ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್, AI ಮೂಲಕ ವೋಡಾಫೋನ್ ಗ್ರಾಹಕ ಸೇವೆ

|
Google Oneindia Kannada News

ಬೆಂಗಳೂರು, ಮೇ 3: ವೊಡಾಫೋನ್ ಐಡಿಯ, ಉದ್ಯಮದಲ್ಲಿಯೇ ಇದೇ ಮೊದಲ ಬಾರಿಗೆ ಇಂದು ವಿಐಸಿ ಹೆಸರಿನ ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್ ಗ್ರಾಹಕ ಸೇವೆ ಹಾಗೂ ವರ್ಚ್ಯುಯಲ್ ನೆರವು ಸೇವೆಯನ್ನು ಗ್ರಾಹಕರಿಗೆ ಆರಂಭಿಸಿತು. ಇದು, ಸಂಸ್ಥೆಯ ವೆಬ್‍ಸೈಟ್‍ಗಳು, ಮೈ ಐಡಿಯ, ಮೈ ವೊಡಾಫೋನ್ ಆ್ಯಪ್‍ಗಳು ಮತ್ತು ಜನಪ್ರಿಯ ಆ್ಯಪ್ ಆಗಿರುವ ವಾಟ್ಸಾಪ್ ನಲ್ಲಿ ಲಭ್ಯವಿರುತ್ತದೆ.

ಸ್ಟೀಲ್ತ್ ಮೋಡ್ ನಲ್ಲಿ ಸ್ಟಾರ್ಟ್ ಆಪ್ ಕಂಪನಿಯಾಗಿರುವ Oriserveನ ಅತ್ಯಾಧುನಿಕ ಸೌಲಭ್ಯದ ಅನ್ವೇಷಣೆಯ ನೆರವಿನಲ್ಲಿ ವೊಡಾಫೋನ್ ಐಡಿಯ ಈ ಸೇವೆಯನ್ನು ಆರಂಭಿಸಿದೆ. ಈ ಸೇವೆಯ ಮೂಲಕ ವೊಡಾಫೋನ್ ಐಡಿಯ ಗ್ರಾಹಕರು ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದೆ. ಅಲ್ಲದೆ, ಅವರು ತಮ್ಮ ಅಗತ್ಯಗಳನ್ನು ಮನೆಯಲ್ಲಿಯೇ ಆರಾಮವಾಗಿ ಉಳಿಯುವ ಮೂಲಕ ಪಡೆಯಬಹುದಾಗಿದೆ.

ಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾ"

ವಿಐಸಿಯು ವೊಡಾಫೋನ್ ಮತ್ತು ಐಡಿಯ ಗ್ರಾಹಕರಿಗೆ ತಮ್ಮ ಪ್ರಶ್ನೆಗಳಿಗೆ ಕ್ಷಿಪ್ರಗತಿಯಲ್ಲಿ ಸೇವೆಯನ್ನು ಪಡೆಯಲು ನೆರವಾಗಲಿದೆ. ಬಿಲ್ ಪಾವತಿ, ರೀಚಾರ್ಜ್, ವಿಎಎಸ್, ಪ್ಲಾನ್ ಆ್ಯಕ್ಟಿವೇಷನ್, ಹೊಸ ಸಂಪರ್ಕ, ಡೇಟಾ ಬಾಕಿ, ಬಿಲ್ ಅಗತ್ಯತೆ ಹಾಗೂ ಇನ್ನೂ ಅನೇಕ ಸೇವೆಯನ್ನು ಸುಲಭಕ್ರಮದಲ್ಲಿ ಪಡೆಯಬಹುದಾಗಿದೆ.

