ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒನ್ ಟೈಮ್ ಸೆಟ್ಲ್ ಮೆಂಟ್ ' ಗೆ ಸಿದ್ಧ : ಮಲ್ಯ ಘೋಷಣೆ

ಉದ್ದೇಶಪೂರ್ವಕ ಸುಸ್ತಿದಾರ ವಿರುದ್ಧ ಕೇಂದ್ರ ಸರ್ಕಾರ ಇಡುತ್ತಿರುವ ನಡೆ ಬಗ್ಗೆ ಉದ್ಯಮಿ ವಿಜಯ್ ಮಲ್ಯ ಅವರು ಗರಂ ಆಗಿದ್ದಾರೆ. ಅವಕಾಶ ನೀಡಿದರೆ 'ಒನ್ ಟೈಮ್ ಸೆಟ್ಲ್ ಮೆಂಟ್ ' ಗೆ ನಾನು ಸಿದ್ದ ಎಂದು ಘೋಷಿಸಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 10: ಉದ್ದೇಶಪೂರ್ವಕ ಸುಸ್ತಿದಾರ ವಿರುದ್ಧ ಕೇಂದ್ರ ಸರ್ಕಾರ ಇಡುತ್ತಿರುವ ನಡೆ ಬಗ್ಗೆ ಉದ್ಯಮಿ ವಿಜಯ್ ಮಲ್ಯ ಅವರು ಗರಂ ಆಗಿದ್ದಾರೆ. ಬ್ಯಾಂಕ್ ಗಳ ಜತೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ. ಅವಕಾಶ ನೀಡಿದರೆ 'ಒನ್ ಟೈಮ್ ಸೆಟ್ಲ್ ಮೆಂಟ್ ' ಗೆ ನಾನು ಸಿದ್ಧ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಸರಿ ಸುಮಾರು 9,000 ಕೋಟಿ ರು ಸಾಲ ಪಡೆದು ಉದ್ದೇಶ ಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ವಿಜಯ್ ಮಲ್ಯ ಅವರು ಸದ್ಯ ಯುಕೆಯಲ್ಲಿ ನೆಲೆಸಿದ್ದಾರೆ. [ಮಲ್ಯ-ಯುಕೆಯಿಂದ ಕೋರ್ಟಿನ ಕಟಕಟೆಗೆ ಈಗ ಸಾಧ್ಯ!]

ಕಳೆದ ವರ್ಷ ಮಾರ್ಚ್ 02ರಂದು ಭಾರತ ತೊರೆದ ಮಲ್ಯರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ಜಾರಿ ನಿರ್ದೇಶನಾಲಯ, ಸಿಬಿಐ, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಸೇರಿದಂತೆ ಕೇಂದ್ರ ಸರ್ಕಾರ ಇನ್ನಿಲ್ಲದ್ದಂತೆ ಯತ್ನಿಸುತ್ತಿದೆ.[ಕರುಣೆಯಲ್ಲಿ ಬದುಕುವ ಅನಿವಾರ್ಯ ನನಗಿಲ್ಲ: ವಿಜಯ್ ಮಲ್ಯ]

ಈ ನಡುವೆ ಡಿಯಾಜಿಯೋ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಕೈ ಸೇರಿರುವ 40 ಮಿಲಿಯನ್ ಯುಎಸ್ ಡಾಲರ್ ಮೊತ್ತದ ಮೇಲೆ ಬ್ಯಾಂಕ್ ಗಳ ಒಕ್ಕೂಟ ಕಣ್ಣಿಟ್ಟಿದ್ದು, ಈ ಬಗ್ಗೆ ವಿಚಾರಣೆ ಸದ್ಯ ಜಾರಿಯಲ್ಲಿದೆ. ಈ ಬಗ್ಗೆ ಮಲ್ಯ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ವಿಚಾರಣೆ ವೇಳೆ ಏನಾಯ್ತು?

ವಿಚಾರಣೆ ವೇಳೆ ಏನಾಯ್ತು?

