ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಂಜಾಕಾರ್ಟ್‌ನಲ್ಲಿ ವಾಲ್ಮಾರ್ಟ್ -ಫ್ಲಿಪ್ ಕಾರ್ಟ್ ಗ್ರೂಪ್ ಹೂಡಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಭಾರತದಲ್ಲಿ ತಾಜಾ ಉತ್ಪನ್ನಗಳ ಮಾರುಕಟ್ಟೆಯಾಗಿರುವ ನಿಂಜಾಮಾರ್ಟ್ ನಲ್ಲಿವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಸಮೂಹ ಸಂಸ್ಥೆಗಳು ಹೊಸದಾಗಿ ಹೂಡಿಕೆ ಮಾಡಿವೆ. ಈ ಹೂಡಿಕೆ ಪ್ರಕ್ರಿಯೆಯು 2020 ರ ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ಪಾಲುದಾರಿಕೆಯು ನಿಂಜಾಕಾರ್ಟ್ ನ ಬೆಳವಣಿಗೆಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಈ ಎರಡೂ ಸಂಸ್ಥೆಗಳು ನಿಂಜಾಕಾರ್ಟ್ ಮೂಲಕ ಗ್ರಾಹಕ ಶಾಪಿಂಗ್ ಅನುಭವವನ್ನು ಹೆಚ್ಚಿಸಲಿವೆ ಮತ್ತು ಆಫರ್ ಗಳನ್ನು ಸುಧಾರಿಸಲಿವೆ. ಟೈಗರ್ ಗ್ಲೋಬಲ್, ಅಸ್ಸೆಲ್, ಟ್ಯಾಂಗ್ಲಿನ್, ಸ್ಟೆಡ್ ವ್ಯೂ, ಸಿಂಗೆಂಟಾ, ನಂದನ್ ನಿಲೇಕಣಿ ಮತ್ತು ಕ್ವಾಲ್ಕಂ ಸೇರಿದಂತೆ ಹಲವಾರು ವಿಶ್ವದರ್ಜೆಯ ಪ್ರಮುಖ ಹೂಡಿಕೆದಾರರನ್ನು ನಿಂಜಾಕಾರ್ಟ್ ಆಕರ್ಷಿಸುತ್ತಿದೆ.

45 ದಿನ ಇಂಟರ್ನ್ ಶಿಪ್, ದಿನಕ್ಕೆ 500 ಸಂಬಳ, ವಿದ್ಯಾರ್ಥಿಗಳೇ ಗಮನಿಸಿ45 ದಿನ ಇಂಟರ್ನ್ ಶಿಪ್, ದಿನಕ್ಕೆ 500 ಸಂಬಳ, ವಿದ್ಯಾರ್ಥಿಗಳೇ ಗಮನಿಸಿ

ಎರಡನೇ ಸುತ್ತಿನಲ್ಲಿ ವಾಲ್ ಮಾರ್ಡ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ಭಾರತದಲ್ಲಿ ಕೃಷಿ ಮತ್ತು ಆಹಾರ ಪೂರೈಕೆ ಚೇನ್ ಆಗಿರುವ ನಿಂಜಾಕಾರ್ಟ್ ನಲ್ಲಿ ಹೂಡಿಕೆಯನ್ನು ಮುಂದುವರಿಸುವ ಬದ್ಧತೆಯನ್ನು ತೋರಿಸಿದೆ. ಇದಲ್ಲದೇ, ನಿಂಜಾಕಾರ್ಟ್ ನ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ತಾಜಾವಾದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವ ದಿಸೆಯಲ್ಲಿ ಮೌಲ್ಯವರ್ಧನೆ ಮಾಡಿದೆ.

