ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPI ID ಬಳಸಿ ವೋಡಾಫೋನ್ ರೀಚಾರ್ಜ್ ಹೇಗೆ?

|
Google Oneindia Kannada News

ಎಲ್ಲ ಬ್ಯಾಂಕ್ ಖಾತೆದಾರರು ಸುರಕ್ಷಿತವಾಗಿ ಮನೆಯಿಂದಲೇ ರೀಚಾರ್ಜ್ ಮಾಡಲು ಅವಕಾಶ ಕಲ್ಪಿಸಿದ ವೊಡಾಫೋನ್ ಐಡಿಯಾ

• ಗ್ರಾಹಕರು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಉಳಿದು ರೀಚಾರ್ಜ್ ಮಾಡಿಕೊಳ್ಳಬಹುದಾದ ಕ್ರಾಂತಿಕಾರಿ ಯೋಜನೆ ಉದ್ಯಮದಲ್ಲೇ ಮೊದಲು

UPI ID ಬಳಸಿ ವೋಡಾಫೋನ್ ರೀಚಾರ್ಜ್ ಹೇಗೆ?

ಬೆಂಗಳೂರು, ಮೇ 27: ಭಾರತದ ಅಗ್ರಗಣ್ಯ ದೂರಸಂಪರ್ಕ ಸೇವಾ ಸಂಸ್ಥೆಯಾದ ವೊಡಾಫೋನ್ ಐಡಿಯಾ ತಮ್ಮ ಫೀಚರ್ ಫೋನ್ ಬಳಕೆದಾರರಿಗೆ ಮತ್ತು ಡಿಜಿಟಲ್ ವ್ಯವಸ್ಥೆಯ ಪರಿಚಯವಿಲ್ಲದ ಗ್ರಾಹಕರಿಗೆ ತಮ್ಮ ವೊಡಾಫೋನ್ ಐಡಿಯಾ ಸಂಖ್ಯೆಯನ್ನು ಕೇವಲ ದೃಢೀಕೃತ ಯುಪಿಐ ಐಡಿಯನ್ನು ಬಳಸಿ ರೀಚಾರ್ಜ್ ಮಾಡುವ ವಿಶಿಷ್ಟ ಸೇವೆಯನ್ನು ಪರಿಚಯಿಸಿದೆ.

ಇದಕ್ಕಾಗಿ ವೊಡಾಫೋನ್ ಐಡಿಯಾ ದೇಶದ ಅಗ್ರಗಣ್ಯ ಹಣಕಾಸು ಸೇವಾ ಸಂಸ್ಥೆಯಾದ ಪೇಟಿಎಂ ಜತೆ ಒಪ್ಪಂದ ಮಾಡಿಕೊಂಡು ದೇಶದ ಎಲ್ಲೆಡೆ ಈ ಸೇವೆಯನ್ನು ಒದಗಿಸಲು ಮುಂದಾಗಿದೆ.

ವೊಡಾಫೋನ್ ಐಡಿಯಾದ ಈ ವಿನೂತನ ಕ್ರಮವು ತಮ್ಮ ವೊಡಾಫೋನ್ ಐಡಿಯಾ ಸಂಖ್ಯೆಯನ್ನು ಚಿಲ್ಲರೆ ಟಚ್‍ಪಾಯಿಂಟ್‍ಗಳಿಗೆ ಭೌತಿಕವಾಗಿ ಭೇಟಿ ನೀಡದೇ ಟಾಪ್ ಅಪ್ ಮಾಡಿಕೊಳ್ಳಬಯಸುವ ಲಕ್ಷಾಂತರ ಮಂದಿ ಫೀಚರ್ ಫೋನ್ ಬಳಕೆದಾರರಿಗೆ ನೆರವಾಗಲಿದೆ. ಈ ಸೇವೆಯಲ್ಲಿ ರೀಚಾರ್ಜ್ ಮಾಡಿಕೊಳ್ಳಲು ಮೊಬೈಲ್ ಇಂಟರ್‍ನೆಟ್ ಸೌಲಭ್ಯ ಅಗತ್ಯ ಇರುವುದಿಲ್ಲ. ಜತೆಗೆ ಪೇಟಿಎಂ ಆ್ಯಪ್ ಬಳಕೆದಾರರಲ್ಲದವರು ಕೂಡಾ ಸುಲಭವಾಗಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ವೊಡಾಫೋನ್ ಐಡಿಯಾ 98 ರು ಪ್ರೀಪೇಯ್ಡ್, ಡಬ್ಬಲ್ ಡೇಟಾವೊಡಾಫೋನ್ ಐಡಿಯಾ 98 ರು ಪ್ರೀಪೇಯ್ಡ್, ಡಬ್ಬಲ್ ಡೇಟಾ