ಸುಪ್ರೀಂಕೋರ್ಟಿನಲ್ಲಿ ಗುರುವಾರ ನಡೆದ ವಿಚಾರಣೆಯಲ್ಲಿ ಮಲ್ಯ ಅವರು 40 ಮಿಲಿಯನ್ ಯುಎಸ್ ಡಾಲರ್ ಆಸ್ತಿಯನ್ನು ತಮ್ಮ ಮಕ್ಕಳ ವಿದೇಶದಲ್ಲಿರುವ ಬ್ಯಾಂಕ್ ಖಾತೆಗೆ ರವಾನಿಸಿದ್ದು ನಿಜವೇ ಎಂದು ಪ್ರಶ್ನಿಸಲಾಯಿತು.
ಆದರ್ಶ್ ಕುಮಾರ್ ಗೋಯಲ್ ಹಾಗೂ ಯುಯು ಲಲಿತ್ ಅವರು ಹಲವು ಪ್ರಶ್ನೆಗಳನ್ನು ಕೇಳಿದರು ಹಾಗೂ ಡಿಯೋಜಿಯೋ ಒಪ್ಪಂದಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶವನ್ನು ಕಾಯ್ದಿರಿಸಿದರು.

ಸರ್ಕಾರದ ವಿರುದ್ಧ ತಿರುಗಿ ಬಿದ್ದ ಮಲ್ಯ

ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಮಲ್ಯ ಅವರು, ಸುಪ್ರೀಂಕೋರ್ಟಿನಲ್ಲಿ ಎಜಿ ಅವರು ಮಂದಿಸಿದ ವಾದದಿಂದ ಸರ್ಕಾರ ಯಾವ ಮಟ್ಟದಲ್ಲಿ ಸೇಡಿನ ನಡೆ ಇಡುತ್ತಿದೆ ಎಂಬುದು ತಿಳಿಯುತ್ತದೆ ಎಂದಿದ್ದಾರೆ.

ನಾನಿನ್ನೂ ಅಪರಾಧಿಯಾಗಿಲ್ಲ

ವಿಚಾರಣೆಗೂ ಮುನ್ನವೇ ನನ್ನನ್ನ ಅಪರಾಧಿ ಎಂದು ಸರ್ಕಾರ ಪರಿಗಣಿಸಿದಂತಿದೆ. ನಾನು ಕೋರ್ಟ್ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬಂದಿದ್ದೇನೆ-ಮಲ್ಯ

ಬ್ಯಾಂಕ್ ಜತೆ ಮಾತನಾಡಲು ಬಿಡಿ

ಬ್ಯಾಂಕುಗಳ ಜತೆ ಮಾತನಾಡಿ ಸೆಂಟ್ಲ್ ಮೆಂಟ್ ಮಾಡಿಕೊಳ್ಳಲು ನಾನು ಸಿದ್ಧ. ಈ ಹಿಂದೆ ಕೂಡಾ ಅನೇಕರು ಈ ರೀತಿ ಮಾಡಿದ್ದಾರೆ. ಆದರೆ, ನನಗೆ ಆಸ್ಪದ ನೀಡಿಲ್ಲ ಏಕೆ? -ಮಲ್ಯ

ಸುಪ್ರೀಂ ಕೋರ್ಟ್ ನಿರ್ಣಯಿಸಲಿ

ಬ್ಯಾಂಕ್ ಗಳಿಗೆ ಸಾಲ ತೀರಿಸುವ ಕ್ರಮದ ಬಗ್ಗೆ ಸುಪ್ರೀಂಕೋರ್ಟ್ ಸೂಚಿಸಲಿ. ನಾನು ಸೆಟ್ಲ್ ಮೆಂಟ್ ಮಾಡಿಕೊಳ್ಳಲು ಸಿದ್ಧ. ನನ್ನನ್ನು ಅಪರಾಧಿಯಂತೆ ಸರ್ಕಾರ ನಡೆಸಿಕೊಳ್ಳುವುದು ಸರಿಯಲ್ಲ.

English summary
The embattled liquor baron Vijay Mallya today took to Twitter saying he is ready to negotiate with banks to pay a one-time settlement charge on Rs 9,000-crore loan default.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X