ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಡಾಫೋನ್ ನಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ

|
Google Oneindia Kannada News

ಬೆಂಗಳೂರು, ಜನವರಿ 31: ಟೆಲಿಕಾಂ ಸಂಸ್ಥೆಗಳ ದರ ಸಮರ ಮುಂದುವರೆದಿದ್ದು, ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ನಂತರ ವೊಡಾಫೋನ್ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡುತ್ತಿದೆ.

ವೊಡಾಫೋನ್ 198 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಈ ಪ್ಲಾನ್ ನಲ್ಲಿ ಇನ್ಮುಂದೆ ಗ್ರಾಹಕರಿಗೆ ಪ್ರತಿ ದಿನ 1.4 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆ ಹಾಗೂ ರೋಮಿಂಗ್ ಕಾಲ್ ಜೊತೆ 100 ಸಂದೇಶಗಳು ಉಚಿತವಾಗಿ ಸಿಗಲಿದೆ.

Vodafone India Revises Rs 509, Rs 458 Prepaid Tariff Plans, Now Offers 1.4GB Data Per Day

ಈ ಯೋಜನೆಯ ವ್ಯಾಲಿಡಿಟಿ 24 ದಿನಗಳವರೆಗೆ ಇರಲಿದೆ. ಈ ಪ್ಲಾನ್ ಏರ್ಟೆಲ್ ನ 199 ಪ್ಲಾನ್ ಹಾಗೂ ಜಿಯೋದ 149 ಪ್ಲಾನ್ ಪೈಪೋಟಿ ನೀಡಲಿದೆ. ಈ ಹಿಂದಿನ 198 ಪ್ಲಾನ್ ನಲ್ಲಿ ರೀಚಾರ್ಜ್ ಮಾಡಿಸಿದರೆ, ಪ್ರತಿದಿನ 1 ಜಿಬಿ ಡೇಟಾ ಹಾಗೂ ಅನಿಯಮಿತ ವಾಯ್ಸ್ ಕಾಲ್ ಜೊತೆ 100 ಎಸ್ಎಂಎಸ್ ಮಾತ್ರ ಸಿಗುತ್ತಿತ್ತು.

ವೊಡಾಫೋನ್ ನಿಂದ ಪ್ರತಿದಿನ 2 ಜಿಬಿ ಡೇಟಾ ನೀಡುವ ಹೊಸ ಕೊಡುಗೆ!ವೊಡಾಫೋನ್ ನಿಂದ ಪ್ರತಿದಿನ 2 ಜಿಬಿ ಡೇಟಾ ನೀಡುವ ಹೊಸ ಕೊಡುಗೆ!

ಆದರೆ, ಕರೆ ಮಾಡಲು ಪ್ರತಿದಿನ 250 ನಿಮಿಷ ಮಾತ್ರ ಮಿತಿ ಇರುತ್ತದೆ. 24 ದಿನ ವ್ಯಾಲಿಡಿಟಿಗೆ 1000 ನಿಮಿಷ ಸಿಗಲಿದೆ. ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಕಡಿಮೆ ದರದ ರೀಚಾರ್ಜ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.

English summary
Vodafone has revised three prepaid tariff plans of Rs 509, Rs 458 and Rs 348. The Rs 509 and Rs 458 tariff plans now offer 1.4GB data per day, whereas the Rs 348 tariff plan now provides 2.5GB data per day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X