ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯ ಪರಿಚಯಿಸಿದ ವೋಡಾಫೋನ್

|
Google Oneindia Kannada News

ಬೆಂಗಳೂರು, ಮೇ 15: ಟೆಲಿಕಾಂ ಉದ್ಯಮದಲ್ಲೇ ಮೊದಲ ಬಾರಿಗೆ ವೊಡಾಫೋನ್ ಇಂಡಿಯಾ ತನ್ನ ರೀಟೇಲ್ ಮಳಿಗೆಗಳಲ್ಲಿ ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯವನ್ನು ಪರಿಚಯಿಸಿದೆ. ವೊಡಾಫೋನ್ ಐಡಿಯಾದ ಸ್ಮಾರ್ಟ್ ಕನೆಕ್ಟ್ ರೀಟೈಲರ್ ಆ್ಯಪ್ ಮೂಲಕ ಈ ವಿನೂತನ ಸೌಲಭ್ಯ ಆರಂಭಿಸಲಾಗಿದೆ.

ಈ ವ್ಯವಸ್ಥೆಯಡಿ ರೀಟೈಲರ್ಸ್ ತಮ್ಮ ಫೋನನ್ನು ಸಿಬ್ಬಂದಿಗೆ ಹಸ್ತಾಂತರಿಸುವ ಅಥವಾ ಗ್ರಾಹಕರು ತಮ್ಮ ಮೊಬೈಲ್ ನಂಬರ್ ದಾಖಲಿಸುವ ಅಗತ್ಯ ಇರುವುದಿಲ್ಲ. ಗ್ರಾಹಕರು ಅಥವಾ ರೀಟೈಲರ್‍ಗಳು ಕೇವಲ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಈ ನಿರ್ದಿಷ್ಟ ಸಾಧನದಲ್ಲಿ ಹೇಳಬೇಕಾಗುತ್ತದೆ. ಆಗ ಗೂಗಲ್ ಧ್ವನಿ ಆಧರಿತ ವ್ಯವಸ್ಥೆಯು ಈ ಧ್ವನಿ ಸಂದೇಶವನ್ನು 10 ಅಡಿ ಅಂತರದಿಂದ ಸೆರೆಹಿಡಿಯುತ್ತದೆ.

ಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾ"

ರೀಚಾರ್ಜ್‍ಗಾಗಿ ಗ್ರಾಹಕರು ಚಿಲ್ಲರೆ ಮಳಿಗೆಗಳಿಗೆ ಆಗಮಿಸಿದಾಗ, ಸಾಮಾನ್ಯವಾಗಿ ರೀಟೈಲರ್ ತಮ್ಮ ಸ್ಮಾರ್ಟ್ ಕನೆಕ್ಟ್ ರೀಟೈಲರ್ ಅಪ್ಲಿಕೇಶನ್ ಇರುವ ಮೊಬೈಲ್ ಫೋನನ್ನು ಗ್ರಾಹಕರಿಗೆ ಹಸ್ತಾಂತರಿಸಿ ಗ್ರಾಹಕರಿಗೆ ಮೊಬೈಲ್ ನಂಬರ್ ದಾಖಲಿಸುವಂತೆ ಸೂಚಿಸುತ್ತಾರೆ. ದೂರವಾಣಿ ಸಂಖ್ಯೆ ನೋಂದಣಿ ನಿಖರವಾಗುವ ಸಲುವಾಗಿ ಹೀಗೆ ಮಾಡಲಾಗಉತ್ತದೆ. ಆದಾಗ್ಯೂ ಸಾಮಾಜಿಕ ಅಂತರದ ಪ್ರಸ್ತುತ ಸನ್ನಿವೇಶದಲ್ಲಿ ಇದೀಗ ಅದು ಕಾರ್ಯಸಾಧು ಅಲ್ಲ ಎಂಬ ಕಾರಣಕ್ಕಾಗಿ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

