• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿ ಬಿಗ್ ಬಿಲಿಯನ್‌ ಡೇಸ್‌ ಪರ ಕೊಹ್ಲಿ, ಸುದೀಪ್ ಪ್ರಚಾರ

|

ಬೆಂಗಳೂರು, ಅ.3: ಭಾರತದ ನೆಚ್ಚಿನ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣಬೀರ್ ಕಪೂರ್, ಕಿಚ್ಚ ಸುದೀಪ್ ಮತ್ತು ಮಹೇಶ್ ಬಾಬು ಅವರು ಈ ಬಾರಿ ಫ್ಲಿಪ್ ಕಾರ್ಟ್ ಸಂಸ್ಥೆಯ ವಾರ್ಷಿಕ 'ದಿ ಬಿಗ್ ಬಿಲಿಯನ್‌ ಡೇಸ್‌' ಕೊಡುಗೆಗಳ ಬಗ್ಗೆ ಪ್ರಚಾರಕ್ಕಿಳಿದಿದ್ದಾರೆ. ಈಗಾಗಲೇ ವಿಭಿನ್ನ ಜಾಹೀರಾತುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಭಾರತದ ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆ ಫ್ಲಿಪ್‌ಕಾರ್ಟ್, ವರ್ಷದ ಅತಿದೊಡ್ಡ ಪ್ರಮುಖ 'ದಿ ಬಿಗ್ ಬಿಲಿಯನ್ ಡೇ' ದಿನಾಂಕವನ್ನು ಪ್ರಕಟಿಸಿದೆ. ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, 6 ದಿನಗಳ ಉತ್ಸವ ದೇಶದ ಹಬ್ಬದ ಋತುವಿಗೆ ನಾಂದಿ ಹಾಡಲಿದೆ ಎಂದು ಫ್ಲಿಪ್‌ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಘೋಷಿಸಿದ್ದಾರೆ.

ಬಿಗ್ ಬಿಲಿಯನ್ ಡೇಗೂ ಮುನ್ನ ಫ್ಲಿಪ್ ಕಾರ್ಟಿನಿಂದ ಬಿಗ್ ಡೀಲ್

ಇದನ್ನು ಲಕ್ಷಾಂತರ ಗ್ರಾಹಕರು, ಮಾರಾಟಗಾರರು, ಕುಶಲಕರ್ಮಿಗಳು ಮತ್ತು ಬ್ರ್ಯಾಂಡ್‌ಗಳು ಒಟ್ಟಾಗಿ ಆಚರಿಸುತ್ತಾರೆ. ಜೊತೆಗೆ, ಇದು ದೇಶಾದ್ಯಂತದ ಎಂಎಸ್‌ಎಂಇಗಳು ಮತ್ತು ಮಾರಾಟಗಾರರಿಗೆ ಬೆಳವಣಿಗೆಯ ಅವಕಾಶಗಳನ್ನುಒದಗಿಸುತ್ತಿದೆ. ಗ್ರಾಹಕರಿಗಾಗಿ 'ಸೂಪರ್ ನಾಣ್ಯಗಳು' ಮತ್ತು ಹೆಚ್ಚುವರಿ ಶಾಪಿಂಗ್‌ಗಾಗಿ 2,000 ಬೋನಸ್ ನಾಣ್ಯಗಳಂತ ಕೊಡುಗೆಗಳಿವೆ.

ಗ್ರಾಹಕರಿಗೆ ಬಡ್ಡಿರಹಿತ ಇಎಂಐ

ಗ್ರಾಹಕರಿಗೆ ಬಡ್ಡಿರಹಿತ ಇಎಂಐ

ಎಸ್‌ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ 10% ತ್ವರಿತ ರಿಯಾಯಿತಿ ಪಡೆಯಬಹುದು. ಬಜಾಜ್ ಇನ್ ಸರ್ವ್ ಇಎಂಐ ಕಾರುಗಳು ಮತ್ತು ಇತರ ಪ್ರಮುಖ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಕೊಡುಗೆಗಳ ಮೂಲಕ ಗ್ರಾಹಕರಿಗೆ ಬಡ್ಡಿರಹಿತ ಇಎಂಐ ಮೂಲಕ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗುವುದು.

ಪೇಟಿಎಂ ವಾಲೆಟ್ ಮತ್ತು ಪೇಟಿಎಂ ಯುಪಿಐ ಮೂಲಕ ಪಾವತಿಸುವ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಸೌಲಭ್ಯ ಕೂಡ ಒದಗಿಸಲಾಗಿದೆ. ಆಯ್ದ ಕಾರ್ಡ್‌ಗಳಲ್ಲಿನ ಡೆಬಿಟ್-ಕಾರ್ಡ್ ಇಎಂಐಗಳು (ಕನಿಷ್ಠ ಬ್ಯಾಲೆನ್ಸ್ಇಲ್ಲ) ಮತ್ತುಫ್ಲಿಪ್‌ಕಾರ್ಟ್ ಪೇ ಲೇಟರ್ ಗ್ರಾಹಕರಿಗೆ ಸಾಲದ ಸೌಲಭ್ಯ ತರುತ್ತದೆ.

