• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೊಡಾಫೋನ್ ಐಡಿಯಾ ರೆಡ್‌ಎಕ್ಸ್ ಪ್ಲಾನ್: ಟ್ರಾಯ್‌ ಆದೇಶಕ್ಕೆ ತಡೆ

|

ನವದೆಹಲಿ, ಜುಲೈ 18: ವೊಡಾಫೋನ್ ಐಡಿಯಾ ಕಂಪನಿಯು ತನ್ನ ಚಂದಾದಾರರಿಗೆ ನೀಡುತ್ತಿದ್ದ ರೆಡ್‌ಎಕ್ಸ್‌ ಪ್ರೀಮಿಯಂ ಯೋಜನೆಗೆನ್ನು ತಡೆಹಿಡಿಯುವಂತೆ ಹೇಳಿದ್ದ ಟೆಲಿಕಾಂ ನಿಯಂತ್ರಕ ಟ್ರಾಯ್ ನೀಡಿದ್ದ ಆದೇಶವನ್ನು ದೂರಸಂಪರ್ಕ ವ್ಯಾಜ್ಯಗಳ ಪರಿಹಾರ ಮೇಲ್ಮನವಿ ನ್ಯಾಯಮಂಡಳಿ (ಟಿಡಿಸ್ಯಾಟ್) ತಡೆಯಾಜ್ಞೆ ನೀಡಿದೆ.

ಟೆಲಿಕಾಂ ನಿಯಂತ್ರಕ ಟ್ರಾಯ್ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದ ಕೆಲವು ಆದ್ಯತೆಯ ಬಳಕೆದಾರರಿಗೆ ವೇಗದ ವೇಗವನ್ನು ನೀಡುವ ನಿರ್ದಿಷ್ಟ ಯೋಜನೆಗಳನ್ನು ತಡೆಹಿಡಿಯುವಂತೆ ಹೇಳಿತ್ತು. ಇದು ನಿಯಮ ಉಲ್ಲಂಘನೆಯಾಗಿದ್ದು ಇತರ ಚಂದಾದಾರರಿಗೆ ಸೇವೆಗಳ ಗುಣಮಟ್ಟ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಪ್ರಶ್ನಿಸಿದೆ. ಭಾರ್ತಿ ಏರ್‌ಟೆಲ್ ಟೆಲಿಕಾಂ ಕಂಪನಿಯ ಪ್ಲಾಟಿನಂ ಹಾಗೂ ವೊಡಾಫೋನ್ ಐಡಿಯಾದ ರೆಡ್‌ ಎಕ್ಸ್‌ ಪ್ಲಾನ್‌ಗೆ ತಡೆಹಿಡಿಯುವಂತೆ ಟ್ರಾಯ್ ಆದೇಶ ನೀಡಿತ್ತು.

'ಟ್ರಾಯ್ ತನ್ನ ವಿಚಾರಣೆಯನ್ನು ಮುಂದುವರಿಸಬಹುದು. ಕಾನೂನಿಗೆ ಅನುಗುಣವಾಗಿ, ಸಹಜ ನ್ಯಾಯವನ್ನು ಪಾಲಿಸಿ ಆದಷ್ಟು ಬೇಗ ಆದೇಶ ಹೊರಡಿಸಬೇಕು' ಎಂದು ನ್ಯಾಯಮಂಡಳಿ ಟ್ರಾಯ್‌ಗೆ ಸೂಚಿಸಿದೆ.

ನ್ಯಾಯಮಂಡಳಿ ನೀಡಿರುವ ಈ ಆದೇಶದಿಂದಾಗಿ, ವಿಐಎಲ್ ಕಂಪನಿಯು ಈ ಯೋಜನೆಯನ್ನು ತನ್ನ ಗ್ರಾಹಕರಿಗೆ ಒದಗಿಸುವುದನ್ನು ಮುಂದುವರಿಸಬಹುದು. ಏರ್‌ಟೆಲ್ ಕೂಡ ಇದೇ ಹಾದಿಯಲ್ಲಿ ನ್ಯಾಯಮಂಡಳಿಯಿಂದ ತಾತ್ಕಾಲಿಕ ರಿಲೀಫ್ ಪಡೆಯು ಸಾಧ್ಯತೆ ಇದೆ.

English summary
In an interim relief to Vodafone Idea, the telecom tribunal on Friday stayed Trai’s direction to the company to with hold a plan that promises priority 4G network to premium customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X