 ಎಲ್ಲೆಲ್ಲಿ ವೋಡಾಫೋನ್

ಎಲ್ಲೆಲ್ಲಿ ವೋಡಾಫೋನ್

ದೇಶದ ವಿವಿಧೆಡೆ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ರೀಟೈಲ್ ಮಳಿಗೆಗಳು ಆರಂಭವಾಗುತ್ತಿದ್ದು, ವೊಡಾಫೋನ್ ಐಡಿಯಾ, ತನ್ನ ಎಲ್ಲ ಮಳಿಗೆಗಳಲ್ಲಿ ಸಾಮಾಜಿಕ ಅಂತರದ ಶಿಷ್ಟಾಚಾರವನ್ನು ಖಾತರಿಪಡಿಸಲು ಮುಂದಾಗಿದೆ. ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯವನ್ನು ಒದಗಿಸುವ ಸಲುವಾಗಿ ಸ್ಮಾರ್ಟ್ ಕನೆಕ್ಟ್ ಸಾಧನವು ಇದೀಗ ಧ್ವನಿ ಆಧರಿತ ರೀಚಾರ್ಜ್ ಲಕ್ಷಣವನ್ನು ಒಳಗೊಂಡಿರುತ್ತದೆ ಹಾಗೂ ಇದು ಎಲ್ಲ ವೊಡಾಫೋನ್ ಐಡಿಯಾದ ಸ್ವಂತ ಮಳಿಗೆಗಳಲ್ಲಿ ಮತ್ತು ಬಹು ಬ್ರಾಂಡ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಧ್ವನಿ ಸಂದೇಶದ ಮೂಲಕ ದಾಖಲಿಸಬೇಕಾಗುತ್ತದೆ ಹಾಗೂ ಇದನ್ನು ಈ ಸಾಧನ ಸೆರೆಹಿಡಿದು ರೀಚಾರ್ಜ್ ಟ್ಯಾಬ್‍ನಲ್ಲಿ ಪ್ರದರ್ಶನಗೊಳ್ಳುತ್ತದೆ. ಇದಾದ ಬಳಿಕ ರೀಚಾರ್ಜ್ ಪಯಣವು ಹಾಲಿ ಇರುವ ಪ್ರಕ್ರಿಯೆಯಂತೆ ಮುಂದುವರಿಯುತ್ತದೆ.

 ಧ್ವನಿ ಆಧರಿತ ಸಂಪರ್ಕ ರಹಿತ ರೀಚಾರ್ಜ್

ಧ್ವನಿ ಆಧರಿತ ಸಂಪರ್ಕ ರಹಿತ ರೀಚಾರ್ಜ್

ಹೊಸ ಧ್ವನಿ ಆಧರಿತ ಸಂಪರ್ಕ ರಹಿತ ರೀಚಾಜ್ ಸೇವೆಯ ಬಗ್ಗೆ ಮಾತನಾಡಿದ ವೊಡಾಫೋನ್ ಐಡಿಯಾದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅಂಬರೀಷ್ ಜೈನ್, ''ಗ್ರಾಹಕ ಕೇಂದ್ರಿತ ದೂರಸಂಪರ್ಕ ಸೇವಾ ಸಂಸ್ಥೆಯಾಗಿ, ಆಯಾ ಕಾಲಘಟ್ಟಕ್ಕೆ ಅಗತ್ಯವಾದ ಉತ್ಪನ್ನ ಹಾಗೂ ಸೇವೆಗಳನ್ನು ಪರಿಚಯಿಸುವ ಬದ್ಧತೆ ನಮ್ಮದು. ನಮ್ಮ ಡಿಜಿಟಲ್ ಫಸ್ಟ್ ದೃಷ್ಟಿಕೋನಕ್ಕೆ ಅನುಗುಣವಾಗಿ, ನಮ್ಮ ಎಲ್ಲ ಪ್ರಕ್ರಿಯೆಗಳನ್ನು ಡಿಜಿಟಲೀಕರಿಸಲು ನಾವು ನಿರ್ಧರಿಸಿದ್ದೇವೆ. ಇದು ನಮ್ಮ 300 ದಶಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಅನುಕೂಲಕರ ಹಾಗೂ ದಕ್ಷ ಸೇವೆಯನ್ನು ಒದಗಿಸಲು ಸಾಧ್ಯವಾಗಲಿದೆ. ಉದ್ಯಮದಲ್ಲೇ ಮೊದಲ ಬಾರಿಗೆ ಪರಿಚಯಿಸಲಾಗಿರುವ ಈ ವಿನೂತನ ಧ್ವನಿ ಆಧರಿತ ಸಂಪರ್ಕ ರಹಿತ ರೀಚಾರ್ಜ್ ಸೇವೆಯು ಯಾವುದೇ ಸ್ಪರ್ಶವಿಲ್ಲದೇ ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುರಕ್ಷೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಪ್ರಸ್ತುತ ಎನಿಸಿದೆ'' ಎಂದು ಹೇಳಿದರು.

