ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಟೆಲ್, ಜಿಯೋ ಬಳಿಕ ವೊಡಾಫೋನ್ ಭರ್ಜರಿ ಆಫರ್: ದಿನಕ್ಕೆ 2ಜಿಬಿ ಡೇಟಾ

|
Google Oneindia Kannada News

ನವದೆಹಲಿ, ಜೂ 1: ಏರ್‌ಟೆಲ್ ಇತ್ತೀಚೆಗೆ ಮನೆಯಿಂದ ಕೆಲಸ ಮಾಡುವವರಿಗಾಗಿ ವರ್ಕ್ ಫ್ರಮ್ ಹೋಮ್ ಯೋಜನೆಯನ್ನು ಪ್ರಾರಂಭಿಸಿತು. ಏರ್‌ಟೆಲ್ ನಂತರ ಕೆಲವು ದಿನಗಳ ನಂತರ ವೊಡಾಫೋನ್ 251 ರುಪಾಯಿಗಳ ಯೋಜನೆಯನ್ನು ಪರಿಚಯಿಸಿದೆ.

Recommended Video

ಎಲ್ಲಾ ಕ್ರಿಕೆಟ್ ಪಂದ್ಯಗಳು ಮೊದಲೇ ಫಿಕ್ಸ್ ಆಗಿರುತ್ತವೆಯೇ ? | Oneindia Kannada

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಸಹ ಏರ್‌ಟೆಲ್‌ನಂತೆಯೇ 251 ರುಪಾಯಿಗಳ ಯೋಜನೆಯನ್ನು ಪ್ರಾರಂಭಿಸಿತ್ತು. ಇದೀಗ ವಿಶೇಷವೆಂದರೆ ಮೂರು ಕಂಪನಿಗಳ 251 ರುಪಾಯಿಗಳ ಯೋಜನೆಯಲ್ಲಿ ನೀವು ಒಂದೇ ರೀತಿಯ ಲಾಭವನ್ನು ಪಡೆಯುತ್ತೀರಿ. ಹಾಗಿದ್ದರೆ ಮೂರು ಕಂಪನಿಗಳ ಈ ಯೋಜನೆ ಏನು ಎಂಬುದರ ಬಗ್ಗೆ ಈ ಕೆಳಗೆ ತಿಳಿದುಕೊಳ್ಳೋಣ.

ವೊಡಾಫೋನ್‌ನಿಂದ ದಿನಕ್ಕೆ 2 ಜಿಬಿ ಡೇಟಾ

ವೊಡಾಫೋನ್‌ನಿಂದ ದಿನಕ್ಕೆ 2 ಜಿಬಿ ಡೇಟಾ

ಬಿಜಿನೆಸ್ ಟುಡೆ ವರದಿಯ ಪ್ರಕಾರ, ವೊಡಾಫೋನ್‌ನ ಪ್ರಿಪೇಯ್ಡ್ ಯೋಜನೆ 251 ರುಪಾಯಿ. ಇದು ಏರ್‌ಟೆಲ್ ಮತ್ತು ಜಿಯೋನಂತಹ ಟಾಪ್-ಅಪ್ ಯೋಜನೆಯಾಗಿದೆ. ಇದರಲ್ಲಿ, ನೀವು ಒಟ್ಟು 50 ಜಿಬಿ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಆದಾಗ್ಯೂ, ಈ ಯೋಜನೆಯಲ್ಲಿ ನೀವು ಕರೆ ಅಥವಾ ಎಸ್‌ಎಂಎಸ್ ಪ್ರಯೋಜನವನ್ನು ಪಡೆಯುವುದಿಲ್ಲ, ಏಕೆಂದರೆ ಈ ಯೋಜನೆಯನ್ನು ಕೇವಲ ಇಂಟರ್ನೆಟ್ ಪ್ರಯೋಜನಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ವೊಡಾಫೋನ್‌ನ 251 ರೂಗಳ ಪ್ರಿಪೇಯ್ಡ್ ಯೋಜನೆ ಎಲ್ಲಾ ವಲಯಗಳಿಗೆ ಲಭ್ಯವಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ವೋಡಾಫೋನ್ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ ಸಾಧ್ಯತೆವೋಡಾಫೋನ್ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ ಸಾಧ್ಯತೆ

ಯಾವೆಲ್ಲಾ ನಗರಗಳಿಗೆ ಈ ಆಫರ್ ಲಭ್ಯ?

ಯಾವೆಲ್ಲಾ ನಗರಗಳಿಗೆ ಈ ಆಫರ್ ಲಭ್ಯ?

ವೊಡಾಫೋನ್‌ನ ಈ ಯೋಜನೆಯು ಸದ್ಯ ಎಲ್ಲಾ ನಗರಗಳಲ್ಲೂ ಲಭ್ಯವಿಲ್ಲ. ಆದರೆ ಪ್ರಸ್ತುತ ಬಿಹಾರ, ಚೆನ್ನೈ, ಗುಜರಾತ್, ಹರಿಯಾಣ, ಕೇರಳ, ತಮಿಳುನಾಡು (ಚೆನ್ನೈ ಹೊರತುಪಡಿಸಿ), ಮತ್ತು ಯುಪಿ ಪೂರ್ವದಲ್ಲಿ ಲಭ್ಯವಿದೆ. ಆದರೆ ಸದ್ಯ ಆಂಧ್ರಪ್ರದೇಶ, ಅಸ್ಸಾಂ, ದೆಹಲಿ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಮುಂಬೈ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ಯುಪಿ ಪಶ್ಚಿಮ ಮತ್ತು ಪಶ್ಚಿಮ ಬಂಗಾಳ ವಲಯಗಳ ಗ್ರಾಹಕರು ಈ ಯೋಜನೆಯ ಲಾಭವನ್ನು ಸದ್ಯಕ್ಕೆ ಪಡೆಯಲು ಸಾಧ್ಯವಿಲ್ಲ.