ಈ ಸೇವೆಯು *99# ವಿನೂತನ ಪಾವತಿ ಸೇವೆಯನ್ನು ಆಧರಿಸಿದ್ದು, ಇದು ಅನ್‍ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡಾಟಾ (ಯುಎಸ್‍ಎಸ್‍ಡಿ) ಚಾನಲ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ವಿತ್ತೀಯ ಸೇರ್ಪಡೆಯ ಪ್ರಮುಖ ಸೌಲಭ್ಯ ಕಲ್ಪಿಸುವ ಸೇವೆಯಾಗಿರುವ ಇದು, ಮೊಬೈಲ್ ಇಂಟರ್ನೆಟ್ ಅವಲಂಬನೆ ಇಲ್ಲದೇ ಮೂಲ ಫೀಚರ್ ಫೋನ್ ಬಳಸಿಕೊಂಡು ಮೊಬೈಲ್ ಬ್ಯಾಂಕಿಂಗ್ ವಹಿವಾಟಿಗೆ ಕೂಡಾ ಪೂರಕವಾಗಿರುತ್ತದೆ.

 *99# ವಿನೂತನ ಪಾವತಿ ಸೇವೆ

*99# ವಿನೂತನ ಪಾವತಿ ಸೇವೆ

ಈ ಕೆಳಗಿನ ವಿಧಾನದ ಮೂಲಕ ವೊಡಾಫೋನ್ ಐಡಿಯಾ ಗ್ರಾಹಕರು ತಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ:
ಭೀಮ್ ಯುಪಿಐನಲ್ಲಿ ಯುಪಿಐ ಐಡಿ ನೋಂದಾಯಿಸಿಕೊಂಡಿರುವ ಗ್ರಾಹಕರು ಅನುಸರಿಸಬೇಕಾದ ಕ್ರಮಗಳು
1. ಗ್ರಾಹಕರು ಯುಎಸ್‍ಎಸ್‍ಡಿ ಸಂಕೇತದಲ್ಲಿ ಡಯಲ್ ಮಾಡಬೇಕಾಗುತ್ತದೆ- *99*1*3# (ಯುಪಿಐ ಹಣ ವರ್ಗಾವಣೆಗೆ ಯುಎಸ್‍ಎಸ್‍ಡಿ: ಈ ಹರಿವು ಎನ್‍ಪಿಸಿಐ ಮಾಲೀಕತ್ವ ಹೊಂದಿದೆ)
2. ಯುಎಸ್‍ಎಸ್‍ಡಿ ಮೂಲಕ ಡಯನ್ ಮಾಡಲಾದ ದೂರವಾಣಿ ಸಂಖ್ಯೆಯನ್ನು ಮತ್ತು ಅದಕ್ಕೆ ಸಂಪರ್ಕಿಸಿರುವ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಪತ್ತೆ ಮಾಡಲಾಗುತ್ತದೆ.
3. ಪೇಟಿಎಂ ವ್ಯಾಖ್ಯಾನಿಸುವ ಯುಪಿಐ ಐಡಿ ನಮೂದಿಸಿ ({ಮೊಬೈಲ್‍ಸಂಖ್ಯೆ}.{ಆಪರೇಟರ್ ಹೆಸರು}@ಪೇಟಿಎಂ).
4. ಉದಾಹರಣೆಗೆ ವೊಡಾಫೋನ್ ಗ್ರಾಹಕರು (98********.ವಿಎಫ್@ಪೇಟಿಎಂ) ಮತ್ತು ಐಡಿಯಾ ಗ್ರಾಹಕರು (98********.ಐಡಿ@ಪೇಟಿಎಂ) ದಾಖಲಿಸಬೇಕು.
5. ಮೊತ್ತವನ್ನು ನಮೂದಿಸಿ
6. ಷರಾ ದಾಖಲಿಸಿ (ಐಚ್ಛಿಕ)
7. ಯುಪಿಐ ಪಿನ್ ನಮೂದಿಸಿ
8. ವಹಿವಾಟು ಯಶಸ್ವಿಯಾಗಿರುತ್ತದೆ ಹಾಗೂ ಯುಪಿಐ ರೆಫರೆನ್ಸ್ ಐಡಿ ಸೃಷ್ಟಿಯಾಗುತ್ತದೆ

