ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೊಡಾಫೋನ್-ಐಡಿಯಾಗೆ 73,878 ಕೋಟಿ ಭಾರೀ ನಷ್ಟ

|
Google Oneindia Kannada News

ನವದೆಹಲಿ, ಜುಲೈ 1: ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್-ಐಡಿಯಾ ಮಾರ್ಚ್‌ 2020ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 73,878 ಕೋಟಿ ನಿವ್ವಳ ನಷ್ಟ ಅನುಭವಿಸಿದೆ ಎಂದು ಬುಧವಾರ ಪ್ರಕಟಿಸಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದ ಭಾರತೀಯ ಉದ್ಯಮ ಎಂಬ ಕುಖ್ಯಾತಿಗೆ ಒಳಗಾಗಿದೆ.

Recommended Video

Sri Ramulu, Doctors Day Special : ವೈದ್ಯರ ದಿನಾಚರಣೆಗೆ ಸಚಿವ ಶ್ರೀರಾಮುಲು ಶುಭಾಶಯ | Oneindia Kannada

ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿಯನ್ನು 51,400 ಕೋಟಿ ರುಪಾಯಿಯನ್ನು ವೊಡಾಫೋನ್-ಐಡಿಯಾ ನೀಡಬೇಕು ಎಂದು ಆದೇಶಿಸಿದ ಬಳಿಕ "ಮುಂದುವರಿಯುವ ಕಂಪನಿಯ ಸಾಮರ್ಥ್ಯದ ಮೇಲೆ ಗಮನಾರ್ಹ ಅನುಮಾನವನ್ನು ಉಂಟುಮಾಡಿದೆ" ಎಂದು ಹೇಳಿದೆ.

ಮಾರ್ಚ್‌ ತ್ರೈಮಾಸಿಕದಲ್ಲಿ 11,643 ಕೋಟಿ ನಷ್ಟ

ಮಾರ್ಚ್‌ ತ್ರೈಮಾಸಿಕದಲ್ಲಿ 11,643 ಕೋಟಿ ನಷ್ಟ

ವೊಡಾಫೋನ್ ಐಡಿಯಾ(ವಿಐಎಲ್) ಮಾರ್ಚ್‌ ತ್ರೈಮಾಸಿಕದಲ್ಲಿ 11,643.5 ಕೋಟಿ ನಿವ್ವಳ ನಷ್ಟವನ್ನು ಅನುಭವಿಸಿದೆ ಎಂದು ವರದಿ ಮಾಡಿದೆ. ಇದರ ನಷ್ಟವು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 4,881.9 ಕೋಟಿ ರುಪಾಯಿ ಮತ್ತು ಹಿಂದಿನ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 6,438.8 ಕೋಟಿ ರೂಪಾಯಿ ಆಗಿದೆ.

ಸಿಬ್ಬಂದಿಗಳಿಗೆ ಸಂಬಳ ನೀಡಲು ನಮ್ಮ ಬಳಿ ಹಣವಿಲ್ಲ: ವೊಡಾಫೋನ್ ಐಡಿಯಾಸಿಬ್ಬಂದಿಗಳಿಗೆ ಸಂಬಳ ನೀಡಲು ನಮ್ಮ ಬಳಿ ಹಣವಿಲ್ಲ: ವೊಡಾಫೋನ್ ಐಡಿಯಾ

