ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯಗೆ ಹಿನ್ನಡೆ, ಭಾರತದ ಬ್ಯಾಂಕುಗಳ ಪರ ತೀರ್ಪು

By Mahesh
|
Google Oneindia Kannada News

ಲಂಡನ್, ಮೇ 09: ಎಸ್ ಬಿಐ, ಐಡಿಬಿಐ ಸೇರಿದಂತೆ ಅನೇಕ ಭಾರತೀಯ ಬ್ಯಾಂಕುಗಳಿಂದ 9 ಸಾವಿರ ಕೋಟಿ ರುಗಳಿಗೂ ಅಧಿಕ ಮೊತ್ತದ ಸಾಲ ಪಡೆದು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಭಾರಿ ಹಿನ್ನಡೆಯಾಗಿದೆ.

ಉದ್ದೇಶಪೂರ್ವಕ ಸುಸ್ತಿದಾರ ಮಲ್ಯ ಅವರ ವಿರುದ್ಧ ಭಾರತದ 13ಕ್ಕೂ ಬ್ಯಾಂಕ್‌ ಗಳು 10 ಸಾವಿರ ಕೋಟಿ ರು ಸಾಲ ವಂಚನೆ ಪ್ರಕರಣದ ತೀರ್ಪು ಬಂದಿದೆ.

ಆಸ್ತಿ ಮುಟ್ಟುಗೋಲು ಆದೇಶ ರದ್ದು ಮಾಡುವಂತೆ ಮಲ್ಯ ಪರ ವಕೀಲರು ಮಾಡಿಕೊಂಡ ಮನವಿಯನ್ನೂ ನ್ಯಾಯಾಧೀಶ ಆ್ಯಂಡ್ರೂ ವಜಾಗೊಳಿಸಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದ್ದಾರೆ.

Vijay Mallya loses UK lawsuit over $1.55 billion in Indian claims

ಬ್ಯಾಂಕುಗಳ ಒಕ್ಕೂಟದ ವಾದವನ್ನು ಎತ್ತಿ ಹಿಡಿದಿರುವ ಲಂಡನ್‌ ನ್ಯಾಯಾಲಯವು,ಭಾರತದ ಕೋರ್ಟುಗಳು ನೀಡಿರುವ ತೀರ್ಪು ಜಾರಿಗೊಳಿಸಿ, ಮಲ್ಯ ಅವರಿಂದ ಸಾಲದ ಮೊತ್ತ ಪಡೆಯಬಹುದು ಎಂದು ನ್ಯಾಯಾಧೀಶ ಆ್ಯಂಡ್ರೂ ಹೆನ್‌ಶಾ ಅವರು ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ.

ಮಲ್ಯನ ಅರಸಿ ಯಾರೀಕೆ ಪಿಂಕಿ ಲಾಲ್ವಾನಿ?ಮಲ್ಯನ ಅರಸಿ ಯಾರೀಕೆ ಪಿಂಕಿ ಲಾಲ್ವಾನಿ?

ಮಲ್ಯ ತಮ್ಮ ಒಡೆತನದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ಗಾಗಿ ಭಾರತದ ವಿವಿಧ ಬ್ಯಾಂಕ್‌ಗಳಿಂದ ಅಂದಾಜು ₹9000 ಕೋಟಿ ಸಾಲ ಪಡೆದು ಮರು ಪಾವತಿಸದೆ ವಂಚಿಸಿರುವುದು ನಿಜ. ಮಲ್ಯ ಉದ್ದೇಶಪೂರ್ವಕ ಸುಸ್ತಿದಾರ ಎನ್ನುವ ಆರೋಪದಲ್ಲಿ ಹುರುಳಿದೆ ಎಂದು ಅವರು ಹೇಳಿದ್ದಾರೆ.

'ಮಲ್ಯ ಪಡೆದ ಸಾಲಕ್ಕೆ ಸರಿಯಾದ ದಾಖಲೆಗಳಿಲ್ಲ''ಮಲ್ಯ ಪಡೆದ ಸಾಲಕ್ಕೆ ಸರಿಯಾದ ದಾಖಲೆಗಳಿಲ್ಲ'

ಇತ್ತ ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ವಿಜಯ್‌ ಮಲ್ಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ದೆಹಲಿ ನ್ಯಾಯಾಲಯ ಮಂಗಳವಾರ ಹೊಸದಾಗಿ ಆದೇಶ ಹೊರಡಿಸಿದೆ. ಈ ಹಿಂದೆ ಯುನೈಟೆಡ್‌ ಬ್ರೂವರೀಸ್‌ ಲಿಮಿಟೆಡ್‌ನ (ಯುಬಿಎಲ್‌) 4.13 ಕೋಟಿ ಷೇರುಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

English summary
Indian business tycoon Vijay Mallya(62) lost a UK lawsuit filed by Indian banks seeking to collect more than £1.15 billion ($1.55 billion) amid allegations that he committed massive fraud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X