 ಯುಪಿಐನಲ್ಲಿ ನೋಂದಣಿಯಾಗದೇ ಇದ್ದಲ್ಲಿ

ಯುಪಿಐನಲ್ಲಿ ನೋಂದಣಿಯಾಗದೇ ಇದ್ದಲ್ಲಿ

ಒಂದು ಪಕ್ಷ ಗ್ರಾಹಕರ ಯುಪಿಐ ಭೀಮ್ ಯುಪಿಐನಲ್ಲಿ ನೋಂದಣಿಯಾಗದೇ ಇದ್ದಲ್ಲಿ ಅಂಥ ಗ್ರಾಹಕರು ಅನುಸರಿಬೇಕಾದ ಕ್ರಮಗಳು
1. *99#ಗೆ ಡಯಲ್ ಮಾಡಿ
2. ಗ್ರಾಹಕರಿಗೆ ಯುಎಸ್‍ಎಸ್‍ಡಿ ಡಯಲ್ ಮಾಡಲಾದ ಆ ಮೊಬೈಲ್ ನಂಬರ್ ಜತೆ ಸಂಪರ್ಕಿಸಿದ ಬ್ಯಾಂಕ್ ಖಾತೆಯ ಸಂಖ್ಯೆ ಪ್ರದರ್ಶಿಸಲ್ಪಡುತ್ತದೆ.
3. ಗ್ರಾಹಕರು ಯುಪಿಐ ಐಡಿ ನೋಂದಣಿ ಮಾಡಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು.
4. ಗ್ರಾಹಕರ ಯುಪಿಐ ಪಿನ್ ಸಿದ್ಧವಾಗುತ್ತದೆ
ಮೊಬೈಲ್ ರೀಚಾರ್ಜ್ ಮಾಡಲು ಬಳಕೆದಾರರು ಮತ್ತೆ *99# ಡಯಲ್ ಮಾಡಬೇಕು ಹಾಗೂ ಈ ಕೆಳಗಿನ ವಿಧಿವಿಧಾನ ಪೂರೈಸಬೇಕು.

ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯ ಪರಿಚಯಿಸಿದ ವೋಡಾಫೋನ್ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯ ಪರಿಚಯಿಸಿದ ವೋಡಾಫೋನ್

 ನಿರ್ದೇಶಕ ಅನೀಶ್ ಖೋಸ್ಲಾ

ನಿರ್ದೇಶಕ ಅನೀಶ್ ಖೋಸ್ಲಾ

ಈ ವಿನೂತನ ಯುಪಿಐ ಆಧರಿತ ರೀಚಾರ್ಜ್ ಸೌಲಭ್ಯದ ಉದ್ಘಾಟನೆಯನ್ನು ಪ್ರಕಟಿಸಿದ ವೊಡಾಫೋನ್ ಐಡಿಯಾ ಲಿಮಿಟೆಡ್‍ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಅನೀಶ್ ಖೋಸ್ಲಾ,"ನಮ್ಮ ಗ್ರಾಹಕರು ನಿರಂತರ ಸಂಪರ್ಕವನ್ನು ಸಾಧಿಸುವ ಜತೆಗೆ ಈ ಕಾಲಘಟ್ಟದಲ್ಲಿ ಸುರಕ್ಷಿತವಾಗಿ ಇರಬೇಕು ಎನ್ನುವುದನ್ನು ಖಾತರಿಪಡಿಸಲು ನಾವು ಶಕ್ತಿಮೀರಿ ಶ್ರಮಿಸುತ್ತಿದ್ದೇವೆ. ಕಳೆದ ಎರಡು ತಿಂಗಳಲ್ಲಿ ನಾವು ಗ್ರಾಹಕರು ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಹಲವು ವಿನೂತನ ಉಪಕ್ರಮಗಳನ್ನು ಆರಂಭಿಸಿದ್ದೇವೆ. ಪೇಟಿಎಂ ಜತೆಗಿನ ಈ ಪಾಲುದಾರಿಕೆ ಕ್ರಮದಿಂದಾಗಿ ಡಿಜಿಟಲ್ ಸಂಪರ್ಕ ಹೊಂದಿರದ ನಮ್ಮ ದೊಡ್ಡ ಸಂಖ್ಯೆಯ ಗ್ರಾಹಕರಿಗೆ ತಮ್ಮ ದೂರವಾಣಿ ಸಂಖ್ಯೆಯನ್ನು ಮೊಬೈಲ್ ಇಂಟರ್‍ನೆಟ್ ಬಳಸದೇ, ಡಿಜಿಟಲ್ ಆ್ಯಪ್ ಬಳಸದೇ ಅಥವಾ ರೀಟೇಲ್ ಟಚ್‍ಪಾಯಿಂಟ್‍ಗೆ ಭೇಟಿ ನೀಡದೇ ಯುಎಸ್‍ಎಸ್‍ಡಿ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಲು ನೆರವಾಗುತ್ತದೆ ಎಂಬ ನಂಬಿಕೆ ನಮ್ಮದು. ಈ ಪಾಲುದಾರಿಕೆ ಮೂಲಕ ನಾವು ಸರಳ ಹಾಗೂ ಸುರಕ್ಷಿತ ಸೊಲ್ಯೂಶನ್ ಒದಗಿಸಲು ಸಾಧ್ಯವಾಗುತ್ತಿದೆ ಹಾಗೂ ಪ್ರೀಪೆಯ್ಡ್ ಗ್ರಾಹಕರಿಗೆ ಈ ಪರೀಕ್ಷಾ ಕಾಲಘಟ್ಟದಲ್ಲಿ ಅನುಕೂಲತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನಮ್ಮದು. ಗ್ರಾಹಕರು ತಮ್ಮ ಫೋನ್ ರೀಚಾರ್ಜ್ ಮಾಡಲು ಸುರಕ್ಷಿತ ಮನೆಯಿಂದ ಹೊರಗೆ ಬಾರದಂತೆ ಮಾಡಲು ಇದು ಸಾಧ್ಯವಾಗಿಸುತ್ತದೆ" ಎಂದು ವಿವರಿಸಿದ್ದಾರೆ.

