ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಇನ್ಫಿ ಭಾರೀ ಹೂಡಿಕೆ

|
Google Oneindia Kannada News

ನವದೆಹಲಿ, ಜ, 14: ಐಟಿ ದಿಗ್ಗಜ ಇನ್ಫೋಸಿಸ್ ದೇಶದ ಸಾಫ್ಟ್ ವೇರ್‌ ತಂತ್ರಜ್ಞಾನ ಮತ್ತು ಸೇವಾವಲಯದಲ್ಲಿ 1,500 ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಇನ್ಫೋಸಿಸ್ ಸಿಇಓ ವಿಶಾಲ್‌ ಸಿಕ್ಕಾ ಹೂಡಿಕೆ ಪ್ರಸ್ತಾವನೆಯನ್ನು ವಿವರಿಸಿದರು. ಮೋದಿಯವರ ಸ್ಮಾರ್ಟ್‌ ಇಂಡಿಯಾ ಕನಸಿಗೆ ಇನ್ಫೋಸಿಸ್‌ ಸಹಕರಿಸಲಿದೆ ಎಂದರು.[ಇನ್ಫೋಸಿಸ್ಸಿಗೆ ಶುಭ ಶುಕ್ರವಾರ, ಅಪರಿಮಿತ ಲಾಭ!]

 infosys

ಮಧ್ಯ ಪ್ರದೇಶದ ಉಜ್ಜಯನಿ ಯಲ್ಲಿ ನಡೆಯಲಿರುವ ಬೃಹತ್ ಕುಂಭ ಮೇಳದ ನಿರ್ವಹಣೆಗೆ ಸಂಬಂಧಿಸಿ ಇನ್ಫೋಸಿಸ್‌ ಹೊಸ ಸಾಫ್ಟ್ ವೇರ್ ವೊಂದನ್ನು ಅಭಿವೃದ್ಧಿಪಡಿಸಲಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ತಿಳಿಸಿದ ನಂತರ ಈ ಮಾಹಿತಿ ನೀಡಿದರು.

ಮೈಸೂರಿಗೆ ಸ್ಮಾರ್ಟ್ ಸಿಟಿ ಗರಿ
ಇನ್ಫೋಸಿಸ್‌ ಸಂಸ್ಥೆಯ ಕ್ಯಾಂಪಸ್ ನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರನ್ನು ಸ್ಮಾರ್ಟ್ ಸಿಟಿ ಯಾಗಿ ಬದಲಾಯಿಸಲು ಸಂಸ್ಥೆ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದಕ್ಕೆ ಸ್ವತಃ ಪ್ರಧಾನಿಯವರೇ ಒಪ್ಪಿಗೆ ನೀಡಿದ್ದಾರೆ. ಅಲ್ಲದೇ ಮುಂದಿನ ಏಪ್ರಿಲ್ ನಲ್ಲಿ ಮೈಸೂರು ಕ್ಯಾಂಪಸ್ ನ್ನು ಮಾದರಿಯಾಗಿರಿಸಿ ದೇಶಕ್ಕೆ ನೀಡಲಾಗುವುದು ಎಂದು ತಿಳಿಸಿದರು.[ಸುಧಾ ಗೋಪಾಲಕೃಷ್ಣನ್ ಇನ್ಫಿಯ ಅತಿ ಹೆಚ್ಚು ಷೇರುಗಳ ಒಡತಿ]

ಸಂಸ್ಥೆಗೆ ಸೇರಿದ ಮೈಸೂರಿನ 350 ಎಕರೆ ಜಾಗದಲ್ಲಿ ಸುಮಾರು 2 ಲಕ್ಷ ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸಲಾಗುತ್ತದೆ. ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಕನಸನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

English summary
Infosys CEO Vishal Sikka met Prime Minister Narendra Modi and disclosed that his company will spend $250 million (over Rs 1,500 crore) to fund innovations in software and services in India. The chief of India's second largest IT services firm also discussed ways in which the company can participate in the Prime Minister's vision of smart and digitally empowered India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X