ತಾಂತ್ರಿಕ ಅಧಿಕಾರಿ ವಿಶಾಂತ್ ವೋರಾ

ತಾಂತ್ರಿಕ ಅಧಿಕಾರಿ ವಿಶಾಂತ್ ವೋರಾ

ಈ ಕುರಿತು ಮಾತನಾಡಿದ ವೊಡಾಫೋನ್ ಐಡಿಯದ ಮುಖ್ಯ ತಾಂತ್ರಿಕ ಅಧಿಕಾರಿ ವಿಶಾಂತ್ ವೋರಾ ಅವರು,
"ವಿಐಎಲ್ ಮೂಲಕ ನಾವು ನಮ್ಮ ಗ್ರಾಹಕರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಲಿದ್ದು, ಡಿಜಿಟಲ್ ವೇದಿಕೆಯ ಮೂಲಕ ಅತ್ಯುತ್ತಮವಾದ ಸೇವೆಯನ್ನು ಒದಗಿಸಲಿದ್ದೇವೆ. ನಮ್ಮ ಡಿಜಿಟಲ್ ಫಸ್ರ್ಟ್ ಅಪ್ರೋಚ್ ಮೂಲಕ ನಾವು ನಿರಂತರವಾಗಿ ಹೊಸತನ, ತಂತ್ರಜ್ಞಾನ ಆಧಾರಿತ ಪರಿಹಾರ ಕ್ರಮಗಳನ್ನು ಅಳವಡಿಸಿ ಕೊಳ್ಳುತ್ತಿದ್ದೇವೆ. ಇದು, ವೆಚ್ಚ ಮಿತವ್ಯಯಿ ಆಗಿದ್ದು, ಅನುಕೂಲಕರ ಆಗಿದ್ದು ಗ್ರಾಹಕರಿಗೂ ತ್ವರಿತಗತಿಯಲ್ಲಿ ಸೇವೆಯನ್ನು ಒದಗಿಸುವುದು ಸಾಧ್ಯವಾಗಲಿದೆ. ವಿಐಸಿ ಎಂಬುದು ಕೃತಕ ಬುದ್ಧಿಮತ್ತೆ ಆಧಾರಿತ ಉತ್ತಮ ಗ್ರಾಹ ಸೇವಾ ಪರಿಹಾರಕ್ರಮವಾಗಿದೆ. ನಮ್ಮ ತಂತ್ರಜ್ಞಾನ ಬೆಂಬಲಿತ ಪಾಲುದಾರ ಸಂಸ್ಥೆ Oriserve ಇದನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ಮನೆಯಲ್ಲೇ ಉಳಿಯಬಹುದಾದ ಈ ಹೊತ್ತಿನಲ್ಲಿ ಇದು ಅತ್ಯುತ್ತಮವಾದ ಸೇವೆಯಾಗಿದೆ" ಎಂದರು.

ವಿಐಸಿ ಎಂಬುದು ನೂತನ ಪರಿಕ್ರಮ

ವಿಐಸಿ ಎಂಬುದು ನೂತನ ಪರಿಕ್ರಮ

ವಿಐಸಿ ಎಂಬುದು ನೂತನ ಪರಿಕ್ರಮ. ಬಳಸಲು ಸರಳವಾಗಿದೆ, ಸುರಕ್ಷಿತವಾಗಿದೆ ಹಾಗೂ ಗ್ರಾಹಕರು ವೊಡಾ ಫೋನ್ ಐಡಿಯ ಜೊತೆಗೆ ತಂತ್ರಜ್ಞಾನದ ನೆರವಿನಲ್ಲಿ ಸಂವಹನ ಮಾಡಲು ಸಹಕಾರಿ ಆಗಲಿದೆ. ಇಂದು, ಜನರು ಮನೆಯಲ್ಲಿಯೇ ಉಳಿಯಬೇಕಾಗಿದೆ. ಬದುಕು ಅಕ್ಷರಶಃ ಡಿಜಿಟಲ್/ವಚ್ರ್ಯುಯೆಲ್ ಸ್ವರೂಪಕ್ಕೆ ಬದಲಾಗಿದೆ. ಈ ಕಾಲದ ಅಗತ್ಯಾನುಸಾರ ವೊಡಾಫೋನ್ ಐಡಿ, ವಿಐಸಿ -ವಚ್ರ್ಯುಯೆಲ್ ಅಸಿಸ್ಟೆಂಟ್ ಅನ್ನು ದಿನದ 24 ಗಂಟೆ ಬಳಸಬಹುದಾಗಿದೆ. ಅನಿಅಯಮಿತ ಸೇವೆಯನ್ನು ವೊಡಾಫೋನ್ ಮತ್ತು ಐಡಿಯ ಗ್ರಾಹಕರಿಗೆ ಒದಗಿಸಲಿದೆ.