 ಡಿಜಿಟಲ್ ಪ್ಲಾಟ್‍ಫಾರಂಗಳ ಮೂಲಕ ರೀಚಾರ್ಜ್

ಡಿಜಿಟಲ್ ಪ್ಲಾಟ್‍ಫಾರಂಗಳ ಮೂಲಕ ರೀಚಾರ್ಜ್

ವೊಡಾಫೋನ್ ಮತ್ತು ಐಡಿಯಾ ಗ್ರಾಹಕರು ಪ್ರಸ್ತುತ ತಮ್ಮ ಸಿಮ್‍ಗಳನ್ನು ಆನ್‍ಲೈನ್ ಮತ್ತು ಡಿಜಿಟಲ್ ಪ್ಲಾಟ್‍ಫಾರಂಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಲು ಈ ಕೆಳಗಿನ ಸೌಲಭ್ಯಗಳನ್ನು ಹೊಂದಿರುತ್ತಾರೆ:
• ಆ್ಯಪ್‍ಗಳು- ಮೈವೊಡಾಫೋನ್ ಆ್ಯಪ್, ಮೈಐಡಿಯಾ ಆ್ಯಪ್
• ವೆಬ್‍ಸೈಟ್‍ಗಳು- www.vodafone.in, www.ideacellular.com
• ಇ-ವ್ಯಾಲೆಟ್‍ಗಳು- ಪೇಟಿಎಂ, ಗೂಗಲ್‍ಪೇ, ಫೋನ್ ಪೇ, ಅಮೆಝಾನ್ ಪೇ ಇತ್ಯಾದಿ

ವೊಡಾಫೋನ್ ಐಡಿಯಾ ಲಿಮಿಟೆಡ್ ಬಗ್ಗೆ (ಹಿಂದೆ ಐಡಿಯಾ ಸೆಲ್ಯುಲರ್ ಲಿಮಿಟೆಡ್ ಆಗಿತ್ತು): ವೊಡಾಫೋನ್ ಐಡಿಯಾ ಲಿಮಿಟೆಡ್ ಆದಿತ್ಯಾ ಬಿರ್ಲಾ ಸಮೂಹ ಹಾಗೂ ವೊಡಾಫೋನ್ ಸಮೂಹದ ಪಾಲುದಾರಿಕೆ ಸಂಸ್ಥೆಯಾಗಿದೆ. ಇದು ಭಾರತದ ಅಗ್ರಗಣ್ಯ ದೂರಸಂಪರ್ಕ ಸೇವಾ ಸಂಸ್ಥೆಯಾಗಿದೆ. ಕಂಪನಿಯು ಭಾರತದಾದ್ಯಂತ ಧ್ವನಿ ಹಾಗೂ ಡಾಟಾ ಸೇವೆಯನ್ನು 2ಜಿ, 3ಜಿ ಮತ್ತು 4ಜಿ ಪ್ಲಾಟ್‍ಫಾರಂಗಳಲ್ಲಿ ಒದಗಿಸುತ್ತಿದೆ. ಡಾಟಾ ಮತ್ತು ಧ್ವನಿ ಸೇವೆಯ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಸ್ತೃತ ಶ್ರೇಣಿಯ ಸೇವೆಗಳನ್ನು ಪರಿಚಯಿಸಿದೆ. ಕಂಪನಿಯು ಭಾರತದಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್‍ಚೇಂಜ್ (ಎನ್‍ಎಸ್‍ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್‍ಚೇಂಜ್ (ಬಿಎಸ್‍ಇ)ಯಲ್ಲಿ ಲಿಸ್ಟೆಡ್ ಆಗಿದೆ.

English summary
Vodafone Idea has introduced a unique service to empower feature phone users and non-digital savvy customers to recharge their Vodafone Idea numbers with just a valid UPI ID.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X