ಗ್ರಾಹಕರು ಮತ್ತು ರೈತರಿಗೆ ನೆರವಾಗಿದೆ

ಗ್ರಾಹಕರು ಮತ್ತು ರೈತರಿಗೆ ನೆರವಾಗಿದೆ

ಕೋವಿಡ್ ಲಾಕ್ ಡೌನ್ ಗಳ ಸಂದರ್ಭದಲ್ಲಿ ನಿಂಜಾಕಾರ್ಟ್ ಫ್ಲಿಪ್ ಕಾರ್ಟ್ ನೊಂದಿಗೆ ಸೇರಿ ಫಾರ್ಮ್ ಟು ಫೋರ್ಕ್, ಡೆಲಿವರಿ ಆ್ಯಪ್ ಗಳ ಮೂಲಕ ಆಹಾರ ವಿತರಣೆ, ಅಪಾರ್ಟ್ ಮೆಂಟ್ ವಿತರಣೆ, ಹಾರ್ವೆಸ್ಟ್ ದಿ ಫಾರ್ಮ್ಸ್ ಸೇರಿದಂತೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರಿಗೆ ಅತ್ಯಂತ ತ್ವರಿತವಾಗಿ ಗುಣಮಟ್ಟದ ಸೇವೆಗಳನ್ನು ಒದಗಿಸಿದೆ. ಒಂದು ವಾರದಲ್ಲಿ ಗ್ರಾಹಕರು ಮತ್ತು ರೈತರಿಗೆ ನೆರವಾಗಿದೆ. ಇದಲ್ಲದೇ, ಉದ್ಯಮವಾಗಿ ಮೊದಲ ಬಾರಿಗೆ ನಿಂಜಾಕಾರ್ಟ್ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಭದ್ರತೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಫುಡ್ ಪ್ರಿಂಟ್' ಎಂಬ ಉಪಕ್ರಮವನ್ನು ಆರಂಭ ಮಾಡಿತ್ತು.

ಫ್ಲಿಪ್ ಕಾರ್ಟ್ ಕ್ವಿಕ್ ಬೆಳವಣಿಗೆ

ಫ್ಲಿಪ್ ಕಾರ್ಟ್ ಕ್ವಿಕ್ ಬೆಳವಣಿಗೆ

ಫ್ಲಿಪ್ ಕಾರ್ಟ್ ತನ್ನ ಸೂಪರ್ ಮಾರ್ಟ್ (ದಿನಸಿ) ಮತ್ತು ಫ್ಲಿಪ್ ಕಾರ್ಟ್ ಕ್ವಿಕ್ (ಹೈಪರ್ ಲೋಕಲ್ ಬ್ಯುಸಿನೆಸ್) ಬೆಳವಣಿಗೆ ಕಾಣುತ್ತಿದ್ದು, ನಿಂಜಾಕಾರ್ಟ್ ದೇಶಾದ್ಯಂತ ತನ್ನ ಗ್ರಾಹಕರಿಗೆ ತಾಜಾ ಉತ್ಪನ್ನಗಳನ್ನು ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ. ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ತನ್ನ ಇ-ಗ್ರಾಸರಿಯನ್ನು ಹೆಚ್ಚಳ ಮಾಡುತ್ತಿದೆ.

ಸ್ಟಾರ್ಟ್ ಅಪ್ ನಿಂಜಾಕಾರ್ಟ್ ನಲ್ಲಿ ಫ್ಲಿಪ್ ಕಾರ್ಟ್, ವಾಲ್ ಮಾರ್ಟ್ ಹೂಡಿಕೆಸ್ಟಾರ್ಟ್ ಅಪ್ ನಿಂಜಾಕಾರ್ಟ್ ನಲ್ಲಿ ಫ್ಲಿಪ್ ಕಾರ್ಟ್, ವಾಲ್ ಮಾರ್ಟ್ ಹೂಡಿಕೆ

