯಾರಿ ಮಳಿಗೆಗಳಲ್ಲಿ ಮಾರಾಟ ಮಾಡುವ ಯೋಜನೆಯನ್ನೂ ಘೋಷಣೆ ಮಾಡಿತು.

ರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಮಾಣ ಕಡಿಮೆ: ಕೃಷಿ ಇಲಾಖೆರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಮಾಣ ಕಡಿಮೆ: ಕೃಷಿ ಇಲಾಖೆ

ಇಂದಿನ ಈ ಘೋಷಣೆಯೊಂದಿಗೆ ವಾಲ್‍ಮಾರ್ಟ್ ಫೌಂಡೇಶನ್ ತನ್ನ 25 ದಶಲಕ್ಷ ಡಾಲರ್‍ಗಳ ಅನುದಾನದ ಗುರಿಯ ಪೈಕಿ 10 ದಶಲಕ್ಷ ಡಾಲರ್ (ಸುಮಾರು 71 ಕೋಟಿ ರೂಪಾಯಿ) ಅನುದಾನವನ್ನು ಬಿಡುಗಡೆ ಮಾಡಿದಂತಾಗುತ್ತದೆ. ಈ ಅನುದಾನವು 29,030 ರೈತ ಮಹಿಳೆಯರೂ ಸೇರಿದಂತೆ 81,000 ಕ್ಕೂ ಅಧಿಕ ರೈತರಿಗೆ ಅರ್ಥಪೂರ್ಣವಾದ ಪರಿಣಾಮ ಬೀರುವ ನಿರೀಕ್ಷೆ ಇದೆ. ಪ್ರಮುಖವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳ ರೈತ ಮಹಿಳೆಯರಿಗೆ ಪ್ರಯೋಜನವಾಗಲಿದೆ.

ಉದ್ಯಮ ತೆರೆಯುವ ಅವಕಾಶಗಳು ಸೃಷ್ಟಿ

ಉದ್ಯಮ ತೆರೆಯುವ ಅವಕಾಶಗಳು ಸೃಷ್ಟಿ

ವಾಲ್‍ಮಾರ್ಟ್ ಫೌಂಡೇಶನ್ ಸಣ್ಣ ರೈತರು ತಮ್ಮ ಉತ್ಪನ್ನಗಳ ಸುಸ್ಥಿರ ಬೆಳವಣಿಗೆ ಮತ್ತು ಹಣಕಾಸಿನ ಮುಗ್ಗಟ್ಟು, ಮೂಲಸೌಕರ್ಯ ಹಾಗೂ ಮಾರುಕಟ್ಟೆಯ ಅಲಭ್ಯತೆಯಂತ ಹಲವಾರು ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸವಾಲುಗಳನ್ನು ಒಂದು ವ್ಯವಸ್ಥಿತವಾದ ರೀತಿಯಲ್ಲಿ ಎದುರಿಸಲು ಅಥವಾ ಈ ಸಣ್ಣ ರೈತರಿಗೆ ಎದುರಾಗುವ ಅಡ್ಡಿ ಆತಂಕಗಳನ್ನು ದೂರ ಮಾಡುವ ನಿಟ್ಟಿನಲ್ಲಿ ವಾಲ್‍ಮಾಟ್.ಒಆರ್ಜಿ ಕೆಲಸ ಮಾಡುತ್ತಿದೆ. ಮೆಕ್ಸಿಕೋ ಮತ್ತು ಸೆಂಟ್ರಲ್ ಅಮೇರಿಕಾಗಳಲ್ಲಿನ ರೈತರು ಮಾರುಕಟ್ಟೆ ವ್ಯವಸ್ಥೆಗಳನ್ನು ಪಡೆದುಕೊಂಡು ತಮ್ಮ ಜೀವನೋಪಾಯಗಳನ್ನು ಸುಧಾರಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ಉದ್ಯಮ ತೆರೆಯುವ ಅವಕಾಶಗಳನ್ನೂ ಸೃಷ್ಟಿ ಮಾಡುವ ಹಂತಕ್ಕೆ ಬೆಳೆದಿದ್ದಾರೆ.

ಡಿಜಿಟಲ್ ಗ್ರೀನ್‍ಗೆ ವಾಲ್‍ಮಾರ್ಟ್ ಫೌಂಡೇಶನ್

ಡಿಜಿಟಲ್ ಗ್ರೀನ್‍ಗೆ ವಾಲ್‍ಮಾರ್ಟ್ ಫೌಂಡೇಶನ್

ಡಿಜಿಟಲ್ ಗ್ರೀನ್‍ಗೆ ವಾಲ್‍ಮಾರ್ಟ್ ಫೌಂಡೇಶನ್ 1.3 ದಶಲಕ್ಷ ಡಾಲರ್ (ಸುಮಾರು 9 ಕೋಟಿ ರೂಪಾಯಿ) ನೀಡಿರುವ ಅನುದಾನದಿಂದ 'ಫಾರ್ಮ್‍ಸ್ಟಾಕ್' ಅಭಿವೃದ್ಧಿಗೆ ನೆರವಾಗಲಿದೆ. ಇದರಿಂದ ಆಂಧ್ರಪ್ರದೇಶದ ರೈತರ ಜೀವನೋಪಾಯಗಳ ಮಟ್ಟವನ್ನು ಹೆಚ್ಚಿಸುವಂತಹ ಸೇವೆಗಳನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಅಂದರೆ, ಕಡಿಮೆ ಆದಾಯ ಇರುವ ರೈತ ಉತ್ಪಾದನಾ ಸಂಘಗಳಿಗೆ ಇದರ ನೆರವು ಸಿಗಲಿದೆ.

