ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾನ್ ಸಿಟಿ ಸಂಸ್ಥೆಗೆ ಎಕಾನಾಮಿಕ್ ಟೈಮ್ಸ್ ಪ್ರಶಸ್ತಿ ಗರಿ

|
Google Oneindia Kannada News

ಬೆಂಗಳೂರು ಸೆಪ್ಟೆಂಬರ್ 20: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದನ್ನು ಗಮನಿಸಿ ರಾಜ್ಯದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮವಾಗಿರುವ ವಿಸ್ಯಾನ್ ಇನ್‍ಫ್ರಾಸ್ಟ್ರಕ್ಚರ್ ಗೆ ಪ್ರತಿಷ್ಠಿತ ಎಕಾನಾಮಿಕ್ಸ್ ಟೈಮ್ಸ್ ನ ಪ್ರೊಫೆಷನಲ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸಂಸ್ಥೆಗೆ ನೀಡಲಾಯಿತು. ಸ್ಯಾನ್ ಗ್ರೂಪ್ (ಸ್ಯಾನ್‍ಸಿಟಿ) ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಶ್ವ ಕಾರ್ಯಪ್ಪ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಕಾರ್ಯಪ್ಪ ಅವರು,"ಈ ಪ್ರಶಸ್ತಿಯು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಮ್ಮ ಗೌರವವನ್ನು ಹೆಚ್ಚಿಸಿದೆಯಲ್ಲದೇ, ಜವಾಬ್ದಾರಿಯನ್ನೂ ಹೆಚ್ಚಿಸಿದೆ. ನಮ್ಮ ಸಂಸ್ಥೆಯು ಉನ್ನತ ಮಟ್ಟಕ್ಕೆ ಏರುವಲ್ಲಿ ಹಗಲಿರುಳೂ ಶ್ರಮಿಸುತ್ತಿರುವ ನಮ್ಮೆಲ್ಲಾ ಸಿಬ್ಬಂದಿ ಮತ್ತು ಅಧಿಕಾರಿ ವರ್ಗಕ್ಕೆ ಈ ಪ್ರಶಸ್ತಿಯ ಗೌರವ ಸಲ್ಲುತ್ತದೆ" ಎಂದು ತಿಳಿಸಿದ್ದಾರೆ.

Vsan Infrastructure Vishwa Cariappa ET professional excellence award

"ರಾಜ್ಯವಲ್ಲದೇ ಇತರೆ ರಾಜ್ಯಗಳಲ್ಲೂ ಸಹ ನಮ್ಮ ಸಂಸ್ಥೆಯು ಜನಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಸತಿ ಯೋಜನೆಗಳನ್ನು ರೂಪಿಸುತ್ತಿದೆ. ಈ ಮೂಲಕ ನಾವು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಲಿದ್ದೇವೆ"ಎಂದು ವಿಶ್ವ ಕಾರ್ಯಪ್ಪ ಅವರು ತಿಳಿಸಿದರು.

English summary
SAN Group Vsan Infrastructure Vishwa Cariappa BS wins ET professional excellence award in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X