 70,000 ನೇರ ಮತ್ತು ಲಕ್ಷಾಂತರ ಪರೋಕ್ಷ ಉದ್ಯೋಗ

70,000 ನೇರ ಮತ್ತು ಲಕ್ಷಾಂತರ ಪರೋಕ್ಷ ಉದ್ಯೋಗ

ದೇಶದಲ್ಲಿ ಮತ್ತಷ್ಟು ಉದ್ಯೋಗಾವಕಾಶಗಳನ್ನುಸೃಷ್ಟಿಸುವ ಮೂಲಕ ಹಬ್ಬದ ಮೆರಗು ವಿಸ್ತರಿಸಲು ಬಿಗ್ ಬಿಲಿಯನ್ ದಿನಗಳು ಸಜ್ಜಾಗಿವೆ. ಈ ಉತ್ಸವ ಮತ್ತು ಮಾರಾಟ 70,000 ನೇರ ಮತ್ತು ಲಕ್ಷಾಂತರ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಏಕೆಂದರೆ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಮಾರಾಟಗಾರರು, ಕುಶಲಕರ್ಮಿಗಳು ಮತ್ತು ಬ್ರಾಂಡ್‌ಗಳು ಸಜ್ಜಾಗಿದ್ದಾರೆ.

ಸಾವಿರಾರು ಹೊಸ ಮಾರಾಟಗಾರರು

ಸಾವಿರಾರು ಹೊಸ ಮಾರಾಟಗಾರರು

ಕಳೆದ ಆರು ತಿಂಗಳಲ್ಲಿ ಸಾವಿರಾರು ಹೊಸ ಮಾರಾಟಗಾರರು ಫ್ಲಿಪ್‌ಕಾರ್ಟ್ ವೇದಿಕೆ ಸೇರಿದ್ದಾರೆ. ಈ ಉತ್ಸವದಲ್ಲಿ ಕಂಪನಿಯು ಹಲವಾರು ವರ್ಚುವಲ್ ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅಲ್ಲಿ ಹಬ್ಬದ ಅವಧಿಯಲ್ಲಿಇ-ಕಾಮರ್ಸ್‌ನ ಗರಿಷ್ಠ ಲಾಭಗಳನ್ನು ಪಡೆಯಲು ಉತ್ತಮ ಅಭ್ಯಾಸಗಳ ಬಗ್ಗೆಅರ್ಥಮಾಡಿಕೊಳ್ಳಲು ಮತ್ತುಒಳನೋಟಗಳನ್ನು ಪಡೆಯಲು ಮಾರಾಟಗಾರರಿಗೆ ಫ್ಲಿಪ್‌ಕಾರ್ಟ್ ಪ್ರತಿನಿಧಿಗಳು ಮತ್ತು ಮುಖಂಡರೊಂದಿಗೆ ಮಾತನಾಡಲು ಅವಕಾಶ ಒದಗಿಸಲಾಗುವುದು.

50,000ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿಗೆ ವೇದಿಕೆ

50,000ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿಗೆ ವೇದಿಕೆ

ಅಸ್ತಿತ್ವದಲ್ಲಿರುವ ಪೂರೈಕೆ ಸರಣಿ ಸಾಮರ್ಥ್ಯ ಬಲಪಡಿಸಲು, ಫ್ಲಿಪ್‌ಕಾರ್ಟ್ ತನ್ನ ‘ಕಿರಾನಾ ಆನ್‌ಬೋರ್ಡಿಂಗ್'ಕಾರ್ಯಕ್ರಮವನ್ನು ವಿಸ್ತರಿಸಿ 50,000ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳನ್ನು ವೇದಿಕೆಗೆ ಸೇರಿಸಿದೆ. ಈ ವ್ಯಾಪಾರಿಗಳು 850ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಕೊನೆಯ ಮೈಲಿ ವಿತರಣೆಯನ್ನು ಮಾಡುತ್ತಾರೆ. ಇದರಿಂದ, ಇ-ಕಾಮರ್ಸ್ ದೇಶಾದ್ಯಂತದ ಗ್ರಾಹಕರಿಗೆ ಹೆಚ್ಚು ಹತ್ತಿರವಾಗಿದೆ ಮತ್ತು ಕಿರಾಣಿ ಅಂಗಡಿ ಪಾಲುದಾರರಿಗೆ ಹೊಸ ಆದಾಯದ ಮೂಲ ತೋರಿಸಿದೆ.

ಏನೆಲ್ಲ ಖರೀದಿಸಬಹುದು

ಏನೆಲ್ಲ ಖರೀದಿಸಬಹುದು

ಈ ಬಿಗ್‌ ಬಿಲಿಯನ್‌ ಡೇನಲ್ಲಿ ಮೊಬೈಲ್, ಟಿವಿಗಳು ಮತ್ತು ವಸ್ತುಗಳು, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳು, ಫ್ಯಾಷನ್, ಸೌಂದರ್ಯ, ಆಹಾರ, ಆಟಿಕೆಗಳು, ಮಗುವಿನ ಆರೈಕೆ, ಮನೆ ಮತ್ತು ಅಡುಗೆಮನೆ, ಪೀಠೋಪಕರಣಗಳು, ದಿನಸಿ, ಮತ್ತು ಫ್ಲಿಪ್‌ಕಾರ್ಟ್‌ನ ಖಾಸಗಿ ಬ್ರಾಂಡ್‌ನ ಹಲವು ಉತ್ಪನ್ನಗಳಿಗೆ ಆಕರ್ಷಕ ದರಗಳಲ್ಲಿ ಜನರಿಗೆ ನೀಡಲಿದೆ. ಸಮರ್ಥ್ ಕುಶಲಕರ್ಮಿಗಳು, ನೇಕಾರರು, ಕರಕುಶಲ ತಯಾರಕರು ಮತ್ತು ಇತರ ಕಡಿಮೆ ಸೇವೆ ಸಲ್ಲಿಸುತ್ತಿರುವ ಸಮುದಾಯಗಳಿಗೂ ಇದು ಉತ್ತಮ ವೇದಿಕೆಯಾಗಿರಲಿದೆ.

English summary
Team india captain Virat Kohli is promoting Flipkart's biggest flagship event The Big Billion Days - which will commence from October 16th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X