ಡಿಜಿಟಲ್ ಗ್ರೀನ್‍ನ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ವಿನಯ್‍ಕುಮಾರ್ ಅವರು ಮಾತನಾಡಿ, "ವಾಲ್‍ಮಾರ್ಟ್ ಫೌಂಡೇಶನ್‍ನ ಈ ಬೆಂಬಲದಿಂದ ದೇಶದ ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ರೈತರ ಶ್ರೇಯೋಭಿವೃದ್ಧಿಯ ನಮ್ಮ ಗುರಿ ತಲುಪುವ ಹೆಜ್ಜೆಯನ್ನು ಕ್ಷಿಪ್ರಗತಿಯಲ್ಲಿಡಲು ಸಾಧ್ಯವಾಗಲಿದೆ. ಸಣ್ಣ ರೈತರ ಜೀವನೋಪಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅವರೊಂದಿಗೆ ಮತ್ತು ಅವರ ಸಮುದಾಯದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಹೆಮ್ಮೆ ಎನಿಸುತ್ತಿದೆ. ಈ ನಿಟ್ಟಿನಲ್ಲಿ ನಾವು ಪೌಷ್ಠಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು, ಹವಾಮಾನ ಮತ್ತು ಪಾಲ್ಗೊಳ್ಳುವಿಕೆ ವಿಚಾರದಲ್ಲಿ ರೈತರೊಂದಿಗೆ ಕೆಲಸ ಮಾಡಲಿದ್ದೇವೆ" ಎಂದು ತಿಳಿಸಿದರು.

ಟೆಕ್ನೋಸರ್ವ್ 3.5 ದಶಲಕ್ಷ ಡಾಲರ್ ಅನುದಾನ

ಟೆಕ್ನೋಸರ್ವ್ 3.5 ದಶಲಕ್ಷ ಡಾಲರ್ ಅನುದಾನ

ಟೆಕ್ನೋಸರ್ವ್ 3.5 ದಶಲಕ್ಷ ಡಾಲರ್ ಅನುದಾನ (25.2 ಕೋಟಿ ರೂಪಾಯಿ)ವನ್ನು 20 ಎಫ್‍ಪಿಒಗಳ ಅಭಿವೃದ್ಧಿ ಮತ್ತು ತರಬೇತಿಗಾಗಿ ಮತ್ತು ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸುವುದು ಹಾಗೂ ಅವುಗಳಿಗೆ ಮಾರುಕಟ್ಟೆಯನ್ನು ಒದಗಿಸಲು ಬಳಸಿಕೊಳ್ಳಲಿದೆ. ತಮ್ಮ ಮಾರುಕಟ್ಟೆಯ ಆಯ್ಕೆಗಳನ್ನು ವಿಸ್ತರಣೆ ಮಾಡಿಕೊಳ್ಳಲು ರೈತ ಮಹಿಳೆಯರಿಗೆ ಸೂಕ್ತ ತರಬೇತಿಯನ್ನು ನೀಡಲು ಆದ್ಯತೆ ನೀಡಲಾಗುತ್ತದೆ. ಅದೇ ರೀತಿ ಸಣ್ಣ ರೈತರು ಸುಸ್ಥಿರ ಕೃಷಿ ಪದ್ಧತಿಗಳನ್ನು ಅನುಸರಿಸಲು ಬೆಂಬಲವಾಗಿ ನಿಲ್ಲಲಿದೆ. ಈ ಹಣದ ನೆರವಿನಿಂದ ಟೆಕ್ನೋಸರ್ವ್ ಸುಮಾರು 25,000 ರೈತರ ಆದಾಯವನ್ನು ಹೆಚ್ಚಿಸಲಿದೆ(ಈ ಪೈಕಿ ಶೇ.50 ರಷ್ಟು ರೈತ ಮಹಿಳೆಯರಿರಲಿದ್ದಾರೆ).

