• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೆ.25 ರಿಂದ ಸ್ಟಾರ್ ಸುವರ್ಣದಲ್ಲಿ ಶಿವಣ್ಣನ ಟಾಕ್ ಶೋ

By Mahesh
|

ಬೆಂಗಳೂರು, ಫೆಬ್ರವರಿ 24: ಡಿಯಾಜಿಯೊ ಇಂಡಿಯಾದಿಂದ ಮೆಕ್‍ಡೊವೆಲ್ಸ್ ನಂ.1 ಸೋಡಾ ಮತ್ತು ವುಕ್ಲಿಪ್ ಮತ್ತು ಪಿಸಿಸಿಡಬ್ಲ್ಯೂ ಜಾಗತಿಕ ವಿಡಿಯೋ-ಆನ್-ಡಿಮ್ಯಾಂಡ್ ಒಟಿಟಿ ಸೇವೆಯ ವಿಯು ನಿಜಜೀವನದಿಂದ ಚಿತ್ರಜಗತ್ತಿನವರೆಗೆ ಹೊಚ್ಚಹೊಸ ಟಾಕ್ ಶೋ ನಂ.1 ಯಾರಿ ವಿಥ್ ಶಿವಣ್ಣ ಕಾರ್ಯಕ್ರಮದಲ್ಲಿ ತರಲಿದ್ದು, ಇದು ಮೈಂಡ್‍ಶೇರ್ ಅಂಡ್ ಗ್ರೂಪ್ ಎಂ ಸಹಯೋಗದಲ್ಲಿ ನಡೆಯುತ್ತಿದೆ.

ಈ ಸರಣಿಯನ್ನು ಕನ್ನಡ ಚಲನಚಿತ್ರೋದ್ಯಮದ ಸೂಪರ್ ಸ್ಟಾರ್ ಶಿವರಾಜ್‍ಕುಮಾರ್ ಅವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ವಿಯು ಮತ್ತು ಸ್ಟಾರ್ ಸುವರ್ಣದಲ್ಲಿ ಫೆಬ್ರವರಿ 25, 2018ರಿಂದ ಪ್ರತಿ ಭಾನುವಾರ ಸಂಜೆ 8.00ರಿಂದ 9.00ರವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮ ಮೊಟ್ಟಮೊದಲ ಬಾರಿಗೆ ಅತಿಥಿಗಳಾಗಿ ಚಿತ್ರತಾರೆಯರು ಮತ್ತು ಅವರ ನಿಜಜೀವನದ ಬಿಎಫ್‍ಎಫ್‍ಗಳನ್ನು ಒಗ್ಗೂಡಿಸಲಿದ್ದು ಅವರು ತಮ್ಮ ಮಿತ್ರತ್ವ ಬಾಂಧವ್ಯದ ಗುಟ್ಟುಗಳನ್ನು ಹಂಚಿಕೊಳ್ಳಲಿದ್ದು ಆಸಕ್ತಿದಾಯ ಆಟಗಳನ್ನೂ ಕೂಡಾ ಶಿವರಾಜ್‍ಕುಮಾರ್ ಅವರೊಂದಿಗೆ ಆಡಲು ಅವಕಾಶ ಕಲ್ಪಿಸುತ್ತದೆ.

ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಹಿಂದೆಂದೂ ಕಾಣದ ವಿಡಿಯೋಗಳ ಪ್ರದರ್ಶನ ನೀಡುವುದಲ್ಲದೆ ಅವರ ಅಚ್ಚುಮೆಚ್ಚಿನ ತಾರೆಯರೊಂದಿಗೆ ಸಂವಹನ ನಡೆಸುವ ಅವಕಾಶ ಕಲ್ಪಿಸುತ್ತದೆ.

ವಿನೂತನ ಬಗೆಯ ಮನರಂಜನೆ

ವಿನೂತನ ಬಗೆಯ ಮನರಂಜನೆ

ನಂ.1 ಯಾರಿ ವಿನೂತನ ಬಗೆಯ ಮನರಂಜನೆಯ ಕಾರ್ಯಕ್ರಮವಾಗಿದ್ದು ಸೋದರತ್ವ ಮತ್ತು ಮಿತ್ರತ್ವದ ಸ್ಫೂರ್ತಿಯನ್ನು ಸಂಭ್ರಮಿಸುವ ವೀಕ್ಷಕರಿಗೆಂದೇ ರೂಪಿಸಲಾಗಿದೆ.

