ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೊಡಾಫೋನ್ ಐಡಿಯಾ ತ್ರೈಮಾಸಿಕ ನಷ್ಟ 25,460 ಕೋಟಿ ರೂಪಾಯಿ

|
Google Oneindia Kannada News

ನವದೆಹಲಿ, ಆಗಸ್ಟ್‌ 07: ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ ಗುರುವಾರ 2020-21ರ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, 25,460 ಕೋಟಿ ರೂಪಾಯಿಗಳ ನಷ್ಟವನ್ನು ವರದಿ ಮಾಡಿದೆ.

ವೊಡಾಫೋನ್ ಐಡಿಯಾದ ನಷ್ಟವು ಹಿಂದಿನ ವರ್ಷದ ಈ ಅವಧಿಯಲ್ಲಿ ಸುಮಾರು 4,874 ಕೋಟಿ ರೂಪಾಯಿ ಆಗಿತ್ತು. ಇನ್ನು ಹಣಕಾಸು ವರ್ಷ 2021 ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 10,659.3 ಕೋಟಿ ರೂಪಾಯಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 11,269.9 ಕೋಟಿ ರೂಪಾಯಿ ಆಗಿತ್ತು

ವೇಗದ ಡೇಟಾ ಯೋಜನೆ: ಏರ್‌ಟೆಲ್, ವೊಡಾಫೋನ್ ಐಡಿಯಾಗೆ ಟ್ರಾಯ್ ಪ್ರಶ್ನೆವೇಗದ ಡೇಟಾ ಯೋಜನೆ: ಏರ್‌ಟೆಲ್, ವೊಡಾಫೋನ್ ಐಡಿಯಾಗೆ ಟ್ರಾಯ್ ಪ್ರಶ್ನೆ

ನಿಯಂತ್ರಕ ಸಲ್ಲಿಕೆಯೊಂದರಲ್ಲಿ ಟೆಲಿಕಾಂ ಕಂಪನಿಯು ಜೂನ್ ತ್ರೈಮಾಸಿದಲ್ಲಿ ಹೊಂದಾಣಿಕೆಯ ಆದಾಯ (ಎಜಿಆರ್) ಹೊಣೆಗಾರಿಕೆಗಾಗಿ ಹೆಚ್ಚುವರಿಯಾಗಿ 19,440.5 ಕೋಟಿ ರೂ. ಒಳಗೊಂಡಿದೆ. ಒಟ್ಟು ಅಂದಾಜು ಎಜಿಆರ್ 194.4 ಬಿಲಿಯನ್ ರೂ.ಗಳ ಬಾಕಿ ಶುಲ್ಕವನ್ನು ಗುರುತಿಸಿದ್ದೇವೆ. ಜೊತೆಗೆ ಮಾರ್ಚ್ 31, 2020 ರ ವೇಳೆಗೆ 460.0 ಬಿಲಿಯನ್ ರೂ.ಗಳ ಬಾಕಿ ಹೊಣೆಗಾರಿಕೆ ಇದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ .

Vodafone Idea Q1 Report: Rs 25,460 Crore Loss

ಕೊರೊನಾವೈರಸ್ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಮೊದಲ ತ್ರೈಮಾಸಿಕ ಆದಾಯ ಪ್ರಭಾವಿತವಾಗಿದೆ ಎಂದು ಕಂಪನಿ ತಿಳಿಸಿದೆ. ಅಂಗಡಿಗಳ ಲಾಕ್ ಡೌನ್ ಆಗಿ ರೀಚಾರ್ಜ್‌ಗಳ ಲಭ್ಯತೆ ಕಡಿಮೆಯಾಗಿತ್ತು. ಆರ್ಥಿಕ ಕುಸಿತದ ಕಾರಣದಿಂದಾಗಿ ಗ್ರಾಹಕರ ರೀಚಾರ್ಜ್ ಮಾಡುವ ಸಾಮರ್ಥ್ಯದ ಮೇಲೆ ಸಹ ಪರಿಣಾಮ ಬೀರಿದೆ ಎನ್ನಲಾಗಿದೆ.

English summary
Telecom operator vodafone idea on thursday posted a massive Rs 25,460 Crore Loss for the first quarter ended june 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X