• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬ್ಬಂದಿಗಳಿಗೆ ಸಂಬಳ ನೀಡಲು ನಮ್ಮ ಬಳಿ ಹಣವಿಲ್ಲ: ವೊಡಾಫೋನ್ ಐಡಿಯಾ

|

ಈಗಾಗಲೇ ನಷ್ಟದ ಸುಳಿಗೆ ಸಿಲುಕಿರುವ ವೊಡಾಫೋನ್ ಐಡಿಯಾ ಸಿಬ್ಬಂದಿಗಳಿಗೆ ಸಂಬಳ ನೀಡಲು ಬೇಕಾದಷ್ಟು ಹಣವೂ ತನ್ನ ಬಳಿಯಲ್ಲಿ ಇಲ್ಲ ಎಂದು ಸುಪ್ರಿಂ ಕೋರ್ಟ್‌ಗೆ ತಿಳಿಸಿದೆ.

   Modi addressed the nation for the first time after lockdown been lifted | Narendra Modi

   ಎಜಿಆರ್‌ ಬಾಕಿಗೆ ಸಂಬಂಧಿಸಿದ ಸುಪ್ರಿಂ ಕೋರ್ಟ್‌ನಲ್ಲಿ ಗುರುವಾರ(ಜೂನ್ 11) ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಲಯ ವೊಡಾಫೋನ್‌ ಐಡಿಯಾ ಸೇರಿದಂತೆ ಟೆಲಿಕಾಂ ಕಂಪನಿಗಳಿಗೆ ಎಜಿಆರ್‌ ಬಾಕಿಯನ್ನು ಹೇಗೆ ಸಲ್ಲಿಸುತ್ತೀರಿ ಎಂಬುದರ ಬಗ್ಗೆ ಐದು ದಿನದ ಒಳಗೆ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿತು.

   ಏರ್‌ಟೆಲ್, ಜಿಯೋ ಬಳಿಕ ವೊಡಾಫೋನ್ ಭರ್ಜರಿ ಆಫರ್: ದಿನಕ್ಕೆ 2ಜಿಬಿ ಡೇಟಾ

   ಆದರೆ ಈ ಕುರಿತು ತಿಳಿಸಿದ ವೊಡಾಫೋನ್ ಐಡಿಯಾ, ಎಜಿಆರ್ ಬಾಕಿಯನ್ನು ಪಾವತಿಸಲು ಭಾರೀ ಪ್ರಮಾಣದ ಹಣ ನಮ್ಮ ಬಳಿ ಇಲ್ಲ. 3-4 ದಿನದಲ್ಲಿ ಅಫಿಡವಿಟ್‌ ಸಲ್ಲಿಸಲು ಸಾಧ್ಯವಿಲ್ಲ ಎಂಬುದಾಗಿ ವೊಡಾಫೋನ್‌ ಐಡಿಯಾ ಹೇಳಿತು.

   ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣವಿಲ್ಲ

   ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣವಿಲ್ಲ

   ಸುಪ್ರೀಂಕೋರ್ಟ್ ಮುಂದೆ ತನ್ನ ಅಸಾಹಾಯಕತೆ ವ್ಯಕ್ತಪಡಿಸಿರುವ ವೊಡಾಫೋನ್ ಐಡಿಯಾ ಖರ್ಚುಗಳನ್ನು ನಿಭಾಯಿಸಲು ಮತ್ತು ಸಿಬ್ಬಂದಿಗಳಿಗೆ ಸಂಬಳ ನೀಡಲು ಬೇಕಾದಷ್ಟು ಹಣವೂ ನಮ್ಮ ಬಳಿಯಲ್ಲಿ ಇಲ್ಲ ಎಂಬುದಾಗಿ ಹೇಳಿದೆ. ಜೊತೆಗೆ ಬ್ಯಾಂಕ್‌ ಗ್ಯಾರೆಂಟಿ ನೀಡಲೂ ಸಾಧ್ಯವಿಲ್ಲ ಎಂಬುದಾಗಿ ಸಂಸ್ಥೆ ಹೇಳಿದೆ.

