ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೊಡಾಫೋನ್ ಐಡಿಯ: ಅನಿಯಮಿತ ಒಳಬರುವ ಕರೆ ಮೇ 3ರ ತನಕ ವಿಸ್ತರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 19: ಕಡಿಮೆ ಆದಾಯ ವರ್ಗದ, ಫೀಚರ್ ಫೋನ್ ಬಳಸುತ್ತಿರುವ ಪ್ರೀಪೇಯ್ಡ್ ಗ್ರಾಹಕರಿಗೆ ಅನ್ವಯವಾಗುವಂತೆ ಈ ಸಂಕಷ್ಟದ ಕಾಲದಲ್ಲಿ ನೆರವಾಗಲು ವೊಡಾಫೋನ್ ಐಡಿಯ ಲಿಮಿಟೆಡ್ (ವಿಐಎಲ್) ಈಗ ಒಳಬರುವ ಕರೆಗಳ ಸೇವೆಗಳನ್ನು ಮೇ 3, 2020ರವರೆಗೂ ವಿಸ್ತರಿಸಿದೆ.

ಉಚಿತ ಒಳಬರುವ ಕರೆಗಳ ಸೇವೆಗಳು ಸಾವಿರಾರು ಫೀಚರ್ ಫೋನ್‍ಗಳ ಬಳಕೆದಾರರಿಗೆ ವೊಡಾಫೋನ್ ಮತ್ತು ಐಡಿಯಾ ಎರಡರಲ್ಲೂ ಲಭ್ಯವಾಗಲಿದೆ. ಈಗಾಗಲೇ ಅವರ ಸೇವಾವಧಿ ಮುಗಿದಿದ್ದರೂ ಕೂಡಾ ನೂತನ ಸೇವೆಯು ಲಭ್ಯವಾಗಲಿದೆ. ಈ ಒಳಬರುವ ಕರೆಗಳ ಸೇವೆಯನ್ನು ಎಲ್ಲ ಅರ್ಹ ಬಳಕೆದಾರರಿಗೆ ಸಂಪರ್ಕಗಳಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಒದಗಿಸಲಾಗುವುದು. ಈ ವಿಶೇಷ ಕಾರ್ಯಕ್ರಮದ ಮೂಲಕ ಕಡಿಮೆ ಆದಾಯ ವರ್ಗದ ಫೀಚರ್ ಫೋನ್ ಬಳಕೆದಾರರಿಗೆ ದೊರೆಯಲಿದೆ.

ಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾ"

ವೊಡಾಫೋನ್ ಐಡಿಯ ಗ್ರಾಹಕರು ಈಗ ತಮ್ಮ ಆತ್ಮೀಯರೊಂದಿಗೆ ಸಂಪರ್ಕದಲ್ಲಿ ಇರುವುದು, ಸ್ಥಳೀಯ ವಿದ್ಯಮಾನಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.

vodafone idea extends Unrestricted incoming service to till May 3

ವೊಡಾಫೋನ್ ಐಡಿಯದ ವ್ಯವಸ್ಥಾಪಕ ನಿರ್ದೇಶಕ ಅವನೀಶ್ ಖೋಸ್ಲಾ ಅವರು, ನಮ್ಮ ಉದ್ದೇಶ ಈ ಸಂಕಷ್ಟದ ಕಾಲದಲ್ಲಿ ನಮ್ಮ ಎಲ್ಲ ಗ್ರಾಹಕರು ನಿರಂತರವಾಗಿ ಸಂಪರ್ಕದಲ್ಲಿ ಇರಬೇಕು ಎಂಬುದೇ ಆಗಿದೆ. ಗ್ರಾಹಕರು ಈ ಲಾಕ್‍ಡೌನ್ ಅವಧಿಯಲ್ಲಿಯೂ ನಿರಂತರವಾಗಿ ಸಂಪರ್ಕದಲ್ಲಿ ಇರಲು ಅನುವಾಗುವಂತೆ ನಾವು ಒಳಬರುವ ಕರೆಗಳ ಸೇವೆಯನ್ನು 90 ಮಿಲಿಯನ್ ಗ್ರಾಹಕರಿಗೆ ಮೇ 3ರವರೆಗೂ ವಿಸ್ತರಿಸುತ್ತಿದ್ದೇವೆ. ಇದು, ಗ್ರಾಹಕರು ಒಳಬರುವ ಕರೆಗಳನ್ನು ಯಾವುದೇ ತೊಡಕಿಲ್ಲದೆ ಬಳಸಲು ಸಹಕಾರಿ ಆಗಲಿದೆ ಎಂದು ಹೇಳಿದರು.

ವೊಡಾಫೋನ್ ಐಡಿಯ ಸೇವೆಯನ್ನು ಪಡೆಯಲಿರುವ ಗ್ರಾಹಕರು ಈ ಸೇವೆಯನ್ನು ಪಡೆಯುವುದು ಸಾಧ್ಯವಾಗಲಿದೆ.

English summary
In an endeavour to ensure that low income, prepaid customers using feature phones remain connected amidst these troubled times, Vodafone Idea Limited (VIL), has announced the extension of incoming services for these users till 3rd May 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X