ಟೆಕ್ನೋಸರ್ವ್‍ನ ಸಿಇಒ ವಿಲಿಯಂ ವಾರ್ಷೌವರ್ ಮಾತನಾಡಿ, "ರೈತರ ಆದಾಯವನ್ನು ಹೆಚ್ಚಿಸುವುದು ಒಂದು ಶಕ್ತಿಶಾಲಿ ಕ್ರಮವಾಗಿದೆ. ಎಫ್‍ಪಿಒ ಮಟ್ಟದಲ್ಲಿ ಸುಸ್ಥಿರ ಕೃಷಿ ಪದ್ಧತಿಗಳು, ಮಾರುಕಟ್ಟೆ ಸಂಪರ್ಕ ಮತ್ತು ಪರಿಣಾಮಕಾರಿ ನಿರ್ವಹಣೆಯಂತಹ ಕ್ರಮಗಳು ಸಣ್ಣ ರೈತರ ಪಾಲ್ಗೊಳ್ಳುವಿಕೆ, ಆದಾಯ ಮತ್ತು ಜೀವನೋಪಾಯಗಳನ್ನು ದೇಶಾದ್ಯಂತ ಹೆಚ್ಚಿಸಲಿವೆ. ವಾಲ್‍ಮಾರ್ಟ್ ಫೌಂಡೇಶನ್‍ನ ಬೆಂಬಲದೊಂದಿಗೆ ದೇಶದ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವಲ್ಲಿ ಹೆಜ್ಜೆ ಇಡುತ್ತಿದ್ದೇವೆ" ಎಂದು ಹೇಳಿದರು.

ಕೃಷಿ ಪದ್ಧತಿಗಳ ಬಲವರ್ಧನೆ

ಕೃಷಿ ಪದ್ಧತಿಗಳ ಬಲವರ್ಧನೆ

'ಕೃಷಿ ಪದ್ಧತಿಗಳ ಬಲವರ್ಧನೆ: ಸಣ್ಣ ರೈತರಿಗೆ ಬೆಂಬಲ ಮತ್ತು ಆದಾಯ ಹೆಚ್ಚಳದ ಮಾರ್ಗೋಪಾಯಗಳು' ಕುರಿತಾದ ಸಮ್ಮೇಳನದಲ್ಲಿ ಈ ಅನುದಾನದ ಘೋಷಣೆ ಮಾಡಲಾಯಿತು. ಈ ಸಮ್ಮೇಳನವನ್ನು ನವದೆಹಲಿಯಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಮಹಾ ಒಕ್ಕೂಟ (ಎಫ್‍ಐಸಿಸಿಐ) ಮತ್ತು ವಾಲ್‍ಮಾರ್ಟ್.ಒಆರ್‍ಜಿ ಜಂಟಿಯಾಗಿ ಆಯೋಜಿಸಿದ್ದವು. ಸರ್ಕಾರ, ವಾಣಿಜ್ಯ ಸಂಘಟನೆಗಳು, ಲಾಭರಹಿತ ಸಂಸ್ಥೆಗಳು, ಪೂರೈಕೆದಾರರು, ರೀಟೇಲರ್‍ಗಳು ಮತ್ತು ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಸಮ್ಮೇಳನವನ್ನು ಕೇಂದ್ರ ಸರ್ಕಾರದ ಆಹಾರ ಮತ್ತು ಸಂಸ್ಕರಣೆ ಇಲಾಖೆ ರಾಜ್ಯ ಸಚಿವ ರಾಮೇಶ್ವರ್ ತೆಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಭಾರತೀಯ ರೈತ ಸಮುದಾಯದ ಉನ್ನತಿಗಾಗಿ ವಾಲ್‍ಮಾರ್ಟ್ 180 ಕೋಟಿ ರೂಪಾಯಿಗಳ ಅನುದಾನವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಕೃಷಿ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದ ಈ ಕಂಪನಿ ಪ್ರಮುಖ ಪಾತ್ರ ವಹಿಸುತ್ತಿದೆ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ದೂರದೃಷ್ಟಿಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ'' ಎಂದು ಅಭಿಪ್ರಾಯಪಟ್ಟರು.


ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ(ಬೆಳೆ & ಐಟಿ) ಮತ್ತು ಪಿಎಂ ಕಿಸಾನ್‍ನ ಸಿಇಒ ವಿವೇಕ್ ಅಗರ್‍ವಾಲ್ ಅವರು ಮಾತನಾಡಿ, "ರೈತರ ಬೆಳೆಗಳಿಗೆ ಉತ್ತಮ ಬೆಲೆಗಳು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಕೈಜೋಡಿಸಬೇಕು ಮತ್ತು ದೇಶಾದ್ಯಂತ ಮಾರುಕಟ್ಟೆಗಳು ರೈತರಿಗೆ ಲಭ್ಯವಾಗುವಂತೆ ಮಾಡಬೇಕು. ಈ ದಿಸೆಯಲ್ಲಿ ವಾಲ್‍ಮಾರ್ಟ್‍ನ ಅನುದಾನವು ಕೃಷಿಕ ಸಮುದಾಯಕ್ಕೆ ಅತ್ಯಂತ ಪ್ರಮುಖವಾಗಿ ನೆರವಾಗಲಿದೆ'' ಎಂದರು.

English summary
Walmart Foundation, the philanthropy arm of World's largest reatiler is contributing $25 million over five years to improve farmers’ livelihoods in India with new technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X