ಎಸ್‍ಎಂಎಸ್ ಮೂಲಕ ಈ ಸೇವೆ

ಎಸ್‍ಎಂಎಸ್ ಮೂಲಕ ಈ ಸೇವೆ

ವೊಡಾಫೋನ್ ಐಡಿಯ ಬಳಕೆದಾರರು ಎಸ್‍ಎಂಎಸ್ ಮೂಲಕ ಈ ಸೇವೆಯನ್ನು ಬಳಸಲು ಲಿಂಕ್ ಪಡೆಯಲಿದ್ದಾರೆ. ವಿಐಸಿ ಅನ್ನು ವಾಟ್ಸ್ ಆ್ಯಪ್ ಮೂಲಕ ಬಳಸಬಹುದು. ಪರ್ಯಾಯವಾಗಿ, ಗ್ರಾಹಕರು ಸರಳವಾಗಿ ಕ್ಲಿಕ್ ಮಾಡಿ ಅಥವಾ ಕೆಳಕಂಡ ಸಂಖ್ಯೆಗಳಿಗೆ ಸಂದೇಶ ಕಳುಹಿಸುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ.
Vodafone Care - 9654297000
Idea Care - 7065297000

ವಿಐಸಿ ಅನ್ನು ಕೋವಿಡ್-19 ನಿಂದಾಗಿ ಮೂಡಿರುವ ಪರಿಸ್ಥಿತಿಗೆ ಅನುಗುಣವಾಗಿ ಕ್ಷಿಪ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ. ವಿಐಸಿ ಇದನ್ನು ವಿಶೇಷವಾಗಿ ವಿಐಎಲ್‍ಗೆ ಕೃತಕ ಬುದ್ಧಿಮತ್ತೆ, ಎನ್‍ಎಲ್‍ಪಿ, ಆಳವಾದ ಅಧ್ಯಯನ ಹಾಗೂ ತಂತ್ರಜ್ಞಾನ ಆಧರಿಸಿ ರೂಪಿಸಲಾಗಿದೆ. ಇದು ಪರಿಣಾಮಕಾರಿಯಾಗಿದ್ದು, ತ್ವರಿತಗತಿಯಲ್ಲಿ ಸ್ಪಂದಿಸಲಿದ್ದು, ವಿವಿಧ ಸೇವೆಯನ್ನು ಒದಗಿಸಲಿದೆ.

Oriserve ಕುರಿತು

Oriserve ಕುರಿತು

Oriserve ಹೊಸ ಪೀಳಿಗೆಯ ವೇದಿಕೆಯಾಗಿದ್ದು, ವಾಸ್ತವ ಗತಿಯಲ್ಲಿ ಅಸಂಖ್ಯ ಗ್ರಾಹಕರ ಜೊತೆಗೆ ಸಂವಹನ ನಡೆಸಲು ನೆರವಾಗುವ ವೇದಿಕೆಯಾಗಿಎ. ಒರಿ ಅನೇಕ ಹಕ್ಕುಸ್ವಾಮ್ಯ ನಿರೀಕ್ಷಿಸಲಾಗಿರುವ ಪರಿಹಾರ ತಂತ್ರಜ್ಞಾನಗಳಿಗೆ ಸಂಬಂಧಿಸಿ ಕಾರ್ಯ ನಿರ್ವಹಿಸುತ್ತಿದೆ. ಈ ಸೇವೆಯು ಗ್ರಾಹಕರ ಜೊತೆಗೆ ಉದ್ಯಮಗಳು ಪರಸ್ಪರ ಸಂವಹನ ನಡೆಸಲು ಈ ಮೂಲಕ ಜಾಹೀರಾತು, ಮಾರಾಟ, ಗ್ರಾಹಕರ ಜೀವನಶೈಲಿಯ ನಿರ್ವಹಣೆಗೆ ನೆರವು ಸಾಧ್ಯವಿದೆ. ವಿವಿಧ ಪರಿಕರಗಳಲ್ಲಿ, ವಿವಿಧ ಭಾಷೆಗಳಲ್ಲಿ ಬಳಕೆಗೆ ಲಭ್ಯವಿದೆ.

English summary
Vodafone Idea, in an industry first move, today launched VIC - a revolutionary AI-powered digital customer service and support virtual assistant for its customers. It is now live on the Websites, My Vodafone and My Idea Apps, and on one of the most popular messaging app, WhatsApp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X