ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ರ ಏಪ್ರಿಲ್​ವರೆಗೆ ಮಲ್ಯ ಆಸ್ತಿ ಬಳಸುವಂತಿಲ್ಲ!

By Mahesh
|
Google Oneindia Kannada News

ಲಂಡನ್, ಡಿಸೆಂಬರ್ 15: ಭಾರತದಲ್ಲಿ 13ಕ್ಕೂ ಅಧಿಕ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ 9 ಸಾವಿರ ಕೋಟಿ ರು ಗಳಿಗೂ ಅಧಿಕ ಸಾಲ ಮಾಡಿಕೊಂಡು ಲಂಡನ್ನಿಗೆ ಹಾರಿದ್ದ ಮಲ್ಯಗೆ ಅಲ್ಲೂ ಕೂಡಾ ನೆಮ್ಮದಿ ಸಿಕ್ಕಿಲ್ಲ. ಯುಕೆಯಲ್ಲಿರುವ ಆಸ್ತಿಯನ್ನು ಬಳಸದಂತೆ, ಪರಭಾರೆ ಮಾಡದಂತೆ ಅಲ್ಲಿನ ಹೈಕೋರ್ಟ್ ಆದೇಶಿಸಿದೆ.

ಬ್ರಿಟನ್​ನಲ್ಲಿ ಹೊಂದಿರುವ ಆಸ್ತಿಗಳನ್ನು 2018ರ ಏಪ್ರಿಲ್​ವರೆಗೆ ತಡೆಹಿಡಿಯಲಾಗಿದೆ. ಮಲ್ಯ ಅವರಿಗೆ ವಾರಕ್ಕೆ ಐದು ಸಾವಿರ ಪೌಂಡ್ ಭತ್ಯೆ ನೀಡಲು ಅನುಮತಿಯನ್ನು ಕೋರ್ಟ್ ಕೊಟ್ಟಿದೆ.

Vijay Mallya faces assets freeze order in UK courts until April 2018

ವಿಚಾರಣೆ ಮುಂದಕ್ಕೆ : 2018ರ ಏಪ್ರಿಲ್​ನಲ್ಲಿ ಅರ್ಜಿ ವಿಚಾರಣೆ ಆರಂಭಿಸಲಾಗುತ್ತದೆ. ಅಲ್ಲಿ ತನಕ ಆಸ್ತಿಯನ್ನು ಪರಭಾರೆ ಮಾಡಬಾರದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಲ್ಯ ಅವರಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.

ಈ ನಡುವೆ ವೆಸ್ಟ್​ಮಿನ್​ಸ್ಟರ್ ನ್ಯಾಯಾಲಯದಲ್ಲಿ ಡಿಸೆಂಬರ್ 4 ರಿಂದ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಅರ್ಜಿ ವಿಚಾರಣೆ ನಡೆದಿದೆ. ವಿಚಾರಣೆ ಡಿಸೆಂಬರ್ 20ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

English summary
Vijay Mallya, who is undergoing an extradition trial in a UK court over Rs 9,000-crore fraud and money laundering charges, will face next year a parallel litigation brought by 13 Indian banks to freeze nearly $1.5 billion of his assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X