   ಸರ್ಕಾರಕ್ಕೆ ಕೊಡಬೇಕಿದೆ 53,000 ಕೋಟಿ ರೂಪಾಯಿ

   ಸರ್ಕಾರಕ್ಕೆ ಕೊಡಬೇಕಿದೆ 53,000 ಕೋಟಿ ರೂಪಾಯಿ

   ಸರಕಾರದ ಲೆಕ್ಕಾಚಾರದ ಪ್ರಕಾರ ವೊಡಾಪೋನ್‌ ಐಡಿಯಾ ಸುಮಾರು 53,000 ಕೋಟಿ ರುಪಾಯಿಗಳನ್ನು ಸರಕಾರಕ್ಕೆ ಕಟ್ಟಬೇಕಾಗಿದೆ. ಇದರಲ್ಲಿ ಬಡ್ಡಿ, ನಿಗದಿತ ಅವಧಿಯೊಳಕ್ಕೆ ಪಾವತಿಸದೇ ಇರುವುದಕ್ಕೆ ದಂಡವೂ ಸೇರಿದೆ.

   ಸರ್ಕಾರಕ್ಕೆ ಏಕೆ ಇಷ್ಟು ದೊಡ್ಡ ಮೊತ್ತ ಕೊಡಬೇಕಿದೆ?

   ಸರ್ಕಾರಕ್ಕೆ ಏಕೆ ಇಷ್ಟು ದೊಡ್ಡ ಮೊತ್ತ ಕೊಡಬೇಕಿದೆ?

   ಹೊಂದಾಣಿಕೆಯ ಒಟ್ಟು ಆದಾಯ (AGR) ಬಾಕಿ ಹಣ ಪಾವತಿಸುವ ವಿಚಾರವಾಗಿ 4,729 ಕೋಟಿ ರುಪಾಯಿ ಸ್ಪೆಕ್ಟ್ರಂ ಶುಲ್ಕ ಬಾಕಿ ಮತ್ತು 28,309 ಕೋಟಿ ರುಪಾಯಿ ಪರವಾನಗಿ ಶುಲ್ಕ ಒಳಗೊಂಡಂತೆ ಸುಮಾರು 53,038 ಕೋಟಿ ರುಪಾಯಿಗಳನ್ನು ವೊಡಾಫೋನ್ ಐಡಿಯಾ ಸರ್ಕಾರಕ್ಕೆ ಪಾವತಿಸಬೇಕಿದೆ.

   ವೊಡಾಫೋನ್ ಹಣವಿಲ್ಲ ಎಂದಿದ್ದಕ್ಕೆ ಕುಸಿಯಿತು ಷೇರು ಮೌಲ್ಯ

   ವೊಡಾಫೋನ್ ಹಣವಿಲ್ಲ ಎಂದಿದ್ದಕ್ಕೆ ಕುಸಿಯಿತು ಷೇರು ಮೌಲ್ಯ

   ಸುಪ್ರಿಂ ಕೋರ್ಟ್‌ಗೆ ವೊಡಾಫೋನ್‌ ಸಿಬ್ಬಂದಿಗಳಿಗೆ ಹಣ ನೀಡಲು ನಮ್ಮ ಬಳಿ ಸಾಕ್ಟು ಹಣವಿಲ್ಲ ಎಂದು ಹೇಳಿದ ಬೆನ್ನಲ್ಲೇ ಕಂಪನಿಯ ಷೇರು ಮೌಲ್ಯ 13 ಪರ್ಸೆಂಟ್‌ರಷ್ಟು ಕುಸಿತವಾಗಿದ್ದು 9.39 ರೂಪಾಯಿಗೆ ಇಳಿಕೆಯಾಗಿದೆ.

   ಸುಪ್ರೀಂಕೋರ್ಟ್‌ ಈ ಕುರಿತು ಮುಂದಿನ ವಿಚಾರಣೆಯನ್ನು ಜೂನ್‌ 18ಕ್ಕೆ ಮುಂದೂಡಿದೆ.

   English summary
   AGR Issue: The Vodafone idea said it does not even have enough money to pay salaries to employees and meet expenses.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X