ತಾಜಾ ಉತ್ಪನ್ನಗಳು ತಲುಪಲು ಸಾಧ್ಯವಾಗುತ್ತಿದೆ

ತಾಜಾ ಉತ್ಪನ್ನಗಳು ತಲುಪಲು ಸಾಧ್ಯವಾಗುತ್ತಿದೆ

ನಿಂಜಾಕಾರ್ಟ್ ಹಲವಾರು ದೇಶೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಿದೆ. ಭಾರತದ ಅತಿ ಕಡಿಮೆ ಕಟ್ಟ ಕಡೆಯ ಜಾಲವನ್ನು ಡೇಟಾ ವಿಜ್ಞಾನದ ಮೂಲಕ ಆವಿಷ್ಕಾರಕ ಜಾಲದ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಇದರ ನೆರವಿನಿಂದ 12 ಗಂಟೆಯೊಳಗೆ ರೈತರಿಂದ ಸ್ಟೋರ್ ಗೆ ತಾಜಾ ಉತ್ಪನ್ನಗಳು ತಲುಪಲು ಸಾಧ್ಯವಾಗುತ್ತಿದೆ. ಈ ಮೂಲಕ ಉತ್ಪನ್ನಗಳ ತಾಜಾತನ ಉಳಿಯಲಿದೆ ಮತ್ತು ಬೇಗ ಕೆಟ್ಟು ಹೋಗುವಂತ ಉತ್ಪನ್ನಗಳ ಉಷ್ಣಾಂಶವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

Recommended Video

Sriramulu ಹಾಗು Sudhakar ಇಂದು ಮಾಧ್ಯಮದವರೊಂದಿಗೆ ಹೇಳಿದ್ದೇನು | Oneindia Kannada
ಹೊಸ ಹೂಡಿಕೆ ಬಗ್ಗೆ ತಿರುಕುಮಾರನ್ ನಾಗರಾಜನ್

ಹೊಸ ಹೂಡಿಕೆ ಬಗ್ಗೆ ತಿರುಕುಮಾರನ್ ನಾಗರಾಜನ್

ನಿಂಜಾಕಾರ್ಟ್ ನಲ್ಲಿ ಹೊಸ ಹೂಡಿಕೆಯನ್ನು ಘೋಷಣೆ ಮಾಡಿ ಮಾತನಾಡಿದ ನಿಂಜಾಕಾರ್ಟ್ ನ ಸಿಇಒ ಮತ್ತು ಸಹಸಂಸ್ಥಾಪಕ ತಿರುಕುಮಾರನ್ ನಾಗರಾಜನ್ ಅವರು, ''ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ನ ಮೊದಲ ಹೂಡಿಕೆಗಳಿಂದ ಆಹಾರವನ್ನು ಸುರಕ್ಷಿತಗೊಳಿಸುವುದು ಮತ್ತು ಕೋಟ್ಯಂತರ ಜನರನ್ನು ತಲುಪುವ ನಮ್ಮ ದೂರದೃಷ್ಟಿಗೆ ಒಂದು ಹೆಜ್ಜೆ ಹತ್ತಿರವಾದಂತಾಗಿತ್ತು. ನಮ್ಮ ಬೆಳವಣಿಗೆ ಮತ್ತು ಲಾಭದಾಯಕತೆಯ ಸಾಮರ್ಥ್ಯದ ಮೇಲೆ ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ವಿಶ್ವಾಸ ಇಟ್ಟಿರುವುದಕ್ಕೆ ನಮಗೆ ಅತ್ಯಂತ ಸಂತಸವೆನಿಸುತ್ತಿದೆ. ಗ್ರಾಹಕರು ಮತ್ತು ರೈತರ ಜೀವನದ ಮೇಲೆ ಧನಾತ್ಮಕವಾದ ರೀತಿಯಲ್ಲಿ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ ನಾವು ನಮ್ಮ ಬಂಡವಾಳ ಹೂಡಿಕೆಯನ್ನು ಮುಂದುವರಿಸುತ್ತೇವೆ'' ಎಂದು ಹೇಳಿದರು.

English summary
Walmart and the Flipkart Group today announced a fresh round of investment in Ninjacart, the innovative startup disrupting India’s fresh produce market with its made-for-India business-to-business (B2B) supply chain infrastructure and technology solutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X