ನಾನು ಮಿತ್ರತ್ವಕ್ಕೆ ಮೌಲ್ಯ ನೀಡುತ್ತೇನೆ. ಏಕೆಂದರೆ ಅದು ನನ್ನ ವೈಯಕ್ತಿಕ ಯಾನದಲ್ಲಿ ಬಲವಾದ ಆಧಾರಸ್ತಂಭವಾಗಿದೆ.

ತಾರೆಯರು ಸಾರ್ವಜನಿಕ ವ್ಯಕ್ತಿಗಳಾಗಿರುವಂತೆ ಅವರ ಖಾಸಗಿ ವಿಷಯಗಳೂ ಇರುತ್ತವೆ ಮತ್ತು ನನ್ನ ಕೆಲಸ ಅವರ ಅತ್ಯಂತ ಖಾಸಗಿ ಸಂಗತಿಗಳನ್ನು ಹಂಚಿಕೊಳ್ಳುವಂತೆ ಮಾಡುವುದು.

ಅವರ ಮಿತ್ರತ್ವ ಅವರನ್ನು ವ್ಯಕ್ತಿಯಾಗಿ ಹೇಗೆ ರೂಪಿಸಿದೆ ಎಂದು ಅಲ್ಲದೆ ಅವರ ಜೀವನದಲ್ಲಿನ ವಿನೋದಮಯ ಕ್ಷಣಗಳನ್ನು ಅಭಿಮಾನಿಗಳಿಗೆ ತಿಳಿಯುವಂತೆ ಮಾಡುವುದು ಎಂದು ಹಂಚಿಕೊಳ್ಳಲಿದ್ದಾರೆ' ಎಂದು ಖ್ಯಾತ ನಟ ಮತ್ತು ನಂ.1 ಯಾರಿ ಕಾರ್ಯಕ್ರಮದ ನಿರೂಪಕ ಶಿವರಾಜ್‍ಕುಮಾರ್ ಹೇಳಿದರು.

ಡಿಯಾಜಿಯೊ ಇಂಡಿಯಾದ ಅಮರ್ ಪೀತ್ ಸಿಂಗ್

ಡಿಯಾಜಿಯೊ ಇಂಡಿಯಾದ ಅಮರ್ ಪೀತ್ ಸಿಂಗ್

'ಸಮಾಜದ ಪ್ರಮುಖರೊಂದಿಗೆ ಕೈ ಜೋಡಿಸುವ ಮೂಲಕ ಕಾರ್ಯಕ್ರಮವೊಂದನ್ನು ರೂಪಿಸುವುದು ಸದಾ ನಮ್ಮ ಪ್ರಯತ್ನವಾಗಿದೆ.

ಮೆಕ್‍ಡೊವೆಲ್ಸ್ ನಂ.1 ಸೋಡಾ ನಂ.1 ಯಾರಿ ವಿಥ್ ಶಿವಣ್ಣ ಮೂಲಕ ನಾವು ಈ ಕಾರ್ಯಕ್ರಮದ ಸಹ ನಿರ್ಮಾಣಕ್ಕೆ ಬಹಳ ಉತ್ಸುಕರಾಗಿದ್ದು ಖ್ಯಾತ ಕಲಾವಿದರ ಸೋದರತ್ವದ ಕಥೆಗಳನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳುವಂತೆ ಮಾಡುವ ಮೂಲಕ ಮತ್ತಷ್ಟು ಹತ್ತಿರಕ್ಕೆ ತರುತ್ತೇವೆ.

ಅಲ್ಲದೆ ಇದರೊಂದಿಗೆ ನಾವು ಇಂದಿನ ಮಿಲೆನಿಯಲ್ಸ್‍ಗೆ ಸಂಪರ್ಕಿಸಲು ಮತ್ತು ಸಕ್ರಿಯವಾಗಿರಲು ಮತ್ತಷ್ಟು ಸಕ್ರಿಯ ಮಾಹಿತಿ ಸೃಷ್ಟಿಸುವಲ್ಲಿ ಮತ್ತೊಂದು ಹೆಜ್ಜೆ ಇರಿಸಲು ಎದುರು ನೋಡುತ್ತಿದ್ದೇವೆ' ಎಂದರು.

ವಿಯು ಇಂಡಿಯಾದ ಸಮೀರ್ ಗೊಗಟೆ

ವಿಯು ಇಂಡಿಯಾದ ಸಮೀರ್ ಗೊಗಟೆ

'ಪ್ರೀಮಿಯಂ ಕಂಟೆಂಟ್ ನೀಡುವ ನಿಟ್ಟಿನಲ್ಲಿ ನಾವು ವಿಯುವಿನಲ್ಲಿ ರಾಷ್ಟ್ರವ್ಯಾಪಿ ಮಿಲೆನಿಯಲ್ಸ್ ಗೆ ಇಷ್ಟವಾಗುವ ಕಂಟೆಂಟ್ ಫ್ರಾಂಚೈಸಿಗಳನ್ನು ಸೃಷ್ಟಿಸುತ್ತಿದ್ದೇವೆ.

