ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಲ್ಮಾರ್ಟ್ -ಭಾರ್ತಿ ಜತೆ ಒಪ್ಪಂದ ಖತಂ

By Mahesh
|
Google Oneindia Kannada News

ನವದೆಹಲಿ, ಅ.9: ಜಾಗತಿಕ ಚಿಲ್ಲರೆ ದೈತ್ಯ ವಾಲ್ ಮಾರ್ಟ್ ಹಾಗೂ ಭಾರತದ ಸಹಯೋಗ ಸಂಸ್ಥೆ ಭಾರ್ತಿ ಎಂಟರ್ ಪ್ರೈಸಸ್ ನಡುವಿನ ಒಪ್ಪಂದ ಮುರಿದು ಬಿದ್ದಿದೆ. ಇದುವರೆವಿಗೂ ರೀಟೈಲ್ ಕ್ಷೇತ್ರದಲ್ಲಿ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಈ ಸಂಸ್ಥೆಗಳು ಇನ್ಮುಂದೆ ಎಲ್ಲಾ ವ್ಯವಹಾರಗಳನ್ನು ಪ್ರತ್ಯೇಕವಾಗಿ ನಡೆಸಲಿದೆ ಎಂದು ಬುಧವಾರ ಎರಡು ಕಂಪನಿಗಳು ಜಂಟಿಯಾಗಿ ಪ್ರಕಟಿಸಿವೆ.

ಜಾಗತಿಕ ಚಿಲ್ಲರೆ ದೈತ್ಯ ವಾಲ್ ಮಾರ್ಟ್ ಸಂಸ್ಥೆ ಭಾರ್ತಿ ಸಂಸ್ಥೆಯ ಶೇ 50ರಷ್ಟು ಪಾಲನ್ನು ಭಾರ್ತಿ ವಾಲ್ ಮಾರ್ಟ್ ಪ್ರೈ ಲಿ ನಲ್ಲಿ ಹೊಂದಿಲಿದೆ. 20ಕ್ಕೂ ಅಧಿಕ ಹೋಲ್ ಸೇಲ್ ಸ್ಟೋರ್ ಗಳನ್ನು ಭಾರತದಲ್ಲಿ ಈ ಸಂಸ್ಥೆ ಹೊಂದಿದೆ.

ಜಾಗತಿಕ ಚಿಲ್ಲರೆ ದೈತ್ಯ ವಾಲ್ ಮಾರ್ಟ್ ಭಾರತ ಪ್ರವೇಶಕ್ಕಾಗಿ ಅಮೆರಿಕದಲ್ಲಿ ಲಾಬಿ ನಡೆಸಿ ಏನೇನೂ ಸಾಹಸ ಮಾಡಿದರೂ ಭಾರತದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿರಲಿಲ್ಲ.

ದೇಶದ ಬಹು ಬ್ರಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ಎಫ್ ಡಿಐ ಪ್ರವೇಶಕ್ಕೆ ವಿಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ ಅನುಮೋದನೆ ಸಿಕ್ಕಿತ್ತು. ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು.

Wal-Mart and partner Bharti Enterprises call off India joint venture

ಕಾರ್ಪೊರೇಟ್ ಲಾಬಿ: ವಾಲ್ ಮಾರ್ಟ್ 2012ರಲ್ಲಿ ಅಮೆರಿಕದ ಸಂಸದೀಯ ಪಟುಗಳ ಜತೆ ವ್ಯವಹಾರ ಕುದುರಿಸಲು 33 ಕೋಟಿ ರೂ.(6.13 ಮಿಲಿಯನ್ ಯುಎಸ್‌ಡಿ) ಖರ್ಚುಮಾಡಿದೆ. ಈ ಮಧ್ಯೆ, 2008ರಿಂದ ಲಾಬಿಗಾಗಿ ವಾಲ್‌ಮಾರ್ಟ್ ಖರ್ಚು ಮಾಡಿರುವುದು ಬರೋಬ್ಬರಿ 180 ಕೋಟಿ ರು ಎಂದು ತಿಳಿದು ಬಂದಿದೆ.

ಚಿಲ್ಲರೆ ಮಾರುಕಟ್ಟೆ ಎಫ್ ಡಿಐ: ಲಾಭವೋ? ನಷ್ಟವೋ?: ಭಾರತಕ್ಕೆ ಎಫ್ ಡಿಐ ಹೊಸ ವಿಷಯವೇನಲ್ಲ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಬಹು ಬ್ರ್ಯಾಂಡ್ ಗಳ ಮೇಲೆ ವಿದೇಶಿಯರ ಹಿಡಿತ ಹೆಚ್ಚಾಗುವುದು ಆತಂಕಕಾರಿ ಎಂಬ ಕೂಗು ಎದ್ದಿದೆ.

ಶೇ 51 ರಷ್ಟು ಪಾಲು ವಿದೇಶಿ ಕಂಪನಿಗಳ ಕೈಗೆ ಹೋದರೆ ಸ್ಥಳೀಯರ ಪಾಡೇನು? ಸೇವ್ ಮನಿ, ಲಿವ್ ಬೆಟರ್ ಎಂದು ಚಿಲ್ಲರೆ ಮಾರುಕಟ್ಟೆಗೆ ಕಾಲಿರಿಸಿರುವ ವಾಲ್ ಮಾರ್ಟ್ ಸಂಸ್ಥೆ ಸುಮಾರು 5, 000 ಕೋಟಿ ಲಾಭದ ನಿರೀಕ್ಷೆ ಹೊಂದಿದೆ.

ಫ್ರಾನ್ಸಿನ ಕ್ಯಾರಿಫರ್, ಅಮೆರಿಕದ ವಾಲ್ ಮಾರ್ಟ್ ಹಾಗೂ ಯುಕೆಯ ಟೆಸ್ಕೋ ಕಂಪನಿಗಳು ಭಾರತದ ಚಿಲ್ಲರೆ ಮಾರುಕಟ್ಟೆ ಮೇಲೆ ಏಕಸ್ವಾಮ್ಯತೆ ಹೊಂದಿದರೆ ಮುಂದೆ ಗತಿಯೇನು?

ಭಾರತದಲ್ಲಿ ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ಇದೆ. ಇದು ಹೋಲ್ ಸೇಲ್, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲಿ ಜಾರಿಯಲ್ಲಿದೆ. ಆದರೆ, ಈಗ ಮಲ್ಟಿ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ನೀಡಿದರೆ, ಅಂದರೆ ಶೇ 51 ರಷ್ಟು ಪಾಲು ವಿದೇಶಿ ಕಂಪನಿ ವಶವಾದರೆ, ಇಡೀ ಚಿಲ್ಲರೆ ಮಾರುಕಟ್ಟೆ ಶೆಟ್ಟಿ ಅಂಗಡಿ ಜುಟ್ಟು ಜನಿವಾರ ವಿದೇಶಿಯರ ಕೈವಶವಾಗಲಿದೆ. ವಿಮೆ, ಇನ್ಸುರೆನ್ಸ್ ಹಣಕ್ಕಾಗಿ ವಿದೇಶಿ ಕಂಪನಿ ಮುಂದೆ ಕೈ ಚಾಚುವಂತಾಗುತ್ತದೆ ಎಂಬ ಮಾತಿದೆ ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿ ಓದಿ

English summary
Wal-Mart Stores Inc and its Indian partner Bharti Enterprises are breaking up their joint venture and will independently own and operate separate businesses in the country, the companies said in a joint statement on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X