ಎಜಿಆರ್ ಬಾಕಿ 58,254 ಕೋಟಿ ರುಪಾಯಿ

ಎಜಿಆರ್ ಬಾಕಿ 58,254 ಕೋಟಿ ರುಪಾಯಿ

ಟೆಲಿಕಾಂ ಇಲಾಖೆ (ಡಿಒಟಿ) 2016-17ನೇ ಹಣಕಾಸು ವರ್ಷದವರೆಗೆ ಸಂಸ್ಥೆಯ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿ 58,254 ಕೋಟಿ ರುಪಾಯಿ ಎಂದು ಅಂದಾಜಿಸಿದೆ. ಆದರೆ ಕಂಪನಿಯು ಕೆಲವು ಗಣಕ ದೋಷಗಳು ಮತ್ತು ಪಾವತಿಗಳ ಹೊಂದಾಣಿಕೆಯ ನಂತರ 46,000 ಕೋಟಿ ರುಪಾಯಿಗಳನ್ನು ಹಿಂಪಡೆಯಬೇಕೆಂಬ ಬೇಡಿಕೆಯನ್ನು ಡಿಒಟಿ ಪರಿಗಣಿಸಲಾಗಿಲ್ಲ. ಈಗಾಗಲೇ ಒಟ್ಟು ಬಾಕಿಗಳಲ್ಲಿ 6,854.4 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಪಾವತಿ ಮಾಡಿದೆ.

2019-20ರ ಹಣಕಾಸು ವರ್ಷದಲ್ಲಿ ಒಟ್ಟಾರೆ ನಷ್ಟ 73,878 ಕೋಟಿ

2019-20ರ ಹಣಕಾಸು ವರ್ಷದಲ್ಲಿ ಒಟ್ಟಾರೆ ನಷ್ಟ 73,878 ಕೋಟಿ

ಎಜಿಆರ್ ಸಂಬಂಧಿತ ಹೊಣೆಗಾರಿಕೆಗಳ ಕಾರಣದಿಂದ ಕಂಪನಿಯು 1,783.6 ಕೋಟಿ ರುಪಾಯಿ ಮತ್ತು ಒನ್-ಟೈಮ್ ಸ್ಪೆಕ್ಟ್ರಮ್ ಶುಲ್ಕ (ಒಟಿಎಸ್‌ಸಿ) ಯಿಂದ 3,887 ಕೋಟಿ ರುಪಾಯಿ, ಇವೆರಡನ್ನೂ ಮಾರ್ಚ್ 2019 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅಸಾಧಾರಣ ವಸ್ತುಗಳೆಂದು ಗುರುತಿಸಲಾಗಿದೆ.

ಏರ್‌ಟೆಲ್, ಜಿಯೋ ಬಳಿಕ ವೊಡಾಫೋನ್ ಭರ್ಜರಿ ಆಫರ್: ದಿನಕ್ಕೆ 2ಜಿಬಿ ಡೇಟಾಏರ್‌ಟೆಲ್, ಜಿಯೋ ಬಳಿಕ ವೊಡಾಫೋನ್ ಭರ್ಜರಿ ಆಫರ್: ದಿನಕ್ಕೆ 2ಜಿಬಿ ಡೇಟಾ

ಕೇವಲ ಮುಗಿದ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಬಂದ ಆದಾಯ 11,754.2 ಕೋಟಿ ರುಪಾಯಿಯಾಗಿದ್ದು, ಎಫ್‌ವೈ 20ರ ಪೂರ್ಣ ವರ್ಷದಲ್ಲಿ ನಷ್ಟವು 73,878.1 ಕೋಟಿ ರುಪಾಯಿ ಎಂದು ವರದಿ ಮಾಡಿದೆ.

2019-20ರ ಹಣಕಾಸು ವರ್ಷದಲ್ಲಿ ಬಂದ ಆದಾಯ 44,957 ಕೋಟಿ

2019-20ರ ಹಣಕಾಸು ವರ್ಷದಲ್ಲಿ ಬಂದ ಆದಾಯ 44,957 ಕೋಟಿ

ಕಂಪನಿಯ ನಷ್ಟದ ಜೊತೆಗೆ 2019-20ರ ಹಣಕಾಸು ವರ್ಷದಲ್ಲಿ ವಿವಿಧ ಕಾರ್ಯಾಚರಣೆಯಿಂದ ಬಂದ ಆದಾಯ 44,957.5 ಕೋಟಿ ರುಪಾಯಿನಷ್ಟಿದೆ. ಅದರ ಹಿಂದಿನ ಹಣಕಾಸು ವರ್ಷದಲ್ಲಿ 37,092.5 ಕೋಟಿ ಆದಾಯ ಗಳಿಸಿದೆ.

English summary
Vodafone Idea, the country's third-largest telecom operator, on Wednesday reported a staggering Rs 73,878 crore of net loss in fiscal ended March 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X