ಏರ್‌ಟೆಲ್‌ನಲ್ಲೂ ಇದೆ 251 ರುಪಾಯಿ ಯೋಜನೆ

ಏರ್‌ಟೆಲ್‌ನಲ್ಲೂ ಇದೆ 251 ರುಪಾಯಿ ಯೋಜನೆ

ಏರ್‌ಟೆಲ್‌ ಕೂಡ 251 ರುಪಾಯಿ ಯೋಜನೆಯಿದ್ದು ನೀವು 50 ಜಿಬಿ ಡೇಟಾವನ್ನು ಸಹ ಪಡೆಯುತ್ತೀರಿ. ಆದಾಗ್ಯೂ, ಏರ್‌ಟೆಲ್ ಈ ಯೋಜನೆಗೆ ಯಾವುದೇ ಮಾನ್ಯತೆಯನ್ನು ನಿಗದಿಪಡಿಸಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ ಪ್ಯಾಕ್‌ನ ವ್ಯಾಲಿಡಿಟಿವರೆಗೆ ನಿಮ್ಮ ಯೋಜನೆ ಮುಂದುವರಿಯುತ್ತದೆ. ವೊಡಾಫೋನ್‌ನಂತೆ, ಈ ಯೋಜನೆಯಲ್ಲಿ ಏರ್‌ಟೆಲ್ ನಿಮಗೆ ಯಾವುದೇ ಕರೆ ಅಥವಾ ಎಸ್‌ಎಂಎಸ್ ಪ್ರಯೋಜನಗಳನ್ನು ನೀಡುವುದಿಲ್ಲ. ಅಂದಹಾಗೆ, ನೀವು ಪ್ರತಿದಿನ 2 ಜಿಬಿ ಡೇಟಾದೊಂದಿಗೆ ಕರೆ ಮತ್ತು ಎಸ್‌ಎಂಎಸ್ ಲಾಭ ಪಡೆಯಲು ಬಯಸಿದರೆ, ಏರ್‌ಟೆಲ್ 298 ರುಪಾಯಿ ಯೋಜನೆ ನಿಮಗೆ ಉತ್ತಮವಾಗಿರುತ್ತದೆ. ಈ ಯೋಜನೆಯಲ್ಲಿ, ನೀವು 28 ದಿನಗಳವರೆಗೆ ಪ್ರತಿದಿನ 2 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್ ಪಡೆಯುತ್ತೀರಿ. ಹೆಚ್ಚುವರಿಯಾಗಿ, ನೀವು ಅನ್‌ಲಿಮಿಟೆಡ್ ಕರೆ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.

ವೊಡಾಫೋನ್ ಐಡಿಯಾ 98 ರು ಪ್ರೀಪೇಯ್ಡ್, ಡಬ್ಬಲ್ ಡೇಟಾವೊಡಾಫೋನ್ ಐಡಿಯಾ 98 ರು ಪ್ರೀಪೇಯ್ಡ್, ಡಬ್ಬಲ್ ಡೇಟಾ

ಜಿಯೋದಲ್ಲೂ ತಿಂಗಳಿಗೆ ಸಿಗುತ್ತೆ 50ಜಿಬಿ ಡೇಟಾ

ಜಿಯೋದಲ್ಲೂ ತಿಂಗಳಿಗೆ ಸಿಗುತ್ತೆ 50ಜಿಬಿ ಡೇಟಾ

ವರ್ಕ್‌ ಫ್ರಮ್‌ ಹೋಮ್‌ಗಾಗಿಯೇ ಈ ಯೋಜನೆಯನ್ನು ಜಿಯೋದಲ್ಲೂ ಪ್ರಾರಂಭಿಸಲಾಗಿದೆ. ಜಿಯೋ 251 ರುಪಾಯಿ ಯೋಜನೆಯಲ್ಲಿ ನೀವು 30 ದಿನಗಳವರೆಗೆ 50 ಜಿಬಿ ಡೇಟಾವನ್ನು ಪಡೆಯುತ್ತೀರಿ. ಆದರೆ ಏರ್‌ಟೆಲ್ ಮತ್ತು ವೊಡಾಫೋನ್‌ನಂತೆಯೇ, ನಿಮಗೆ ಯಾವುದೇ ಕರೆ ಅಥವಾ ಎಸ್‌ಎಂಎಸ್ ಲಾಭ ದೊರೆಯುವುದಿಲ್ಲ. ಜಿಯೋ ಎರಡನೇ ಯೋಜನೆ 201 ರುಪಾಯಿ ಆಗಿದ್ದು ಈ ಯೋಜನೆಯು 30 ದಿನಗಳವರೆಗೆ 40 ಜಿಬಿ ಡೇಟಾವನ್ನು ಸಿಗುತ್ತದೆ. ಅದೇ ಸಮಯದಲ್ಲಿ, ಜಿಯೋನ 151 ರೂಪಾಯಿ ಯೋಜನೆಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ 30 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಜಿಯೋನ 201 ಮತ್ತು 151 ರುಪಾಯಿಗಳ ಯೋಜನೆಗಳು ಸಹ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳಿರುವುದಿಲ್ಲ.

English summary
Days after Airtel announced its work from home plan, Vodafone too introduced Rs 251 work from home plan. In this plan Data available 2GB Per day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X