'ನಂ.1 ಯಾರಿ' ಫ್ರಾಂಚೈಸಿ ಅಂಥ ಒಂದು ಉತ್ಸಾಹಕರ ಸೇರ್ಪಡೆಯಾಗಿದ್ದು ಅಭಿಮಾನಿಗಳನ್ನು ಖ್ಯಾತನಾಮರ ವೈಯಕ್ತಿಕ ಬದುಕಿನ ಸ್ಪರ್ಶ ನೀಡುವ ಮೂಲ ಮಾಹಿತಿಯ ಗ್ರಂಥಾಲಯ ರೂಪಿಸುತ್ತಿದ್ದೇವೆ.

ತೆಲುಗು ಭಾಷೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾದ ನಂತರ ನಾವು ಗ್ರೂಪ್ ಎಂ ನೊಂದಿಗೆ ನಮ್ಮ ಬಾಂಧವ್ಯ ವಿಸ್ತರಿಸಲು ಸಂತೋಷಪಡುತ್ತಿದ್ದು ಕನ್ನಡ ಚಲನಚಿತ್ರೋದ್ಯಮದ ಸೂಪರ್ ಸ್ಟಾರ್ ರಿಂದ ಮತ್ತೊಂದು ಎಲ್ಲರನ್ನೂ ಆಕರ್ಷಿಸುವ ಕಾರ್ಯಕ್ರಮ ರೂಪಿಸಿದ್ದೇವೆ' ಎಂದರು.

ನಮಗೆ ಅತ್ಯಂತ ಸಂತೋಷದ ಕ್ಷಣವಾಗಿದೆ

ನಮಗೆ ಅತ್ಯಂತ ಸಂತೋಷದ ಕ್ಷಣವಾಗಿದೆ

`ಶಿವಣ್ಣ ಅತ್ಯಂತ ಭಾವನಾತ್ಮಕ ಮತ್ತು ಫೀಲ್ ಗುಡ್ ಕಾರ್ಯಕ್ರಮದ ನಿರೂಪಕರಾಗಿರುವುದು ನಮಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ತಾರೆಯರು ಪರಸ್ಪರ ಸಂಪರ್ಕ ಹೊಂದಿರುವುದು ಮತ್ತು ವೀಕ್ಷಕರಿಗೆ ಭಾನುವಾರ 8 ಗಂಟೆಗೆ ಆನಂದದಾಯಕ ಸಮಯ ನೀಡುವುದು ನಿಜಕ್ಕೂ ಮಹತ್ವಪೂರ್ಣವಾಗಿದೆ' ಎಂದು ಸ್ಟಾರ್ ಸುವರ್ಣದ ವಕ್ತಾರರು ಹೇಳಿದರು.

ಮೈಂಡ್‍ಶೇರ್ ಏಷ್ಯಾದ ಚೀಫ್ ಇನ್ನೊವೇಷನ್ ಆಫೀಸರ್ ಮ್ಯಾಕ್ ಮಾಚಯ್ಯ, `ಹಿಂದಿನ ಕಾರ್ಯಕ್ರಮಗಳಲ್ಲಿ ಅಪಾರ ಯಶಸ್ಸು ಪಡೆದ ನಂತರ ಈ ಬಾರಿ ನಂ.1 ಯಾರಿ ಕನ್ನಡ ಚಲನಚಿತ್ರ ರಂಗದ ತಾರೆಯರ ನಡುವಿನ ಸಮಯರಹಿತ ಮಿತ್ರತ್ವವನ್ನು ಸಂಭ್ರಮಿಸುತ್ತದೆ.

ಕಾರ್ಯಕ್ರಮದ ಎಲ್ಲ ಕಂತುಗಳನ್ನು ವಿಯು ಆಪ್-ಮುಂಚೂಣಿಯ ಮೂಲ ವಿಷಯ ವಸ್ತುವಿನ ಒನ್-ಸ್ಟಾಪ್ ತಾಣದಲ್ಲಿ ವಿಶೇಷವಾಗಿ ವೀಕ್ಷಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Video-on-Demand OTT service Viu which is all set to launch it's successful franchise 'No.1 Yaari' in Kannada with superstar Shivanna'. The OTT platform has joined hands with Star Suvarna's for the launch of McDowell’s No1 Soda No.1 Yaari with Shivanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more