 ಇನ್ಮುಂದೆ ಹಲವು ಭಾಷೆಗಳಲ್ಲಿ ಧ್ವನಿ ಆಧರಿತ ಸೇವೆ

ಇನ್ಮುಂದೆ ಹಲವು ಭಾಷೆಗಳಲ್ಲಿ ಧ್ವನಿ ಆಧರಿತ ಸೇವೆ

ಪ್ರಸ್ತುತ ಈ ಧ್ವನಿ ಆಧರಿತ ಸೇವೆಯು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಬೆಂಬಲಿಸುತ್ತದೆ ಹಾಗೂ ಭಿನ್ನವಾದ ಅವತರಣಿಕೆಯಲ್ಲೂ ಮೊಬೈಲ್ ಸಂಖ್ಯೆಯ ಧ್ವನಿ ಸಂದೇಶವನ್ನು ಗ್ರಹಿಸುತ್ತದೆ. ಹಂತ ಹಂತವಾಗಿ ಇತರ ಹಲವು ಭಾಷೆಗಳನ್ನು ಪರಿಚಯಿಸಲಾಗುತ್ತದೆ.

ಎಐ ಚಾಲಿತ ಗ್ರಾಹಕ ಸೇವೆ ಬಿಓಟಿಯನ್ನು ವೆಬ್‍ಸೈಟ್ ಮತ್ತು ವಾಟ್ಸಪ್‍ನಲ್ಲಿ ಆರಂಭಿಸುತ್ತಿರುವ ಸಂದರ್ಭದಲ್ಲೇ ಈ ವಿನೂತನ ಸೇವೆಯನ್ನು ಆರಂಭಿಸಲಾಗುತ್ತಿದೆ. ವೊಡಾಫೋನ್ ಐಡಿಯಾ ಈಗಾಗಲೇ ತನ್ನ ಗ್ರಾಹಕರಿಗೆ ಅನುಕೂಲಕರ ಹಾಗೂ ಸುರಕ್ಷಿತ ವಿಧಾನದ ಮೂಲಕ ಮನೆಯಲ್ಲಿದ್ದುಕೊಂಡೇ ಡಿಜಿಟಲ್ ರೀಚಾರ್ಜ್‍ಗೆ ಅವಕಾಶ ಕಲ್ಪಿಸಿಕೊಟ್ಟಿದೆ.

 ವೊಡಾಫೋನ್ ಐಡಿಯಾ ಬಗ್ಗೆ

ವೊಡಾಫೋನ್ ಐಡಿಯಾ ಬಗ್ಗೆ

ವೊಡಾಫೋನ್ ಐಡಿಯಾ ಲಿಮಿಟೆಡ್ ಆದಿತ್ಯಾ ಬಿರ್ಲಾ ಸಮೂಹ ಹಾಗೂ ವೊಡಾಫೋನ್ ಸಮೂಹದ ಪಾಲುದಾರಿಕೆ ಸಂಸ್ಥೆಯಾಗಿದೆ. ಇದು ಭಾರತದ ಅಗ್ರಗಣ್ಯ ದೂರಸಂಪರ್ಕ ಸೇವಾ ಸಂಸ್ಥೆಯಾಗಿದೆ. ಕಂಪನಿಯು ಭಾರತದಾದ್ಯಂತ ಧ್ವನಿ ಹಾಗೂ ಡಾಟಾ ಸೇವೆಯನ್ನು 2ಜಿ, 3ಜಿ ಮತ್ತು 4ಜಿ ಪ್ಲಾಟ್‍ಫಾರಂಗಳಲ್ಲಿ ಒದಗಿಸುತ್ತಿದೆ. ಡಾಟಾ ಮತ್ತು ಧ್ವನಿ ಸೇವೆಯ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಸ್ತೃತ ಶ್ರೇಣಿಯ ಸೇವೆಗಳನ್ನು ಪರಿಚಯಿಸಿದೆ. ಗ್ರಾಹಕರಿಗೆ ಮುದ ನೀಡುವಂಥ ಅನುಭವವನ್ನು ಒದಗಿಸುವ ಜತೆಗೆ, ಉಜ್ವಲ ಭವಿಷ್ಯವನ್ನು ಸೃಷ್ಟಿಸುವ ದೃಷ್ಟಿಯಿಂದ ಲಕ್ಷಾಂತರ ಗ್ರಾಹಕರಿಗೆ ನೈಜ ಡಿಜಿಟಲ್ ಇಂಡಿಯಾವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೊಡುಗೆಯನ್ನು ನೀಡುತ್ತಿದೆ.

English summary
Vodafone Idea has introduced an industry first initiative to facilitate contactless recharges at retail outlets, while maintaining social distancing between the Customer and the Retailer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X