ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿ. ಜಿ ಸಿದ್ದಾರ್ಥ ಅನುಭವಿಸಿದ 'ಕಿರುಕುಳ' ಬಗ್ಗೆ ಮಲ್ಯ ಕಳವಳ

|
Google Oneindia Kannada News

Recommended Video

V G Siddhartha : ವಿ. ಜಿ ಸಿದ್ದಾರ್ಥ ಅನುಭವಿಸಿದ 'ಕಿರುಕುಳ' ಬಗ್ಗೆ ಮಲ್ಯ ಕಳವಳ | Oneindia Kannada

ಲಂಡನ್, ಜುಲೈ 31: "ಪರೋಕ್ಷವಾಗಿ ನಾನು ಕೂಡ ಸಿದ್ಧಾರ್ಥ ಅವರ ಸಾಲಿಗೆ ಸೇರುತ್ತೇನೆ. ಸಿದ್ಧಾರ್ಥ ಉತ್ತಮ ಮನುಷ್ಯ ಮತ್ತು ಬುದ್ಧಿವಂತ ಉದ್ಯಮಿಯಾಗಿದ್ದರು. ಅವರ ಪತ್ರವನ್ನು ನೋಡಿ ನನಗೆ ಆಘಾತವಾಗಿದೆ" ಎಂದು ಉದ್ಯಮಿ ವಿಜಯ್ ಮಲ್ಯ ಅವರು ಸರ್ಕಾರದ ತನಿಖಾ ಸಂಸ್ಥೆ, ಬ್ಯಾಂಕ್​ಗಳ ವಿರುದ್ಧ ಕಿಡಿಕಾರಿದ್ದಾರೆ.

ವಿ.ಜಿ ಸಿದ್ದಾರ್ಥ ಮೃತದೇಹ ಪತ್ತೆ, ನೇತ್ರಾವತಿ ಪಾಲಾದ ಕಾಫಿ ಕಿಂಗ್ವಿ.ಜಿ ಸಿದ್ದಾರ್ಥ ಮೃತದೇಹ ಪತ್ತೆ, ನೇತ್ರಾವತಿ ಪಾಲಾದ ಕಾಫಿ ಕಿಂಗ್

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ, ಕರ್ನಾಟಕದ ಪ್ರಮುಖ ಉದ್ಯಮಿ ವಿ.ಜಿ ಸಿದ್ದಾರ್ಥ ಅವರ ಮೃತದೇಹ ಬುಧವಾರ ಬೆಳಗ್ಗೆ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಇದಕ್ಕೂ ಮುನ್ನ ಜುಲೈ 27ರಂದು ಸಿದ್ದಾರ್ಥ ಬರೆದಿದ್ದ ಪತ್ರದ ಬಗ್ಗೆ ಉದ್ಯಮದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದಂತೆ ತಾವು ಕೂಡ ಕಿರುಕುಳ ಎದುರಿಸುತ್ತಿರುವುದಾಗಿ ಮಲ್ಯ ತಮ್ಮನ್ನು ಹೋಲಿಸಿಕೊಂಡಿದ್ದಾರೆ.

Vijay Mallya reaction to VG Siddhartha’s alleged “harassment” by IT department

ಸಿದ್ದಾರ್ಥ ಅವರ ಪತ್ರ ಹಾಗೂ ನಾಪತ್ತೆ ಬಗ್ಗೆ ಟ್ವೀಟ್‌ ಮಾಡಿರುವ ಮಲ್ಯ, "ತನಗೂ ಕೂಡ ತನಿಖಾ ಏಜೆನ್ಸಿಗಳು ಮತ್ತು ಬ್ಯಾಂಕುಗಳು ಕಿರುಕುಳ ನೀಡುತ್ತಿದ್ದು, ಸಿದ್ಧಾರ್ಥ ಅವರಿಗಿಂತ ನನ್ನ ಸ್ಥಿತಿ ಭಿನ್ನವಾಗಿಲ್ಲ" ಎಂದಿದ್ದಾರೆ.

ದೇಶದ ಸಾಲ ವ್ಯವಸ್ಥೆಯ ದುಸ್ಥಿತಿಗೆ ಬಲಿಪಶುವಾದರೇ ಸಿದ್ಧಾರ್ಥ? ದೇಶದ ಸಾಲ ವ್ಯವಸ್ಥೆಯ ದುಸ್ಥಿತಿಗೆ ಬಲಿಪಶುವಾದರೇ ಸಿದ್ಧಾರ್ಥ?

ಸರಣಿ ಟ್ವೀಟ್ ನಲ್ಲಿ ತಮ್ಮ ನೋವು, ಉದ್ಯಮಿಗಳಿಗೆ ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕುಗಳು ನೀಡುವ ಕಾಟವನ್ನು ಉಲ್ಲೇಖಿಸಿದ್ದಾರೆ. "ಸರ್ಕಾರಿ ಏಜೆನ್ಸಿಗಳು ಯಾರನ್ನಾದರೂ ಹತಾಶೆಗೆ ದೂಡಬಹುದು. ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದಿದ್ದರು ಕೂಡ ಅವರು ನನಗೆ ಏನು ಮಾಡುತ್ತಿದ್ದಾರೆಂದು ನೋಡಿ. ಇದೊಂದು ಕೆಟ್ಟ ಮತ್ತು ಪಟ್ಟುಹಿಡಿದ ವರ್ತನೆಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಕಾಫಿ ಡೇ ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಎಷ್ಟು ನಿಜ? ಕಾಫಿ ಡೇ ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಎಷ್ಟು ನಿಜ?

"ವಿದೇಶಗಳಲ್ಲಿ ಸರ್ಕಾರ ಮತ್ತು ಬ್ಯಾಂಕುಗಳು ಸಾಲಗಾರರಿಗೆ ಸಾಲ ಮರುಪಾವತಿಗೆ ಸಹಾಯ ಮಾಡುತ್ತವೆ. ಆದರೆ ನನ್ನ ಪ್ರಕರಣದಲ್ಲಿ ನನ್ನ ಸಾಲವನ್ನು ಮರುಪಾವತಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ತಡೆಯುತ್ತಿದ್ದಾರೆ" ಎಂದು ಮತ್ತೊಂದು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

English summary
Fugitive liquor baron Vijay Mallya, who is facing extradition proceedings in UK, on Wednesday took to Twitter to draw parallels with the case of Cafe Coffee Day founder VG Siddhartha, who in his suicide letter has alleged “harassment” by the Income Tax Department officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X